ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ವಧುವಿನ ಲೆಹೆಂಗಾ ಹಿಡಿದುಕೊಂಡು ಸಪ್ತಪದಿ ತುಳಿಯಲು ಮುಂದಾದ ಸ್ನೇಹಿತೆಯರು; ವೈರಲ್‌ ಆಯ್ತು ಮದುವೆಯ ವಿಡಿಯೋ

Wedding Video Viral: ವಿವಾಹ ಸಮಾರಂಭದ ವೇಳೆ ವಧುವಿನ ಲೆಹೆಂಗಾವನ್ನು ಹಿಡಿದುಕೊಂಡು ಸ್ನೇಹಿತೆಯರು ಸಪ್ತಪದಿ ತುಳಿಯಲು ಮುಂದಾದ ಮನಮೋಹಕ ಕ್ಷಣದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಹಾಸ್ಯ ಮತ್ತು ಸ್ನೇಹಭಾವ ತುಂಬಿರುವ ಈ ವಿಡಿಯೊ ನೆಟ್ಟಿಗರ ಗಮನ ಸೆಳೆದಿದ್ದು, ನಗು ತರಿಸಿದೆ.

ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತದಲ್ಲಿ, ಇದೀಗ ಮದುವೆಯ ಸೀಸನ್. ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ವಿವಾಹಗಳ ವಿಡಿಯೊಗಳು ಹರಿದಾಡುತ್ತಿವೆ. ತಮ್ಮ ಮದುವೆಯ ದಿನದ ಮರೆಯಲಾಗದ ಕ್ಷಣಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇವು ಭಾವನಾತ್ಮಕ, ಹೃದಯಸ್ಪರ್ಶಿ, ವಿಶಿಷ್ಟ ಅಥವಾ ಸಂಪೂರ್ಣ ಹಾಸ್ಯಮಯವಾಗಿದ್ದರೂ, ಈ ವಿಡಿಯೊಗಳು ಗಮನ ಸೆಳೆಯುವಲ್ಲಿ ಎಂದಿಗೂ ವಿಫಲವಾಗುವುದಿಲ್ಲ. ಅಂತಹ ಒಂದು ಕ್ಷಣದ ವೈರಲ್ ವಿಡಿಯೊವು (viral video) ಸಾಮಾಜಿಕ ಮಾಧ್ಯಮದಲ್ಲಿ (social media) ನೆಟ್ಟಿಗರ ಗಮನ ಸೆಳೆದಿದೆ.

ಇದೀಗ ವೈರಲ್ ಆಗಿರುವ ವಿಡಿಯೊದಲ್ಲಿ ವಧುವೊಬ್ಬರು ಕೆಂಪು ಲೆಹೆಂಗಾ ಚೋಳಿ ಧರಿಸಿ, ದುಪ್ಪಟ್ಟಾ ಮತ್ತು ಆಭರಣಗಳನ್ನು ಧರಿಸಿ ಸುಂದರವಾಗಿ ಕಾಣುತ್ತಿದ್ದರು. ಪವಿತ್ರ ಅಗ್ನಿಯ ಬಳಿ ಸಪ್ತಪದಿ (ಏಳು ಹೆಜ್ಜೆ) ಇರಿಸಲು ಸಿದ್ಧರಾಗುತ್ತಿದ್ದರು. ವರನು ವಧುವಿನ ಹಿಂದೆಯೇ ಇದ್ದನು. ಭಾರವಾದ ಉಡುಪಿನಲ್ಲಿ ಸರಿಯಾಗಿ ನಡೆಯಲು ಹೆಣಗಾಡುತ್ತಿದ್ದ ವಧುವಿಗೆ, ಆಕೆಯ ಸ್ನೇಹಿತೆಯರು ಸಹಾಯ ಮಾಡಲು ಧಾವಿಸಿದರು. ಈ ಕ್ಷಣವು ಹಾಸ್ಯಮಯವಾಯಿತು.

ತಾಳಿ ಕಟ್ಟುವ ವೇಳೆ ಬ್ರೆಝಾ ಕಾರು, 20 ಲಕ್ಷ ರೂ. ವರದಕ್ಷಿಣೆಗೆ ಬೇಡಿಕೆ; ಮದುವೆಯನ್ನೇ ರದ್ದುಗೊಳಿಸಿ ಮಾದರಿಯಾದ ವಧು

