ಎಟಾ ,ಜ.16: ಹೆಚ್ ಐ ವಿ ಎನ್ನುವುದು ಒಂದು ಜಾಗತಿಕ ಆರೋಗ್ಯ ಸಮಸ್ಯೆಯಾಗಿದ್ದು, ಇದು ಇಂದಿಗೂ ಸಮಸ್ಯೆಯಾಗಿಯೇ ಉಳಿದಿದೆ. ಈ ಬಗ್ಗೆ ಎಷ್ಟೇ ಶಿಕ್ಷಣ ನೀಡಿದ್ರೂ ಹೆಚ್ ಐ ವಿ ಬಾಧಿತರ ಸಂಖ್ಯೆ ಹೆಚ್ಚಾಗುತ್ತಿದೆ.ಅಂತೆಯೇ ಉತ್ತರ ಪ್ರದೇಶದ ಎಟಾ ಜಿಲ್ಲೆಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು ನೋಡುಗರ ಕಣ್ಣು ತೇವ ಆಗುವಂತೆ ಮಾಡಿದೆ. ಎಚ್‌ಐವಿ ಸೋಂಕಿತ ತಾಯಿಯ ಮೃತ ದೇಹದ ಪಕ್ಕದಲ್ಲಿ ಕುಳಿತ 10 ವರ್ಷದ ಬಾಲಕ ಕಣ್ಣೀರಿಡುತ್ತಿರುವ ವಿಡಿಯೊ ಭಾರೀ ವೈರಲ್ (Viral Video) ಆಗಿದ್ದು ಕರುಳುಹಿಂಡುವಂತಿದೆ.
ಎಚ್‌ಐವಿ ಭಾದಿತ ಸೋಂಕಿನಿಂದ ತಾಯಿಯನ್ನು ಕಳೆದುಕೊಂಡ ಬಾಲಕನು ಮೃತದೇಹದ ಮುಂದೆಯೆ ಕುಳಿತು ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ಕಂಡು ಬಂದಿದೆ. ಎಲ್ಲಾ ಪ್ರಯತ್ನಗಳ ಹೊರತಾಗಿಯೂ, ಅವಳನ್ನು ಉಳಿಸಲು ಸಾಧ್ಯವಾಗಲಿಲ್ಲ.ಅಪ್ಪನಿಗೆ ಏಡ್ಸ್ ಬಂದಾಗ ಎಲ್ಲರೂ ನಮ್ಮೊಂದಿಗೆ ಮಾತನಾಡುವುದನ್ನೇ ನಿಲ್ಲಿಸಿದರು ಎಂದು ಬಾಲಕ ಕಣ್ಣೀರು ಹಾಕಿದ್ದಾನೆ.
ವಿಡಿಯೋ ನೋಡಿ:
ಜೈತ್ರಾ ಪೊಲೀಸ್ ಠಾಣಾ ವ್ಯಾಪ್ತಿಯ ನಾಗ್ಲಾ ಧೀರಜ್ ನ ಮಹಿಳೆಯೊಬ್ಬರು ಕಳೆದ ಕೆಲವು ದಿನದ ಹಿಂದೆ ಎಚ್‌ಐವಿ ಸೋಂಕಿನಿಂದ ಬಳಲುತ್ತಿದ್ದರು. ವೈದ್ಯಕೀಯ ಕಾಲೇಜಿನಲ್ಲಿ ಎಚ್ಐವಿ ಮತ್ತು ಏಡ್ಸ್ ಚಿಕಿತ್ಸೆ ಪಡೆಯುತ್ತಿದ್ದು ಗುರುವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಆಕೆ ನಿಧನರಾಗಿದ್ದಾರೆ. ತನ್ನ ತಾಯಿಯ ಮರಣದ ನಂತರ, ಚಿಕ್ಕ ಮಗು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾ ಕೇಂದ್ರಕ್ಕೆ ಏಕಾಂಗಿಯಾಗಿ ಬಂದಿದೆ.
ನವ ಜೋಡಿಗಳಿಗೆ ಶುಭ ಹಾರೈಸುತ್ತಿದ್ದಾಗಲೇ ದಿಢೀರ್ ಆಗಿ ಕುಸಿದ ವೇದಿಕೆ; ವಿಡಿಯೋ ವೈರಲ್
ಆಸ್ಪತ್ರೆಯ ಆವರಣದಲ್ಲಿ ಬಾಲಕ ಅಳುತ್ತಾ ಕುಳಿತಿದ್ದ ದೃಶ್ಯ ಸಮಾಜದ ಕ್ರೌರ್ಯವನ್ನು ಎತ್ತಿ ತೋರಿಸಿವೆ. "ನನ್ನ ತಂದೆಗೆ ಏಡ್ಸ್ ಬಂದಾಗ ನೆರೆಹೊರೆಯವರು ನಮ್ಮ ಜೊತೆ ಮಾತನಾಡುವುದನ್ನೇ ನಿಲ್ಲಿಸಿದ್ದರು. ನಮಗೆ ಯಾರೂ ಸಹಾಯ ಮಾಡಲು ಮುಂದೆ ಬಂದಿಲ್ಲ.ಕಳೆದ ವರ್ಷ ಇದೇ ಕಾಯಿಲೆಯಿಂದ ತನ್ನ ತಂದೆಯನ್ನು ಕಳೆದುಕೊಂಡಿದ್ದನ್ನು ಮತ್ತು ಈಗ ತನ್ನ ತಾಯಿಯನ್ನು ಸಹ ಕಳೆದುಕೊಂಡಿದ್ದಾನೆ ಎಂದು ಆ ಬಾಲಕ ಕಣ್ಣೀರು ಹಾಕುತ್ತಾ ತನ್ನ ಕಥೆಯನ್ನು ಹಂಚಿಕೊಳ್ಳುತ್ತಿದ್ದಾನೆ.
ವೈದ್ಯಕೀಯ ಲೋಕ ಎಷ್ಟೇ ಅಭಿವೃದ್ಧಿಯಾದರೂ, ಎಚ್‌ಐವಿ ಪೀಡಿತರ ಬಗ್ಗೆ ಸಮಾಜದಲ್ಲಿರುವ ಅಸಡ್ಡೆ ಮನೋಭಾವ ಇಂದಿಗೂ ಕಡಿಮೆಯಾಗಿಲ್ಲ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಸದ್ಯ ತಂದೆ- ತಾಯಿಯನ್ನೂ ಕಳೆದುಕೊಂಡ ಈ ಬಾಲಕ ಈಗ ಸಂಪೂರ್ಣ ಅನಾಥನಾಗಿದ್ದಾನೆ. ಎಚ್‌ಐವಿ (ಮಾನವ ಇಮ್ಯುನೊ ಡಿಫಿಷಿಯನ್ಸಿ ವೈರಸ್) ದೇಹದ ರೋಗನಿರೋಧಕ ವ್ಯವಸ್ಥೆಗೆ ಹಾನಿ ಮಾಡುವ ವೈರಸ್ ಆಗಿದೆ. ಚಿಕಿತ್ಸೆ ನೀಡದಿದ್ದರೆ, ಅದು ಏಡ್ಸ್‌ಗೆ ಮುಂದುವರಿಯಬಹುದು.