ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೆಂಗಳೂರಿನಲ್ಲಿ ಕೇವಲ 3 ಕಿ.ಮೀ ಕ್ರಮಿಸಲು 90 ನಿಮಿಷ: ಕಾರು ರಸ್ತೆಯಲ್ಲೇ ಬಿಟ್ಟು ನಡೆದು ಹೋದ ಉದ್ಯಮಿ!

Viral News: ದಿನ ನಿತ್ಯ ಪ್ರಯಾಣ ಮಾಡೋರು ಗಂಟೆ- ಘಟ್ಟಲ್ಲೆ ಕಾದು ಸಮಯ ವ್ಯರ್ಥ ಮಾಡುವಂತೆ ಆಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಉದ್ಯಮಿಯೊಬ್ಬರು ಬೇಸೆತ್ತು ತನ್ನ ಕಾರನ್ನು ರಸ್ತೆಯಲ್ಲಿಯೇ ಬಿಟ್ಟು ಮನೆಗೆ ನಡೆದುಕೊಂಡು ಹೋದ ಘಟನೆಯೊಂದು ನಡೆದಿದೆ. ವರ್ತೂರಿನಲ್ಲಿ ದಿನನಿತ್ಯದ ಪ್ರಯಾಣವು ಕೇವಲ 3 ಕಿ.ಮೀ ಕ್ರಮಿಸಲು 90 ನಿಮಿಷವರೆಗೆ ಕಾಯಬೇಕಾಯಿತು. ಇದು ದೈನಂದಿನ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಬೆಂಗಳೂರಿನ ಉದ್ಯಮಿ ಹಂಚಿಕೊಂಡಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಗೆ ಬೇಸತ್ತು ನಡೆದುಕೊಂಡು ಹೋದ ಉದ್ಯಮಿ

ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಗೆ ಬೇಸೆತ್ತು ನಡೆದುಕೊಂಡು ಹೋದ ಉದ್ಯಮಿ -

Profile
Pushpa Kumari Aug 16, 2026 5:05 PM

ಬೆಂಗಳೂರು,ಆ. 16: ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಸಮಸ್ಯೆ ಅನ್ನೋದು ಮಿತಿಮೀರಿದೆ. ದಿನ ನಿತ್ಯ ಪ್ರಯಾಣ ಮಾಡೋರು ಗಂಟೆ- ಘಟ್ಟಲೆ ಕಾದು ಸಮಯ ವ್ಯರ್ಥ ಮಾಡುವಂತೆ ಆಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಉದ್ಯಮಿಯೊಬ್ಬರು ಬೇಸತ್ತು ತನ್ನ ಕಾರನ್ನು ರಸ್ತೆಯಲ್ಲಿಯೇ ಬಿಟ್ಟು ಮನೆಗೆ ನಡೆದುಕೊಂಡು ಹೋದ ಘಟನೆಯೊಂದು (Viral News) ನಡೆದಿದೆ. ವರ್ತೂರಿನಲ್ಲಿ ದಿನನಿತ್ಯದ ಪ್ರಯಾಣವು ಕೇವಲ 3 ಕಿ.ಮೀ ಕ್ರಮಿಸಲು 90 ನಿಮಿಷವರೆಗೆ ಕಾಯಬೇಕಾಯಿತು. ಇದು ದೈನಂದಿನ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಬೆಂಗಳೂರಿನ ಉದ್ಯಮಿ ಹಂಚಿಕೊಂಡಿದ್ದಾರೆ.

ಹೆಚ್ಚಿನ ಸಮಯದವರೆಗೆ ಕಾದ ಉದ್ಯಮಿಯೊಬ್ಬರು ಕೊನೆಗೆ ಬೇಸತ್ತು ತಮ್ಮ ಕಾರನ್ನು ರಸ್ತೆಯಲ್ಲೇ ಬಿಟ್ಟು ಮನೆಗೆ ನಡೆದು ಕೊಂಡಿದ್ದಾರೆ. ಕೇವಲ 10 ರಿಂದ 20 ನಿಮಿಷಗಳಲ್ಲಿ ಪೂರ್ಣಗೊಳ್ಳಬೇಕಿದ್ದ ಈ ಪ್ರಯಾಣ ಟ್ರಾಫಿಕ್‌ನಿಂದಾಗಿ ಬರೋಬ್ಬರಿ 90 ನಿಮಿಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ ಎಂದು ಬೇಸರ ಹೊರಹಾಕಿದ್ದಾರೆ.

