ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜನ ಕ್ಯೂನಲ್ಲಿ ಕಾಯುತ್ತಿದ್ದರೂ ವಿಡಿಯೊ ಕಾಲ್‌ನಲ್ಲಿ ಬ್ಯುಸಿಯಾದ ಸರ್ಕಾರಿ ನೌಕರ; ವೈರಲ್‌ ಆಯ್ತು ಬೇಜವಾಬ್ದಾರಿ ಅಧಿಕಾರಿಯ ವಿಡಿಯೋ

Viral Video: ಇಲ್ಲೊಬ್ಬ ಸರಕಾರಿ ಅಧಿಕಾರಿ ಜನ ಬಂದು ಕಾಯುತ್ತಿದ್ದರೂ ಬೇಜಾವದ್ದಾರಿತನದಿಂದ ವರ್ತಿಸಿರುವ ಘಟನೆ ಕಂಡು ಬಂದಿದೆ. ಅಧಿಕಾರಿಯೂ ಜನರ ಜೊತೆ ಸ್ಪಂದಿಸುವ ಬದಲು ವಿಡಿಯೊ ಕಾಲ್ ನಲ್ಲಿ ಬ್ಯುಸಿ ಯಾಗಿದ್ದಾನೆ. ಸದ್ಯ ಈ ವಿಡಿಯೊ ವೈರಲ್ ಆಗಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರ್ಕಾರಿ ಅಧಿಕಾರಿ ಫೋನ್ ನಲ್ಲಿ ಬ್ಯುಸಿ

ನವದೆಹಲಿ,ಮಾ.19: ಯಾವುದೇ ಸರ್ಕಾರಿ ದಾಖಲೆಗಳನ್ನು ಸಿದ್ದಪಡಿಸಬೇಕು ಎನ್ನುವಾಗ ಜನರು ಕ್ಯೂ ನಲ್ಲಿ ನಿಂತು ಅಧಿಕಾರಿಗಳನ್ನು ಕಾಯುತ್ತಾರೆ. ಆದರೆ ಇಲ್ಲೊಬ್ಬ ಸರಕಾರಿ ಅಧಿಕಾರಿ ಜನ ಬಂದು ಕಾಯುತ್ತಿದ್ದರೂ ಬೇಜಾವದ್ದಾರಿತನದಿಂದ ವರ್ತಿಸಿರುವ ಘಟನೆ ಕಂಡು ಬಂದಿದೆ. ಅಧಿ ಕಾರಿಯೂ ಜನರ ಜೊತೆ ಸ್ಪಂದಿಸುವ ಬದಲು ವಿಡಿಯೊ ಕಾಲ್ ನಲ್ಲಿ ಬ್ಯುಸಿಯಾಗಿದ್ದಾನೆ. ಸದ್ಯ ಈ ವಿಡಿಯೊ ವೈರಲ್ (Viral Video) ಆಗಿದ್ದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾರ್ವಜನಿಕರು ತಮ್ಮ ಕೆಲಸಕ್ಕಾಗಿ ಅಧಿಕಾರಿಯನ್ನು ಭೇಟಿಯಾಗಲು ಕಾಯುತ್ತಿದ್ದರು. ಆದರೆ ಆ ವ್ಯಕ್ತಿ ಜನರಿಗೆ ಪ್ರತಿಕ್ರಿಯೆ ನೀಡದೆ ವಿಡಿಯೊ ಕಾಲ್ ನಲ್ಲಿ ಕಾಲ ಹರಣ ಮಾಡುತ್ತಿದ್ದಾನೆ.

ವಿಡಿಯೋ ನೋಡಿ:



ಕಚೇರಿ ಸ್ಥಳದಂತೆ ಕಾಣುವ ಒಳಗೆ ಕುರ್ಚಿಯ ಮೇಲೆ ಕುಳಿತಿರುವ ವ್ಯಕ್ತಿಯೊಂದಿಗೆ ಕ್ಲಿಪ್ ಕಾಣಿಸಿ ಕೊಳ್ಳುತ್ತದೆ. ಅವನು ತನ್ನ ಫೋನ್ ಕೈಯಲ್ಲಿ ಹಿಡಿದುಕೊಂಡು, ನಗುತ್ತಾ ವೀಡಿಯೊ ಕರೆಯಲ್ಲಿದ್ದಾನೆ. ಅವನ‌ ಎದುರಿಗೆ ಸಾಕಷ್ಟು ಜನ ನಿಂತಿದ್ದರೂ ಅವರಿಗೆ ಯಾವುದೇ ರೀತಿ ಸ್ಪಂದಿಸದೇ ವಿಡಿಯೊಕಾಲ್ ನಲ್ಲಿಯೇ ಬ್ಯುಸಿ ಯಾಗಿದ್ದಾನೆ‌. ಸಾರ್ವಜನಿಕ ಸರತಿಯ ಸಾಲು ಇದ್ದರೂ, ಆ ವ್ಯಕ್ತಿ ತನ್ನ ಫೋನ್‌ ನಲ್ಲಿ ಮಾತನಾಡುತ್ತಾ ನಗುತ್ತಲೇ ಇರುತ್ತಾನೆ.

Viral Video: 282 ಅಡಿ ಎತ್ತರದ ಟವರ್ ಮೇಲೆ ಅಪಾಯಕಾರಿ ಸ್ಟಂಟ್; ಯುವಕ ಪೊಲೀಸ್ ವಶಕ್ಕೆ

ಮಾರ್ಚ್ 18 ರಂದು ಹಂಚಿಕೊಳ್ಳಲಾದ ವೀಡಿಯೊ 64,000 ಕ್ಕೂ ಹೆಚ್ಚು ವೀಕ್ಷಣೆ ಮತ್ತು ಅನೇಕ ಪ್ರತಿಕ್ರಿಯೆಗಳನ್ನು ಪಡೆದಿವೆ. ಅನೇಕರು ಈ ವ್ಯಕ್ತಿಯ ವರ್ತನೆ ಕಂಡು ಕಿಡಿಕಾರಿದ್ದಾರೆ. ಈತ ಸರಕಾರಿ ಕೆಲಸಕ್ಕೆ ಯೋಗ್ಯನಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಬಳಕೆದಾರರೊಬ್ಬರು ಇಂತಹ ವರ್ತನೆ ಎಷ್ಟು ಸರಿ. ಸಾರ್ವಜನಿಕರು ಕಾಯುತ್ತಿದ್ದರೂ ಅವರ ಜೊತೆ ಮಾತನಾಡಬೇಕು ಎನ್ನುವ ಪರಿಜ್ಞಾನ ಇಲ್ಲ. ಕೆಲಸದಿಂದಲೇ ವಜಾ ಗೊಳಿಸಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಕೆಲಸದ ಸಮಯದಲ್ಲಿ ವೈಯಕ್ತಿಕವಾಗಿ ಮೊಬೈಲ್ ಬಳಸುವ ಅಧಿಕಾರಿಗಳ ವಿರುದ್ಧ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಬರೆದಿದ್ದಾರೆ.