ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ರೀಲ್ಸ್‌ಗಾಗಿ ಪೊಲೀಸ್‌ ಜೀಪ್‌ ಉಪಯೋಗಿಸಿ ಕೆಲಸವನ್ನೇ ಕಳೆದುಕೊಂಡ ಅಧಿಕಾರಿ; ವಿವಾದಕ್ಕೆ ಕಾರಣವಾದ ವಿಡಿಯೊ ಇಲ್ಲಿದೆ

ರೀಲ್ಸ್ ಮಾಡಲು ಹೋಗಿ ಪೊಲೀಸ್ ಅಧಿಕಾರಿಯೊಬ್ಬ ಕೆಲಸ ಕಳೆದುಕೊಂಡ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದಿದೆ. ಪೊಲೀಸ್ ಅಧಿಕಾರಿಯು ರೀಲ್ಸ್ ಮಾಡಲು ಪೊಲೀಸ್ ವಾಹನವನ್ನು ಬಳಸಿದ್ದಾನೆ. ಸುರಕ್ಷತೆ ಮತ್ತು ವೃತ್ತಿಪರ ನಡವಳಿಕೆ ಕುರಿತು ಇದು ಕಳವಳ ಉಂಟು ಸಂಗಾತಿಯಾಗಿದ್ದರಿಂದ ಆತನನ್ನು ಅಮಾನತು ಮಾಡಲಾಗಿದೆ ಎಂದು ಸಂಚಾರ ಅಧಿಕಾರಿಗಳು ತಿಳಿಸಿದ್ದಾರೆ.

ರೀಲ್ಸ್ ಮಾಡಿದ ಪೊಲೀಸ್ ಅಧಿಕಾರಿ ಅಮಾನತು

(ಸಂಗ್ರಹ ಚಿತ್ರ) -

ಪೂಂಚ್: ರೀಲ್ಸ್ (reels) ಮಾಡಲು ಹೋಗಿ ಪೊಲೀಸ್ ಅಧಿಕಾರಿಯೊಬ್ಬ (police officer) ಕೆಲಸ ಕಳೆದುಕೊಂಡ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ (jammu and kashmir) ನಡೆದಿದೆ. ರೀಲ್ಸ್ ಗಾಗಿ ಸಂಚಾರ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ವೊಬ್ಬರು ತಮ್ಮ ಪೊಲೀಸ್ ವಾಹನವನ್ನು (police vehical) ಬಳಸಿದ್ದಾನೆ. ಈ ಕಾರಣಕ್ಕಾಗಿ ಆತನನ್ನು ಅಮಾನತು ಮಾಡಲಾಗಿದೆ. ಇದು ಸುರಕ್ಷತೆ ಮತ್ತು ವೃತ್ತಿಪರ ನಡವಳಿಕೆಯ ಬಗ್ಗೆ ಗಂಭೀರ ಕಳವಳ ಉಂಟು ಮಾಡಿದ್ದು ವ್ಯಾಪಕ ಟೀಕೆಗೆ ಗುರಿಯಾಗಿದೆ. ಹೀಗಾಗಿ ಆತನನ್ನು ಅಮಾನತುಗೊಳಿಸಿರುವುದಾಗಿ ಸಂಚಾರ ಅಧಿಕಾರಿಗಳು ತಿಳಿಸಿದ್ದಾರೆ.

ಪೂಂಚ್ ಜಿಲ್ಲೆಯ ಹಿಮದಿಂದ ಆವೃತವಾದ ಮೊಘಲ್ ರಸ್ತೆಯಲ್ಲಿ ರೀಲ್ಸ್ ಮಾಡಲು ಸಂಚಾರ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ತನ್ನ ಅಧಿಕೃತ ವಾಹನವನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ಈ ಆರೋಪ ಕೇಳಿ ಬಂದ ತಕ್ಷಣ ಇನ್ಸ್‌ಪೆಕ್ಟರ್ ನನ್ನು ವಿಚಾರಣೆಗಾಗಿ ಅಮಾನತುಗೊಳಿಸಲಾಗಿದೆ.