ವಿಡಿಯೋ ನೋಡಿ:

ಸಂಸ್ಥಾಪಕರಾಗಿ, ನಾವು ಬಹಳಷ್ಟು ವಿಚಾರಗಳನ್ನು ನಿರ್ವಹಿಸುತ್ತೇವೆ, ಆದರೆ ಇದು ಪರಿಹಾರಿಸ ಲಾಗದ ವಿಷಯ ಅಂದರು. ನಾವು ವರ್ತೂರಿನ ಅಂಗಡಿಗೆ ತೆರಳಿ ಕೆಲವು ವಸ್ತು ಗಳನ್ನು ಇಟ್ಟು ಹಿಂತಿರುಗುವುದು 10-20 ನಿಮಿಷಗಳ ಕೆಲಸ. ಆದರೆ ಬದಲಾಗಿ, ನಾವು 3 ಕಿಲೋಮೀಟರ್ ದೂರವನ್ನು ದಾಟಲು 1.5 ಗಂಟೆಗಳ ಕಾಲ ಕಳೆದೆವು. ನಂಬಲಾಗದ ವಿಚಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ

Viral Video: ರಜೆ ದಿನ ಲಾಗಿನ್ ಆಗಲು ಹೇಳಿದ ಮ್ಯಾನೇಜರ್‌ಗೆ ಖಡಕ್ ಆಗಿ ರೆಸ್ಪಾನ್ಸ್ ಮಾಡಿದ ಜೆನ್‌ ಝೀ ಉದ್ಯೋಗಿ

ಕೇವಲ 3 ಕಿಲೋಮೀಟರ್ ತಲುಪಲು 1.5 ಗಂಟೆ ಬೇಕಾದ ಹಿನ್ನೆಲೆಯಲ್ಲಿ, ಕೊನೆಗೆ ಕಾರನ್ನು ಅಂಗಡಿ ಬದಿಯ ರಸ್ತೆಯಲ್ಲೇ ನಿಲ್ಲಿಸಿ ನಡೆದುಕೊಂಡು ಮನೆಗೆ ಮರಳಿದ್ದಾರೆ. "ವ್ಯವಹಾರಗಳು ಇಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು? ವಿತರಣಾ ಪಾಲುದಾರರು, ಚಿಲ್ಲರೆ ವ್ಯಾಪಾರಿಗಳು, ಉದ್ಯೋಗಿಗಳು, ಗ್ರಾಹಕರು ಪ್ರತಿದಿನ ಇದನ್ನು ಹೇಗೆ ನಿಭಾಯಿಸಬಹುದು?" ಎಂದು ಅವರು ಪ್ರಶ್ನೆ ಮಾಡಿದ್ದಾರೆ.

"ತಾನು ಕಳೆದ 10 ವರ್ಷಗಳಿಂದ ಇಲ್ಲಿದ್ದೇನೆ. ನನಗೆ ಬೆಂಗಳೂರು ತುಂಬಾ ಇಷ್ಟ, ಈ ನಗರವನ್ನು ಪ್ರೀತಿಸುವುದರಿಂದಲೇ ಇಲ್ಲೇ ಉದ್ಯಮ ಕಟ್ಟುತ್ತಿದ್ದೇನೆ" ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಟ್ರಾಫಿಕ್ ಮಾತ್ರ ಹೆಚ್ಚು ತಲೆತಿನ್ನುವ ವಿಚಾರ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ. ಈ ವಿಡಿಯೋ ಸೋಷಿ ಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, "ಇದು ಕೇವಲ ಸಮಯ ವ್ಯರ್ಥವಲ್ಲ, ನಗರದ ವ್ಯವಹಾರವನ್ನೇ ಕುಗ್ಗಿಸುತ್ತದೆ ಎಂದು ಆಕ್ರೋಶ ಹೊರಹಾಕಿದ್ದಾರೆ.