ಆಸ್ತಿ ಮಾರಿ ಓದಿಸಿದ ಪತಿಗೇ ಕೈಕೊಟ್ಟ ಶಿಕ್ಷಕಿ; ಪತ್ನಿಯ ಅಕ್ರಮ ಸಂಬಂಧ ಹೊರಬರುತ್ತಿದ್ದಂತೆ ಗೋಳಾಡಿದ ಅಮಾಯಕನ ಸ್ಥಿತಿಗೆ ಮರುಗಿದ ಸ್ಥಳೀಯರು
Husband Accuses Teacher: ಬಿಪಿಎಸ್‌ಸಿ ಮೂಲಕ ಶಿಕ್ಷಕಿಯಾಗಿ ಆಯ್ಕೆಯಾದ ನಂತರ ತನ್ನ ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಪತಿಯೊಬ್ಬರು ಆರೋಪಿಸಿದ್ದಾರೆ. ಆಕೆಗೆ ಶಿಕ್ಷಣ ಕೊಡಿಸಲು ಆಸ್ತಿ ಮಾರಿದ್ದಾಗಿ ಗೋಳಾಡಿದ್ದಾರೆ. ಪತಿ ಮತ್ತು ಪೊಲೀಸರೊಂದಿಗೆ ಮಹಿಳೆ ಸಾರ್ವಜನಿಕ ಸ್ಥಳದಲ್ಲಿ ವಾಗ್ವಾದ ನಡೆಸಿದ್ದಾಳೆ. ಇದರ ವಿಡಿಯೊ ವೈರಲ್ ಆಗಿದೆ.
ಗುಂಜನ್ ಕುಮಾರಿ ಮತ್ತು ಅಮನ್ ಕುಮಾರ್ -
ಪಟನಾ, ಮೇ 30: ಪತಿಯ ಆರೋಪ ಮತ್ತು ಪೊಲೀಸರೊಂದಿಗೆ ನಡೆದ ಸಾರ್ವಜನಿಕ ವಾಗ್ವಾದದ ಹಿನ್ನೆಲೆಯಲ್ಲಿ, ಬಿಹಾರದ ಹಾಜಿಪುರದಲ್ಲಿ ಬಿಪಿಎಸ್‌ಸಿ (BPSC) ಮೂಲಕ ನೇಮಕಗೊಂಡ ಶಿಕ್ಷಕಿ ಗುಂಜನ್ ಕುಮಾರಿ ಇದೀಗ ಮಾಧ್ಯಮಗಳ ಕೇಂದ್ರಬಿಂದುವಾಗಿದ್ದಾಳೆ. ಪತಿ ಅಮನ್ ಕುಮಾರ್, ಪತ್ನಿಗೆ ವಿವಾಹೇತರ ಸಂಬಂಧ ಇರುವುದಾಗಿ ಗಂಭೀರ ಆರೋಪ ಹೊರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗುಂಜನ್ ಕುಮಾರಿ ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ತೀವ್ರ ವಾಗ್ವಾದ ನಡೆದಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ. ಈ ಘಟನೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಬಿಪಿಎಸ್‌ಸಿ ಮೂಲಕ ಶಿಕ್ಷಕಿಯಾಗಿ ಆಯ್ಕೆಯಾದ ನಂತರ ಪತ್ನಿಗೆ ಅಕ್ರಮ ಸಂಬಂಧವಿದೆ ಎಂದು ಅಮನ್ ಬಹಿರಂಗವಾಗಿ ಆರೋಪಿಸಿದ ನಂತರ ಈ ವಿಡಿಯೊ ಬಹಿರಂಗವಾಯಿತು. ''ಆಸ್ತಿ ಮಾರಿ ಗುಂಜನ್‌ಳನ್ನು ಓದಿಸಿದೆ. ಆದರೆ ಆಕೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆʼʼ ಎಂದು ಅಮನ್ ಆರೋಪಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ʼʼಉತ್ತಮ ಅಂಕ ಪಡೆದಿದ್ದ ಕಾರಣ, ಉನ್ನತ ಶಿಕ್ಷಣ ಪಡೆಯಲು ಬಯಸಿದ್ದಳು. ಹೀಗಾಗಿ ಆಕೆಯ ಶಿಕ್ಷಣಕ್ಕೆ ಸಹಾಯ ಮಾಡಿದೆ. ನನ್ನ ತಂದೆ ಕೂಡ ಆಕೆಗೆ ಬೆಂಬಲ ನೀಡಿದರುʼʼ ಎಂದು ಅವರು ತಿಳಿಸಿದ್ದಾರೆ.
