ಇದಪ್ಪ ಕ್ರೇಝ್; ಮದುವೆ ಮಂಟಪದಲ್ಲೂ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೀಕ್ಷಿಸಿ ವರ: ವಧುವಿನ ರಿಯಾಕ್ಷನ್ ಹೇಗಿತ್ತು ನೋಡಿ
ಮದುವೆ ಮಂಟಪದಲ್ಲೇ ವರನೊಬ್ಬ ತನ್ನ ನೆಚ್ಚಿನ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ವೀಕ್ಷಿ ಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ತನ್ನ ಮದುವೆ ಸಂಭ್ರಮದ ಮಹತ್ವದ ಕ್ಷಣದಲ್ಲಿಯೂ ಕ್ರಿಕೆಟ್ ಮ್ಯಾಚ್ ನೋಡುತ್ತಿರುವ ಯುವಕನ ಕ್ರೇಝ್ ಕಂಡು ನೆಟ್ಟಿಗರು ಅಚ್ಚರಿಗೊಳಗಾಗಿದ್ದಾರೆ.
ವಿರಾಟ್ ಕೊಹ್ಲಿಯ ಬ್ಯಾಟಿಂಗ್ ವೀಕ್ಷಿಸಿದ ವರ -
ನವದೆಹಲಿ, ಡಿ. 9: ಭಾರತದಲ್ಲಿ ಕ್ರಿಕೆಟ್‌ಗೆ ಸಿಗುವಷ್ಟು ಮಹತ್ವ ಬೇರೆ ಯಾವ ಕ್ರೀಡೆಗೂ ಸಿಗುತ್ತಿಲ್ಲ. ಅದರಲ್ಲೂ ಯುವಕರಂತೂ ನಿದ್ದೆ, ಊಟ ಬಿಟ್ಟು ಕ್ರಿಕೆಟ್ ವೀಕ್ಷಿಸುತ್ತಿರುತ್ತಾರೆ. ಇದಕ್ಕೆ ಸಾಕ್ಷಿ ಎಂಬಂತೆ ಮದುವೆ ಮಂಟಪದಲ್ಲೇ ವರನೊಬ್ಬ ತನ್ನ ನೆಚ್ಚಿನ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಬ್ಯಾಟಿಂಗ್ ವೀಕ್ಷಿಸುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ (Viral Video) ಆಗಿದೆ. ತನ್ನ ಮದುವೆ ಸಂಭ್ರಮದ ಮಹತ್ವದ ಕ್ಷಣದಲ್ಲಿಯೂ ಕ್ರಿಕೆಟ್ ವೀಕ್ಷಿಸುತ್ತಿರುವ ಯುವಕನ ಕ್ರೇಝ್‌ಗೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ವೈರಲ್ ವಿಡಿಯೊದಲ್ಲಿ ವರನು ಕಸೂತಿ ಮಾಡಿದ ಶೇರ್ವಾನಿಯಲ್ಲಿ ಕಾಣಿಸಿಕೊಂಡಿದ್ದು, ವಧುವಿನ ಪಕ್ಕದಲ್ಲಿ ಆತ ಮದುವೆಯ ಶಾಸ್ತ್ರಕ್ಕಾಗಿ ಮಂಟಪದಲ್ಲಿ ಕುಳಿತಿರುವುದು ಕಂಡುಬಂದಿದೆ. ಪುರೋಹಿತರು ಮಂತ್ರಗಳನ್ನು ಪಠಿಸುತ್ತಿರುವಾಗ ವರನು ಕೈಯಲ್ಲಿರುವ ಸ್ಮಾರ್ಟ್ ಫೋನ್‌ನಲ್ಲಿ ಕ್ರಿಕೆಟ್ ಪಂದ್ಯ ವೀಕ್ಷಿಸಿದ್ದಾನೆ.
