ಜೆನ್‌ಪ್ಯಾಕ್ಟ್ ಕಚೇರಿಯಲ್ಲಿ ಉದ್ಯೋಗಿಗಳ ಮೇಲೆ ದೌರ್ಜನ್ಯ: ಕೆಲಸದ ಒತ್ತಡ, ಲಿಂಗ ತಾರತಮ್ಯದ ಆರೋಪ! ತನಿಖೆಗೆ ಆದೇಶ
Viral News: ಹೈದರಾಬಾದ್‌ನ ಹಫೀಜ್‌ಪೇಟ್‌ನಲ್ಲಿರುವ ಜೆನ್‌ಪ್ಯಾಕ್ಟ್ ಕಚೇರಿಯ ಉದ್ಯೋಗಿಗಳಿಗೆ ಅತಿಯಾದ ಕೆಲಸದ ಅವಧಿ, ಲಿಂಗ ತಾರತಮ್ಯ ಮತ್ತು ಉದ್ಯೋಗಿಗಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುವಂತಹ ಗಂಭೀರ ಆರೋಪ ಕೇಳಿಬಂದಿದೆ. ಲಿಂಕ್‌ಡಿನ್ ನಲ್ಲಿ ಉದ್ಯೋಗಿಯೊಬ್ಬರು ಈ ಬಗ್ಗೆ ಪೋಸ್ಟ್ ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ..
ಇಂಟರ್ ನೆಟ್ ಚಿತ್ರ -
ಹೈದರಾಬಾದ್,ಅ.12: ಕಾರ್ಪೊರೇಟ್ ಸಂಸ್ಥೆಗಳಲ್ಲಿ ಕೆಲಸದ ಒತ್ತಡದ ಬಗ್ಗೆ ದಿನ ನಿತ್ಯ ದೂರುಗಳು ಕೇಳಿಬರುತ್ತಲೇ ಇವೆ. ಇದೀಗ ಹೈದರಾಬಾದ್‌ನ ಹಫೀಜ್‌ಪೇಟ್‌ನಲ್ಲಿರುವ ಜೆನ್‌ಪ್ಯಾಕ್ಟ್ ಕಚೇರಿಯ ಉದ್ಯೋಗಿಗಳಿಗೆ ಅತಿಯಾದ ಕೆಲಸದ ಅವಧಿ, ಲಿಂಗ ತಾರತಮ್ಯ ಮತ್ತು ಉದ್ಯೋಗಿಗಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯವಹಿಸುವಂತಹ ಗಂಭೀರ ಆರೋಪ ಕೇಳಿಬಂದಿದೆ. ಲಿಂಕ್‌ಡಿನ್ ನಲ್ಲಿ ಉದ್ಯೋಗಿಯೊಬ್ಬರು ಈ ಬಗ್ಗೆ ಪೋಸ್ಟ್ ವೊಂದನ್ನು ಶೇರ್ ಮಾಡಿಕೊಂಡಿದ್ದಾರೆ .ಇಲ್ಲಿನ ಕೆಲಸದ ವಾತಾವರಣವು ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಿದೆ ಎಂದು ಉದ್ಯೋಗಿಗಳು ಹೇಳಿದ್ದಾರೆ. ಈ ಪೋಸ್ಟ್ ವೈರಲ್ (Viral News) ಆಗುತ್ತಿದ್ದಂತೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ.
ಉದ್ಯೋಗಿಯೊಬ್ಬರಿಗೆ ಕೆಲಸದ ಮಧ್ಯೆ ಎದೆನೋವು ಕಾಣಿಸಿಕೊಂಡಿತ್ತು. ಅವರು ಮನೆಗೆ ತೆರಳಲು ಅನುಮತಿ ಕೇಳಿದರೂ ಬಿಟ್ಟಿಲ್ಲ. ನಂತರ ಅವರು ಕಚೇರಿಯಲ್ಲೇ ಉಸಿರಾಟದ ತೊಂದರೆ ಮತ್ತು ಪ್ಯಾನಿಕ್ ಅಟ್ಯಾಕ್‌ಗೆ ಒಳಗಾದರು ಎಂದು ರೋಹಿತ್ ಕೊಟಾನ ಎಂಬುವವರು ಆರೋಪಿಸಿದ್ದಾರೆ. ಕ್ಸೇವಿಯರ್ ಫ್ರಾನ್ಸಿಸ್ ಎಂದು ಗುರುತಿಸ ಲಾದ ವ್ಯವಸ್ಥಾಪಕರ ಬಗ್ಗೆ ಪ್ರಸ್ತುತ ಉದ್ಯೋಗಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಪರಿಶೀಲನೆ ನಡೆಸುವ ಬಗ್ಗೆ ಜೆನ್‌ಪ್ಯಾಕ್ಟ್ ದೃಢಪಡಿಸಿದೆ.
