Viral Video: ಡಿಜೆ ಹಾಡನ್ನು ಕೇಳಿ ಮದುವೆ ರದ್ದು ಮಾಡಿದ ವರ; ಅಷ್ಟಕ್ಕೂ ಆ ಹಾಡು ಯಾವುದು?
ಮದುವೆ ಮನೆಯ ಡಿಜೆಯಲ್ಲಿ ರಣಬೀರ್ ಕಪೂರ್ ಅವರ ಎಮೋಷನಲ್ ಟ್ರ್ಯಾಕ್ ಚನ್ನಾ ಮೇರಿಯಾವನ್ನು ಹಾಕಿದ್ದರಿಂದ ಅದನ್ನು ಕೇಳಿದ ವರನಿಗೆ ತನ್ನ ಮಾಜಿ ಗೆಳತಿಯ ನೆನಪು ಕಾಡಿ ಮದುವೆಯನ್ನು ರದ್ದುಮಾಡಿದ್ದಾನೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.


ಮದುವೆ ಎನ್ನುವುದು ಜೀವನದಲ್ಲಿ ಒಮ್ಮೆ ನಡೆಯುವಂತಹ ಸಂಭ್ರಮದ ದಿನ. ಹಾಗಾಗಿ ಈ ದಿನವನ್ನು ಎಲ್ಲರೂ ವಿಜೃಂಭಣೆಯಿಂದ ಆಚರಿಸುತ್ತಾರೆ. ಆದರೆ ದೆಹಲಿಯಲ್ಲಿ ನಡೆದ ಮದುವೆಯೊಂದು ಡಿಜೆ ಹಾಡಿನಿಂದಾಗಿ ರದ್ದಾಗಿದೆಯಂತೆ. ಕಾರಣ ಇಷ್ಟೇ ಡಿಜೆಯಲ್ಲಿ ನುಡಿಸಿದ ಹಾಡು ವರನಿಗೆ ತನ್ನ ಮಾಜಿ ಗೆಳತಿಯ ನೆನಪನ್ನು ತಂದಿದೆಯಂತೆ. ಹೀಗಾಗಿ ಆತ ಬೇಸರಗೊಂಡು ಮದುವೆಯನ್ನೇ ರದ್ದು ಮಾಡಿದ್ದಾನೆ. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.ವರನ ಬರಾತ್ ಮದುವೆ ಸ್ಥಳಕ್ಕೆ ಬಂದಾಗ ಅಲ್ಲಿ ಡಿಜೆಯಲ್ಲಿ ರಣಬೀರ್ ಕಪೂರ್ ಅವರ ಎಮೋಷನಲ್ ಟ್ರ್ಯಾಕ್ ಚನ್ನಾ ಮೇರಿಯಾವನ್ನು ಹಾಕಲಾಗಿತ್ತು. ಇದನ್ನು ಕೇಳಿದ ವರನಿಗೆ ಆತನ ಮಾಜಿ ಗೆಳತಿಯ ನೆನಪು ಕಾಡಿದೆಯಂತೆ. ಹೀಗಾಗಿ ಮದುವೆಯನ್ನು ರದ್ದುಗೊಳಿಸಿದ್ದಾನೆ.
ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಪೋಸ್ಟ್‌ಗೆ ಹೆಚ್ಚಿನ ಜನರು ಕಾಮೆಂಟ್ ಮಾಡಿದ್ದಾರೆ. ಮದುವೆಗೆ ಮುಂಚಿತವಾಗಿ ವರನು ತನ್ನ ನಿಜವಾದ ಭಾವನೆಗಳನ್ನು ಅರಿತುಕೊಳ್ಳಲು ಸಹಾಯ ಮಾಡಿದ್ದಕ್ಕಾಗಿ ಅನೇಕರು ಡಿಜೆಗೆ ಧನ್ಯವಾದ ಅರ್ಪಿಸಿದ್ದಾರೆ. ಒಬ್ಬ ವ್ಯಕ್ತಿಯು, “ಇಬ್ಬರ ಜೀವನ ಹಾಳುಮಾಡುವುದಕ್ಕಿಂತ ಅದನ್ನು ಮೊದಲೇ ಅರಿತುಕೊಂಡಿರುವುದು ಉತ್ತಮ” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, “ವರನು ತನ್ನನ್ನು ರಣಬೀರ್ ಕಪೂರ್ ಎಂದು ತಪ್ಪಾಗಿ ಭಾವಿಸಿದ್ದಾನೆ” ಎಂದು ತಮಾಷೆ ಮಾಡಿದ್ದಾರೆ. ಈ ಪೋಸ್ಟ್ ಲಕ್ಷಾಂತರ ಲೈಕ್ಸ್ ಮತ್ತು ಸಾವಿರಾರು ಕಾಮೆಂಟ್‍ಗಳನ್ನು ಗಳಿಸಿದೆ.
'ಚನ್ನಾ ಮೇರಿಯಾ' ಬಾಲಿವುಡ್‌ನ ಸೂಪರ್ ಹಿಟ್ ಚಿತ್ರ 'ಏ ದಿಲ್ ಹೈ ಮುಷ್ಕಿಲ್' ನ ಸೂಪರ್ ಹಿಟ್ ಹಾಡಾಗಿದೆ. ಈ ಹಾಡು ಬ್ರೇಕ್ ಅಪ್ ಆದವರು ಕೇಳಿದರೆ ಅದು ಅವರ ಹೃದಯವನ್ನು ಮತ್ತಷ್ಟು ನೋಯಿಸುತ್ತದೆ ಎನ್ನಲಾಗಿದೆ.
ಈ ರೀತಿ ಕ್ಷುಲಕ ಕಾರಣಕ್ಕೆ ಮದುವೆ ರದ್ದಾಗಿದ್ದು ಇದೇ ಮೊದಲಲ್ಲ.ಇತ್ತೀಚೆಗಷ್ಟೇ ಉತ್ತರಾಖಂಡದ ಹರಿದ್ವಾರದಲ್ಲಿ ವರನ ಸ್ನೇಹಿತರು ವಧುವಿನ ಮಹಿಳಾ ಸಂಬಂಧಿಕರ ಬಗ್ಗೆ ಅಸಭ್ಯವಾದ ಕಾಮೆಂಟ್‍ಗಳನ್ನು ಮಾಡಿದ್ದಕ್ಕೆ ಎರಡು ಕಡೆಯವರ ನಡುವೆ ಜಗಳ, ಹೊಡೆದಾಟ ನಡೆದು ಕೊನೆಗೆ ವಧು ಮದುವೆಯನ್ನು ರದ್ದುಗೊಳಿಸಿದ ಘಟನೆ ನಡೆದಿತ್ತು.ಈ ಜಗಳ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿತ್ತು.
ಈ ಸುದ್ದಿಯನ್ನೂ ಓದಿ:Viral Video: ಒಂದಲ್ಲ... ಎರಡಲ್ಲ ಬರೋಬ್ಬರಿ 12ಕಾರುಗಳು! ಈ ಕಿಡಿಗೇಡಿ ಮಾಡಿದ್ದೇನು ಗೊತ್ತಾ? ಬೆಚ್ಚಿಬೀಳಿಸುವ ವಿಡಿಯೊ ವೈರಲ್
ಈ ಘಟನೆಯಲ್ಲಿ 10 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ, ಜಗಳದಲ್ಲಿ ಭಾಗಿಯಾಗಿದ್ದ ಹೆಚ್ಚಿನ ಜನರು ಅಲ್ಲಿಂದ ಪಲಾಯನ ಮಾಡಿದ್ದರಂತೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯಿಂದ ದೂರು ದಾಖಲಾದರೆ ತನಿಖೆಯನ್ನು ಪ್ರಾರಂಭಿಸುವುದಾಗಿ ಪೊಲೀಸರು ತಿಳಿಸಿದ್ದರು.