ದೆಹಲಿ, ಮಾ. 18: ಇತ್ತೀಚೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಅತಿ ವೇಗವಾಗಿ ಕಾರ್ಯಚರಣೆಯಲ್ಲಿದೆ. ಅದರಲ್ಲೂ ರಾಜಕಾರಣಿಗಳು, ಅಧಿಕಾರಿಗಳು ಭೇಟಿ ನೀಡುತ್ತಾರೆ ಎಂದಾಗ ರಸ್ತೆ ಕಾಮಗಾರಿಗಳು ತರಾತುರಿಯಲ್ಲಿ ನಡೆಯುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ರಸ್ತೆಯ ಕೆಲಸವೊಂದು ವಿಚಿತ್ರವಾಗಿ ನಡೆದಿದೆ. ರಸ್ತೆಯ ಮಧ್ಯದಲ್ಲಿದ್ದ ಹ್ಯಾಂಡ್ ಪಂಪ್ ಅನ್ನು ಹಾಗೆಯೇ ಬಿಟ್ಟು ಉಳಿದ ರಸ್ತೆ ಕೆಲಸವನ್ನು ಅಧಿಕಾರಿಗಳು ಪೂರ್ಣಗೊಳಿಸಿದ್ದಾರೆ. ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.
ವಿಂಧ್ಯಾಚಲ ಪೊಲೀಸ್ ಠಾಣೆ ವ್ಯಾಪ್ತಿಯ ಕಾಂತಿತ್ ಪ್ರದೇಶದಲ್ಲಿ ಈ ಕೈ ಪಂಪ್ ಅಂದ್ರೆ ಹ್ಯಾಂಡ್ ಪಂಪ್ ಈ ಮೊದಲೇ ಇತ್ತು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭೇಟಿಗೆ ಮುಂಚಿತವಾಗಿ ಇಲ್ಲಿ ರಸ್ತೆಯನ್ನು ತರಾತುರಿಯಲ್ಲಿ ನಿರ್ಮಿಸಲಾಗಿದೆ. ಕೆಲಸವನ್ನು ಪೂರ್ಣ ಗೊಳಿಸುವ ಭರದಲ್ಲಿ ಯಾವುದೇ ಸುರಕ್ಷತಾ ತಪಾಸಣೆಗಳನ್ನು ಅನುಸರಿಸಲಾಗಿಲ್ಲ. ಅದೇ ರೀತಿ ಅಸ್ತಿತ್ವದಲ್ಲಿರುವ ಕೈ ಪಂಪ್ ಅನ್ನು ತೆಗೆದುಹಾಕಲಾಗಿಲ್ಲ. ಅದು ರಸ್ತೆ ಮಧ್ಯೆ ಹಾಗೆಯೇ ಉಳಿದುಕೊಂಡಿದೆ.
ವಿಡಿಯೊ ನೋಡಿ:
ಸಿಎಂ ಬರುತ್ತಿದ್ದಾರೆ ಬೇಗ ಕೆಲಸ ಮುಗಿಸಬೇಕು ಎಂದು ಗುತ್ತಿಗೆದಾರರು ಕೈಪಂಪ್ ಅನ್ನು ಸ್ಥಳಾಂತರಿಸಲು ಪ್ಲ್ಯಾನ್ ಮಾಡಿಲ್ಲ.ಇದರಿಂದಾಗಿ ಈಗ ವಾಹನಗಳು ರಸ್ತೆಯ ಮಧ್ಯೆ ಇದ್ದಿರುವ ಪಂಪ್‌ನ ಬದಿಯಲ್ಲೇ ಹಾದು ಹೋಗಬೇಕಾಗಿದೆ. ಇದು ಅಪಾಯಕಾರಿಯಾಗಿದ್ದು, ಅಪಘಾತ ಸಂಭವಿಸುವ ಸಾಧ್ಯತೆ ಜಾಸ್ತಿ ಎಂದು ಸ್ಥಳೀಯರು ಆತಂಕ ವ್ಯಕ್ತೊಡಿಸಿದ್ದಾರೆ.
ಅತ್ತೆಯನ್ನು ನೋಡಿಕೊಳ್ಳಲು ಕೆಲಸ ಬಿಡಲು ನಿರಾಕರಿಸಿದ ಪತ್ನಿಗೆ ವಿಚ್ಛೇದನ ನೀಡಿದ ಪತಿ!
ಈ ಹ್ಯಾಂಡ್ ಪಂಪ್‌ನ ವಿಡಿಯೊ ಆನ್‌ಲೈನ್‌ನಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ. ಅನೇಕರು ಯೋಜನೆಯ ಕೊರತೆಯನ್ನು ಟೀಕಿಸಿದ್ದಾರೆ. ಅದೇ ರೀತಿ ಇತರರು ತಮಾಷೆಯ ಪ್ರತಿಕ್ರಿಯೆ ನೀಡಿದ್ದಾರೆ. ಇದು ಅಭಿವೃದ್ಧಿ ಹೊಂದಿದ ಭಾರತದ ಎಂಟನೇ ಅದ್ಭುತವೇ? ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ನಟ ಸನ್ನಿ ಡಿಯೋಲ್ ಅವರ ಹಿಂದಿ ಚಿತ್ರ ʼಗದರ್: ಏಕ್ ಪ್ರೇಮ್ ಕಥಾʼದ ಹ್ಯಾಂಡ್ ಪಂಪ್ ದೃಶ್ಯವನ್ನು ಹಲವರು ನೆನಪಿಸಿಕೊಂಡಿದ್ದಾರೆ. ಈ ಪಂಪ್ ತೆರವುಗೊಳಿಸಲು ಈಗ ಸನ್ನಿ ಡಿಯೋಲ್ ಬರಬೇಕು ಎಂದು ಹಾಸ್ಯ ಮಾಡಿದ್ದಾರೆ.