ಬೆಂಗಳೂರು: ಮದುವೆ(Marriage)ಸ್ವರ್ಗದಲ್ಲಿಯೇ ನಿಶ್ವಯವಾಗಿರುತ್ತದೆ. ಪತಿ-ಪತ್ನಿಯರ ಸಂಬಂಧ (Married Life) ಏಳೇಳು ಜನ್ಮದ ನಂಟಾಗಿರುತ್ತದೆ. ಇದನ್ನು ಜೀವನ ಪರ್ಯಂತ ಇರುವ ಶ್ರೇಷ್ಠ ಸಂಬಂಧವೆಂದು ಪರಿಗಣಿಸಲಾಗುತ್ತದೆ. ಆದರೆ ಇತ್ತೀಚೆಗೆ ಇದ್ಯಾವುದಕ್ಕೂ ಬೆಲೆಯೇ ಇಲ್ಲದಂತಾಗಿದ್ದು, ಅನೈತಿಕ ಸಂಬಂಧವನ್ನು ಇಟ್ಟುಕೊಳ್ಳುವ ಪರಿಪಾಠ ಹೆಚ್ಚಾಗುತ್ತಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಕಚೇರಿಯಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಸಹೋದ್ಯೋಗಿಗಳೊಂದಿಗೆ ಸ್ನೇಹ ಬೆಳೆಸುವುದು, ಆ ಸ್ನೇಹ ಪ್ರೀತಿಗೆ ತಿರುಗೆ ಅನೈತಿಕ ಸಂಬಂಧ ಇಟ್ಟುಕೊಳ್ಳುವ ಪ್ರವೃತ್ತಿಯೂ ಶುರುವಾಗಿದೆ. ಇದು ಎಷ್ಟರ ಮಟ್ಟಿಗೆ ಜನರನ್ನು ಅವರಿಸಿದೆ ಎಂದರೆ ಆಫೇರ್ ಹೊಂದುವುದು ಫ್ಯಾಷನ್, ಟ್ರೆಂಡ್ ಆಗಿಬಿಟ್ಟಿದೆ. ಕಳೆದ ಮಾರ್ಚ್‌ನಲ್ಲಿ ಅಮೆರಿಕದ ಮ್ಯಾಸಚೂಸೆಟ್ಸ್‌ನಲ್ಲಿ ನಡೆದ ಕೋಲ್ಡ್‌ಪ್ಲೇ ಸಂಗೀತ ಕಾರ್ಯಕ್ರಮದಲ್ಲಿ ಅಮೆರಿಕದ ಖ್ಯಾತ Astronomer ಕಂಪನಿಯ ಸಿಇಒ ಆ್ಯಂಡಿ ಬೈರನ್ ಮತ್ತು ಅದರ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಕ್ರಿಸ್ಟಿನ್ ಕ್ಯಾಬಟ್ ನಡುವಿನ ಅನೈತಿಕ ಸಂಬಂಧ ಬಯಲಾಗಿತ್ತು.
