Viral Video: ನಿಮ್ಮನ್ನು ತುಂಡು ತುಂಡಾಗಿ ಕತ್ತರಿಸಿ ಹಾಕುತ್ತೇನೆ; ರೈಲಿನಲ್ಲಿ ಅಧಿಕಾರಿಗಳು, ಸಹಪ್ರಯಾಣಿಕರಿಗೆ ಬೆದರಿಕೆ ಹಾಕಿದ ಬುರ್ಕಾಧಾರಿ ಮಹಿಳೆ
ಭಾರತೀಯ ರೈಲ್ವೆಯ ಎಸಿ ಕೋಚ್‌ನಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬರು ಗಲಾಟೆ ಮಾಡಿ ಅಧಿಕಾರಿಗೆ ಬೆದರಿಕೆ ಹಾಕಿದ್ದಾಳೆ. ಸದ್ಯ ಆಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಮತ್ತು ಇನ್ನೊಬ್ಬ ಪ್ರಯಾಣಿಕರ ಕಾಯ್ದಿರಿಸಿದ ಸೀಟನ್ನು ಬಲವಂತವಾಗಿ ಆಕ್ರಮಿಸಿಕೊಂಡಿದ್ದ ಮಹಿಳೆಯ ಬಳಿ ರೈಲ್ವೆ ಅಧಿಕಾರಿಗಳು ಪ್ರಶ್ನೆ ಮಾಡಿದ್ದಕ್ಕೆ ಮಹಿಳೆ ಕೂಗಾಡಿದ್ದಾಳೆ.


ನವದೆಹಲಿ: ಭಾರತೀಯ ರೈಲ್ವೆಯ ಎಸಿ ಕೋಚ್‌ನಲ್ಲಿ ಬುರ್ಖಾ ಧರಿಸಿದ ಮಹಿಳೆಯೊಬ್ಬರು ಗಲಾಟೆ ಮಾಡಿ ಅಧಿಕಾರಿಗೆ ಬೆದರಿಕೆ ಹಾಕಿದ್ದಾಳೆ. ಸದ್ಯ ಆಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದೆ. ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಮತ್ತು ಇನ್ನೊಬ್ಬ ಪ್ರಯಾಣಿಕರ ಕಾಯ್ದಿರಿಸಿದ ಸೀಟನ್ನು ಬಲವಂತವಾಗಿ ಆಕ್ರಮಿಸಿಕೊಂಡಿದ್ದ ಮಹಿಳೆಯ ಬಳಿ ರೈಲ್ವೆ ಅಧಿಕಾರಿಗಳು ಪ್ರಶ್ನೆ ಮಾಡಿದ್ದಕ್ಕೆ ಮಹಿಳೆ ಕೂಗಾಡಿದ್ದಾಳೆ. ಟಿಟಿಇ ಮತ್ತು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸಿಬ್ಬಂದಿಗಳೊಂದಿಗೆ ಮಹಿಳೆ ಈ ರೀತಿ ನಡೆದುಕೊಂಡಿದ್ದಾಳೆ. ವಿಡಿಯೋದಲ್ಲಿ, ಆರ್‌ಪಿಎಫ್ ಅಧಿಕಾರಿಯೊಬ್ಬರು, "ಮೇಡಂ, ದಯವಿಟ್ಟು ನಿಮ್ಮ ಟಿಕೆಟ್ ತೋರಿಸಿ. ಇದು ನಿಮ್ಮ ಬರ್ತ್ ಅಲ್ಲ" ಎಂದು ಹೇಳುವುದನ್ನು ಕೇಳಬಹುದು.
ಆ ಮಹಿಳೆ ಕೋಪದಿಂದ, "ಹೋಗಿ ಪ್ರಧಾನಿಯವರನ್ನು ನನ್ನ ಬಗ್ಗೆ ಕೇಳಿ. ನಾನು ನನ್ನ ಟಿಕೆಟ್ ತೋರಿಸುವುದಿಲ್ಲ!" ಎಂದು ಉತ್ತರಿಸಿದ್ದಾಳೆ. ಮಹಿಳೆ ಸಹ ಪ್ರಯಾಣಿಕರ ಮೇಲೆ ಕೂಡ ಕೂಗಾಡಿದ್ದಾಳೆ. ಸಹ ಪ್ರಯಾಣಿಕನೊಬ್ಬ ಮಹಿಳೆಯನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಆಗ ಮಹಿಳೆ ಆತನಿಗೆ ಬೆದರಿಕೆ ಹಾಕಿ ನೀನು ಹೆಚ್ಚು ಮಾತನಾಡಿದರೆ ನಾನು ನಿನ್ನನ್ನು ತುಂಡು ತುಂಡಾಗಿ ಕತ್ತರಿಸುತ್ತೇನೆ ಎಂದು ಹೇಳಿದ್ದಾಳೆ.
#वायरल वीडियो: एसी कोच में बुरकाधारी महिला का हंगामा, टिकट दिखाने से किया इनकार।
— UttarPradesh.ORG News (@WeUttarPradesh) April 9, 2025
सोशल मीडिया पर एक चौंकाने वाला वीडियो तेजी से वायरल हो रहा है, जिसमें एक बुरकाधारी महिला भारतीय रेल की एसी कोच में जमकर हंगामा करती नजर आ रही है। यह घटना इंटरनेट पर व्यापक नाराजगी और बहस का कारण बन… pic.twitter.com/0leXmotOGq
ಮಹಿಳೆಯ ಗಲಾಟೆ ಸಹ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿದೆ. ರೈಲ್ವೆ ಅಧಿಕಾರಿಗಳು ಪರಿಸ್ಥಿತಿಯನ್ನು ನಿಯಂತ್ರಿಸಲು ಪ್ರಯತ್ನಿಸಿದಾಗ ಮಹಿಳೆ ಕೂಗಾಡುವುದು, ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸುತ್ತಿರುವುದು ಕಂಡು ಬಂದಿದೆ. ಘಟನೆಯ ಕುರಿತು ರೈಲ್ವೆ ಅಧಿಕಾರಿಗಳು ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ, ಮತ್ತು ವೀಡಿಯೊವನ್ನು ಯಾವಾಗ ರೆಕಾರ್ಡ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಆದಾಗ್ಯೂ, ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಿದಾಡುತ್ತಿದೆ. ನೆಟ್ಟಿಗರು ಮಹಿಳೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ವೈರಲ್ ಆದ 'ತೆಹಲ್ಕಾ ಆಮ್ಲೆಟ್' ; ನೀವು ಎಂದಾದರೂ ರುಚಿ ನೋಡಿದ್ರಾ?
ಇತ್ತೀಚೆಗೆ ವಿಡಿಯೋ ವ್ಯಕ್ತಿಯೊಬ್ಬ ತನ್ನ ಪ್ರೀತಿಯ ಶ್ವಾನವನ್ನು ಚಲಿಸುತ್ತಿದ್ದ ರೈಲಿನ ಬಾಗಿಲಿನಿಂದ ರೈಲಿಗೆ ಹತ್ತಿಸುವ ಪ್ರಯತ್ನ ಮಾಡುತ್ತಾನೆ. ಇದು ಆತನ ಜೀವನಕ್ಕೆ ಮಾತ್ರವಲ್ಲ, ಪ್ರಾಣಿಯ ಜೀವಕ್ಕೂ ಸಂಚಕಾರ ತರುವ ಸಾಧ್ಯತೆ ಚಲಿಸುತ್ತಿದ್ದ ರೈಲಿನ ಚಕ್ರದಡಿಗೆ ಸಿಕ್ಕು ನಾಯಿ ಸಾವು ಕಾಣುವ ಅಪಾಯದಿಂದ ಪಾರಾಗಿದ್ದರೆ, ವ್ಯಕ್ತಿ ತನ್ನ ಪ್ರೀತಿಯ ಶ್ವಾನ ರೈಲಿನ ಚಕ್ರದಡಿಗೆ ಸಿಲುಕಿದೆ. ನಾಯಿ ಹಳಿಗಳ ಮೇಲೆ ಬೀಳುತ್ತದೆ. ಅವನ ಸುತ್ತಲಿನ ಪ್ರಯಾಣಿಕರು ನಾಯಿಯನ್ನು ಹುಡುಕುತ್ತಾ ರೈಲು ಹಳಿಗಳತ್ತ ಧಾವಿಸುತ್ತಾರೆ, ಆದರೆ ಅವರು ನಾಯಿಯನ್ನು ಕಂಡುಕೊಳ್ಳುತ್ತಾರೆಯೇ ಎನ್ನುವುದು ಸ್ಪಷ್ಟವಾಗಿಲ್ಲ. ಅಲ್ಲಿರುವ ಜನರು ಆ ವ್ಯಕ್ತಿಯ ಮೇಲೆ ಕೂಗುತ್ತಾ, ಸಹಾಯಕ್ಕಾಗಿ ರೈಲ್ವೆ ಸಿಬ್ಬಂದಿಯನ್ನು ಕರೆಯುವಂತೆ ಒತ್ತಾಯಿಸುತ್ತಿದೆ, ಆದರೆ ಕೆಲವರು ರೈಲನ್ನು ನಿಲ್ಲಿಸಲು ಪ್ರಯತ್ನಿಸಿದ್ದರು. ನಾಯಿ ಬದುಕಿದೆಯೇ? ಇಲ್ಲವೇ? ಎಂಬುದು ತಿಳಿದು ಬಂದಿಲ್ಲ.