ಕೆಲವೇ ಕ್ಷಣಗಳಲ್ಲಿ, ಈ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ವಧುವು ವರನೊಂದಿಗೆ ಸಪ್ತಪದಿ ತುಳಿಯಲು ಮುಂದಾದಾಗ ಸ್ನೇಹಿತೆಯರು ಕೂಡ, ಉಡುಪನ್ನು ಹಿಡಿದುಕೊಂಡು ಆಕೆಯ ಹಿಂದೆಯೇ ಬಂದಿದ್ದಾರೆ. ಇದರಿಂದ ವಧು ಜೋರಾಗಿ ನಕ್ಕಿದ್ದಾರೆ. ಒಂದೇ ಸಮಯದಲ್ಲಿ ಯಾರು 4 ಹೆಂಡತಿಯರನ್ನು ಪಡೆಯುತ್ತಿದ್ದಾರೆ ಎಂದು ಬಳಕೆದಾರರೊಬ್ಬರು ವರನಿಗೆ ತಮಾಷೆ ಮಾಡಿದ್ದಾರೆ. ತುಂಬಾ ಮುದ್ದಾಗಿದೆ! ವಧುವಿನ ನಗು ತುಂಬಾ ಇಷ್ಟವಾಯಿತು. ಎಂತಹ ಸುಂದರ ಕ್ಷಣ ಎಂದು ಮತ್ತೊಬ್ಬ ಬಳಕೆದಾರರು ಹೇಳಿದರು.

ವಿಡಿಯೊ ವೀಕ್ಷಿಸಿ:



ಆದರೆ, ಕೆಲವು ಬಳಕೆದಾರರು ಅನುಚಿತ ಕಾಮೆಂಟ್‍ಗಳನ್ನು ಹಂಚಿಕೊಂಡಿದ್ದಾರೆ. ವಧು ತನ್ನ ಸ್ನೇಹಿತೆಯರನ್ನು ಬೆಂಬಲಿಸಿ ವಿಡಿಯೊಗೆ ಕಾಮೆಂಟ್ ಮಾಡಿದ್ದಾರೆ. ನನ್ನ ಮದುವೆ ಭಾರತದಲ್ಲಿ ನಡೆಯಿತು. ನನ್ನ ಸ್ನೇಹಿತೆಯರು ಪ್ರಪಂಚದ ವಿವಿಧ ಭಾಗಗಳಿಂದ ಬಂದಿದ್ದರು. ಅವರು ನಮ್ಮ ಸುಂದರ ಸಂಸ್ಕೃತಿಯನ್ನು ಅನುಭವಿಸಿದರು. ನಾವು ಅವರ ಸಂಸ್ಕೃತಿಯನ್ನು ಗೌರವಿಸುತ್ತೇವೆ. ಪ್ರೀತಿ, ಸ್ನೇಹ ಮತ್ತು ಗೌರವವು ಧರ್ಮ ಮತ್ತು ಗಡಿಗಳನ್ನು ಮೀರಿ ಅಸ್ತಿತ್ವದಲ್ಲಿದೆ. ದಯವಿಟ್ಟು ಪ್ರೀತಿಯನ್ನು ಹರಡಿ, ದ್ವೇಷವನ್ನಲ್ಲ. ನೀವು ಏನು ಹೇಳುತ್ತಿದ್ದೀರಿ ಎಂಬುದರ ಬಗ್ಗೆ ಗಮನವಿರಲಿ. ಪ್ರತಿಯೊಂದು ಸಂಸ್ಕೃತಿಯಲ್ಲೂ ಪ್ರೀತಿ ಸುಂದರವಾಗಿ ಕಾಣುತ್ತದೆ ಎಂದು ಬರೆದಿದ್ದಾರೆ.

ಈ ವಿಡಿಯೊವನ್ನು ಪೋಸ್ಟ್ ಮಾಡಿದ ದಿನದಿಂದ, ಅದು 6 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.

ಮದುವೆಗೆ 2 ಗಂಟೆಯ ಮೊದಲು ಯುವತಿಯೊಬ್ಬಳು ತನ್ನ ಪ್ರೇಮಿಯನ್ನು ಭೇಟಿಯಾದ ಭಾವನಾತ್ಮಕ ಘಟನೆಯೊಂದು ಇತ್ತೀಚೆಗೆ ನಡೆದಿತ್ತು. ವಿವಾಹ ಸಮಾರಂಭಕ್ಕೆ ಕೇವಲ ಎರಡು ಗಂಟೆಗಳ ಮೊದಲು ವಧು ತನ್ನ ಮಾಜಿ ಪ್ರಿಯಕರನನ್ನು ಭೇಟಿಯಾಗಿದ್ದಳು. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ನೆಟ್ಟಿಗರು ಇದನ್ನು ಸ್ಕ್ರಿಪ್ಟೆಡ್ ಎಂದು ಹೇಳಿದ್ದರು.