ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ತಂದೂರಿ ರೋಟಿಗಾಗಿ ರಣರಂಗವಾಯ್ತು ಮದುವೆ: ನೆಟ್ಟಿಗರಿಂದ ಭಾರಿ ಟೀಕೆ

ಇಲ್ಲೊಂದು ಮದುವೆ ಸಮಾರಂಭದಲ್ಲಿ ತಂದೂರಿ ರೋಟಿಗಾಗಿ ಮದುವೆ ಮನೆಯೇ ರಣರಂಗವಾಗಿದೆ. ಹರಿಯಾಣದ ಸಿರ್ಸಾ ಜಿಲ್ಲೆಯ ಗೊಲ್ಚಾ ಪ್ಯಾಲೇಸ್‌ನಲ್ಲಿ ಈ ಘಟನೆ ನಡೆದಿದ್ದು ಆಹಾರ ವಿತರಣೆಯ ವೇಳೆ ಉಂಟಾದ ತೀವ್ರ ಅವ್ಯವಸ್ಥೆಯಿಂದಾಗಿ ಮದುವೆ ಸಭಾಂಗಣದಲ್ಲೇ ಜಗಳ ಉಂಟಾಗಿದೆ.‌ ತಂದೂರಿ ರೋಟಿಗಾಗಿ ಅತಿಥಿಗಳು ತೋರಿದ ಅಸಭ್ಯ ವರ್ತನೆಯ ವಿಡಿಯೊ ವೈರಲ್ ಆಗಿದ್ದು ವ್ಯಾಪಕ ಟೀಕೆಗೆ ಕಾರಣವಾಗಿದೆ.

ಸಾಂದರ್ಭಿಕ ಚಿತ್ರ

ಚಂಡೀಗಢ, ಡಿ.13: ಮದುವೆಯ ಔತಣಕೂಟವನ್ನು ಅದ್ದೂರಿಯಾಗಿ ಏರ್ಪಡಿಸಲಾಗುತ್ತದೆ. ಬಗೆ- ಬಗೆಯ ವಿಶೇಷ ಆಹಾರ, ವಿವಿಧ ಖಾದ್ಯಗಳನ್ನು ತಯಾರಿ ಅತಿಥಿಗಳಿಗೆ ಉಣಬಡಿಸಲಾಗುತ್ತದೆ. ಆದರೆ ಇಲ್ಲೊಂದು ತಂದೂರಿ ರೋಟಿಗಾಗಿ ಮದುವೆ ಮನೆಯೇ ರಣರಂಗವಾಗಿದೆ. ಹರಿಯಾಣದ ಸಿರ್ಸಾ ಜಿಲ್ಲೆಯ ಗೊಲ್ಚಾ ಪ್ಯಾಲೇಸ್‌ನಲ್ಲಿ ಈ ಘಟನೆ ನಡೆದಿದ್ದು, ಆಹಾರ ವಿತರಣೆಯ ವೇಳೆ ಉಂಟಾದ ತೀವ್ರ ಅವ್ಯವಸ್ಥೆಯಿಂದಾಗಿ ಮದುವೆ ಸಭಾಂಗಣದಲ್ಲೇ ಜಗಳ ಉಂಟಾಗಿದೆ.‌ ತಂದೂರಿ ರೋಟಿಗಾಗಿ ಅತಿಥಿಗಳು ತೋರಿದ ಅಸಭ್ಯ ವರ್ತನೆಯ ವಿಡಿಯೊ ವೈರಲ್ (Viral Video) ಆಗಿದ್ದು, ವ್ಯಾಪಕ ಟೀಕೆಗೆ ಕಾರಣವಾಗಿದೆ.

ಇತ್ತೀಚೆಗೆ ಬಿಹಾರದ ಬೋಧ್ ಗಯಾದಲ್ಲಿ ರಸಗುಲ್ಲಕ್ಕಾಗಿ ಕಿತ್ತಾಟ ನಡೆದಿದ್ದು ಮದುವೆಯೇ ಕ್ಯಾನ್ಸಲ್ ಆಗಿತ್ತು.‌ ಅದೇ ರೀತಿ ಸಾಮೂಹಿಕ ವಿವಾಹ ಕಾರ್ಯಕ್ರಮವೊಂದರಲ್ಲಿ ಚಿಪ್ಸ್ ಪ್ಯಾಕೆಟ್ಗಾಗಿ ಜನ ಹೊಡೆದಾಡಿಕೊಂಡ ಘಟನೆ ನಡೆದಿತ್ತು. ಆದರ ಬೆನ್ನಲ್ಲೆ ಇದೀಗ ಮದುವೆ ಸಮಾರಂಭದ ಕೌಂಟರ್‌ನಲ್ಲಿ ರೋಟಿಗಾಗಿ‌ ಜಗಳ ನಡೆದಿದೆ.‌ ವಿಡಿಯೊದಲ್ಲಿ ಕಾಣುವಂತೆ ಅತಿಥಿಗಳು ಸಾಲಿನಲ್ಲಿ ನಿಲ್ಲುವ ಬದಲಿಗೆ ರೋಟಿ ತಯಾರಿಸುತ್ತಿದ್ದ ವ್ಯಕ್ತಿಯ ಮುಂದೆಯೇ ಮುತ್ತಿಕೊಂಡಿದ್ದಾರೆ. ರೋಟಿ ಸಿದ್ಧವಾಗುತ್ತಿದ್ದಂತೆ ಅದನ್ನು ಪಡೆಯಲು ಅಲ್ಲಿದ್ದ ಜನರು ಮುಗಿಬಿದ್ದಿದ್ದು ಒಂದರ ಮೇಲಂತೆ ಕೈಗಳು ಬಾಣಸಿಗನ ಮುಂದೆ ಬಂದಿವೆ. ಕೆಲವರು ಬಾಣಸಿಗ ಬಡಿಸುವ ಮುನ್ನವೇ ರೋಟಿಯನ್ನು ಬಲವಂತವಾಗಿ ಕಿತ್ತು ಕೊಂಡಿದ್ದಾರೆ.

ವಿಡಿಯೊ ನೋಡಿ:



ಅತಿಥಿಗಳ ಒತ್ತಡದಿಂದಾಗಿ ಬಾಣಸಿಗರಿಗೆ ಅಲ್ಲಿ ರೋಟಿ ಮಾಡಲು ಕೂಡ ಸಾಧ್ಯವಾಗಿಲ್ಲ. ಬಡಿಸುವ ಕೌಂಟರ್ ಕೆಲ ಕಾಲ ಗೊಂದಲ ಉಂಟಾಗಿದ್ದು ಅಲ್ಲಿ ಸೇರಿದ್ದ ಜನರೇ ಜಗಳ ಮಾಡಿಕೊಂಡಿದ್ದಾರೆ. ಇನ್ನು ಸುತ್ತಲೂ ಮುಗಿಬಿದ್ದ ಅತಿಥಿಗಳ ಗುಂಪು ಕಂಡ ಬಾಣಸಿಗರು ಬಡಿಸುವ ಬದಲು ತಮ್ಮ ಮುಂದಿದ್ದ ತಟ್ಟೆಗಳತ್ತ ರೋಟಿ ಎಸೆಯಲು ಶುರು ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಧ್ಯರಾತ್ರಿ ಆಟೋದಲ್ಲಿ ಸಂಚರಿಸಿದ ಮಹಿಳೆ ವಿಡಿಯೋದಲ್ಲಿ ಹೇಳಿದ್ದೇನು?

ಬಾಣಸಿಗರ ಈ ವರ್ತನೆ ಬಗ್ಗೆ ಅತಿಥಿಯೊಬ್ಬರು ಪ್ರಶ್ನೆ ಮಾಡಿದ್ದು ಇದೇನು ಹೀಗೆ ಬಡಿಸುತ್ತಿದ್ದೀರಿ ಎಂದು ಕೇಳಿದ್ದಾರೆ. ಆಗ ಬಾಣಸಿಗರು ಜನಸಮೂಹದ ಕಡೆ ತೋರಿಸಿ ಇಂತವರ ನಡತೆ ಹೀಗಿ ರುವಾಗ ನಾವೇನು ಮಾಡಲಿ?" ಎಂದು ಉತ್ತರ ನೀಡಿದ್ದಾರೆ. ಆದರೂ ಪ್ರಶ್ನಿಸಿದ ವ್ಯಕ್ತಿ, ಆಹಾರವನ್ನು ಈ ರೀತಿ ಎಸೆಯುವ ಬದಲು ಸರಿಯಾಗಿ ತಟ್ಟೆಗೆ ಬಡಿಸುವಂತೆ ಸಲಹೆ ನೀಡಿದ್ದಾರೆ.

ಸದ್ಯ ಈ ವಿಡಿಯೊ 1.3 ಮಿಲಿಯನ್‌ಗೂ ಹೆಚ್ಚು ವೀಕ್ಷಣೆ ಪಡೆದಿದ್ದು, ನೆಟ್ಟಿಗರು ತೀವ್ರವಾಗಿ ಟೀಕಿಸಿದ್ದಾರೆ. ಒಂದು ರೋಟಿಗಾಗಿ ಜನರ ನಡವಳಿಕೆ ಹೀಗೆಯೇ ಎಂದು ಅತಿಥಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಉಚಿತವಾಗಿ ಊಟ ಸಿಕ್ಕಾಗ ಕೆಲವರು ಹೀಗೆ ವರ್ತಿಸುತ್ತಾರೆ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.