ದೆಹಲಿ,ಜ.30: ಬಾಲ್ಯದಲ್ಲಿ ಹೆಚ್ಚಿನವರು ಹೀಯಾಳಿಕೆಯ ಮಾತುಗಳನ್ನು ಕೇಳಿರುತ್ತಾರೆ. ಬಾಲ್ಯದ ಕನಸುಗಳು ಹೆಚ್ಚಾಗಿ ಅನುಮಾನ, ಹೋಲಿಕೆ ಮತ್ತು ಅನಿಶ್ಚಿತತೆಯ ಜೊತೆಗೆ ಸಾಗುತ್ತದೆ. ಆದರೆ ಇದನ್ನೆಲ್ಲ ಮೆಟ್ಟಿನಿಂತು ಧೈರ್ಯವಾಗಿ ಸಾಗುವವರೇ ಮುಂದೊಂದು ದಿನ ಯಶಸ್ಸಿನ ಬಾಗಿಲು ತೆರೆಯುತ್ತಾರೆ. ಅಂತೆಯೇ ಬಾಲ್ಯದಲ್ಲಿ ನೀನು ನೋಡಲು ಚೆನ್ನಾಗಿಲ್ಲ, ನೀನು ಗಿಡ್ಡ ಮತ್ತು ದಪ್ಪಗಿದ್ದೀಯ ಎಂಬ ಹೀಯಾಳಿಕೆಯ ಮಾತುಗಳನ್ನು ಕೇಳಿಸಿಕೊಂಡಿದ್ದ ವ್ಯಕ್ತಿಯೊಬ್ಬರು ಇಂದು ಜಗತ್ತೇ ಹೊಗಳುವಂತಹ ಸಾಧನೆ ಮಾಡಿದ್ದಾರೆ. ಅವರು ಬೇರೆಯ್ಯಾರು ಅಲ್ಲ ಐಐಎಂ ಬೆಂಗಳೂರಿನ ಪದವೀಧರರಾದ ಸಿಲೇಂದ್ರನ್ ಅರುಣಗಿರಿ (Sylendran Arunagiri) ಅವರ ಯಶಸ್ಸಿನ ಪಯಣದ ಬಗ್ಗೆ ಹಲವು ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.
ಸಿಲೇಂದ್ರನ್ ಅರುಣಗಿರಿ ಅವರ ಪಯಣವು ಸಾವಿರಾರು ಜನರನ್ನು ಆಕರ್ಷಿಸಿದೆ. NVIDIA ದ ಏಜೆಂಟ್ AI ಉತ್ಪನ್ನ ತಜ್ಞನಾಗಿರುವ ಇವರು ತಮ್ಮ ಯಶಸ್ಸಿನ ಹಾದಿಯ ಕ್ಲಿಪ್ ಅನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಾಲ್ಯದಲ್ಲಿ "ನೀವು ಕಪ್ಪಾಗಿ ಮತ್ತು ಕೊಳಕು ಕಾಣುತ್ತೀರಿ" ಮತ್ತು "ನೀವು ಕುಳ್ಳ ಮತ್ತು ದಪ್ಪವಾಗಿದ್ದೀರಿ" ಎಂಬ ಮಾತುಗಳು ಕೇಳಿ ಬಂದಿರುವ ಬಗ್ಗೆ ಮಾತನಾಡಿದ್ದಾರೆ. ಆದರೆ ಅಂತಹ ನಕಾರಾತ್ಮಕ ಮಾತುಗಳ ಬಗ್ಗೆ ಯೋಚಿಸದೆ ಅವರು ತಮ್ಮ ಗಮನವನ್ನು ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಸನದತ್ತ ಹರಿಸಿದರು.
