ಡೆಲಿವರಿ ಬಾಯ್‌ಗೆ ವಿಶೇಷ ಉಡುಗೊರೆ ನೀಡಿದ ಇಟಲಿಯನ್ ಮಹಿಳೆ; ಹೃದಯವಂತಿಕೆಗೆ ನೆಟ್ಟಿಗರು ಫಿದಾ!
Viral Video: ಇತ್ತೀಚೆಗಷ್ಟೇ ದುಬೈ ಗೆ ಪ್ರವಾಸಕ್ಕೆಂದು ಬಂದಿದ್ದ ಇಟಾಲಿಯನ್ ಮಹಿಳೆಯೊಬ್ಬರು ಕ್ರಿಸ್ಮಸ್ ಹಿನ್ನೆಲೆಯಲ್ಲಿ ಅಗತ್ಯ ಆಹಾರ ತಿನಿಸುಗಳನ್ನು ಆನ್ಲೈನ್ ನಲ್ಲಿ ಆರ್ಡರ್ ಮಾಡಿದ್ದು ಡೆಲಿವರಿ ಬಾಯ್ ಒಬ್ಬರು ತಂದುಕೊಟ್ಟಿದ್ದಾರೆ. ಬಳಿಕ ಆ ಮಹಿಳೆಯು ಡೆಲಿವರಿ ಬಾಯ್ ಜೊತೆಗೆ ಅತ್ಯಂತ ಆತ್ಮಿಯವಾಗಿ ಪ್ರೀತಿಯಿಂದ ಮಾತನಾಡಿಸಿದ್ದಾರೆ. ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ತಿಳಿಸಿ ಬಳಿಕ ಬೃಹತ್ ಮೊತ್ತದ ಟಿಪ್ಸ್ ಅನ್ನು ಕೂಡ ನೀಡಿದ್ದು ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.
ಡೆಲಿವರಿ ಬಾಯ್ ಗೆ ದುಬಾರಿ ಮೊತ್ತ ಟಿಪ್ಸ್ ನೀಡಿದ ಮಹಿಳೆ -
ದುಬೈ, ಡಿ. 28: ಇತ್ತೀಚಿನ ದಿನದಲ್ಲಿ ಬಹುತೇಕ ಜನರು ಸಣ್ಣ ಪುಟ್ಟ ವಸ್ತುಗಳನ್ನು ಖರೀದಿ ಮಾಡಲು ಕೂಡ ಆನ್ಲೈನ್ ಅನ್ನೇ ಅವಲಂಬಿಸಿದ್ದಾರೆ. ವಿವಿಧ ರುಚಿಕರ ತಿನಿಸುಗಳು, ದಿನನಿತ್ಯದ ಅಗತ್ಯ ಸಾಮಾಗ್ರಿಗಳಿಗೆ, ಕಾಸ್ಮೆಟಿಕ್ಸ್ , ಮೆಡಿಸಿನ್ ಹೀಗೆ ಎಲ್ಲದಕ್ಕೂ ಮನೆ ಬಾಗಿಲಿಗೆ ಸೇವೆ ಸಿಗಲಿದೆ. ಇಂದು ಜಾಗತಿಕ ಮಟ್ಟದಲ್ಲಿ ಈ ಡೋರ್ ಡೆಲಿವರಿ ಕಾನ್ಸೆಪ್ಟ್ ಅಭಿವೃದ್ಧಿಯಾಗಿದ್ದು ಇದರಿಂದ ಅನೇಕರಿಗೆ ಉದ್ಯೋಗವಕಾಶ ಸಿಕ್ಕಂತಾಗಿದೆ. ಗ್ರಾಹಕರ ಅಗತ್ಯ ಸಾಮಾಗ್ರಿ ತಲುಪಿಸುದರಿಂದ ಆ್ಯಪ್ ಕಂಪೆನಿಯಿಂದ ಡೆಲಿವರಿ ಬಾಯ್ಸ್ ಗೆ ಹಣ ಸಿಗುವ ಜೊತೆಗೆ ಗ್ರಾಹಕರು ಕೂಡ ಟಿಪ್ಸ್ ನೀಡುವ ಕಾರಣ ಹೆಚ್ಚಿನ ಡೆಲಿವರಿ ಬಾಯ್ಸ್ ಗೆ ಆದಾಯ ಸಿಕ್ಕಂತಾಗಿದೆ. ಅಂತೆಯೇ ಇತ್ತೀಚೆಗಷ್ಟೇ ದುಬೈ ಗೆ ಪ್ರವಾಸಕ್ಕೆಂದು ಬಂದಿದ್ದ ಇಟಾಲಿಯನ್ ಮಹಿಳೆಯೊಬ್ಬರು ಕ್ರಿಸ್ಮಸ್ ಹಿನ್ನೆಲೆಯಲ್ಲಿ ಅಗತ್ಯ ಆಹಾರ ತಿನಿಸುಗಳನ್ನು ಆನ್ಲೈನ್ ನಲ್ಲಿ ಆರ್ಡರ್ ಮಾಡಿದ್ದು ಡೆಲಿವರಿ ಬಾಯ್ ಒಬ್ಬರು ತಂದು ಕೊಟ್ಟಿದ್ದಾರೆ. ಬಳಿಕ ಆ ಮಹಿಳೆಯು ಡೆಲಿವರಿ ಬಾಯ್ ಜೊತೆಗೆ ಅತ್ಯಂತ ಆತ್ಮಿಯವಾಗಿ ಪ್ರೀತಿಯಿಂದ ಮಾತನಾಡಿಸಿದ್ದಾರೆ. ಕ್ರಿಸ್ಮಸ್ ಹಬ್ಬದ ಶುಭಾಶಯಗಳನ್ನು ತಿಳಿಸಿ ಬಳಿಕ ಬೃಹತ್ ಮೊತ್ತದ ಟಿಪ್ಸ್ ಅನ್ನು ಕೂಡ ನೀಡಿದ್ದು ಸದ್ಯ ಈ ಕುರಿತಾದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.
ಸಾಮಾನ್ಯವಾಗಿ ಡೆಲಿವರಿ ಬಾಯ್ಸ್ ವಿತರಣೆಯ ಎಜೆಂಟ್ ಅವರಿಗೆ ಇಂತಿಷ್ಟು ಸಮಯದೊಳಗೆ ಗ್ರಾಹಕರ ಅಗತ್ಯ ವಸ್ತು ಅಥವಾ ಆಹಾರ ಸಾಮಾಗ್ರಿಗಳನ್ನು ತಲುಪಿಸಬೇಕು ಎಂಬ ಕಡ್ಡಾಯ ನಿಯಮ ಇರಲಿದೆ. ಈ ಸಮಯ ಮೀರಿದರೆ ಆರ್ಡರ್ ಕ್ಯಾನ್ಸಲ್ ಆಗಿ ಸಮಸ್ಯೆ ಆಗುವುದು ಇದೆ. ಹೀಗಾಗಿ ಬಹುತೇಕ ಡೋರ್ ಡೆಲಿವರಿ ಕೆಲಸ ಮಾಡುವವರು ಸಮಯ ಪಾಲನೆಗೆ ಅಧಿಕ ಪ್ರಾಮುಖ್ಯತೆ ನೀಡುತ್ತಾರೆ. ಅಂತೆಯೇ ದುಬೈ ನಲ್ಲಿ ಪ್ರವಾಸಕ್ಕೆಂದು ಬಂದಿದ್ದ ಇಟಲಿಯ ಮಹಿಳೆ ಕ್ರಿಸ್ಮಸ್ ವಿಶೇಷ ಖಾದ್ಯಗಳನ್ನು ಆರ್ಡರ್ ಮಾಡಿದ್ದಾರೆ. ಅದು ತಮ್ಮ ಮನೆ ಬಾಗಿಲಿಗೆ ಬರುತ್ತಿದ್ದಂತೆ ಅವರು ಪಟ್ಟಿದ್ದ ದೃಶ್ಯಗಳು ವೈರಲ್ ವಿಡಿಯೋದಲ್ಲಿ ಕಾಣಬಹುದು.
ವಿಡಿಯೋ ನೋಡಿ:
ವೈರಲ್ ಆದ ವಿಡಿಯೋದಲ್ಲಿ ಆಕೆಯು ಡೋರ್ ಬಾಗಿಲು ತೆಗೆಯುತ್ತಲೇ ವಿತರಣಾ ಏಜೆಂಟ್ (ಡೋರ್ ಡೆಲಿವರಿ ಬಾಯ್) ಬಳಿ ಪ್ರೀತಿಯಿಂದ ಸ್ವಾಗತಿಸುತ್ತಾ, "ಹಲೋ, ಹೇಗಿದ್ದೀರಿ" ಎಂದು ಕೇಳಿದ್ದಾರೆ. ಆತನು ಫೈನ್, ನೀವು ಹೇಗಿದ್ದೀರಿ ಎಂದು ಕೇಳುತ್ತಾನೆ... ಅದಕ್ಕೆ ಆಕೆ ತಾನು ಕೂಡ ಸಂತೋಷದಿಂದ ಇದ್ದೇನೆ, ಸಂಭ್ರಮ ದಿಂದ ಕ್ರಿಸ್ಮಸ್ ಹಬ್ಬವನ್ನು ಆಚರಿಸಿಕೊಳ್ಳುತ್ತಿರುವುದಾಗಿ ಹೇಳುತ್ತಾಳೆ. ಬಳಿಕ ಆಕೆ ನೀವು ಕ್ರಿಸ್ಮಸ್ ಆಚರಣೆ ಮಾಡುತ್ತಿಲ್ಲವೇ ಎಂದು ಕೇಳಿದ್ದಾಗ ಆತ ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದನ್ನು ವಿಡಿಯೋದಲ್ಲಿ ಕಾಣಬಹುದು.
Viral Video: ಮಧ್ಯಾಹ್ನದ ಬಿಸಿಯೂಟದಲ್ಲಿ ಸತ್ತ ಕಪ್ಪೆ ಪತ್ತೆ; ಶಾಲೆ ವಿರುದ್ಧ ತನಿಖೆಗೆ ಆದೇಶ
ಅವರು ತನ್ನಂತೆ ಖುಷಿಯಲ್ಲಿಲ್ಲ ಎಂದು ಮನಗಂಡ ಇಟಲಿ ಮೂಲದ ಆ ಮಹಿಳೆಯು ಆತನಿಗೆ ಟಿಪ್ ನೀಡಲು ನಿರ್ಧರಿಸುತ್ತಾಳೆ. ಆತನನ್ನು ಅಲ್ಲೇ ಡೋರ್ ಬಳಿ ನಿಲ್ಲುವಂತೆ ಹೇಳಿ ತನ್ನ ಪರ್ಸ್ ತೆಗೆದುಕೊಂಡು ಬಂದು ಅದರಲ್ಲಿದ್ದ 500ಎಡಿ ಯನ್ನು ನೀಡುತ್ತಾಳೆ ಅಂದರೆ ಭಾರತದಲ್ಲಿ ಈ ಮೊತ್ತವು ಬರೋಬ್ಬರಿ 12,220 ರೂ. ಮೌಲ್ಯವಾಗಿದ್ದು ಅದನ್ನು ಆಕೆ ಟಿಪ್ ಆಗಿ ಆತನಿಗೆ ನೀಡುತ್ತಾಳೆ. ಅನಿರೀಕ್ಷಿತವಾಗಿ ಹಣ ಸಿಕ್ಕಿದ್ದಕ್ಕೆ ವಿತರಣಾ ಏಜೆಂಟ್ ಕೂಡ ಆಶ್ಚರ್ಯಚಕಿತ ನಾಗುತ್ತಾನೆ. ಅವನು ಕೂಡ ಹಣ ನೀಡಿದ್ದಕ್ಕೆ "ತುಂಬಾ ಧನ್ಯವಾದಗಳು" ಎಂದು ಪ್ರತಿಕ್ರಿಯೆ ನೀಡಿದ್ದನ್ನು ವಿಡಿಯೋದಲ್ಲಿ ಕಾಣಬಹುದು.
ವಿತರಣಾ ಏಜೆಂಟ್ ಹೊರಡುವ ಹೊತ್ತಿನಲ್ಲಿ ಇಟಲಿ ಮಹಿಳೆ ಆತನನ್ನು ಕರೆದು "ನಿಮಗೆ ಸ್ವಲ್ಪ ಚಾಕೊಲೇಟ್ ಬೇಕಾ?" ಎಂದು ಕೇಳುತ್ತಾಳೆ ಮತ್ತು ನಂತರ ಅವನಿಗೆ ಚಾಕೊಲೇಟ್‌ಗಳ ಜೊತೆಗೆ ನೀರಿನ ಬಾಟಲಿಯನ್ನು ನೀಡುವ ದೃಶ್ಯಗಳು ನೆಟ್ಟಿಗರ ಗಮನ ಸೆಳೆದಿದೆ. ಮಹಿಳೆಯ ಸ್ನೇಹ ಪೂರ್ವಕ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಾವು ಇತರರನ್ನು ಪ್ರೀತಿ ವಿಶ್ವಾಸದಿಂದ ನೋಡಿ ಕೊಂಡು ಅವರ ಅಗತ್ಯಕ್ಕೆ ಸ್ವಲ್ವವಾದರೂ ಸಹಾಯ ಮಾಡುವ ಗುಣ ಬೆಳೆಸಿಕೊಳ್ಳಬೇಕು. ನಮ್ಮಲ್ಲಾಗುವ ಸಣ್ಣ ಬದಲಾವಣೆ ದೊಡ್ಡ ವ್ಯತ್ಯಾಸವನ್ನುಂಟುಮಾಡುತ್ತವೆ ಎಂಬುದನ್ನು ಈ ವಿಡಿಯೋ ತೋರಿಸುತ್ತದೆ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ..