ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಯುವಕನ ಮಾನವೀಯತೆಗೆ ದೇಶವೇ ಫಿದಾ! ತಂಗಿಯ ಮದುವೆಗೆ ಭಿಕ್ಷುಕರನ್ನೇ ಅತಿಥಿಗಳಾಗಿ ಕರೆಸಿದ ಅಣ್ಣ

Viral Video: ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ಸಿದ್ಧಾರ್ಥ್ ರಾಯ್ ಎಂಬ ವ್ಯಕ್ತಿ ತನ್ನ ತಂಗಿಯ ಮದುವೆಯನ್ನು ಅತ್ಯಂತ ಭಿನ್ನ ರೀತಿಯಲ್ಲಿ ಆಚರಿಸಿದ್ದಾರೆ. ವಿವಾಹ ಸಂಭ್ರಮಕ್ಕೆ ಸಿದ್ಧಾರ್ಥ್ ತಮ್ಮ ಊರಿನ ಬೀದಿ ಬದಿಯ ಭಿಕ್ಷುಕರು ಮತ್ತು ನಿರಾಶ್ರಿತರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಹೀಗೊಂದು ಮದುವೆ! ತಂಗಿಯ ಮದುವೆಗೆ ಭಿಕ್ಷುಕರನ್ನು ಕರೆದ ಅಣ್ಣ

ತಂಗಿಯ ಮದುವೆಗೆ ಭಿಕ್ಷುಕರನ್ನೇ ಅತಿಥಿಗಳಾಗಿ ಕರೆಸಿದ ಅಣ್ಣ -

Profile
Pushpa Kumari Dec 23, 2025 3:59 PM

ಲಖನೌ, ಡಿ. 23: ಸದ್ಯ ಅದ್ಧೂರಿ ಮದುವೆ ಜನಪ್ರಿಯವಾಗುತ್ತಿದೆ. ತಮ್ಮ ಮದುವೆಯನ್ನು ಗ್ರ್ಯಾಂಡ್ ಆಗಿ ಆಯೋಜನೆ ಮಾಡುತ್ತಾರೆ. ಈ ದಿನ ಅತ್ಯಂತ ವಿಶೇಷ ಆಗಿರಬೇಕೆಂದು ಲಕ್ಷಾಂತರ ರುಪಾಯಿ ವ್ಯಯಿಸಿ ಕಾರ್ಯಕ್ರಮ ಆಯೋಜಿಸುತ್ತಾರೆ. ಆದರೆ ಅದರಕ್ಕಿಂತ ಭಿನ್ನವಾಗಿ, ಮಾಬವೀಯತೆಯ ಸಂದೇಶ ಸಾರಿದ ಈ ಒಂದು ಮದುವೆ ಸಮಾರಂಭವನ್ನು ದೇಶದ ಜನರೇ ಮೆಚ್ಚಿಕೊಳ್ಳುವಂತಾಗಿದೆ. ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ಸಿದ್ಧಾರ್ಥ್ ರಾಯ್ ಎಂಬ ವ್ಯಕ್ತಿ ತನ್ನ ತಂಗಿಯ ಮದುವೆಯನ್ನು ವಿಶೇಷವಾಗಿ ಆಚರಿಸುವ ಮೂಲಕ ಸ್ಮರಣೀಯವಾಗಿಸಿದ್ದಾರೆ. ವಿವಾಹ ಸಂಭ್ರಮಕ್ಕೆ ಸಿದ್ಧಾರ್ಥ್ ತಮ್ಮ ಊರಿನ ಬೀದಿ ಬದಿಯ ಭಿಕ್ಷುಕರು ಮತ್ತು ನಿರಾಶ್ರಿತರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral Video) ಆಗಿದೆ.

ಕೆಲವರು ಮದುವೆಯನ್ನು ಅವಿಸ್ಮರಣೀಯವಾಗಿಸಲು ಲಕ್ಷಾಂತರ, ಕೊಟ್ಯಂತರ ರುಪಾಯಿ ಖರ್ಚು ಮಾಡುವುದಲ್ಲದೆ ಪ್ರಸಿದ್ಧ ವ್ಯಕ್ತಿಗಳನ್ನು ಆಹ್ವಾನಿಸುತ್ತಾರೆ.‌ ವಧು-ವರರು ತಮ್ಮಈ ದಿನವನ್ನು ನೆನಪಿನಲ್ಲಿ ಉಳಿದುಕೊಳ್ಳುವಂತೆ ಮಾಡಲು ಐಷಾರಾಮಿ ಮದುವೆಯನ್ನು ಆಯೋಜಿಸುತ್ತಾರೆ. ಆದರೆ ಉತ್ತರ ಪ್ರದೇಶದ ಘಾಜಿಪುರದ ಸಿದ್ಧಾರ್ಥ್ ರಾಯ್‌ ತಮ್ಮ ಸಹೋದರಿಯ ಮದುವೆಯನ್ನು ನಿಜವಾಗಿಯೂ ಸ್ಮರಣೀಯವಾಗಿಸಲು ಅತಿಥಿಗಳು, ಸಂಬಂಧಿಕರು ಮತ್ತು ಸ್ನೇಹಿತರ ಸಂಖ್ಯೆಯನ್ನು ಸೀಮಿತಗೊಳಿಸಿ ಜಿಲ್ಲೆಯಾದ್ಯಂತ ಇರುವ ಭಿಕ್ಷುಕರು ಮತ್ತು ನಿರಾಶ್ರಿತರನ್ನು ಆಹ್ವಾನಿಸಿ, ಅವರನ್ನು ಸತ್ಕರಿಸಿದ್ದಾರೆ.

