ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಇಂಟರ್ನೆಟ್‌ನಲ್ಲಿ ಭಾರೀ ಸದ್ದು ಮಾಡುತ್ತಿರುವ ಡಾನ್ಸಿಂಗ್‌ ಪೊಲೀಸ್‌ ವಿರುದ್ಧ ಗಂಭೀರ ಆರೋಪ!

Indore’s Dancing Cop: ಮಧ್ಯಪ್ರದೇಶದಲ್ಲಿ ಡಾನ್ಸಿಂಗ್ ಪೊಲೀಸ್ ಎಂದೇ ಜನಪ್ರಿಯರಾಗಿರುವ ರಂಜಿತ್ ಸಿಂಗ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಡಾನ್ಸ್ ಮಾಡುತ್ತಾ ಟ್ರಾಫಿಕ್ ನಿರ್ವಹಿಸುವುದಕ್ಕೆ ಹೆಸರುವಾಸಿಯಾಗಿದ್ದ ಇವರು, ಇದೀಗ ವಿವಾದದಿಂದಾಗಿ ಸುದ್ದಿಯಲ್ಲಿದ್ದಾರೆ. ಯುವತಿಯೊಬ್ಬಳು ಅಧಿಕಾರಿ ವಿರುದ್ಧ ಆರೋಪ ಮಾಡಿದ್ದಾಳೆ.

ಖ್ಯಾತ ಡಾನ್ಸಿಂಗ್ ಪೊಲೀಸ್ ವಿರುದ್ಧ ಇದೆಂಥಾ ಆರೋಪ?

-

Priyanka P Priyanka P Sep 18, 2025 6:57 PM

ಇಂದೋರ್: ಟ್ರಾಫಿಕ್ ನಿರ್ವಹಿಸುತ್ತಾ ಡಾನ್ಸ್ ಮಾಡುವ ಸಂಚಾರಿ ಪೊಲೀಸ್ ರಂಜಿತ್ ಸಿಂಗ್ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮಧ್ಯಪ್ರದೇಶ (Madhya Pradesh) ದಲ್ಲಿ ಡಾನ್ಸಿಂಗ್ ಪೊಲೀಸ್ ಎಂದೇ ಜನಪ್ರಿಯರಾಗಿರುವ ಇವರು, ಇದೀಗ ರಸ್ತೆಯ ಮಧ್ಯದಲ್ಲಿ ನಿಂತು ಕುಣಿಯುವುದಕ್ಕಾಗಿ ಸುದ್ದಿಯಲ್ಲಿಲ್ಲ. ಬದಲಾಗಿ ವೈರಲ್ ವಿಡಿಯೊದಿಂದ (Viral Video) ಉಂಟಾದ ವಿವಾದದಿಂದಾಗಿ ಸುದ್ದಿಯಲ್ಲಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾದ ವಿಡಿಯೊದಲ್ಲಿ, ರಾಧಿಕಾ ಸಿಂಗ್ ಎಂಬ ಯುವತಿ, ಸಾಕಷ್ಟು ಜನಪ್ರಿಯತೆಯನ್ನು ಹೊಂದಿರುವ ಟ್ರಾಫಿಕ್ ಪೊಲೀಸ್ ತನಗೆ ಅನಗತ್ಯ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆ ಅಧಿಕಾರಿ ಸ್ನೇಹಿತರಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಲ್ಲದೆ, ಇಂದೋರ್‌ನಲ್ಲಿ ಭೇಟಿಯಾಗಲು ಸಹ ಮುಂದಾಗಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.

ರಂಜಿತ್ ಸಿಂಗ್ ತನ್ನೊಂದಿಗೆ ಸ್ನೇಹ ಬೆಳೆಸಿಕೊಳ್ಳಲು ಮತ್ತು ತನ್ನನ್ನು ಭೇಟಿಯಾಗಲು ಬಯಸಿದ್ದರು ಎಂದು ರಾಧಿಕಾ ಸಿಂಗ್ ತನ್ನ ವಿಡಿಯೊದಲ್ಲಿ ಆರೋಪಿಸಿದ್ದಾರೆ. ಅಲ್ಲದೆ, ಅವರು ಇಂದೋರ್‌ನಲ್ಲಿ ತನಗೆ ವಸತಿ ವ್ಯವಸ್ಥೆ ಮಾಡಲು ಸಿದ್ಧರಿದ್ದಾರೆ ಎಂದು ಅವರು ದೂರಿದ್ದಾರೆ. ನನಗೆ ಅವನ ಸ್ನೇಹ ಅಗತ್ಯವಿಲ್ಲ. ಅವರು ತನ್ನ ಮಿತಿಯೊಳಗೆ ಇದ್ದರೆ ಒಳ್ಳೆಯದು ಎಂದು ಯುವತಿ ಹೇಳಿದ್ದು, ಇದೀಗ ಈ ವಿಡಿಯೊ ವೈರಲ್ ಆಗಿದೆ.

