ಬೈಕ್‌ನಲ್ಲಿ ಪ್ರೇಮಿಯ ಅಪಾಯಕಾರಿ ಸ್ಟಂಟ್‌ನಿಂದ ಯುವತಿಗೆ ಗಂಭೀರ ಗಾಯ: ಭಯಾನಕ ವಿಡಿಯೊ ವೈರಲ್
Viral Video: ಅಪಾಯಕಾರಿ ಸ್ಟಂಟ್, ರಸ್ತೆ ಮಧ್ಯೆ ವಿಲ್ಹಿಂಗ್ ಮಾಡುವುದು ಇತ್ಯಾದಿ ಸಾಹಸ ಮಾಡಲು ಹೋಗಿ ಪ್ರಾಣ ಕಳೆದುಕೊಂಡವರು ಅನೇಕರು ಇದ್ದಾರೆ. ಇದೀಗ ಮುಂಬೈಯಲ್ಲಿ ಯುವತಿಯೊಬ್ಬಳು ತನ್ನ ಸ್ನೇಹಿತನ ಬೈಕ್‌ನಲ್ಲಿ ಕುಳಿತು ಗಂಭೀರವಾಗಿ ಗಾಯಗೊಂಡಿದ್ದಾಳೆ. ಸದ್ಯ ಈ ಅಪಾಯಕಾರಿ ವಿಡಿಯೊ ವೈರಲ್ ಆಗುತ್ತಿದೆ.
ಬೈಕ್ ಸ್ಟಂಟ್ ವೇಳೆ ಭೀಕರ ಅವಘಡ -
ಮುಂಬೈ, ಫೆ.17: ಇಂದು ರೀಲ್ಸ್ ಗೀಳು ಹೆಚ್ಚಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಬೇಕು, ಹೆಚ್ಚು ವೀವ್ಸ್ ಪಡೆಯಬೇಕು ಎನ್ನುವ ಉದ್ದೇಶದಿಂದ ಅನೇಕರು ನಾನಾ ಸಾಹಸಕ್ಕೆ ಮುಂದಾಗುತ್ತಾರೆ. ಅಪಾಯಕಾರಿ ಸ್ಟಂಟ್ ಮಾಡುವುದು, ರಸ್ತೆ ಮಧ್ಯೆ ವಿಲ್ಹಿಂಗ್ ಇತ್ಯಾದಿ ಹುಚ್ಚು ಸಾಹಸ ಪ್ರದರ್ಶಿಸಲು ಹೋಗಿ ಅಪಾಯ ತಂದುಕೊಳ್ಳುತ್ತಾರೆ. ಈ ಮಧ್ಯೆ ಮಹಾರಾಷ್ಟ್ರದ ಮುಂಬೈಯಲ್ಲಿ ಯುವತಿಯೊಬ್ಬಳು ತನ್ನ ಸ್ನೇಹಿತನ ಜತೆ ಬೈಕ್‌ನಲ್ಲಿ ಹೋಗಿ ಗಂಭೀರ ಗಾಯಗೊಂಡಿದ್ದಾಳೆ. ಯುವತಿಯನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ಪ್ರೇಮಿ ವ್ಹೀಲಿಂಗ್ ಮಾಡಿದ್ದಾನೆ. ಸದ್ಯ ಈ ಅಪಾಯಕಾರಿ ವಿಡಿಯೊ ವೈರಲ್ (Viral Video) ಆಗಿದೆ.
