ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜೈಪುರದ ʼಪಿಂಕ್ ಎಲಿಫೆಂಟ್' ಇನ್ನಿಲ್ಲ: ಬಣ್ಣ ಬಳಿದಿದ್ದರಿಂದ ಒತ್ತಡಕ್ಕೆ ಒಳಗಾಗಿದ್ದೇ ಆನೆಯ ಸಾವಿಗೆ ಕಾರಣ ಎಂದ ನೆಟ್ಟಿಗರು

Viral Video: ಕಲಾವಿದೆಯೊಬ್ಬಳ ಎಡವಟ್ಟಿನಿಂದ ಆನೆಯೊಂದು ಪ್ರಾಣ ಕಳೆದುಕೊಂಡಿದೆ. ಇತ್ತೀಚೆಗೆ ರಷ್ಯಾದ ಕಲಾವಿದೆಯೊಬ್ಬಳು ರಾಜಸ್ಥಾನದಲ್ಲಿ ಆನೆಗೆ ಗುಲಾಬಿ ಬಣ್ಣ ಬಳಿದಿರುವ ದೃಶ್ಯ ವೈರಲ್‌ ಆಗಿತ್ತು. ಚಂಚಲ್ ಹೆಸರಿನ ಈ ಆನೆ ಇದೀಗ ಸಾವನ್ನಪ್ಪಿದ್ದು, ಹಲವರು ಆಕ್ರೋಸ ವ್ಯಕ್ತಪಡಿಸಿದ್ದಾರೆ.

ಜೈಪುರದ ವೈರಲ್ 'ಗುಲಾಬಿ ಆನೆ'

ಜೈಪುರ, ಮಾ. 31: ಇತ್ತೀಚೆಗೆ ಫೋಟೊ ಶೂಟ್‌ನ‌ ಕ್ರೇಜ್ ಹೆಚ್ಚಾಗಿದೆ. ಕೆಲವೊಮ್ಮೆ ಇದು ಅತಿರೇಕಕ್ಕೂ ಹೋಗುತ್ತದೆ. ಇದೀಗ ಕಲಾವಿದೆಯೊಬ್ಬಳು ಮಾಡಿದ ಎಡವಟ್ಟಿನಿಂದ ಆನೆಯೊಂದು ಪ್ರಾಣವನ್ನೇ ಕಳೆದುಕೊಂಡಿದೆ. ಇತ್ತೀಚೆಗೆ ರಷ್ಯಾದ ಕಲಾವಿದೆಯೊಬ್ಬಳು ರಾಜಸ್ಥಾನದ ಜೈಪುರದಲ್ಲಿ ಆನೆಗೆ ಗುಲಾಬಿ ಬಣ್ಣ ಬಳಿದಿರುವ ದೃಶ್ಯ ವೈರಲ್‌ (Viral News) ಆಗಿತ್ತು. ಜೈಪುರದಲ್ಲಿ ಭಾರಿ ವೈರಲ್ ಆಗಿದ್ದ ಗುಲಾಬಿ ಆನೆಯ ಫೋಟೊ ಶೂಟ್ ತೀವ್ರ ಚರ್ಚೆಗೆ ಕಾರಣವಾಗಿದೆ. ಇದರ ಮಧ್ಯೆ ಚಂಚಲ್ ಹೆಸರಿನ ಆ ಆನೆ ಸಾವನ್ನಪ್ಪಿದೆ.

ಪ್ರವಾಸಿ ಛಾಯಾಗ್ರಾಹಕಿ ಜೂಲಿಯಾ ಬುರುಲೆವ ಭಾರತದ ವಾಸ್ತುಶಿಲ್ಪ, ಬಣ್ಣಗಳು ಮತ್ತು ಸಾಂಸ್ಕೃತಿಕ ಗುರುತನ್ನು ಪ್ರತಿ ಬಿಂಬಿಸಲು ನೈಜ ಆನೆಗೆ ಪಿಂಕ್‌ ಬಣ್ಣ ಬಳಿದಿದ್ದಳು. ಬಳಿಕ ಮಾಡೆಲ್ ಅನ್ನು ಆನೆಯ ಮೇಲೆ ಕುಳ್ಳಿರಿಸಿ ಫೋಟೊ ಶೂಟ್ ಮಾಡಿದ್ದಳು. ಇದೀಗ ಫೋಟೋ ಶೂಟ್‌ನಲ್ಲಿ ಪಾಲ್ಗೊಂಡಿದ್ದ ಆನೆ ಚಂಚಲ್ ಸಾವನ್ನಪ್ಪಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸುದ್ದಿಯಾಗುತ್ತಿದೆ.