Viral Video: ರೈಲು ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ದೇಹವನ್ನೇ ರಕ್ಷಾ ಕವಚವಾಗಿಸಿದ ತಾಯಿ! ಹೃದಯಸ್ಪರ್ಶಿ ದೃಶ್ಯ
ಅಷ್ಟೇ ಅಲ್ಲದೆ ನೌಕರರು ತಮ್ಮ ನಿಗದಿತ ಪಾಳಿಗಳನ್ನು ಮೀರಿ ಕೆಲಸ ಮಾಡಲು ಒತ್ತಡವನ್ನು ಹೇರಲಾಗುತ್ತಿತ್ತು, ಕೆಲವೊಮ್ಮೆ ಬೆಳಿಗ್ಗೆ 3 ಗಂಟೆಗೆ ಅವರ ಪಾಳಿಗಳು ಕೊನೆಗೊಂಡರೂ ಬೆಳಿಗ್ಗೆ 6:30 ಅಥವಾ ಬೆಳಿಗ್ಗೆ 7 ರವರೆಗೆ ಇರುತ್ತಾರೆ..ಮ್ಯಾನೇಜರ್ ನಿಗದಿತ ಸಮಯಕ್ಕಿಂತ ಹೆಚ್ಚಿನ ಸಮಯ ಕೆಲಸ ಮಾಡುವಂತೆ ಉದ್ಯೋಗಿಗಳ ಮೇಲೆ ಒತ್ತಡ ಹೇರಲಾಗುತ್ತಿತ್ತು.
ಮಹಿಳಾ ಉದ್ಯೋಗಿಗಳ ಶೌಚಾಲಯದ ವಿರಾಮಗಳ ಮೇಲೆ ಕಣ್ಗಾವಲು ಇರಿಸಲಾಗಿತ್ತು. ಗರ್ಭಿಣಿ ಉದ್ಯೋಗಿಗಳ ಜೊತೆಗೂ ಮಾನವೀಯತೆ ತೋರಿಲ್ಲ, ಮತ್ತೊಂದು ಪೋಸ್ಟ್‌ನಲ್ಲಿ, ಕೋಟಾನಾ ಸೆಪ್ಟೆಂಬರ್‌ನಲ್ಲಿ ನಡೆದ ಉದ್ಯೋಗಿ ಗಳ ಸಭೆಯ ರೆಕಾರ್ಡಿಂಗ್ ಅನ್ನು ಹಂಚಿಕೊಂಡಿದ್ದಾರೆ. ಅಪಘಾತಕ್ಕೀಡಾಗಿ ಐಸಿಯುನಲ್ಲಿದ್ದ ಭಆರೋಗ್ಯದ ಬಗ್ಗೆ ಆತಂಕದಲ್ಲಿದ್ದ ಮಹಿಳಾ ಉದ್ಯೋಗಿ ಯೊಬ್ಬರಿಗೆ, ಮರುದಿನವೇ ಕೆಲಸಕ್ಕೆ ಬರುವಂತೆ ಮ್ಯಾನೇಜ್ಮೆಂಟ್ ಒತ್ತಡ ಹೇರಿದ ಬಗ್ಗೆ ಸಭೆಯ ಆಡಿಯೋದಲ್ಲಿ ದಾಖಲಾಗಿದೆ.
ಇದೇ ವೇಳೆ, ಉದ್ಯೋಗಿಗಳ ಆರೋಗ್ಯ, ಸುರಕ್ಷತೆ ಮತ್ತು ಘನತೆಗೆ ತಾವು ಆದ್ಯತೆ ನೀಡುವುದಾಗಿ 'ಜೆನ್‌ಪ್ಯಾಕ್ಟ್' ತಿಳಿಸಿದೆ. "ಎಲ್ಲರನ್ನೂ ಗೌರವದಿಂದ ಕಾಣುವ ಕೆಲಸದ ವಾತಾವರಣವನ್ನು ರೂಪಿಸುವುದರಲ್ಲಿ ನಾವು ನಂಬಿಕೆ ಹೊಂದಿದ್ದೇವೆ.ಈ ವಿಚಾರವನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ"ಎಂದು ಕಂಪನಿ ಹೇಳಿದೆ.