ವಿಡಿಯೋ ನೋಡಿ:
ವರ್ಷಗಳ ನಿರಂತರ ಪ್ರಯತ್ನದ ಮೂಲಕ ಗಳಿಸಿದ ಶೈಕ್ಷಣಿಕ ಮೈಲಿಗಲ್ಲುಗಳ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. NITK ಸುರತ್ಕಲ್ ಪದವಿ, IIM ಬೆಂಗಳೂರು ಮತ್ತು ಕಾರ್ನೆಗೀ ಮೆನ್ ವಿಶ್ವ ವಿದ್ಯಾಲಯ ಸೇರಿದಂತೆ ತಮ್ಮ ಶಿಕ್ಷಣ ಪೂರ್ಣ ಗೊಳಿಸಿದ್ದಾರೆ. ಶಿಕ್ಷಣದ ಜೊತೆಗೆ ತಮ್ಮ ದೈಹಿಕ ಫಿಟ್‌ನೆಸ್ ಬಗ್ಗೆಯೂ ಗಮನಹರಿಸಿದ ಅವರು ಸಂಪೂರ್ಣವಾಗಿ ಬದಲಾವಣೆ ಮಾಡಿಕೊಂಡಿದ್ದಾರೆ.
Viral Video: ಹುಚ್ಚಾಟ ಮೆರೆದು ಸಿಂಹಿಣಿಯ ದಾಳಿಗೆ ಪ್ರಾಣ ಕಳೆದುಕೊಂಡ ಯುವಕ: ಎದೆ ಝಲ್ ಎನಿಸುತ್ತೆ ಈ ದೃಶ್ಯ!
ಇಂದು ಅವರು ಸಿಲಿಕಾನ್ ವ್ಯಾಲಿಯ ದಿಗ್ಗಜ ಕಂಪನಿ NVIDIA ನಲ್ಲಿ 'ಏಜೆಂಟಿಕ್ ಎಐ' ಉತ್ಪನ್ನ ತಜ್ಞರಾಗಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ಜೆನ್ಸನ್ ಹುವಾಂಗ್ ಮತ್ತು ಸುಂದರ್ ಪಿಚೈ ಅವ ರಂತಹ ನಾಯಕರೊಂದಿಗೆ ಸಂಪರ್ಕ ಹೊಂದಿದ ಕ್ಷಣಗಳು ಸೇರಿವೆ. ಅವರ ವಿಡಿಯೋದ ಪ್ರಮುಖ ಅಂಶವೆಂದರೆ 'ಪೆಂಗ್ವಿನ್ ವೇ ಗುಂಪಿನಲ್ಲಿದ್ದ ಒಂದು ಪೆಂಗ್ವಿನ್ ಯಾರ ಮಾತನ್ನು ಕೇಳದೆ ಧೈರ್ಯವಾಗಿ ಸಾಗುವ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು. ಅದನ್ನೇ ಉದಾಹರಣೆ ಕೊಟ್ಟ ಸಿಲೇಂದ್ರನ್, "ಬೇರೆಯವರು ನಿಮ್ಮ ಬಗ್ಗೆ ಹೇಳುವುದರ ಬಗ್ಗೆ ಭಯ ಬಿಡಿ, ನಿಮ್ಮದೇ ಆದ ಹಾದಿಯಲ್ಲಿ ನೀವು ಬದುಕಿ ಎಂದಿದ್ದಾರೆ.
ವೀಕ್ಷಕರು ವೀಡಿಯೊದ ಹಿಂದಿನ ಉದ್ದೇಶಕ್ಕೆ ಬಲವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದು ನಾನು ಆನ್‌ಲೈನ್‌ನಲ್ಲಿ ನೋಡಿದ ಅತ್ಯುತ್ತಮ ಪೆಂಗ್ವಿನ್ ಟೇಕ್ ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು ಜೀವನದಲ್ಲಿ ವೇಗಕ್ಕಿಂತ ನಿರ್ದೇಶನವು ಮುಖ್ಯವಾಗಿದೆ ಎಂದಿದ್ದಾರೆ.