ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

‌Viral Video: ಒಂದಲ್ಲ ಎರಡಲ್ಲ, ಬರೋಬ್ಬರಿ 100 ಸಿಗರೇಟ್‌ ಬಳಸಿ ತಯಾರಿಸಿದ ಡ್ರೆಸ್‌ ನೋಡಿ ಶಾಕ್‌ ಆದ ನೆಟ್ಟಿಗರು

ಗುಡಿಯಾ ಎಂಬ ಮಹಿಳಾ ಕಂಟೆಂಟ್ ಕ್ರಿಯೇಟರ್ 100ಕ್ಕೂ ಹೆಚ್ಚು ಸಿಗರೇಟು ಬಳಸಿ ನೇಯ್ದ ವಿಶೇಷ ಉಡುಪನ್ನು ತಯಾರಿಸಿ ಧರಿಸಿದ್ದಾರೆ. ಅವರು ಈ ಚಮತ್ಕಾರಿ ಡ್ರೆಸ್‌ನ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.

ಈಕೆಯ ʼಸಿಗರೇಟ್‌ ಡ್ರೆಸ್‌ʼ ನೋಡಿದ್ದೀರಾ?

Profile pavithra Apr 13, 2025 9:38 PM

ಹೊಸದಿಲ್ಲಿ: ನಟಿ, ಮಾಡೆಲ್‌ ಉರ್ಫಿ ಜಾವೇದ್ (Urfi Javed) ಆಗಾಗ್ಗೆ ತಮ್ಮ ವಿಶಿಷ್ಟ ವೇಷಭೂಷಣಗಳಿಂದ ಜನರ ಗಮನ ಸೆಳೆಯುತ್ತಾರೆ. ಆದರೆ ಈ ಬಾರಿ, ಗುಡಿಯಾ ಎಂಬ ಮಹಿಳಾ ಕಂಟೆಂಟ್ ಕ್ರಿಯೇಟರ್ ತಮ್ಮ ಅಸಂಪ್ರದಾಯಿಕ ಉಡುಗೆಯಿಂದ ಸೋಶಿಯಲ್ ಮಿಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದ್ದಾರೆ. ಅರೇ...ಅದೇನು ಡ್ರೆಸ್‌ ಎಂಬ ಕುತೂಹಲ ನಿಮಗೂ ಇದೆಯಾ...? ಇವರ ಡ್ರೆಸ್‌ನ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಅಂದ ಹಾಗೇ ಇವರು ಧರಿಸಿದ್ದು, ಯಾವುದೋ ಸಾಮಾನ್ಯ ಗೌನ್ ಅಲ್ಲ. ಬದಲಾಗಿ 100ಕ್ಕೂ ಹೆಚ್ಚು ಸಿಗರೇಟು ಬಳಸಿ ಕೈಯಿಂದ ನೇಯ್ದ ಚಮತ್ಕಾರಿ ಉಡುಪನ್ನು ಧರಿಸಿದ್ದಾರೆ. ಇವರ ಈ ಡ್ರೆಸ್‌ನ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ವಿಡಿಯೊದಲ್ಲಿ ಅವರು ಸಂಪೂರ್ಣವಾಗಿ ಸಿಗರೇಟುಗಳಿಂದ ಮಾಡಿದ ಸಿಂಗಲ್ ಸ್ಟ್ರಾಪ್ ಟೂ-ಪೀಸ್ ಉಡುಪನ್ನು ಧರಿಸಿರುವುದು ಕಂಡು ಬಂದಿದೆ. ಕಿತ್ತಳೆ ಮತ್ತು ಬಿಳಿ ಬಣ್ಣದ ಸಿಗರೇಟುಗಳನ್ನು ಬಳಸಿಕೊಂಡು ಸ್ಕರ್ಟ್‌ ಮತ್ತು ಟಾಪ್‌ ಮಾಡಿದ್ದಾರೆ. ಈ ಉಡುಪಿನ ಜತೆಗೆ ಚಿನ್ನದ ಕಿವಿಯೋಲೆಗಳು, ಹಾರಗಳು, ಬಳೆಗಳು ಮತ್ತು ಮಾಂಗ್ ಟಿಕ್ಕಾ ಹಾಕಿಕೊಂಡು ಸಖತ್‌ ಆಗಿ ಕಾಣಿಸಿಕೊಂಡಿದ್ದಾರೆ.

