ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral video: ಗನ್‌ ಹಿಡಿದು ಪ್ರಧಾನಿ ಮೋದಿಗೆ ಜೀವಬೆದರಿಕೆ ಹಾಕಿದ ಬಾಲಕಿ!

ವಿಡಿಯೋದ ದಿನಾಂಕ ಮತ್ತು ಸ್ಥಳ ಸ್ಪಷ್ಟವಾಗಿಲ್ಲ. ಮಕ್ಕಳಲ್ಲಿಯೂ ಈ ಮಟ್ಟದ ದ್ವೇಷ ಮತ್ತು ಮೂಲಭೂತವಾದವನ್ನು ತುಂಬುತ್ತಿರುವುದ್ನು ನೋಡಿ ನೆಟಿಜನ್‌ಗಳು ಆತಂಕಗೊಂಡಿದ್ದಾರೆ. ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಹುಡುಗಿ ರೈಫಲ್ ಅನ್ನು ಹಿಡಿದುಕೊಂಡು ಆತಂಕಕಾರಿ ಸಂದೇಶವನ್ನು ನೀಡುತ್ತಿರುವುದನ್ನು ಕಾಣಬಹುದು.

ಗನ್‌ ಹಿಡಿದು ಪ್ರಧಾನಿ ಮೋದಿಗೆ ಜೀವಬೆದರಿಕೆ ಹಾಕಿದ ಬಾಲಕಿ!

ಹರೀಶ್‌ ಕೇರ ಹರೀಶ್‌ ಕೇರ Mar 12, 2025 8:26 AM

ನವದೆಹಲಿ: ಎಕೆ-47 (AK 47 rifle) ಹಿಡಿದುಕೊಂಡು ಪ್ರಧಾನಿ ನರೇಂದ್ರ ಮೋದಿ (Prime minister Narendra Modi) ಅವರ ವಿರುದ್ಧ ಕೊಲೆ ಬೆದರಿಕೆ ಹಾಕುತ್ತಿರುವ ಬಾಲಕಿಯೊಬ್ಬಳ ಆಘಾತಕಾರಿ ವಿಡಿಯೋ ವೈರಲ್‌ (viral video) ಆಗುತ್ತಿದ್ದು, ಇದ್ನು ನೋಡಿ ನೆಟಿಜೆನ್‌ಗಳು ಶಾಕ್‌ ಆಗಿದ್ದಾರೆ. ಬಾಲಕಿಯ ದಿರಿಸು ಹಾಗೂ ಮಾತುಗಳಿಗೆ ಆಕೆ ಮುಸ್ಲಿಂ ಎಂದು ಗೊತ್ತಾಗಿದ್ದು, ವಿಡಿಯೋ ಪಾಕಿಸ್ತಾನ ಅಥವಾ ಬಾಂಗ್ಲಾದೇಶ ಮೂಲದ್ದಿರಬಹುದು ಎಂದು ಶಂಕಿಸಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ವಿಡಿಯೋದ ದಿನಾಂಕ ಮತ್ತು ಸ್ಥಳ ಸ್ಪಷ್ಟವಾಗಿಲ್ಲ. ಮಕ್ಕಳಲ್ಲಿಯೂ ಈ ಮಟ್ಟದ ದ್ವೇಷ ಮತ್ತು ಮೂಲಭೂತವಾದವನ್ನು ತುಂಬುತ್ತಿರುವುದ್ನು ನೋಡಿ ನೆಟಿಜನ್‌ಗಳು ಆತಂಕಗೊಂಡಿದ್ದಾರೆ. ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಹುಡುಗಿ ರೈಫಲ್ ಅನ್ನು ಹಿಡಿದುಕೊಂಡು ಆತಂಕಕಾರಿ ಸಂದೇಶವನ್ನು ನೀಡುತ್ತಿರುವುದನ್ನು ಕಾಣಬಹುದು.



