Viral Video: ಸೀರೆಯುಟ್ಟು ವಧುವಿನ ಅಲಂಕಾರದಲ್ಲಿ ಬಾಡಿಬಿಲ್ಡರ್ ಫುಲ್ ಮಿಂಚಿಂಗ್!
ಬಾಡಿ ಬಿಲ್ಡಿಂಗ್ ಮೂಲಕ ದೇಹದಾರ್ಢ್ಯತೆ ಪ್ರದರ್ಶಿಸುತ್ತಿದ್ದ ಚಿತ್ರಾ ಇದೀಗ ಸುಂದರ ಹುಡುಗಿಯಂತೆ ಸಿಂಗರಿಸಿಕೊಂಡಿದ್ದಾರೆ. ಬಾಡಿ ಬಿಲ್ಡರ್ಸ್ ಫಿಟ್ ಆಗಿರುವ ಮೈ ಕಟ್ಟು, ಮಸಲ್ಸ್, ಬಾಡಿ ಶೇಪ್ಸ್ ಗಳನ್ನು ಹೈಲೈಟ್ ಮಾಡುತ್ತಾರೆ. ಈ ಬಾಡಿ ಬಿಲ್ಡಿಂಗ್ ಮೈಕಟ್ಟಿಗೆ ಸಾಂಪ್ರದಾಯಿಕ ಉಡುಗೆ ತೊಟ್ಟು, ವಧುವಿನ ಗೆಟಪ್‌ನಲ್ಲಿ ತಯಾರಾದಾಗ ಹೇಗೆ ಕಾಣುತ್ತಾರೆ ಎನ್ನುವುದನ್ನು ಬಾಡಿಬಿಲ್ಡರ್ ಚಿತ್ರಾ ಪುರುಷೋತ್ತಮ್ ತೋರಿಸಿಕೊಟ್ಟಿದ್ದಾರೆ.


ನವದೆಹಲಿ: ಕರ್ನಾಟಕದ ಪ್ರಖ್ಯಾತ ಬಾಡಿಬಿಲ್ಡರ್ ಚಿತ್ರಾ ಪುರುಷೋತ್ತಮ್ (Chitra Purushotham) ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ವಿಶಿಷ್ಟ ವಧುವಿನ ಲುಕ್‌ನಲ್ಲಿ ಕಂಗೊಳಿಸಿದ್ದಾರೆ. ಮದುವೆಯಲ್ಲಿ ಕಾಂಚಿವರಂ ಸೀರೆ ಧರಿಸಿ ವಧುವಿನ ಗೆಟಪ್ ನಲ್ಲಿ ರೆಡಿಯಾಗಿದ್ದಾರೆ. ಕ್ಲಾಸಿಕ್ ಕಾಂಜೀವರಂ ಸೀರೆಯಲ್ಲಿ ಮತ್ತು ಸಾಂಪ್ರದಾಯಿಕ ಆಭರಣಗಳಿಂದ ಅಲಂಕರಿಸಲ್ಪಟ್ಟು ಆತ್ಮವಿಶ್ವಾಸದಿಂದ ತನ್ನ ಬೈಸೆಪ್ಸ್ ಅನ್ನು ತೋರಿಸಿದ್ದಾರೆ. ಬಾಡಿ ಬಿಲ್ಡಿಂಗ್ ಮೂಲಕ ತಮ್ಮ ಮೈ ಕಟ್ಟಿನ ಸೌಂದರ್ಯ ಪ್ರದರ್ಶಿಸಿದ್ದ ಚಿತ್ರಾ ಪುರುಷೋತ್ತಮ್ ವಧುವಿನ ಲುಕ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದ್ದು ಇವರ ಸಾಂಪ್ರದಾಯಿಕ ಸೀರೆ ಲುಕ್ ನೋಡಿ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತನ್ನ ಬಾಡಿ ಬಿಲ್ಡಿಂಗ್ ಮೂಲಕ ದೇಹದಾರ್ಢ್ಯತೆ ಪ್ರದರ್ಶಿಸುತ್ತಿದ್ದ ಚಿತ್ರಾ ಇದೀಗ ಸುಂದರ ಹುಡುಗಿಯಂತೆ ಸಿಂಗರಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಬಾಡಿ ಬಿಲ್ಡರ್ ಎಂದಾಗ ಫಿಟ್ ಆಗಿರುವ ಮೈ ಕಟ್ಟು, ಮಸಲ್ಸ್ ಬಾಡಿ ಶೇಪ್ಸ್ ಗಳನ್ನು ಹೈ ಲೈಟ್ ಮಾಡುತ್ತಾರೆ. ಈ ಬಾಡಿ ಬಿಲ್ಡಿಂಗ್ ಮೈಕಟ್ಟಿಗೆ ಸಾಂಪ್ರದಾಯಿಕ ಉಡುಗೆ ತೊಟ್ಟು, ವಧುವಿನ ಗೆಟಪ್‌ನಲ್ಲಿ ತಯಾರಾದಾಗ ಹೇಗೆ ಕಾಣುತ್ತಾರೆ ಎನ್ನುವುದನ್ನು ಬಾಡಿಬಿಲ್ಡರ್ ಚಿತ್ರಾ ಪುರು ಷೋತ್ತಮ್ ತೋರಿಸಿಕೊಟ್ಟಿದ್ದಾರೆ. ಸದ್ಯ ಇವರ ವಧುವಿನ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ವೈರಲ್ ಆಗಿದೆ.