ವಿಡಿಯೊ ವೀಕ್ಷಿಸಿ:

ಆರೋಪಗಳ ಸತ್ಯಾಸತ್ಯತೆ ಮತ್ತು ಸಾರ್ವಜನಿಕವಾಗಿ ಪ್ರಮುಖ ವ್ಯಕ್ತಿಯಾಗಿರುವ ಟ್ರಾಫಿಕ್ ಪೊಲೀಸ್ ಅಧಿಕಾರಿಯ ನಡವಳಿಕೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನೆಗಳು ಎದ್ದಿವೆ. ಈ ಮಧ್ಯೆ, ರಂಜಿತ್ ಸಿಂಗ್ ಆರೋಪಗಳನ್ನು ನಿರಾಕರಿಸಿದ್ದಾರೆ. ಆರೋಪಗಳನ್ನು ಆಧಾರರಹಿತ ಎಂದು ಹೇಳಿದ್ದಾರೆ. ಆ ಯುವತಿ ನನ್ನನ್ನು ಬಲೆಗೆ ಬೀಳಿಸಲು ಮತ್ತು ಆಕೆ ಪ್ರಸಿದ್ಧಳಾಗಬೇಕು ಎಂಬ ಕಾರಣದಿಂದ ಹೀಗೆ ಮಾಡುತ್ತಿದ್ದಾಳೆ ಎಂದು ಅವರು ಆರೋಪಿಸಿದರು. ತಮ್ಮ ಕರ್ತವ್ಯವನ್ನು ನಿರ್ವಹಿಸುವುದು ಮತ್ತು ತಮ್ಮ ನೃತ್ಯದ ಮೂಲಕ ಜಾಗೃತಿ ಮೂಡಿಸುವುದರ ಮೇಲೆ ಮಾತ್ರ ತಮ್ಮ ಗಮನ ಉಳಿದಿದೆ ಎಂದು ಅಧಿಕಾರಿ ಹೇಳಿದರು.

ನನಗೆ ನಿಮ್ಮ ಬೆಂಬಲ ಬೇಕು. ನಾನು ಕಠಿಣ ಪರಿಶ್ರಮದಿಂದ ಗೌರವವನ್ನು ಗಳಿಸಿದ್ದೇನೆ. ನನ್ನ ವ್ಯಕ್ತಿತ್ವಕ್ಕೆ ಕಳಂಕ ತರುವ ಯಾವುದೇ ಕೆಲಸವನ್ನು ಯಾರೂ ಮಾಡಲು ಸಾಧ್ಯವಿಲ್ಲ. ಅಸೂಯೆಪಟ್ಟರೂ ತೊಂದರೆಯಿಲ್ಲ, ಆದರೆ ಯಾರ ಖ್ಯಾತಿಗೂ ಕಳಂಕ ತರಬೇಡಿ ಎಂದು ಹೇಳಿರುವ ವಿಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಟ್ರಾಫಿಕ್ ಪೊಲೀಸ್ ಅಧಿಕಾರಿ ರಂಜಿತ್ ಸಿಂಗ್ ಹೇಳಿದರು.

ಇದನ್ನೂ ಓದಿ: Viral Video: ಹೆರಿಗೆ ನೋವಿನಿಂದ ಮಹಿಳೆ ಒದ್ದಾಡ್ತಿದ್ರೆ ಇತ್ತ ಡಾಕ್ಟರ್‌ ಮೇಲೆಯೇ ಹಲ್ಲೆ ಮಾಡಿದ್ರು! ಈ ವಿಡಿಯೊ ನೋಡಿ