ಪುಣೆ: ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಕಳವಳಗಳು ಹೆಚ್ಚುತ್ತಿವೆ. ಈ ನಡುವೆ ನೆರೆಯ ಮಹಾರಾಷ್ಟ್ರದಲ್ಲಿ (Maharashtra) ಆತಂಕಕಾರಿ ಘಟನೆಯೊಂದು ನಡೆದಿದ್ದು, ಪನ್ವೇಲ್‌ನ ತಲೋಜಾದಲ್ಲಿರುವ ಫಾರ್ಮ್‌ಹೌಸ್‌ನ ವಾಶ್‌ರೂಮ್‌ನಲ್ಲಿ ರಹಸ್ಯ ಕ್ಯಾಮರಾ (Hidden camera) ಪತ್ತೆಯಾಗಿದೆ. ಧನ್ ಸಾಗರ್ ಗ್ರಾಮದಲ್ಲಿರುವ ರಿಯಾನ್ಶ್ ಫಾರ್ಮ್‌ಹೌಸ್‌ಗೆ ಅತಿಥಿಯಾಗಿ ಬಂದಿದ್ದ ಮಹಿಳೆಯೊಬ್ಬರು ವಾಶ್‌ರೂಮ್ ಬಳಸುವಾಗ ಅನುಮಾನಾಸ್ಪದವಾದದ್ದನ್ನು ಗಮನಿಸಿದ್ದಾರೆ. ಈ ವೇಳೆ ವಿಡಿಯೊಗಳನ್ನು ಸೆರೆಹಿಡಿಯಲು ಇರಿಸಲಾದ ರಹಸ್ಯ ಕ್ಯಾಮರಾವನ್ನು ಕಂಡು ಆಘಾತಗೊಂಡಿದ್ದಾರೆ (Viral News).
ಈ ಘಟನೆಯ ನಂತರ, ಮಹಿಳಾ ಅತಿಥಿಗಳ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿದ ಆರೋಪದ ಮೇಲೆ ಫಾರ್ಮ್‌ಹೌಸ್‌ನ ಮಾಲೀಕ ಮನೋಜ್ ಚೌಧರಿ ಅವರನ್ನು ಪೊಲೀಸರು ಬಂಧಿಸಿದರು. ಚೌಧರಿ ತಮ್ಮ ಮೊಬೈಲ್ ಫೋನ್‌ನಲ್ಲಿ ಅಂತಹ ಹಲವಾರು ವಿಡಿಯೊಗಳನ್ನು ಸಂಗ್ರಹಿಸಿದ್ದರು ಮತ್ತು ಅದನ್ನು ಶೇರ್ ಮಾಡಿಕೊಂಡಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವುದಕ್ಕಾಗಿ ಫಾರ್ಮ್‌ಹೌಸ್ ವ್ಯವಸ್ಥಾಪಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವಿಡಿಯೊ ನೋಡುತ್ತಿದ್ದ ಆರೋಪಿಯನ್ನು ಹಿಡಿದ ಮಹಿಳೆ
ಪೊಲೀಸರ ಪ್ರಕಾರ, ಒಂದು ಕುಟುಂಬವು ತೋಟದ ಮನೆಯನ್ನು ಅಲ್ಪಾವಧಿಗೆ ಬಾಡಿಗೆಗೆ ಪಡೆದಿತ್ತು. ಆ ಸಮಯದಲ್ಲಿ ಒಬ್ಬ ಮಹಿಳೆ ಗುಪ್ತ ಸಾಧನವನ್ನು ಗಮನಿಸಿದಳು. ಅದು ಏನು ಎಂದು ತಿಳಿದಾಗ ದಿಗ್ಭ್ರಮೆಗೊಂಡಿದ್ದಾಳೆ. ಈ ಸಂಬಂಧ ಮಾಲೀಕ ಚೌಧರಿಯನ್ನು ವಿಚಾರಿಸಿದಾಗ, ಅವನು ತನ್ನ ಫೋನ್‌ನಲ್ಲಿ ರೆಕಾರ್ಡ್ ಮಾಡಿದ ವಿಡಿಯೊಗಳನ್ನು ವೀಕ್ಷಿಸುತ್ತಿರುವುದನ್ನು ಗಮನಕ್ಕೆ ಬಂದಿದೆ. ಮಹಿಳೆ ತಕ್ಷಣ ತನ್ನ ಕುಟುಂಬಕ್ಕೆ ಮಾಹಿತಿ ನೀಡಿ ಪೊಲೀಸರನ್ನು ಸಂಪರ್ಕಿಸಿದಳು.
ಇದನ್ನೂ ಓದಿ: Viral News: 109 ವರ್ಷಗಳಿಂದ ಹೊತ್ತಿ ಉರಿಯುತ್ತಲೇ ಇದೆ ದೇಶದ ಈ ಸಿಟಿ! ಭೂಮಿ ಇನ್ನೂ ತಣ್ಣಗಾಗಿಯೇ ಇಲ್ವಂತೆ
ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಂತ್ರಸ್ತರಿಗೆ ನ್ಯಾಯ ಒದಗಿಸಲು ಮತ್ತು ಭವಿಷ್ಯದಲ್ಲಿ ಇಂತಹ ಗೌಪ್ಯತೆಯ ಉಲ್ಲಂಘನೆಗಳನ್ನು ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಸೇನಾಧಿಕಾರಿಯೆಂದು ನಂಬಿಸಿ ವೈದ್ಯೆಗೆ ವಂಚನೆ
ಸೇನಾ ಅಧಿಕಾರಿ ಎಂದು ನಂಬಿಸಿದ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣಗಳ ಮೂಲಕ ವೈದ್ಯೆಯೊಬ್ಬಳನ್ನು ವಂಚಿಸಿ, ಸ್ನೇಹ ಬೆಳೆಸಿ ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಛತ್ತರ್‌ಪುರ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಅಮೆಜಾನ್‌ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿರುವ ಆರವ್ ಮಲಿಕ್, ತಾನು ಭಾರತೀಯ ಸೇನಾ ಲೆಫ್ಟಿನೆಂಟ್ ಎಂದು ನಟಿಸಿದ್ದಾನೆ. ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಯುವತಿಯೊಬ್ಬಳ ಜೊತೆ ಸ್ನೇಹ ಬೆಳೆಸಿ ವಂಚಿಸಿದ್ದಾನೆ. ಅಧಿಕಾರಿಗಳ ಪ್ರಕಾರ, ಮಲಿಕ್ ಇನ್‌ಸ್ಟಾಗ್ರಾಮ್‌ನಲ್ಲಿ 27 ವರ್ಷದ ವೈದ್ಯೆಯೊಂದಿಗೆ ಸ್ನೇಹ ಬೆಳೆಸಿಕೊಂಡನು. ನಂತರ ವಾಟ್ಸಾಪ್ ಸಂಖ್ಯೆ ಪಡೆದುಕೊಂಡು ಅವಳೊಂದಿಗೆ ಮತ್ತಷ್ಟು ಹತ್ತಿರವಾಗಿದ್ದಾನೆ. ಬಳಿಕ ವೈದ್ಯೆಯ ನಿವಾಸಕ್ಕೆ ಭೇಟಿ ನೀಡಿದ್ದಾನೆ. ಮಾದಕ ದ್ರವ್ಯ ಸೇವಿಸಿದ ಆರೋಪಿಯು ವೈದ್ಯೆಯ ಮೇಲೆ ಅತ್ಯಾಚಾರಗೈದು, ಹಲ್ಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.