ವಿಡಿಯೊ ನೋಡಿ:



ಜೈಪುರದ ಹಾಥಿ ಗಾಂವ್- ಇದನ್ನು ಆನೆ ಗ್ರಾಮ ಎಂದೂ ಕರೆಯುತ್ತಾರೆ. ಈ ಪ್ರದೇಶದಲ್ಲಿ ಆನೆಗಳನ್ನು ಸಾಂಪ್ರದಾಯಿಕವಾಗಿ ಸ್ಥಳೀಯ ಮಾವುತರು ಸಾಕುತ್ತಾರೆ. ಅಧಿಕಾರಿಗಳು ಮತ್ತು ಹಾಥಿ ಗಾಂವ್ ಸಮಿತಿಯ ಪ್ರಕಾರ, ಚಂಚಲ್‌ಗೆ ಸುಮಾರು 70 ವರ್ಷ ವಯಸ್ಸಾಗಿತ್ತು. ಇದು ಆನೆಯ ಜೀವಿತಾವಧಿಯ ಅಂತಿಮ ವಯಸ್ಸು ಆಗಿದ್ದು, ವೃದ್ಧಾಪ್ಯದಿಂದ ಮೃತ ಪಟ್ಟಿದೆ ಎಂದು ತಿಳಿಸಿದ್ದಾರೆ. ಅದಾಗ್ಯೂ ಕೆಲವರು ಕಲಾವಿದೆ ಬಣ್ಣ ಬಳಿದಿರುವುದೇ ಅನೆ ಸಾವಿಗೆ ಕಾರಣ ಎಂದಿದ್ದಾರೆ.

ಪಾಕಿಸ್ತಾನಿ ಮದುವೆಯಲ್ಲಿ ಧುರಂಧರ್ ಸಿನಿಮಾದ ಹವಾ; ಟೈಟಲ್‌ ಸಾಂಗ್‌ಗೆ ಭರ್ಜರಿ ಸೆಪ್ಟ್ ಹಾಕಿದ ಯುವಕರು

ನೆಟ್ಟಿಗರು ಹೇಳಿದ್ದೇನು?

ಆನೆಗೆ ಬಳಸಿದ್ದು ನೈಸರ್ಗಿಕವಾದ ಬಣ್ಣ. ಇದರಿಂದ ಯಾವುದೇ ಹಾನಿ ಆಗಿಲ್ಲ. ಮತ್ತು ಕೆಲವೇ ನಿಮಿಷಗಳಲ್ಲಿ ತೊಳೆಯಲಾಯಿತು ಎಂದು ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ಆದರೆ ನೆಟ್ಟಿಗರು ಕಲಾವಿದೆಯನ್ನು ತರಾಟೆಗೆ ತೆಗೆದುಕೊಂಡಿದ್ದು, ಮೂಕ ಪ್ರಾಣಿಯ ಮೇಲೆ ಬಣ್ಣ ಬಳಿದಿರುವುದು ತಪ್ಪು. ಇದರಿಂದಲೇ ಅದು ಒತ್ತಡಕ್ಕೊ ಒಳಗಾಗಿ ಪ್ರಾಣ ಕಳೆದುಕೊಂಡಿರಬಹುದು ಎಂದು ವಾದಿಸಿದ್ದಾರೆ.

ಫೋಟೊ ಶೂಟ್‌ಗೆ ಬಳಿಕ ಆನೆಗೆ ಯಾವುದೇ ಗಾಯ, ಅಲರ್ಜಿ ಅಥವಾ ಆರೋಗ್ಯ ಸಮಸ್ಯೆಎದುರಾಗಿಲ್ಲ ಎಂದು ಸ್ಥಳೀಯ ಪಶು ವೈದ್ಯಕೀಯ ಮೂಲಗಳು ಸೂಚಿಸಿವೆ‌. ಈ ಬಗ್ಗೆ ಅನೇಕರು ಕಿಡಿಕಾರಿದ್ದು, ಆನೆಯ ಚರ್ಮಗಳು ಹೆಚ್ಚು ಸೂಕ್ಷ್ಮವಾಗಿರುತ್ತವೆ‌. ಹೀಗಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಿಯೇ ಪ್ರಾಣ ಕಳೆದುಕೊಂಡಿದೆ ಎಂದಿದ್ದಾರೆ.