ವಿಶಿಷ್ಟ ವಧುವಿನ ಲುಕ್ ನಲ್ಲಿ ಚಿತ್ರಾ ಪುರುಷೋತ್ತಮ್ ಅವರು ಮಿಂಚಿದ್ದು ತಮ್ಮ ಮಸಲ್ಸ್ ತೋರಿಸಿ ಶಕ್ತಿ ಪ್ರದರ್ಶನ ತೋರಿಸಿದ್ದಾರೆ. ಹಳದಿ ಮತ್ತು ನೀಲಿ ಬಣ್ಣದ ಕಾಂಜೀವರಂ ಸೀರೆ ಉಟ್ಟು ಅದಕ್ಕೆ ಬೇಕಾದ ಆಭರಣ , ಕೇಶ ವಿನ್ಯಾಸ ಕೂಡ ಇವರ ಟ್ರೆಡಿಷನಲ್ ಲುಕ್ ಗೆ ಮತ್ತಷ್ಟು ಮೆರುಗು ನೀಡಿದೆ. ಹಳದಿ ಬಣ್ಣದ ಸೀರೆಗೆ ಮ್ಯಾಚ್ ಆಗುವಂತೆ ಲೇಯರ್ಡ್ ನೆಕ್ಲೇಸ್, ಬಿಂದಿ, ಸೊಂಟದ ಪಟ್ಟಿ, ಮುಂದಾಲೆ , ಐಲೈನರ್ ಯುಕ್ತ ಕಣ್ಣುಗಳು, ಕಿವಿವೋಲೆ ಧರಿಸಿದ್ದು ಸಿಂಪಲ್ ಮೇಕಪ್ ನಲ್ಲಿ ರಾಜ ಮನೆತನದ ಯುವರಾಣಿಯಂತೆ ಕಂಗೊಳಿಸಿದ್ದು ವಧುವಿನ ಗೆಟಪ್‌ನಲ್ಲಿ ರೆಡಿಯಾಗಿ ಫೋಟೋಗೆ ಫೋಸ್ ಕೊಟ್ಟಿದ್ದಾರೆ.
ಇದನ್ನು ಓದಿ: Virat-Anushka : ಪ್ರೇಮಾನಂದ್ ಮಹಾರಾಜರ ಆಶ್ರಮಕ್ಕೆ ತೆರಳಿದ ವಿರುಷ್ಕಾ ದಂಪತಿ!
ಬಾಡಿಬಿಲ್ಡರ್ ಚಿತ್ರಾ ಪುರುಷೋತ್ತಮ್ ಅವರು ಮಿಸ್ ಇಂಡಿಯಾ ಫಿಟ್ನೆಸ್, ವೆಲ್‌ನೆಸ್ ಸೇರಿದಂತೆ ಅನೇಕ ಪ್ರಶಸ್ತಿ ಗಳಿಸಿದ್ದ ಕೀರ್ತಿಯನ್ನು ಹೊಂದಿದ್ದಾರೆ. ಇದೀಗ ಚಿತ್ರಾ ಪುರುಷೋತ್ತಮ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೊವನ್ನು ಶೇರ್ ಮಾಡಿಕೊಂಡಿದ್ದು, ವಿಡಿಯೊ ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಫಿಟ್‌ನೆಸ್‌ನಲ್ಲೂ ಸಾಂಪ್ರದಾಯಿಕ ಸೌಂದರ್ಯ ಪ್ರದರ್ಶಿಸಲು ಸಾಧ್ಯ ಎಂಬುದನ್ನು ಸಾಬೀತು ಪಡಿಸಿದ್ದ ವಧುವಿನ ಲುಕ್ ನ ವಿಡಿಯೊ ಲಕ್ಷಾಂತರ ವೀಕ್ಷಣೆ ಗಳಿಸಿದ್ದು ಜಿಮ್ ಮಾಡಿ ಸಿಕ್ಸ್ ಪ್ಯಾಕ್ ಮಾಡಿಕೊಂಡಿದ್ದ ಚಿತ್ರಾ ಅವರ ಈ ಲುಕ್‌ಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.