Viral News:'ಐಟಿ ಇಲ್ಲದಿದ್ದರೆ ಬೆಂಗಳೂರು ಮತ್ತೊಂದು ಬಿಹಾರ ಆಗ್ತಿತ್ತು; ರಾಜಧಾನಿ ಬಗ್ಗೆ ನಾಲಿಗೆ ಹರಿಬಿಟ್ಟ ಕಿಡಿಗೇಡಿ
ವ್ಯಕ್ತಿಯೊರ್ವನ ಪಾಟ್ನಾದ ಸ್ನೇಹಿತ "ಐಟಿ ಇಲ್ಲದಿದ್ದರೆ ಬೆಂಗಳೂರು ಬಿಹಾರದಂತೆ ಇರುತ್ತಿತ್ತು" ಎಂದು ಹೇಳಿದ ವಿಚಾರವನ್ನು ಆತ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದ್ದು, ನೆಟ್ಟಿಗರು ಇದರ ವಿರುದ್ಧ ಕಿಡಿಕಾರಿದ್ದಾರೆ.


ಬೆಂಗಳೂರು: ಭಾರತದ ಐಟಿ ರಾಜಧಾನಿ ಎಂದು ಗುರುತಿಸಿಕೊಂಡ ಬೆಂಗಳೂರು, ಪ್ರತಿವರ್ಷ ಸಾವಿರಾರು ಟೆಕ್ ವೃತ್ತಿಪರರನ್ನು ತನ್ನತ್ತ ಆಕರ್ಷಿಸುತ್ತದೆ. ಅಭಿವೃದ್ಧಿ ಹೊಂದುತ್ತಿರುವ ಸಾಫ್ಟ್‌ವೇರ್ ಕಂಪನಿಗಳು, ಸ್ಟಾರ್ಟ್ಅಪ್‍ಗಳು ಮತ್ತು ಬಹುರಾಷ್ಟ್ರೀಯ ಸಂಸ್ಥೆಗಳು ಹಾಗೂ ಅದರ ಬೆಳವಣಿಗೆ ಇದಕ್ಕೆ ಕಾರಣವಾಗಿದೆ. ಆದರೆ ಇತ್ತೀಚಿಗೆ ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿಯೊರ್ವ ಮಾಡಿದ ಪೋಸ್ಟ್‌ವೊಂದರಿಂದ ನಗರದ ಅಭಿವೃದ್ಧಿಯ ಬಗ್ಗೆ ಬಿಸಿ ಚರ್ಚೆಯನ್ನು ಹುಟ್ಟುಹಾಕಿದೆ. ವ್ಯಕ್ತಿಯೊರ್ವನ ಪಾಟ್ನಾದ ಸ್ನೇಹಿತನೊಬ್ಬ "ಐಟಿ ಇಲ್ಲದಿದ್ದರೆ ಬೆಂಗಳೂರು ಬಿಹಾರದಂತೆ ಇರುತ್ತಿತ್ತು" ಎಂದು ಹೇಳಿದ್ದು, ಈ ವಿಚಾರವನ್ನು ಆತ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾನೆ. ಈ ಪೋಸ್ಟ್ ವೈರಲ್(Viral Video) ಆಗಿದ್ದು, ಇದೀಗ ಈ ವಿಚಾರದ ಬಗ್ಗೆ ನೆಟ್ಟಿಗರು ಶೇರ್ ಮಾಡುವ ಮೂಲಕ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಐಟಿ ವಲಯದಿಂದಾಗಿ ಮಾತ್ರ ಬೆಂಗಳೂರು ಅಸ್ತಿತ್ವದಲ್ಲಿದೆ ಎಂದು ಆತ ಹೇಳಿದ್ದು ಅಲ್ಲದೇ, ಐಟಿ ಇಲ್ಲದಿದ್ದರೆ ಬೆಂಗಳೂರು ಬಿಹಾರದ ಯಾವುದೋ ನಗರದಂತೆ ಇರುತ್ತದೆ. ಸರ್ಕಾರಗಳು ಒಂದೇ ಆಗಿವೆ ಎಂದು ಆತ ಲೇವಡಿ ಮಾಡಿದ್ದಾನೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅನೇಕ ನೆಟ್ಟಿಗರು ಇದರ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರನ್ನು ಬಿಹಾರವೆಂದ ವೈರಲ್ ಪೋಸ್ಟ್ ಇಲ್ಲಿದೆ ನೋಡಿ...