ಇತ್ತೀಚಿನ ದಿನಗಳಲ್ಲಿ 'ಲೈಕ್ಸ್' ಮತ್ತು 'ವ್ಯೂಸ್' ಗಳಿಸುವುದಕ್ಕಾಗಿ ಯುವಜನತೆ ಅಪಾಯಕಾರಿ ಸಾಹಸಗಳಿಗೆ ಕೈಹಾಕುತ್ತಿರುವುದು ಹೆಚ್ಚಾಗಿದೆ. ಸಾರ್ವಜನಿಕ ರಸ್ತೆಯಲ್ಲಿ ಪ್ರದರ್ಶಿಸಲಾದ ಸ್ಟಂಟ್ ಯುವತಿಯನ್ನು ಗಾಯಗೊಳಿಸಿದೆ. ಬೈಕ್‌ನಲ್ಲಿ ಪ್ರೇಮಿ ಸ್ಟಂಟ್ ಮಾಡಲು ಹೋಗಿದ್ದು ಆಕೆ ಯಾವುದೇ ರಕ್ಷಣಾತ್ಮಕ ಸಾಧನಗಳಿಲ್ಲದೆ ತನ್ನ ಸಮತೋಲನ ವನ್ನು ಕಾಯ್ದುಕೊಳ್ಳಲು ಹೆಣಗಾಡಿದ್ದಾಳೆ. ಒಂದು ಹಂತದಲ್ಲಿ ಅವಳು ಹಿಂದಕ್ಕೆ ಜಾರಿ ಚಲಿಸುವ ಬೈಕ್ ಟೈರ್ ನಡುವಿನ ಕಿರಿದಾದ ಅಂತರದಲ್ಲಿ ಸಿಕ್ಕಿಹಾಕಿಕೊಂಡಳು.
ವಿಡಿಯೊ ನೋಡಿ:
ವೈರಲ್ ಆದ ದೃಶ್ಯದ ಆರಂಭದಲ್ಲಿ ಯುವತಿ ತನ್ನ ಸ್ನೇಹಿತನ ಬೈಕ್‌ನ ಹಿಂಬದಿಯಲ್ಲಿ ಕೂತಿರುವುದು ಕಂಡು ಬಂದಿದೆ. ಆದರೆ ಇದ್ದಕ್ಕಿದ್ದಂತೆ ಬೈಕ್ ಸವಾರ ಸ್ಪೀಡ್ ಹೆಚ್ಚಿಸಿ, ಮುಂಭಾಗದ ಚಕ್ರದ ಮೂಲಕ ಟಯರ್ ಎತ್ತಿ ವೀಲ್ಹಿಂಗ್ ಮಾಡಲು ಪ್ರಯತ್ನಿಸಿದ್ದಾನೆ. ಗಾಬರಿಯಾದ ಯುವತಿ ತನ್ನ ಸಮತೋಲನ ಕಳೆದುಕೊಂಡಿದ್ದಾಳೆ. ಯಾವುದೇ ಸುರಕ್ಷತಾ ಸಾಧನ ಧರಿಸಿದ ಕಾರಣ, ಅವಳು ಬೈಕ್‌ನಿಂದ ಹಿಂದಕ್ಕೆ ಜಾರಿ ಬಿದ್ದಿದ್ದಾಳೆ.
ವೃದ್ಧ ಮುಸ್ಲಿಂ ಕ್ಯಾಬ್ ಚಾಲಕನಿಗೆ ಕಿರುಕುಳ; ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಆಗ್ರಹ
ಯುವತಿ ಕೆಳಗೆ ಬೀಳುವಾಗ ಅವಳ ಕಾಲುಗಳು ಚಲಿಸುತ್ತಿದ್ದ ಬೈಕ್‌ನ ಸೀಟ್ ಮತ್ತು ಹಿಂದಿನ ಚಕ್ರದ ನಡುವೆ ಸಿಲುಕಿಕೊಂಡಿವೆ. ಇದರಿಂದಾಗಿ ಆಕೆಗೆ ತೀವ್ರವಾದ ಪೆಟ್ಟಾಗಿದೆ. ಇದೀಗ ಈ ಘಟನೆ ರಸ್ತೆ ಸುರಕ್ಷತೆಯ ಬಗ್ಗೆ ಪದೇ ಪದೆ ಎಚ್ಚರಿಕೆ ನೀಡಿದರೂ ಇಂತಹ ಅಪಾಯಕಾರಿ ನಡವಳಿಕೆ ಏಕೆ ಮುಂದುವರಿಯುತ್ತದೆ ಎಂದು ಅನೇಕರು ಪ್ರಶ್ನಿಸಿದ್ದಾರೆ. ಈ ವಿಡಿಯೊ ಹರಿದಾಡುತ್ತಿದ್ದಂತೆ ನೆಟ್ಟಿಗರು ಬೈಕ್ ಸವಾರನ ಬೇಜವಾಬ್ದಾರಿತನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಲವರು ಸವಾರ ಮತ್ತು ಯುವತಿ ಹೆಲ್ಮೆಟ್ ಧರಿಸಿಲ್ಲ ಎಂದು ಕಿಡಿಕಾರಿದ್ದಾರೆ.