ತಂಗಿಯ ಮದುವೆಗೆ ಭಿಕ್ಷುಕರನ್ನೇ ಕರೆಸಿದ ಅಣ್ಣ; ವಿಡಿಯೊ ಇಲ್ಲಿದೆ



ಸಿದ್ಧಾರ್ಥ್ ಕೇವಲ ಅವರಿಗೆ ಊಟ ಹಾಕುವುದಕ್ಕೆ ಸೀಮಿತವಾಗದೆ, ಅವರನ್ನು ಕರೆತರಲು ವಿಶೇಷ ವಾಹನಗಳ ವ್ಯವಸ್ಥೆ ಮಾಡಿದ್ದರು. ಮದುವೆ ಸಭಾಂಗಣದಲ್ಲೂ ವಿಶೇಷ ಅತಿಥಿಗಳನ್ನು ಕುಟುಂಬದ ಸದಸ್ಯರಂತೆಯೇ ಉನ್ನತ ಸ್ಥಾನ ನೀಡಿ ಗೌರವಿಸಲಾಯಿತು. ಅತ್ಯಂತ ರುಚಿಕರ ಭೋಜನದ ವ್ಯವಸ್ಥೆ ಮಾಡಲಾಗಿತ್ತು.

ಅರೇ...ಇದೇನಿದು ಹಣ್ಣಿನ ಮೊಮೊಸ್? ವೈರಲ್ ಆಗ್ತಿದೆ ಈ ವಿಚಿತ್ರ ಖಾದ್ಯದ ವಿಡಿಯೊ

ಸಂಗೀತ, ನೃತ್ಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಈ ಸಂಭ್ರಮದಲ್ಲಿ ಅತಿಥಿಗಳು ಪಾಲ್ಗೊಂಡು ಮನಸಾರೆ ಕುಣಿದಿದ್ದಾರೆ. ''ನಮ್ಮ ಜೀವನದಲ್ಲಿ ಇಂತಹ ಸತ್ಕಾರ ಮತ್ತು ಗೌರವ ಎಂದೂ ಸಿಕ್ಕಿರಲಿಲ್ಲ" ಎಂದು ಅವರು ಭಾವುಕರಾಗಿದ್ದಾರೆ. ಮದುವೆ ಮುಗಿದ ನಂತರ ಎಲ್ಲರಿಗೂ 'ರಿಟರ್ನ್ ಗಿಫ್ಟ್' ನೀಡಿ ಸಿದ್ಧಾರ್ಥ್ ಗೌರವಯುತವಾಗಿ ಬೀಳ್ಕೊಟ್ಟಿದ್ದಾರೆ.

ವಿಡಿಯೊವನ್ನು ಸಿದ್ಧಾರ್ಥ್ ರಾಯ್‌ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಜಿಲ್ಲೆಯ ಭಿಕ್ಷುಕರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿದ್ದು ಇದಕ್ಕಿಂದ ದೊಡ್ಡದಾದ ಆಶೀರ್ವಾದ ಇಲ್ಲ ಎಂದು ಬರೆದುಕೊಂಡಿದ್ದಾರೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಲಕ್ಷಾಂತರ ಜನರು ಈ ಮದುವೆಗೆ ಹಾರೈಸಿದ್ದಾರೆ. ನೆಟ್ಟಿಗರೊಬ್ಬರು "ಇದು ಕೇವಲ ಮದುವೆಯಲ್ಲ, ಸಮಾಜಕ್ಕೆ ಒಂದು ಉತ್ತಮ ಪಾಠ'' ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ʼʼನೀವು ನಿಜವಾಗಿಯೂ ಪ್ರಶಂಸೆಗೆ ಅರ್ಹರುʼʼ ಎಂದು ಪ್ರತಿಕ್ರಿಯೆ ನೀಡಿದ್ದಾರೆ. "ಒಬ್ಬ ವ್ಯಕ್ತಿ ನಿಜವಾಗಿಯೂ ಉತ್ತಮ ಉದ್ದೇಶದಿಂದ ಮಾಡಿದ್ದರೆ ಜನರೇ ಬೆಂಬಲ ನೀಡುತ್ತಾರೆ" ಎಂದು ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.