"ಮಿಸ್ಟರ್ ಮೋದಿ, ನೀವು ಏನೇ ಆಗಿರಲಿ, ಮೂರ್ಖ ವ್ಯಕ್ತಿ. ನೀವು ನಮ್ಮ ದೇಶವನ್ನು ಮತ್ತೊಮ್ಮೆ ಕೊಂದರೆ, ಮತ್ತು ನಮ್ಮ ತಾಯಿ, ತಂದೆ ಮತ್ತು ಮಕ್ಕಳನ್ನು ಕೊಂದರೆ, ನಾನು ನಿಮ್ಮನ್ನು ನಿಮ್ಮ ಮುಖಕ್ಕೆ ಗುಂಡಿಟ್ಟು ಕೊಲ್ಲುತ್ತೇನೆ. ನೀವು ನೋಡುತ್ತಿರಿ. ನನ್ನ ಬಳಿ ಬಹಳಷ್ಟು ಗುಂಡುಗಳು, 50 ಗುಂಡುಗಳಿವೆ. ನಾನು ನಿಮ್ಮನ್ನು ಎರಡು ಹೊಡೆತಗಳಲ್ಲಿ ಕೊಲ್ಲುತ್ತೇನೆ. ನೀವು ಎಂದಿಗೂ ಜೀವಂತವಾಗಿರುವುದಿಲ್ಲ. ಯಾವುದೇ ವೈದ್ಯರು ನಿಮ್ಮನ್ನು ಉಳಿಸಲಾರರು. ನೀವು ಶಾಶ್ವತವಾಗಿ ನೆಲದ ಮೇಲೆ ಬಿದ್ದಿರುತ್ತೀರಿ. ಅಲ್ಲಾಹ್‌ ನಿಮ್ಮ ಬಗ್ಗೆ ಸಂತೋಷವಾಗಿಲ್ಲ. ನೀವು ಕೊಳೆಯುತ್ತೀರಿ" ಎಂದು ಬಾಲಕಿ ಗನ್‌ ಝಳಪಿಸುತ್ತಾ ಹೇಳಿದ್ದಾಳೆ.

ಈ ವಿಡಿಯೋ ಹಲವಾರು ಆಕ್ರೋಶಭರಿತ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ದ್ವೇಷದ ಆಘಾತಕಾರಿ ಪ್ರದರ್ಶನವನ್ನು ಹಲವರು ಖಂಡಿಸಿದ್ದಾರೆ. ವಿವಿಧ ವೇದಿಕೆಗಳಲ್ಲಿ ಬಳಕೆದಾರರು ಮಕ್ಕಳನ್ನು ಮೂಲಭೂತವಾದದತ್ತ ತಳ್ಳುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು, "ಇದು ಭಾರತದ ವೀಡಿಯೊವೇ? ಹಾಗಿದ್ದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು. ಓ ದೇವರೇ! ಮೋದಿ ರಾಷ್ಟ್ರೀಯವಾದಿ ವ್ಯಕ್ತಿಯಾಗಿದ್ದಕ್ಕಾಗಿ ಅವರ ವಿರುದ್ಧ ಅಷ್ಟೊಂದು ದ್ವೇಷ" ಎಂದು ಬರೆದಿದ್ದಾರೆ. "ಯಾವುದೇ ದೇಶದ್ದಾಗಿರಲಿ, ಆ ದೇಶದ ಸರ್ಕಾರ ಇಂಥ ದ್ವೇಷ ಪ್ರದರ್ಶನದ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂದು ಮತ್ತೊಬ್ಬರು ಬರೆದಿದ್ದಾರೆ.

ಇದನ್ನೂ ಓದಿ: Viral Video: ಹೆತ್ತ ತಂದೆಗೇ ಕೋಲಿನಿಂದ ಥಳಿಸಿದ ಹೆಣ್ಣು ಮಕ್ಕಳು; ಆತ ಮೃತಪಟ್ಟ ಕೆಲವೇ ದಿನಗಳಲ್ಲಿ ವಿಡಿಯೋ ವೈರಲ್‌