ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲೆನ್ಸ್‌ಕಾರ್ಟ್ ಬಳಿಕ ಇಂಡಿಗೋ ಏರ್‌ಲೈನ್ಸ್ ಸಿಬ್ಬಂದಿಗೂ ಬಿಂದಿ, ತಿಲಕ ನಿರ್ಬಂಧ; ಭಾರೀ ಆಕ್ರೋಶ

Viral News: ಲೆನ್ಸ್‌ಕಾರ್ಟ್ ತನ್ನ ಉದ್ಯೋಗಿಗಳಿಗೆ ಬಿಂದಿ, ಕುಂಕುಮ ಧರಿಸುವುದನ್ನು ನಿಷೇಧಿಸಿದ್ದು ಕಂಪನಿಯೂ ಭಾರೀ ಆಕ್ರೋಶಕ್ಕೆ ಗುರಿಯಾಗಿತ್ತು. ಈ ನಿಯಮ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಕೆರಳಿದ ಜನರು ಅಭಿಯಾನ ಆರಂಭಿಸಿದ್ದಾರೆ. ಕೆಲವರು ಲೆನ್ಸ್‌ಕಾರ್ಟ್ ಕನ್ನಡಕ ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದರೆ ಇನ್ನು ಕೆಲವರು ಇನ್ಮುಂದೆ ಇಂತಹ ಕಂಪನಿಯಿಂದ ಕನ್ನಡಕ ಖರೀದಿ ಮಾಡುವುದಿಲ್ಲ ಎಂದು ಕಿಡಿಕಾರಿದ್ದಾರೆ. ಇದೀಗ‌ ಪ್ರತಿಷ್ಠಿತ ವಿಮಾನಯಾನ ಸಂಸ್ಥೆ ಇಂಡಿಗೊ ಏರ್ ಲೈನ್ಸ್ ಕೂಡ ಇದೇ ರೀತಿಯ ನಿಯಮವನ್ನು ಹೊರಡಿಸಿ ವಿವಾದಕ್ಕೆ ಒಳಗಾಗಿದೆ.

ಇಂಡಿಗೋ ಏರ್‌ಲೈನ್ಸ್ ಸಿಬ್ಬಂದಿಗೂ ಬಿಂದಿ,ತಿಲಕ ನಿಷೇಧ: ನೆಟ್ಟಿಗರು ಕಿಡಿ!

ಇಂಡಿಗೋ ಏರ್‌ಲೈನ್ಸ್ ಸಿಬ್ಬಂದಿಗೂ ಬಿಂದಿ-ತಿಲಕ ನಿಷೇಧ -

Profile
Pushpa Kumari Apr 25, 2026 11:08 AM

ನವದೆಹಲಿ,ಏ. 25: ಕನ್ನಡಕ ಮಾರಾಟ ಸಂಸ್ಥೆ ಲೆನ್ಸ್‌ಕಾರ್ಟ್ (Lenskart Controversy) ತನ್ನ ಉದ್ಯೋಗಿಗಳಿಗೆ ಬಿಂದಿ, ಕುಂಕುಮ ಧರಿಸುವುದನ್ನು ನಿಷೇಧಿಸಿದ್ದು ಕಂಪನಿಯೂ ಭಾರೀ ಆಕ್ರೋಶಕ್ಕೆ ಗುರಿಯಾಗಿತ್ತು. ಈ ನಿಯಮ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral News) ಆಗುತ್ತಿದ್ದಂತೆ ಕೆರಳಿದ ಜನರು ಅಭಿಯಾನ ಆರಂಭಿಸಿದ್ದಾರೆ. ಕೆಲವರು ಲೆನ್ಸ್‌ಕಾರ್ಟ್ ಕನ್ನಡಕ ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದರೆ ಇನ್ನು ಕೆಲವರು ಇನ್ಮುಂದೆ ಇಂತಹ ಕಂಪನಿಯಿಂದ ಕನ್ನಡಕ ಖರೀದಿ ಮಾಡುವುದಿಲ್ಲ ಎಂದು ಕಿಡಿಕಾರಿದ್ದಾರೆ. ಇದೀಗ‌ ಪ್ರತಿಷ್ಠಿತ ವಿಮಾನಯಾನ ಸಂಸ್ಥೆ ಇಂಡಿಗೊ ಏರ್ ಲೈನ್ಸ್ ಕೂಡ ಇದೇ ರೀತಿಯ ನಿಯಮವನ್ನು ಹೊರಡಿಸಿ ವಿವಾದಕ್ಕೆ ಒಳಗಾಗಿದೆ.