ಇನ್ನು ಇವರ ಡ್ರೆಸ್‌ ಅನ್ನು ಯಾರೋ ಫ್ಯಾಷನ್‌ ಡಿಸೈನರ್‌ ಮಾಡಿದ್ದಲ್ಲ. ಸ್ವತಃ ಇವರೇ ಇದನ್ನು ರೆಡಿ ಮಾಡಿದ್ದಾರಂತೆ. ಹಾಗೇ ಇದನ್ನು ತಯಾರಿಸಲು ಯಾವುದೇ ಮೆಷಿನ್‌ ಕೂಡ ಬಳಸಲಿಲ್ಲವಂತೆ. ಕೈಯಿಂದ ತಯಾರಿಸಿದ ಈ ವಿಭಿನ್ನ ಡ್ರೆಸ್‌ಗಾಗಿ ಆಕೆ ಸಾಕಷ್ಟು ಪರಿಶ್ರಮ ಹಾಗೂ ಹಣವನ್ನು ಬಳಸಿರುವುದಾಗಿ ಹೇಳಿದ್ದಾರೆ. ಇವರ ಡ್ರೆಸ್‌ನ ಪ್ರತಿ ಸಾಲಿನಲ್ಲಿ 10ಕ್ಕಿಂತ ಹೆಚ್ಚು ಸಿಗರೇಟುಗಳಿವೆ. ಇಡೀ ಉಡುಪನ್ನು ರಚಿಸಲು 100ಕ್ಕೂ ಹೆಚ್ಚು ಸಿಗರೇಟುಗಳನ್ನು ಬಳಸಿದ್ದಾರಂತೆ.

ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೊ ಈಗಾಗಲೇ ವೈರಲ್ ಆಗಿದ್ದು, ಆರು ಲಕ್ಷಕ್ಕೂ ಹೆಚ್ಚು ಲೈಕ್‍ಗಳನ್ನು ಪಡೆದಿದೆ. ನೆಟ್ಟಿಗರು ಅವರ ಉಡುಗೆಯನ್ನು ಕಂಡು ಆಶ್ಚರ್ಯಚಕಿತರಾಗಿದ್ದಾರೆ ಮತ್ತು ಕೆಲವರು ತಮಾಷೆ ಮಾಡಿದ್ದಾರೆ. "ಅದಕ್ಕಾಗಿಯೇ ಪಾನ್‍ಶಾಪ್‍ನಲ್ಲಿ ಸಿಗರೇಟುಗಳ ಸ್ಟಾಕ್ ಇರಲಿಲ್ಲ ಎಂದು ನನಗೆ ಈಗ ತಿಳಿಯಿತು" ಎಂದು ಒಬ್ಬರು ಕಾಲೆಳೆದಿದ್ದಾರೆ. ʼʼಸಹೋದರಿ, ಒಂದು ಸಿಗರೇಟ್ ಕೊಡಿ. ನನಗೀಗ ಧೂಮಪಾನ ಮಾಡಬೇಕು ಎಂದು ಅನಿಸುತ್ತಿದೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ:Viral Video: ಗೋಡೆ ಮೈಮೇಲೆ ಬಿದ್ದು ಗಾಯಗೊಂಡ ಅಣ್ಣ- ಅಂಬ್ಯುಲೆನ್ಸ್‌ ಸಿಗದೇ ಒದ್ದಾಡಿದ ತಮ್ಮ! ಹೃದಯವಿದ್ರಾವಕ ವಿಡಿಯೊ ವೈರಲ್‌

ಇತ್ತೀಚೆಗಷ್ಟೇ ಸಿಗರೇಟಿನಾಕಾರದಲ್ಲಿ ವಿನ್ಯಾಸಗೊಳಿಸಿದ ಹೇರ್ ಕ್ಲಿಪ್‍ನ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿ ನೆಟ್ಟಿಗರ ಗಮನ ಸೆಳೆದಿತ್ತು. ವೈರಲ್ ವಿಡಿಯೊದಲ್ಲಿ ಯುವತಿಯೊಬ್ಬಳು ಸಿಗರೇಟ್‌ ರೂಪದ ಹೇರ್‌ ಕ್ಲಿಪ್‍ವೊಂದನ್ನು ಬಳಸಿ ಕೂದಲನ್ನು ಕಟ್ಟಿಕೊಳ್ಳುವುದು ಸೆರೆಯಾಗಿತ್ದೆತು. ಅವಳು ಸ್ಟೈಲಿಶ್ ಆಗಿ ಕಾಣಲು ಸಾಮಾನ್ಯ ಕ್ಲಿಪ್‌ನ ಬದಲು ತನ್ನ ಕೂದಲಿಗೆ ಸಿಗರೇಟ್ ಆಕಾರದ ಹೇರ್‌ ಕ್ಲಿಪ್‌ ಅನ್ನು ಸಿಕ್ಕಿದ್ದಳು. ಇದು ನೋಡುವುದಕ್ಕೂ ವಿಭಿನ್ನವಾಗಿತ್ತು.