ನವದೆಹಲಿ: ಕಲಿಯುಗದಲ್ಲಿ ಏನು ಬೇಕಾದರೂ ನಡೆಯುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ತಾನೇ ಹೆತ್ತು ದತ್ತು ಕೊಟ್ಟಿದ್ದ ಮಗನನ್ನು ಮಹಿಳೆಯೊಬ್ಬಳು ಮದುವೆಯಾಗಿರುವ ಘಟನೆ ವರದಿಯಾಗಿದೆ.ತಾನು ಹೆತ್ತ ಮಗನೆಂದು ತಿಳಿಯದೇ ಅನೇಕ ವರ್ಷಗಳ ನಂತರ ಆತನನ್ನೇ ಮದುವೆಯಾದ ವಿಲಕ್ಷಣ ಘಟನೆಯೊಂದು ನಡೆದಿದೆ. ತಾಯಿಯಿಂದ ಹೆಂಡತಿಯಾಗುವ (Mother To Wife) ಮೂಲಕ ಇಬ್ಬರಿಗೂ ತಿಳಿಯದೆಯೇ ಆ ಬಂಧ ಶುರುವಾಯ್ತು.
ಆರ್ಥಿಕ ಸಂಕಷ್ಟದಿಂದಾಗಿ ಹೆರಿಗೆಯಾದ ತಕ್ಷಣ ಮಗುವನ್ನು ದತ್ತು ನೀಡಿದ ನಂತರ, ಆ ಮಹಿಳೆ ಅವರೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿರಲಿಲ್ಲ. ದಶಕಗಳ ನಂತರ, ಅವಳಿಗಾಗಲಿ ಅಥವಾ ವಯಸ್ಕ ಮಗನಿಗಾಗಲಿ ತಮ್ಮ ಸಂಬಂಧದ ಬಗ್ಗೆ ತಿಳಿದಿರಲಿಲ್ಲ. ಇಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾದರು. ಇವರಿಬ್ಬರಿಗೆ ಇಬ್ಬರು ಮಕ್ಕಳಾಗಿವೆ.
ಡಿಎನ್ಎ ಪರೀಕ್ಷೆ ವೇಳೆ ಹೊರಬಂತು ಸತ್ಯ
ದಂಪತಿ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕಾನೂನು ಸಮಾಲೋಚನೆ ನಡೆಸುತ್ತಿದ್ದಾಗ ಡಿಎನ್ಎ ಪರೀಕ್ಷೆ ಮಾಡಲು ನಿರ್ಧರಿಸಿದಾಗ ಆಘಾತಕಾರಿ ಸತ್ಯ ಹೊರಬಂದಿತು. ಆಕೆಯ ಪತಿ ಮೂವತ್ತಾರು ವರ್ಷಗಳ ಹಿಂದೆ ಜನಿಸಿದ ಆಕೆಯ ಸ್ವಂತ ಮಗನೇ ಆಗಿದ್ದ ಎಂಬುದು ಪರೀಕ್ಷೆಯಲ್ಲಿ ತಿಳಿದುಬಂದಿದೆ. ಕ್ಷಣಾರ್ಧದಲ್ಲಿ ಅವರ ಸುಂದರ ಪ್ರಪಂಚವು ಛಿದ್ರವಾಯಿತು.
ಇದನ್ನೂ ಓದಿ: Viral Video: ಮದುವೆ ಸಂಭ್ರಮದಲ್ಲಿದ್ದ ವಧುವಿನ ಸಂತೋಷಕ್ಕೆ ತನ್ನೀರೆರಚಿದ ಮೇಕಪ್ ಆರ್ಟಿಸ್ಟ್! ಈ ವಿಡಿಯೊ ನೋಡಿ
ಈ ವಿಚಾರವು ಇಬ್ಬರಿಗೂ ಭಾವನಾತ್ಮಕ ಆಘಾತವನ್ನುಂಟುಮಾಡಿತು. ಮಹಿಳೆ ತನ್ನ ಪತಿ ಅಂದ್ರೆ ವಯಸ್ಕ ಮಗನನ್ನು 2015 ರಲ್ಲಿ ಭೇಟಿಯಾದಾಗ, ಆತನಿಗೆ 21 ವರ್ಷ ವಯಸ್ಸಾಗಿತ್ತು. ತಾಯಿ-ಮಗ ಎಂಬ ಅರಿವಿಲ್ಲದೆ ಪರಸ್ಪರ ಪ್ರೀತಿಸಿದ ಅವರು 2017ರಲ್ಲಿ ಮದುವೆಯಾಗಿ, ಇಬ್ಬರು ಮಕ್ಕಳನ್ನು ಹೊಂದಿದರು. ವಿಚಾರ ತಿಳಿತ ಬಳಿಕ ದಂಪತಿಗಳು ಈಗ ಬೇರ್ಪಟ್ಟಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: Viral Video: ಬೀದಿ ನಾಯಿಯನ್ನು ಬೈಕ್‌ಗೆ ಕಟ್ಟಿ ಎಳೆದೊಯ್ದ ವ್ಯಕ್ತಿ; ವಿಡಿಯೋ ವೈರಲ್