ಇಂಡಿಗೋದ ಕಂಪನಿಯ ಸ್ಕ್ರೀನ್‌ಶಾಟ್‌ಗಳು ವೈರಲ್ ಆಗುತ್ತಿದ್ದಂತೆ, ಬಳಕೆದಾರರು ವಿಮಾನ ಯಾನ ಸಂಸ್ಥೆಯನ್ನು "ಸಂಪೂರ್ಣ ಬಹಿಷ್ಕರಿಸಲು ನಿರ್ಧಾರಿಸಿದ್ದಾರೆ. ಹಿಂದುಗಳ ಧಾರ್ಮಿಕ ಮನೋಭಾವನೆಯನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಅನೇಕರು ಟೀಕೆಯನ್ನು ವ್ಯಕ್ತ ಪಡಿಸಿದ್ದಾರೆ. ತಿಲಕ್, ಸಿಂಧೂರ್, ಮಂಗಳಸೂತ್ರ, ಕೈಗೆ ಕಟ್ಟುವ ದಾರ ಮುಂತಾದ ವಸ್ತುಗಳನ್ನು ಸ್ಪಷ್ಟವಾಗಿ ನಿಷೇಧಿಸಲಾಗಿದೆ ಎಂದು ತಿಳಿದು ಬಂದಿದೆ.



X ಬಳಕೆದಾರ @AnuDagar ಈ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದು ಈ ವಿವಾದ ತಾರಕಕ್ಕೆ ಹೋಗಿದೆ. ಇಂಡಿಗೋದ ಸಿಬ್ಬಂದಿಗಳು ತಿಲಕ್, ಸಿಂಧೂರ್, ಮಂಗಳಸೂತ್ರ ಮತ್ತು ಕಲವಾ ಮುಂತಾದ ವಸ್ತು ಗಳನ್ನು ಧರಿಸಲು ಸ್ಪಷ್ಟವಾಗಿ ನಿಷೇಧಿಸಿದೆ‌ ಎಂದು ಬರೆದುಕೊಂಡಿದ್ದಾರೆ. ಆದರೆ ಬೇರೆ ಧಾರ್ಮಿಕ ಗುರುತು ಗಳಿಗೆ ಹಿಜಾಬ್ ಹಾಗೂ ಪೇಟ ಧರಿಸಲು ರಿಯಾಯಿತಿ ನೀಡಿ, ಹಿಂದೂ ಸಂಪ್ರದಾಯದ ವಸ್ತುಗಳನ್ನು ನಿಷೇಧಿಸಿರುವುದು ತಪ್ಪು ಎಂದು ಅನೇಕರು ಕಿಡಿಕಾರಿದ್ದಾರೆ.

Viral Video: ಸಂಸತ್ತಿನಲ್ಲಿಯೇ ಸಿಗರೇಟ್‌ ಸೇದಿದ ಟಿಎಂಸಿ ಸಂಸದ; ವಿಡಿಯೋ ವೈರಲ್‌

ಖಾಸಗಿ ಕಂಪನಿಗಳು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರದಂತೆ ಸರ್ಕಾರವು ನಿರ್ದಿಷ್ಟ ಮಾರ್ಗಸೂಚಿ ನಿಯಮವನ್ನು ಜಾರಿಗೆ ತರಬೇಕು ಎಂದು ಅನೇಕರು ವಿನಂತಿಸಿದ್ದಾರೆ. ಇತ್ತೀಚೆಗೆ ಲೆನ್ಸ್ ಕಾರ್ಡ್ ವಿವಾದಕ್ಕೆ ಒಳಗಾಗುತ್ತಿದ್ದಂತೆ ಸಿಇಒ ಪಿಯೂಷ್ ಬನ್ಸಾಲ್ ಇದು ಹಳೆಯ ಮಾರ್ಗಸೂಚಿ ಎಂದು ತಿಳಿಸಿ ಕ್ಷಮೆಯಾಚಿಸಿದರು. ಆದರೆ ಈ ವಿವಾದದ ಬಗ್ಗೆ ಇಂಡಿಗೋ ಸಂಸ್ಥೆಯು ಯಾವುದೇ ಹೇಳಿಕೆ ನೀಡಿಲ್ಲ. ಜನರು ಮಾತ್ರ ಈ ಸ್ಕ್ರೀನ್ ಶಾಟ್ ದಾಖಲೆಯ ಬಗ್ಗೆ ಗರಂ ಆಗಿದ್ದಾರೆ.