ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರೈಲು ನಿಲ್ದಾಣದಲ್ಲಿ ಮಹಿಳೆಯರಿಗೆ ಕಿರುಕುಳ: ಸಹ ಪ್ರಯಾಣಿಕರಿಂದ ಆರೋಪಿಗೆ ಬಿತ್ತು ಗೂಸಾ

Viral Video: ಸಾರ್ವಜನಿಕ ಸ್ಥಳದಲ್ಲೂ ಮಹಿಳೆಯರು ಲೈಂಗಿಕ ಕಿರುಕುಳವನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ‌ ಎನ್ನುವಂತೆ ಮುಂಬೈ ನ ಲೋಕಲ್ ರೈಲಿನಲ್ಲಿ ಮಹಿಳೆಗೆ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪ್ರಯಾಣಿಕರು ಹಿಡಿದು ರೈಲ್ವೆ ಸುರಕ್ಷತಾ ಪಡೆಗೆ ಎಳೆದೊಯ್ದಿದ್ದಾರೆ. ಈ ಘಟನೆಯ ವಿಡಿಯೊ ವೈರಲ್ ಆಗುತ್ತಿದ್ದಂತೆ ಪ್ರಯಾಣಿಕರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ಮಹಿಳೆಯರಿಗೆ ಕಿರುಕುಳ: ಆರೋಪಿಗೆ ತಕ್ಕ ಪಾಠ ಕಲಿಸಿದ ಸಹ ಪ್ರಯಾಣಿಕರು!

ಮುಂಬೈ ರೈಲು ನಿಲ್ದಾಣದಲ್ಲಿ ಮಹಿಳೆಯರಿಗೆ ಕಿರುಕುಳ -

Profile
Pushpa Kumari Sep 30, 2026 4:39 PM

​ಮುಂಬೈ,ಸೆ.30: ಇಂದು ಮಹಿಳೆಯರ ಕಿರುಕುಳಕ್ಕೆ ಸಂಬಂಧ ಪಟ್ಟಂತೆ ದಿನಕ್ಕೊಂದು ಘಟನೆಗಳು ವರದಿಯಾಗುತ್ತಲೇ ಇವೆ. ಸಾರ್ವಜನಿಕ ಸ್ಥಳದಲ್ಲೂ ಮಹಿಳೆಯರು ಲೈಂಗಿಕ ಕಿರುಕುಳವನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿ‌ ಎನ್ನುವಂತೆ ಮುಂಬೈನ ಲೋಕಲ್ ರೈಲಿನಲ್ಲಿ ಮಹಿಳೆಗೆ ಕಿರುಕುಳ ನೀಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪ್ರಯಾಣಿಕರು ಹಿಡಿದು ರೈಲ್ವೆ ಸುರಕ್ಷತಾ ಪಡೆಗೆ ಎಳೆದೊಯ್ದಿದ್ದಾರೆ. ಈ ಘಟನೆಯ ವಿಡಿಯೊ ವೈರಲ್ (Viral News) ಆಗುತ್ತಿದ್ದಂತೆ ಪ್ರಯಾಣಿಕರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗುತ್ತಿದೆ.

ವೈರಲ್ ವಿಡಿಯೋದಲ್ಲಿ, ಆರ್‌ಪಿಎಫ್ ಅಧಿಕಾರಿ ಸೇರಿದಂತೆ ಮೂರ್ನಾಲ್ಕು ಮಂದಿ ಆ ವ್ಯಕ್ತಿಯ ಕೈಕಾಲುಗಳನ್ನು ಹಿಡಿದು ಕೊಂಡು ರೈಲ್ವೆ ಬ್ರಿಡ್ಜ್  ಕೆಳಗೆ ಕರೆತರುತ್ತಿರುವುದು ಕಂಡು ಬರುತ್ತದೆ. ಅವರು ಪ್ಲಾಟ್‌ಫಾರ್ಮ್‌ನತ್ತ ಸಾಗುತ್ತಿರುವಾಗ ಪ್ರಯಾಣಿಕರ ಗುಂಪೊಂದು ಅವರನ್ನು ಹಿಂಬಾಲಿಸುತ್ತಿರುವುದನ್ನು ಕಾಣಬಹುದು.

ವಿಡಿಯೋ ನೋಡಿ:



ಈ ಘಟನೆಯೂ ಮುಂಬೈನ ಕುರ್ಲಾ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಹಾರ್ಬರ್ ಲೈನ್ ನ ಬೋಗಿಯೊಳಗೆ ವ್ಯಕ್ತಿಯೊಬ್ಬ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದ. ಇದನ್ನು ಗಮನಿಸಿದ ಜಾಗರೂಕ ಪ್ರಯಾಣಿಕರು ಕುರ್ಲಾ ನಿಲ್ದಾಣದಲ್ಲಿ ಆತನನ್ನು ವಶಕ್ಕೆ ಪಡೆದು ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.

Viral Video: ರೈಲ್ವೆ ಗೇಟ್‌ನಲ್ಲೇ ಟ್ರೈನ್ ನಿಲ್ಲಿಸಿ ಹತ್ತಿದ ಕುಟುಂಬ; ಇದೇನು ನಿಮ್ಮ ಮನೆಯ ಆಸ್ತಿಯೇ? ನೆಟ್ಟಿಗರ ಪ್ರಶ್ನೆ

ವೈರಲ್ ಆದ ವಿಡಿಯೊದಲ್ಲಿ ಆತ ತನ್ನ ಕೈಕಾಲುಗಳನ್ನು ಒದೆಯುತ್ತಾ, ತನ್ನನ್ನು ಬಿಟ್ಟುಬಿಡುವಂತೆ ಪ್ರಯಾಣಿಕರಲ್ಲಿ ಪದೇ ಪದೇ ಮನವಿ ಮಾಡಿಕೊಳ್ಳುತ್ತಿರುವುದು ಕಾಣಬಹುದು. ವಿಡಿಯೋದ ಕೊನೆಯ ಭಾಗದಲ್ಲಿ, ಆತನ ಕೈಗಳು ಬಿಡುಗಡೆಯಾದ ನಂತರ ಆತನನ್ನು ಪ್ಲಾಟ್‌ಫಾರ್ಮ್‌ನ ಉದ್ದಕ್ಕೂ ಕಾಲು ಹಿಡಿದು ಎಳೆದುಕೊಂಡು ಹೋಗುತ್ತಿರುವುದು ಕಾಣಿಸುತ್ತದೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಧ್ಯ ರೈಲ್ವೆಯ ಮುಂಬೈ ವಿಭಾಗೀಯ ರೈಲ್ವೆ ಮ್ಯಾನೇಜರ್ ಘಟನೆಯ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ RPF ಅಧಿಕಾರಿಗಳಿಗೆ ಸೂಚಿಸಿದ್ದಾರೆ.