ಇಲ್ಲಿದೆ ವಿಡಿಯೊ:
एक BPSC से चयनित शिक्षिका को उसके पति ने प्रेमी के साथ पकड़ लिया। खबर के मुताबिक पति ने पत्नी की पढ़ाई के लिए अपनी जमीन तक बेच दी थी। लेकिन BPSC में नौकरी लगते ही पत्नी ने घर-परिवार छोड़ दिया। पति का आरोप है कि पत्नी का कॉलेज के समय के बॉयफ्रेंड से अफेयर चल रहा है। pic.twitter.com/g1kZvw0kr8
— Anuj Agnihotri Swatntra (@swatntra_anuj) May 29, 2026
#WATCH | Hajipur, Bihar | Aman Kumar, whose story has been going viral online for filing a complaint against his wife for abandoning his family, says, "I got married in 2013 to Gunjan Kumari. The marriage was arranged by her maternal uncle... She had passed the intermediate level… pic.twitter.com/CHekxXJE5h
— ANI (@ANI) May 30, 2026
“ನನ್ನಿಂದ ಸಾಧ್ಯವಾದಷ್ಟು ಸಹಾಯ ಒದಗಿಸಲು ಹಗಲಿರುಳು ಶ್ರಮಿಸಿದೆ. ಅಗತ್ಯವಿದ್ದಾಗ ನಾನು ಒಂದು ತುಂಡು ಭೂಮಿಯನ್ನು ಸಹ ಮಾರಿದೆ. ಒಂದು ವರ್ಷದಿಂದ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ” ಎಂದು ಅಮನ್ ಹೇಳಿದ್ದಾರೆ. ʼʼಪತ್ನಿಗೆ ಅಕ್ರಮ ಸಂಬಂಧವಿದೆ. ಮೇ 23ರಂದು ವ್ಯಕ್ತಿಯೊಬ್ಬನೊಂದಿಗೆ ಇರುವುದನ್ನು ಕಾರಲ್ಲಿ ನೋಡಿದ್ದೇನೆ. ಆ ದೃಶ್ಯದ ವಿಡಿಯೊವನ್ನು ತೆಗೆದುಕೊಂಡಿದ್ದೇನೆʼʼ ಎಂದು ತಿಳಿಸಿದ್ದಾರೆ. ಈ ಮೂಲಕ ದಂಪತಿಯ ಜಗಳ ಬೀದಿಗೆ ಬಂತು.
ರೈಲಿನ ಶೌಚಾಲಯದಲ್ಲಿ ಊಟದ ತಟ್ಟೆಗಳನ್ನು ತೊಳೆದ ಸಿಬ್ಬಂದಿ
ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪರಿಸ್ಥಿತಿಯನ್ನು ಶಾಂತಗೊಳಿಸಲು ಪ್ರಯತ್ನಿಸಿದರು. ನಂತರ ಮಹಿಳೆಗೆ ಎಚ್ಚರಿಕೆ ನೀಡಿದರು. ಕಾನೂನು ಮತ್ತು ಸುವ್ಯವಸ್ಥೆಯನ್ನು ಹಾಳು ಮಾಡಲು ಪ್ರಯತ್ನಿಸಿದರೆ, ಸರಿಯಾದ ಪಾಠ ಕಲಿಸುವುದಾಗಿ ಎಚ್ಚರಿಸಿದರು.
2013ರಲ್ಲಿ ವಿವಾಹವಾದ ದಂಪತಿ
ಈ ಜೋಡಿ 2013ರಲ್ಲಿ ವಿವಾಹವಾಗಿತ್ತು. ʼʼಮದುವೆಯಾದಾಗ ಗುಂಜನ್ ಕುಮಾರಿ ಪದವಿ ಪಡೆದಿದ್ದಳು. ಪದವಿಯಲ್ಲಿ ಉತ್ತಮ ಅಂಕಗಳಿಸಿದ್ದರಿಂದ ಗುಂಜನ್, ಹೆಚ್ಚಿನ ಅಧ್ಯಯನ ಮಾಡಲು ಬಯಸಿದ್ದಳುʼʼ ಎಂದು ಅವರು ಹೇಳಿದ್ದಾರೆ. ದಂಪತಿಗೆ 10 ವರ್ಷದ ಮಗನಿದ್ದಾನೆ.