ಇದೀಗ ಇಂತಹ ವಿಷಯಕ್ಕೂ ಒಂದು ಸರ್ವೇ ನಡೆದಿದ್ದು, ಆಫೀಸ್‌ಗಳಲ್ಲಿ ರೊಮ್ಯಾನ್ಸ್ (Office Romances) ಎಂಬ ವಿಷಯದಲ್ಲಿ ಮೇಲೆ ಸರ್ವೇ ಮಾಡಲಾಗಿದೆ. ಈ ಸರ್ವೆ ವರದಿ ಪ್ರಕಾರ ಆಫೀಸ್ ರೊಮ್ಯಾನ್ಸ್‌ನಲ್ಲಿ ಭಾರತ 2ನೇ ಸ್ಥಾನ (India Ranks 2nd palce) ಪಡೆದುಕೊಂಡಿದ್ದು, ಭಾರತ, ಅಮೆರಿಕ, ಬ್ರಿಟನ್, ಇಟಲಿ ಸೇರಿದಂತೆ 11 ದೇಶಗಳಲ್ಲಿ ಈ ಸರ್ವೆಯನ್ನು ಮಾಡಲಾಗಿದೆ. ಸಂಬಳ ಹೆಚ್ಚಳ, ಪ್ರಮೋಷನ್ , ಅಪ್ರಿಸಿಯೇಶನ್‌ಗಾಗಿ ಹುಟ್ಟಿಕೊಳ್ಳುವ ಸಂಬಂಧಗಳು, ಸಹೋದ್ಯೋಗಿಗಳ ನಡೆಯುವ ಆಫೀಸ ರೊಮ್ಯಾನ್ಸ್ ನಡೆಯುತ್ತಲೇ ಇರುವ ರಾಷ್ಟ್ರಗಳಲ್ಲಿ ಭಾರತ 2ನೇ ಸ್ಥಾನದಲ್ಲಿದ್ದರೆ, ಮೆಕ್ಸಿಕೋ ಮೊದಲ ಸ್ಥಾನದಲ್ಲಿದೆ.
ಈ ಸುದ್ದಿಯನ್ನು ಓದಿ: Viral Video: ಸೊಸೆಯ ಹೆರಿಗೆ ಸಂದರ್ಭ ಅಮಾನವೀಯವಾಗಿ ವರ್ತಿಸಿದ್ದ ಅತ್ತೆ; ವಿಡಿಯೋ ವೈರಲ್
Ashley Madison ಮತ್ತು YouGov ನಡೆಸಿದ ವರದಿ ಪ್ರಕಾರ, ಭಾರತದಲ್ಲಿ ಸುಮಾರು ಶೇ. 40ರಷ್ಟು ಉದ್ಯೋಗಿಗಳು ತಮ್ಮ ಸಹೋದ್ಯೋಗಿಗಳೊಂದಿಗೆ ಈಗಾಗಲೇ ಡೇಟ್ ಮಾಡಿರುವರು ಅಥವಾ ಸದ್ಯ ಡೇಟ್ ಮಾಡುತ್ತಿರುವವರು ಇದ್ದಾರೆ. ಇದನ್ನು ಗಮನಿಸಿದಾಗ ಕಚೇರಿಗಳಲ್ಲಿ ಅನೈತಿಕ ಸಂಬಂಧಗಳು ಹೆಚ್ಚುತ್ತಿರುವ ಬೆಳವಣಿಗೆಯನ್ನು ಕಂಡಾಗ ಎಂಬ ಸುದ್ದಿ ಗಾಸಿಪ್ ಎನಿಸಿದರೂ ಹಲವರ ಪಾಲಿಗೆ ಆಘಾತಕಾರಿ ಸಂಗತಿ.
ಇನ್ನು ಇಂತಹ ವಿಷಯಗಳಲ್ಲಿ ಪುರುಷರಿಗೆ ಹೆಚ್ಚು ಆಸಕ್ತಿ ಎಂಬ ವಿಚಾರವನ್ನು ವರದಿ ಬಹಿರಂಗಗೊಳಿಸಿದೆ. ವಿವಾಹೇತರ ಸಂಬಂಧ ಇಟ್ಟುಕೊಳ್ಳುವಲ್ಲಿ ಪುರುಷರು ಇಷ್ಟಪಡುತ್ತಾರೆ ಎಂಬುದನ್ನು ಸಮೀಕ್ಷೆ ತಿಳಿಸಿದೆ. ಆದರೆ ಕೆಲವೊಮ್ಮೆ ಇಂತವುಗಳಿಂದ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನ (Professional Life) ಬ್ಯಾಲೆನ್ಸ್ ಮಾಡುವುದೇ ದೊಡ್ಡ ತಲೆನೋವಾಗುತ್ತದೆ. ಈ ವೇಳೆಯಲ್ಲಿ ಹೆಚ್ಚು ತಲೆ ಕೆಡಿಸಿಕೊಳ್ಳದೇ ಈ ಕೆಲವು ಸಲಹೆಗಳನ್ನು ಪಾಲಿಸಿದ್ದರೆ ಎಲ್ಲವನ್ನು ಸುಲಭವಾಗಿ ನಿಭಾಯಿಸಿಕೊಂಡು ಹೋಗಬಹುದು.
ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನ ಮಿಕ್ಸ್ ಮಾಡಬೇಡಿ
ಆಫೀಸ್‌ನಿಂದ ಹೊರಬಂದ ಮೇಲೆ ಅಲ್ಲಿನ ಬಗ್ಗೆ, ಕೆಲಸದ ಬಗ್ಗೆ ಯೋಚಿಸಬೇಡಿ, ಅದರಲ್ಲೂ ಮನೆಗೆ ಬಂದ ಬಳಿಕ ಕಚೇರಿಯ ಕೆಲಸದ ಕುರಿತಾಗಿ ತಲೆ ಕೆಡಿಸಿಕೊಳ್ಳಬೇಡಿ. ಹಾಗೇ ವಾರಾಂತ್ಯದಲ್ಲಿ ಆಫೀಸ್ ಇಮೇಲ್‌ಗಳನ್ನು ತೆರೆಯುವುದು, ಫೈಲ್‌ಗಳ ಬಗ್ಗೆ ಯೋಚಿಸುವುದನ್ನ ಸಾಧ್ಯವಾದಷ್ಟು ತಪ್ಪಿಸಿ. ಈ ಸಮಯವನ್ನು ಸಂಪೂರ್ಣವಾಗಿ ವಿಶ್ರಾಂತಿಗೆ ಮೀಸಲಿಡಿ. ಹೀಗೆ ವೈಯಕ್ತಿಕ ಬದುಕು ಹಾಗೂ ವೃತ್ತಿ ಜೀವನದ ಮಧ್ಯೆ ಅಂತರ ಕಾಯ್ದು ಕೊಂಡರೆ ಎರಡನ್ನೂ ಸಮತೋಲನಗೊಳಿಸಲು ಸುಲಭವಾಗುತ್ತದೆ.
ಸಮಯ ನಿರ್ವಹಣೆಗೆ ಆದ್ಯತೆ ಕೊಡಿ
ಆಫೀಸಿನ ಕೆಲಸವನ್ನು ಆಫೀಸ್ ಸಮಯದಲ್ಲೇ ಮಾಡಲು ಪ್ರಯತ್ನಿಸಿ. ಮನೆಗೆ ಬಂದಾಗ ಮನೆಯ ಕೆಲಸ, ಕುಟುಂಬ, ಅಥವಾ ವೈಯಕ್ತಿಕ ಸಮಯಕ್ಕೆ ಆದ್ಯತೆ ನೀಡಿ. ಕಚೇರಿಯಲ್ಲಿದ್ದಾಗ ಸಮಯ ವ್ಯಯಿಸದೇ, ಕೆಲಸವನ್ನು ಪೂರ್ಣಗೊಳಿಸಿ, ಅದಷ್ಟು ಮನೆಯಲ್ಲಿ ಆಫೀಸ್ ವಿಚಾರಗಳನ್ನು ಮಾತಾಡುವುದನ್ನು ತಪ್ಪಿಸಿ. ಎರಡರಲ್ಲೂ ಕಾರ್ಯಕ್ಷಮತೆ ಕಾಯ್ದುಕೊಳ್ಳಲು ಕಾರ್ಯಪಟ್ಟಿ ರಚಿಸಿ ಪ್ರತಿಯೊಂದು ಕೆಲಸಕ್ಕೆ ನಿರ್ದಿಷ್ಠ ಸಮಯ ನಿಗದಿಪಡಿಸಿ. ಇದರಿಂದ ವೈಯಕ್ತಿಕ ಜೀವನಕ್ಕೂ ಸಮರ್ಪಕ ಸಮಯ ಸಿಗುತ್ತದೆ.