ಅಪೋಲೋ ಫಾರ್ಮಸಿಯಿಂದ ಕರ್ನಾಟಕದಲ್ಲಿ 1,000ನೇ ಮಳಿಗೆ ಪ್ರಾರಂಭ, ಬೆಂಗಳೂರಿನಲ್ಲಿ ಈ ಮೈಲಿಗಲ್ಲಿನ ಮಳಿಗೆಗೆ ಚಾಲನೆ

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೊದಲ್ಲಿ ಮೊಘಲ್ ರಸ್ತೆಯಲ್ಲಿ ಸೆಕ್ಟರ್ ಸಂಚಾರ ಅಧಿಕಾರಿಯಾಗಿ ನೇಮಕಗೊಂಡಿರುವ ಸಬ್-ಇನ್ಸ್‌ಪೆಕ್ಟರ್ ಗುಲ್ ಶೆರಾಜ್ ಎಂಬವರು ಹಿಮದಿಂದ ಆವೃತವಾದ ಪೀರ್ ಕಿ ಗಲಿ ಬಳಿ ಚಲಿಸುವ ವಾಹನದ ಬಾಗಿಲು ತೆರೆದು ಕೈಬಿಸಿಕೊಂಡು ಹೋಗುತ್ತಿರುವುದು ಕಂಡು ಬಂದಿದೆ. ಇದು ಅಪಾಯಕಾರಿಯಾಗಿದ್ದು, ರಸ್ತೆ ಪರಿಸ್ಥಿತಿಯಲ್ಲಿ ಸುರಕ್ಷತಾ ಕಳವಳಗಳನ್ನು ಹುಟ್ಟುಹಾಕಿದೆ.ಇದು ತೀವ್ರ ಟೀಕೆಗೆ ಗುರಿಯಾಗಿದ್ದು, ಸುರಕ್ಷತೆ ಮತ್ತು ವೃತ್ತಿಪರ ನಡವಳಿಕೆ ಬಗ್ಗೆ ಗಂಭೀರ ಕಳವಳಗಳನ್ನು ಉಂಟು ಮಾಡಿದೆ.

ಶೆರಾಜ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಗ್ರಾಮೀಣ ಜಮ್ಮುವಿನ ಸಂಚಾರ ಪೊಲೀಸ್ ಮಾರ್ಗಗಳಿಗೆ ವರದಿ ಮಾಡಲು ನಿರ್ದೇಶಿಸಲಾಗಿದ್ದು, ಇವರು ಮೊದಲಿದ್ದ ಮುಘಲ್ ರಸ್ತೆಗೆ ಹೊಸ ಸೆಕ್ಟರ್ ಅಧಿಕಾರಿಯಾಗಿ ಎಎಸ್ಐ ಅನಿಲ್ ಕುಮಾರ್ ಅವರನ್ನು ನಿಯೋಜಿಸಲಾಗಿದೆ.

ಘಟನೆಯ ಕುರಿತು ಇಲಾಖೆ ತನಿಖೆ ನಡೆಸುವಂತೆ ಗ್ರಾಮೀಣ ಜಮ್ಮುವಿನ ಸಂಚಾರ ಎಸ್ಎಸ್ಪಿ ರಜೌರಿ-ಪೂಂಚ್ ಡಿಎಸ್ಪಿಗೆ ಆದೇಶಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಎಸ್ಎಸ್ಪಿ ಫಾರೂಕ್ ಕೈಸರ್, ನಾಗರಿಕರಾಗಲಿ ಅಥವಾ ಸಂಚಾರ ಪೊಲೀಸ್ ಸಿಬ್ಬಂದಿಯಾಗಲಿ ಮೋಟಾರು ವಾಹನ ಕಾಯ್ದೆ ಅಥವಾ ಸಂಚಾರ ಸುರಕ್ಷತಾ ಮಾನದಂಡಗಳ ಯಾವುದೇ ಉಲ್ಲಂಘನೆಯನ್ನು ಸಹಿಸುವುದಿಲ್ಲ ಎಂದು ತಿಳಿಸಿದರು.

ಕಾರವಾರಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಆಗಮನ; ಐಎನ್ಎಸ್ ವಾಗ್ಶೀರ್ ಸಬ್ ಮೆರಿನ್‌ನಲ್ಲಿ ಸಂಚಾರ

ವಾಹನ ಚಲಾಯಿಸುವಾಗ ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ತರುವ ಯಾರಾದರೂ ಕಂಡುಬಂದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.