ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಹಮಾಸ್ ದಾಳಿಯು ನನ್ನನ್ನು ಮತಾಂತರಗೊಳ್ಳುವಂತೆ ಮಾಡಿತು- ಈ ನರ್ಸ್‌ ಹೇಳಿದ್ದೇನು?

ಹಮಾಸ್ ದಾಳಿಯು (Hamas attack) ನನ್ನನ್ನು ಮತಾಂತರಗೊಳ್ಳುವಂತೆ ಮಾಡಿತು ಎಂದು ದಾದಿ ಆಡ್ರಿಯಾನಾ ಫೆರ್ನಾಂಡಿಸ್ ಹೇಳಿಕೊಂಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral News) ಆಗಿದೆ. ಯೆಹೂದ್ಯೇತರ ಆಗಿದ್ದಆಡ್ರಿಯಾನಾ ಫೆರ್ನಾಂಡಿಸ್ ಅವರು ಹಮಾಸ್ ದಾಳಿಯ ಬಳಿಕ ಯಹೂದಿ ಆಗಿರುವುದಾಗಿ ಹೇಳಿದ್ದಾರೆ. ಈ ಮೊದಲು ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 'ಯೆಹೂದ್ಯೇತರ ದಾದಿ' ಎಂದು ಕರೆಯಲ್ಪಡುತ್ತಿದ್ದ ಆಡ್ರಿಯಾನಾ ಅವರು ಈಗ ತಮ್ಮ ಹೆಸರನ್ನು 'ಯಹೂದಿ ದಾದಿ' ಎಂದು ಬದಲಾಯಿಸಿಕೊಂಡಿದ್ದಾರೆ.

ಹಮಾಸ್ ದಾಳಿ ಬೆನ್ನಲ್ಲೇ ಯಹೂದಿ ಧರ್ಮಕ್ಕೆ ಮತಾಂತರ ಆದ ನರ್ಸ್‌

ನ್ಯೂಯಾರ್ಕ್: ಹಮಾಸ್ ದಾಳಿಯು (hamas attack) ನನ್ನನ್ನು ಮತಾಂತರಗೊಳ್ಳುವಂತೆ ಮಾಡಿತು ಎಂದು ಆಡ್ರಿಯಾನಾ ಫೆರ್ನಾಂಡಿಸ್ ( Adriana Fernandez ) ಹೇಳಿಕೊಂಡಿದ್ದಾರೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral News) ಆಗಿದೆ. ಯೆಹೂದ್ಯೇತರ (non-Jewish Nanny) ಆಗಿದ್ದಆಡ್ರಿಯಾನಾ ಫೆರ್ನಾಂಡಿಸ್ ಅವರು ಹಮಾಸ್ ದಾಳಿಯ ಬಳಿಕ ಯಹೂದಿ (Jewish nanny) ಆಗಿರುವುದಾಗಿ ಹೇಳಿದ್ದಾರೆ. ಈ ಮೊದಲು ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ 'ಯೆಹೂದ್ಯೇತರ ದಾದಿ' ಎಂದು ಕರೆಯಲ್ಪಡುತ್ತಿದ್ದ ಆಡ್ರಿಯಾನಾ ಅವರು ಈಗ ತಮ್ಮ ಹೆಸರನ್ನು 'ಯಹೂದಿ ದಾದಿ' ಎಂದು ಬದಲಾಯಿಸಿಕೊಂಡಿದ್ದಾರೆ.

ಯಹೂದಿ ಅಲ್ಲದ ದಾದಿ ಎಂದೇ ಸಾಮಾಜಿಕ ಮಾಧ್ಯಮಗಳಲ್ಲಿ ಜನಪ್ರಿಯವಾಗಿರುವ ಆಡ್ರಿಯಾನಾ ಫೆರ್ನಾಂಡಿಸ್ ಅವರು ಯಹೂದಿ ಧರ್ಮಕ್ಕೆ ಮತಾಂತರಗೊಂಡು ಈಗ ಯಹೂದಿ ದಾದಿ ಆಗಿದ್ದಾರೆ. ಇಸ್ರೇಲ್ ಮೇಲೆ ಅಕ್ಟೋಬರ್ 7 ರಂದು ಹಮಾಸ್ ನಡೆಸಿದ ದಾಳಿಯು ತನ್ನನ್ನು ಯಹೂದಿ ಧರ್ಮಕ್ಕೆ ಮತಾಂತರಗೊಳ್ಳುವಂತೆ ಮಾಡಿತು ಎಂದು ಅವರು ಹೇಳಿದ್ದಾರೆ.

ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಆಡ್ರಿಯಾನಾ ಅವರು ಇದೀಗ ಅನುಯಾಯಿಗಳಿಗೆ ತಾವು ಯಹೂದಿ ಅಲ್ಲದ ದಾದಿಯಾಗಿದ್ದಾಗಿನ ತಮ್ಮ ಅನುಭವಗಳ ಬಗ್ಗೆಹೇಳಿದ್ದಾರೆ. ಇದು ಅವರ ಹಮಾಸ್ ದಾಳಿಯ ಬಳಿಕ ಅವರ ಅನುಭವಗಳನ್ನು ಬಿಚ್ಚಿಟ್ಟಿದೆ. ಆದರೂ ಅವರು ಯಹೂದಿಯಾಗಲು ಒಂದು ವರ್ಷದ ಮತಾಂತರ ಪ್ರಕ್ರಿಯೆಯನ್ನು ಕಳೆದ ಮಾರ್ಚ್ ತಿಂಗಳಲ್ಲಿ ಪೂರ್ಣಗೊಳಿಸಿ ಈಗ ಅಧಿಕೃತ ಯಹೂದಿಯಾಗಿರುವುದಾಗಿ ಇದರಲ್ಲಿ ಹೇಳಿಕೊಂಡಿದ್ದಾರೆ.

ಅಕ್ಟೋಬರ್ 7 ರ ದಾಳಿಯು ನನ್ನನ್ನು ಯಹೂದಿಯಾಗಲು ಬಯಸುವಂತೆ ಮಾಡಿತು. ಯಹೂದಿ ಧರ್ಮಕ್ಕೆ ಮತಾಂತರಗೊಳ್ಳುವ ನನ್ನ ದೃಢಸಂಕಲ್ಪವು ಯಹೂದಿ ವಿರೋಧಿಗಳ ವಿರುದ್ಧ ಹೋರಾಡುವ ಒಂದು ಮಾರ್ಗವಾಗಿದೆ. ದಾಳಿಯ ಬಗ್ಗೆ ನನ್ನ ಮೊದಲ ಆಲೋಚನೆ ನಾನು ಇದರಿಂದ ಹೊರಬರುವುದು ಹೇಗೆ? ಅಲ್ಲ. ನಾನು ದೇವರೊಂದಿಗೆ ಇನ್ನೂ ಬಲವಾದ ಸಂಪರ್ಕವನ್ನು ಅನುಭವಿಸುವುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಗತ್ತು ಯಹೂದಿಗಳನ್ನು ದ್ವೇಷಿಸುತ್ತದೆ ಎಂದು ಎಲ್ಲರೂ ಹೇಳಿದರೂ ನಾನು ಹಿಂಜರಿಯಲಿಲ್ಲ. ಯಾಕೆಂದರೆ ನನ್ನಲ್ಲಿ ದೃಢ ವಿಶ್ವಾಸವಿದೆ. ಇವರುಕೂಡ ನನ್ನವರೇ ಅಲ್ಲವೇ. ನಾನು ಮತಾಂತರಗೊಳ್ಳುವ ಪ್ರಕ್ರಿಯೆಯಲ್ಲಿದ್ದೆ. ನಾನು ನಿಲ್ಲಿಸಬಹುದಿತ್ತು. ಆದರೆ ನಾನು ನಿಲ್ಲಿಸಲಿಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Robbery Case: ಮಠದಲ್ಲಿ 300 ಕೋಟಿ ರೂ. ಇದೆಯೆಂದು ದರೋಡೆಗೆ ಬಂದ ಕಳ್ಳರು, ಆದರೆ ಸಿಕ್ಕಿದ್ದು ಮಾತ್ರ 5o ಸಾವಿರ ರೂ. ; ಖದೀಮರ ಹೆಡೆಮುರಿ ಕಟ್ಟಿದ ಪೊಲೀಸರು

ಕೆಲವೊಂದು ಪದ್ದತಿಗಳು ನನ್ನನ್ನು ಗೊಂದಲಗೊಳಿಸಿತ್ತು. ಆದರೆ ಅದನ್ನು ಬಳಿಕ ತಾವು ಅರ್ಥ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.

viral (3)

ಸಾಮಾಜಿಕ ಜಾಲತಾಣದಲ್ಲಿ ಅನೇಕ ಅವರ ಅನುಯಾಯಿಗಳು ಅವರ ಮತಾಂತರಕ್ಕೆ ಶ್ಲಾಘನೆ ವ್ಯಕ್ತಪಡಿಸಿದರೂ ಕೆಲವು ಬಳಕೆದಾರರು ಅವರ ನಿರ್ಧಾರವನ್ನು ಸರಿಯಾದುದಲ್ಲ ಎಂದು ಹೇಳಿದ್ದಾರೆ. ಕೆಲವರು ಅವರನ್ನು ಹುಚ್ಚಿ ಎಂದು ಕರೆದಿದ್ದಾರೆ. ಯಹೂದಿ ಧರ್ಮದ ಬಗ್ಗೆ ಯಾವುದೇ ಪರಿಚಯವಿಲ್ಲದ ಖಾಸಗಿ ಕ್ರಿಶ್ಚಿಯನ್ ಶಾಲೆಯಲ್ಲಿ ವ್ಯಾಸಂಗ ಮಾಡಿದ ಫರ್ನಾಂಡಿಸ್, ಶಾಸ್ತ್ರೀಯ ಸಂಗೀತ ಗಾಯಕಿಯೂ ಆಗಿದ್ದರೆ. ಅವರು ಬಾರ್ ಟೆಂಡರ್ ಆಗಿಯೂ ಕೆಲಸ ಮಾಡಿದ್ದು, ಉದಯೋನ್ಮುಖ ಒಪೆರಾ ಗಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

ವೈರಲ್ ಆಗಿರುವ ಆಡ್ರಿಯಾನಾ ಅವರು ತಮ್ಮ ಪೋಸ್ಟ್ ನಲ್ಲಿ ಈ ದಾದಿ ಈಗ ಯಹೂದಿಯಾಗಿ ತನ್ನ ಮೊದಲ ಪಾಸೋವರ್‌ಗೆ ಸಿದ್ಧಳಾಗಿದ್ದಾಳೆ ಎಂದು ಹೇಳಿದ್ದಾರೆ. ಪಾಸೋವರ್ ಎಂದರೆ ಯಹೂದಿಗಳು ತಮ್ಮ ಪೂರ್ವಜರು ಗುಲಾಮಗಿರಿಯನ್ನು ಹೇಗೆ ತೊರೆದರು ಮತ್ತು ಮೋಶೆಯಿಂದ ಅವರನ್ನು ಈಜಿಪ್ಟ್‌ನಿಂದ ಹೊರಗೆ ಕರೆದೊಯ್ದಾಗ ಆಚರಿಸುವ ಆಚರಣೆಯಾಗಿದೆ.