ವಿಡಿಯೊ ನೋಡಿ:
ವರ ತನ್ನ ಸ್ಮಾರ್ಟ್‌ಫೋನ್‌ನಲ್ಲಿ ಲೈವ್ ಕ್ರಿಕೆಟ್ ಪಂದ್ಯವನ್ನು ಸನೋಡಿದ್ದಾನೆ. ಆತ ವಿರಾಟ್ ಕೊಹ್ಲಿ ಬ್ಯಾಟಿಂಗ್ ನೋಡುವುದರಲ್ಲೇ ಮಗ್ನನಾಗಿದ್ದು ಅವನ ಮುಖದ ಮೇಲಿನ ಏಕಾಗ್ರತೆಯ ಮಟ್ಟವು ಎಲ್ಲವನ್ನೂ ಹೇಳುವಂತಿದೆ. ವರನು ವಿರಾಟ್ ಕೊಹ್ಲಿಯ ಬ್ಯಾಟಿಂಗ್‌ನ ಮಿಸ್ ಮಾಡಬಾರದು, ಆ ಕ್ಷಣವನ್ನೂ ತಪ್ಪಿಸಿಕೊಳ್ಳಬಾರದು ಎಂಬಂತೆ ಆಸಕ್ತಿಯಿಂದ ಮೈ ಮರೆತು ನೋಡಿದ್ದಾನೆ. ಮದುವೆಗೆ ಬಂದಿದ್ದ ಅತಿಥಿಗಳು ಆತನನ್ನು ಗಮನಿಸಿ ನಗುತ್ತಾ ಆನಂದಿಸಿದ್ದಾರೆ. ಅಚ್ಚರಿಯೆಂದರೆ, ವರನ ಕ್ರಿಕೆಟ್ ಆಸಕ್ತಿ ಕಂಡು ವಧು ಕೂಡ ನಗುತ್ತಾ ಸುಮ್ಮನಾಗಿದ್ದಾಳೆ.
ಫ್ಲೈಓವರ್‌ನಲ್ಲಿ ಹುಟ್ಟುಹಬ್ಬ ಆಚರಣೆ; FIR ಆಗುತ್ತಲೇ ಕ್ಷಮಿಸಿ ಎಂದು ಬೇಡಿಕೊಂಡ ಯುವಕ
ವರ ಮದುವೆಯ ಆಚರಣೆಗಳನ್ನು ನಿರ್ವಹಿಸುವ ಸಮಯದಲ್ಲಿ ಸಂಪೂರ್ಣವಾಗಿ ಕಳೆದು ಹೋಗಿದ್ದಾನೆ. ಸದ್ಯ ಈ ವಿಡಿಯೊ ಭಾರಿ ವೈರಲ್ ಆಗಿದೆ. ʼಮದುವೆಗಳೆಲ್ಲ ಸಾಮಾನ್ಯ. ಆದರೆ ಕೊಹ್ಲಿಯ ಬ್ಯಾಟಿಂಗ್ ಯಾವತ್ತು ತಪ್ಪಿಸಿಕೊಳ್ಳಬಾರದುʼ ಎಂಬ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೊ ನೋಡಿ ನೆಟ್ಟಿಗರು ಮಜವಾದ ಪ್ರತಿಕ್ರಿಯೆ ನೀಡಿದ್ದಾರೆ. ಕ್ರಿಕೆಟ್ ಅಭಿಮಾನಿಗಳು ವರನನ್ನು ʼಕಿಂಗ್ ಕೊಹ್ಲಿ ಅಭಿಮಾನಿʼ ಎಂದು ಕರೆದಿದ್ದಾರೆ.
ಕ್ರಿಕೆಟ್ ಪ್ರೀತಿ ಅಂದರೆ ಇದು...ಮದುವೆಗಿಂತ ಕೊಹ್ಲಿಯ ಬ್ಯಾಟಿಂಗ್ ಅತೀ ಮುಖ್ಯ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬರು ಇವರು ಪಕ್ಕಾ ಕ್ರಿಕೆಟ್ ಅಭಿಮಾನಿ ಎಂದು ಹೇಳಿದ್ದಾರೆ. ಆದಾಗ್ಯೂ ಕೆಲವರು ತನ್ನ ಮದುವೆ ಸಮಾರಂಭದ ಸಂದರ್ಭದಲ್ಲೂ ಸಂಪೂರ್ಣ ಗಮನ ಕೊಡದಿರುವುದಕ್ಕೆ ಟೀಕೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಭಾರತ-ಪಾಕಿಸ್ತಾನ ಚಾಂಪಿಯನ್ಸ್ ಟ್ರೋಫಿ ಪಂದ್ಯವನ್ನು ವೀಕ್ಷಿಸಲು ಜೋಡಿ ತಮ್ಮ ವಿವಾಹ ಸಮಾರಂಭವನ್ನು ಮಧ್ಯದಲ್ಲಿ ನಿಲ್ಲಿಸಿದ ಕ್ಷಣ ಕೂಡ ವೈರಲ್ ಆಗಿತ್ತು.