"2000ನೇ ಇಸವಿಯ ದಶಕದ ಆರಂಭದಲ್ಲಿ ಐಟಿ ಇಲ್ಲದಿದ್ದಾಗ ನಾನು ಬೆಂಗಳೂರಿಗೆ ಭೇಟಿ ನೀಡಿದ್ದೆ. ಭಾರತದ ಇತರ ನಗರಗಳಿಗೆ ಹೋಲಿಸಿದರೆ ಈ ನಗರವು ಸ್ವರ್ಗಕ್ಕಿಂತ ಏನು ಕಡಿಮೆ ಇರಲಿಲ್ಲ. ನಾವು ಈಗ ಬಯಸಿದ್ದೆಲ್ಲವನ್ನೂ ಅಂದು ಅದು ಹೊಂದಿತ್ತು." ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.ಇನ್ನೊಬ್ಬರು, "ಐಟಿಗೂ ಮುಂಚೆಯೇ ಬೆಂಗಳೂರಿಗೆ ಒಂದು ಕಳೆ ಇದ್ದಿತ್ತು. ಇಲ್ಲಿ ಯಾವುದೇ ಐಟಿ ಉದ್ಯಮವಿಲ್ಲದಿದ್ದರೂ ಸಹ ಅದು ಹೆಚ್ಚು ಶಾಂತಿಯುತವಾಗಿರುತ್ತದೆ ಎಂದು ಹೇಳಿದ್ದಾರೆ.
"ಐಟಿಗೆ ಮೊದಲು ಬೆಂಗಳೂರು ಒಂದು ರೀತಿಯ ಶಾಂತವಾದ ಮತ್ತು ಸುಂದರವಾದ ಸ್ಥಳವಾಗಿತ್ತು ಮತ್ತು ಇಲ್ಲಿನ ಜನರು ಒಬ್ಬರ ಬಗ್ಗೆ ಇನ್ನೊಬ್ಬರು ದಯೆ ತೋರಿಸುತ್ತಿದ್ದರು" ಎಂದು ಮತ್ತೊಬ್ಬರು ತಿಳಿಸಿದ್ದಾರೆ. " ಸುಮಾರು 20 ವರ್ಷಗಳಿಂದ ಬೆಂಗಳೂರಿನಲ್ಲಿದ್ದೇನೆ ಮತ್ತು ಐಟಿಗೂ ಮೊದಲು ಇದು ಸುಂದರವಾಗಿತ್ತು ಮತ್ತು ಪಿಂಚಣಿದಾರರ ಸ್ವರ್ಗ ಎಂದೂ ಕರೆಯಲಾಗುತ್ತಿತ್ತು” ಎಂದು ಒಬ್ಬರು ಬರೆದಿದ್ದಾರೆ. ಆದರೆ ಎಸ್‌ಟಿಪಿಐ-ಬೆಂಗಳೂರಿನ ಮೊದಲ ನಿರ್ದೇಶಕ ಮತ್ತು ಕೆಡಿಇಎಂ ಅಧ್ಯಕ್ಷ ಬಿ.ವಿ.ನಾಯ್ಡು ಅವರ ಪ್ರಕಾರ, ಐಟಿ ಹಬ್ ಆಗಿ ಬೆಂಗಳೂರು ಬೆಳೆದಿದ್ದು ರಾತ್ರೋರಾತ್ರಿ ಅಲ್ಲ. 1990 ರ ದಶಕದ ಉತ್ತರಾರ್ಧದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಇಲ್ಲಿ ಕಚೇರಿಗಳನ್ನು ಸ್ಥಾಪಿಸಲು ಪ್ರಾರಂಭಿಸಿದಾಗ ನಗರದ ಅಭಿವೃದ್ಧಿಯಲ್ಲಿ ವೇಗವನ್ನು ಪಡೆಯಿತು ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ಅತ್ಯಾಧುನಿಕ ಸೌಲಭ್ಯಗಳ ಗೂಗಲ್ ಆಫೀಸ್‌ನ ವಿಡಿಯೊ ವೈರಲ್; ಅಂತಹದ್ದೇನಿದೆ ಇಲ್ಲಿ?
ಉದ್ಯೋಗ, ಶಿಕ್ಷಣಕ್ಕಾಗಿ ಅಥವಾ ಉದ್ಯಮಕ್ಕೆ ತಾಣವಾಗಿರುವ ಬೆಂಗಳೂರಿನಲ್ಲಿ ಕನ್ನಡಿಗರಿಗಿಂತ ಹೊರರಾಜ್ಯದವರ ಸಂಖ್ಯೆಯೇ ಹೆಚ್ಚಾಗಿದೆ. ಇಲ್ಲಿ ನೆಲೆ ನಿಂತು ಇಲ್ಲಿ ಬದುಕು ಕಟ್ಟಿಕೊಂಡು ಕೊನೆಗೆ ಬೆಂಗಳೂರನ್ನು ದೂರುವವರೇ ಹೆಚ್ಚಾಗಿದ್ದಾರೆ ಎಂದು ತಪ್ಪಾಗಲಾರದು! ಬೆಂಗಳೂರನ್ನು ತೆಗಳಿದ ವಿಷಯಕ್ಕೆ ಸಾಕಷ್ಟು ಗಲಾಟೆಗಳು ಕೂಡ ಈ ಹಿಂದೆ ನಡೆದಿತ್ತು.