ಈ ಸುದ್ದಿಯನ್ನು ಓದಿ: Viral Video: ನ್ಯಾಯ ಕೊಡಿ ಎಂದ ಅತ್ಯಾಚಾರ ಸಂತ್ರಸ್ತೆ ಗೋಳಾಟ! ಪೊಲೀಸ್ ಉಪ ಮಹಾನಿರ್ದೇಶಕರ ಕಚೇರಿ ಬಳಿ ಹೈಡ್ರಾಮಾ, ಇಲ್ಲಿದೆ ವಿಡಿಯೊ
'ಇಲ್ಲ’ ಎಂದು ಹೇಳುವುದನ್ನು ಕಲಿಯಿರಿ
ಎಲ್ಲ ಕೆಲಸಗಳನ್ನೂ ಒಬ್ಬರೇ ಹೊತ್ತುಕೊಳ್ಳಲು ಪ್ರಯತ್ನಿಸಬೇಡಿ. ನಿಮಗೆ ಸಾಧ್ಯವಾಗದ ಕೆಲಸಗಳನ್ನು, ಅಥವಾ ಹೆಚ್ಚುವರಿ ಹೊರೆಗಳನ್ನು ವಿನಯಪೂರ್ವಕವಾಗಿ ನಿರಾಕರಿಸಿ. ‘ಇಲ್ಲ’ ಎನ್ನುವ ಪ್ರವೃತ್ತಿಯನ್ನು ಬೆಳಸಿಕೊಳ್ಳುವುದರಿಂದ ಅನಗತ್ಯ ಒತ್ತಡಕ್ಕೆ ಒಳಗಾಗುವುದನ್ನು ತಪ್ಪಿಸುತ್ತದೆ ಹಾಗೆಯೇ ನಿಮ್ಮ ವರ್ಕ್–ಲೈಫ್ ಬ್ಯಾಲೆನ್ಸ್‌ನ್ನು ಕಾಪಾಡುತ್ತದೆ.
ಸೋಶಿಯಲ್ ಮೀಡಿಯಾ ಬಳಕೆ ಮಿತವಾಗಿರಲಿ
ಕೆಲವರು ಮನೆಗೆ ಬಂದ ಕೂಡಲೇ ಸೋಶಿಯಲ್ ಮೀಡಿಯಾದಲ್ಲಿ ಗಂಟೆಗಳ ಕಾಲ ಸಮಯ ಕಳೆಯುತ್ತಾರೆ. ಇದು ಮಾನಸಿಕ ಆರೋಗ್ಯಕ್ಕೆ ಹಾನಿಕಾರಕವಾಗಬಲ್ಲದು ಮತ್ತು ಕುಟುಂಬ ಅಥವಾ ಸ್ವಂತ ಸಮಯಕ್ಕೆ ಕತ್ತರಿ ಹಾಕಬಹುದು. ಆದ್ದರಿಂದ ಡಿಜಿಟಲ್ ಡಿಟಾಕ್ಸ್ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಒಳಿತು.
ಕೆಲಸವನ್ನು ಸರಿಯಾಗಿ ಯೋಜಿಸಿ
ಮನೆಗಳಲ್ಲಿ ಇರಲಿ, ಆಫೀಸಿನಲ್ಲಿ ಇರಲಿ-ಮಾಡಬೇಕಿರುವ ಕೆಲಸಗಳನ್ನು ಪೂರ್ವಭಾವಿಯಾಗಿ ಯೋಜಿಸಿ. ಯಾವ ಕೆಲಸ ಯಾವಾಗ ಮುಗಿಯಬೇಕು ಎಂಬುದು ಸ್ಪಷ್ಟವಾಗಿದ್ದರೆ ಒತ್ತಡ ಕಡಿಮೆಯಾಗುತ್ತದೆ ಮತ್ತು ಕೆಲಸಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ.