Viral news: ಕೇರಳದ ಕರುಂಬಿಗೆ ಒಲಿದ ವಿಶ್ವದ ಅತ್ಯಂತ ಕುಬ್ಜ ಮೇಕೆ ಪಟ್ಟ; ಗಿನ್ನಿಸ್ ರೆಕಾರ್ಡ್‌ಗೆ ಸೇರ್ಪಡೆ
ಕೇರಳದ ರೈತರೊಬ್ಬರ ಬಳಿ ಇರುವ ಮೇಕೆ ಇದೀಗ ಬಹಳಷ್ಟು ಸುದ್ದಿಯಲ್ಲಿದೆ. ತನ್ನ ವಿಶಿಷ್ಟತೆಯಿಂದ ಈ ಮೇಕೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ವಿಶ್ವದ ಅತ್ಯಂತ ಚಿಕ್ಕ ಜೀವಂತ ಮೇಕೆ ಎಂದು ಗುರಿತಿಸಿಕೊಳ್ಳುವ ಮೂಲಕ ಐತಿಹಾಸಿಕ ಸಾಧನೆಯನ್ನು ಮಾಡಿದೆ.


ತಿರುವನಂತಪುರಂ: ಕೇರಳದ ರೈತರೊಬ್ಬರ ಬಳಿ ಇರುವ ಮೇಕೆ ಇದೀಗ ಬಹಳಷ್ಟು ಸುದ್ದಿಯಲ್ಲಿದೆ. ತನ್ನ ವಿಶಿಷ್ಟತೆಯಿಂದ ಈ ಮೇಕೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ವಿಶ್ವದ ಅತ್ಯಂತ ಚಿಕ್ಕ ಜೀವಂತ ಮೇಕೆ ಎಂದು ಗುರಿತಿಸಿಕೊಳ್ಳುವ ಮೂಲಕ ಐತಿಹಾಸಿಕ ಸಾಧನೆಯನ್ನು ಮಾಡಿದೆ. ರೈತ ಪೀಟರ್ ಲೆನು ಈ ಹೆಣ್ಣು ಮೇಕೆ ಕರುಂಬಿಯನ್ನು ಪಾಲನೆ ಪೋಷಣೆ ಮಾಡಿದ್ದಾರೆ. 2021 ರಲ್ಲಿ ಜನಿಸಿದ ಕರುಂಬಿ, ನಾಲ್ಕು ವರ್ಷ ವಯಸ್ಸಿನಲ್ಲಿ ಕೇವಲ 1 ಅಡಿ 3 ಇಂಚು (40.50 ಸೆಂ.ಮೀ) ಎತ್ತರವಾಗಿದೆ. ನೋಡಲು ಮುದ್ದಾಗಿರುವ ಈ ಮೇಕೆ ಇದೀಗ (Viral News) ಎಲ್ಲರ ಗಮನ ಸೆಳೆಯುತ್ತಿದೆ.
ಇದು ಕೆನಡಾದ ಪಿಗ್ಮಿ ಮೇಕೆಯಾಗಿದ್ದು, ಅದರ ಸ್ಥೂಲವಾದ ದೇಹ ಮತ್ತು ಆನುವಂಶಿಕ ಕುಬ್ಜತೆಗೆ ಹೆಸರುವಾಸಿಯಾಗಿದೆ, ಇದು ಅದರ ಕಾಲುಗಳು 21 ಇಂಚು (53 ಸೆಂ.ಮೀ) ಗಿಂತ ಹೆಚ್ಚು ಎತ್ತರಕ್ಕೆ ಬೆಳೆಯುವುದನ್ನು ತಡೆಯುತ್ತದೆ. ಈ ಜಾತಿಯ ಮೇಕೆಗಳು ನೋಡಲು ಮಾತ್ರ ಕುಜ್ಬವಾಗಿರುತ್ತವೆ,ಆದರೆ ಇವು ತುಂಬಾ ಚುರುಕು. ಕರುಂಬಿ ಮೂರು ಗಂಡು ಮೇಕೆಗಳು ಹಾಗೂ ಒಂಬತ್ತು ಇತರ ಹೆಣ್ಣು ಮೇಕೆಗಳು ಮತ್ತು 10 ಮರಿಗಳೊಂದಿಗೆ ವಾಸಿಸುತ್ತಾಳೆ, ಅವೆಲ್ಲವೂ ಕಪ್ಪು ಹಾಗೂ ಬಿಳಿ ಕೂದಲಿನವು ಎಂದು ಲೆನು ಹೇಳಿದ್ದಾರೆ. ಲೆನು ಅವರ ಬಳಿ ಮೇಕೆಗಳು ಮಾತ್ರ ಅಲ್ಲ, ಕೋಳಿ, ಮೊಲ ಹಾಗೂ ಬಾತುಕೋಳಿಗಳೂ ಸಹ ಇವೆ.
ದೀರ್ಘಕಾಲದಿಂದ ಪ್ರಾಣಿಗಳನ್ನು ಸಾಕುತ್ತಿರುವ ಲೆನು, ಹೈನುಗಾರಿಕೆಯಲ್ಲಿ ಪ್ರೀತಿಯನ್ನು ಹೊಂದಿದ್ದಾರೆ. ವಿಶೇಷವಾಗಿ ಕರಂಬಿಯ ಕಡೆ ಗಮನ ನೀಡುತ್ತಾರೆ. ಅದರ ಪೋಷಣೆ ಮಾಡುತ್ತಾರೆ. ಕರುಂಬಿ ವಿಶ್ವ ದಾಖಲೆಗೆ ಅರ್ಹತೆ ಪಡೆಯಬಹುದು ಎಂದು ಕೆಲವರು ಹೇಳಿದ ಮೇಲೆ ತಾನು ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದೆ. ಪಶುವೈದ್ಯರು ಅವಳ ಎತ್ತರವನ್ನು ಪರೀಕ್ಷೆ ಮಾಡಿದರು. ಸಂಪೂರ್ಣವಾಗಿ ಬೆಳೆದ ವಯಸ್ಕಳು ಮತ್ತು ಅವಳ ಗಾತ್ರದ ಮೇಲೆ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ ಎಂದು ಹೇಳಿದ್ದರು. ನಂತರ ನಾವು ಗಿನ್ನಿಸ್ ರೆಕಾರ್ಡ್‌ಗೆ ಅರ್ಜಿ ಸಲ್ಲಿಸಿದ್ದೆವು. ಕುರುಂಬಿ ಅರ್ಹತೆ ಪಡೆದಿದ್ದಾಳೆಂದು ತಿಳಿದ ನಂತರ ನಾವು ತುಂಬಾ ಖುಷಿ ಪಟ್ಟೆವು ಎಂದು ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ: Viral Video: ದೇಸಿ ಹೆಂಡ ಸವಿದ ವಿದೇಶಿಗ ಕೊನೆಗೆ ಹೇಳಿದ್ದೇನು ಗೊತ್ತಾ? ವಿಡಿಯೊ ವೈರಲ್
ಒಬ್ಬ ರೈತನಾಗಿ, ಈ ದಾಖಲೆ ನನಗೆ ಸಿಕ್ಕರೆ, ಅದು ಇಡೀ ರೈತರು ಮತ್ತು ಕೃಷಿಕರಿಗೆ ಹೆಮ್ಮೆಯ ಸಂಗತಿ. ಕರುಂಬಿಯ ಮನ್ನಣೆಯು ರೈತರ ಕಠಿಣ ಪರಿಶ್ರಮ ಮತ್ತು ಅವರು ಪ್ರಾಣಿಗಳನ್ನು ನೋಡಿಕೊಳ್ಳುವ ಬಗ್ಗೆ ಎಲ್ಲಡೆ ಮನ್ನಣೆ ಸಿಗುತ್ತದೆ ಎಂದು ಅವರು ಹೇಳಿದರು. ಈ ಸಂಭ್ರಮಕ್ಕೆ ಮತ್ತಷ್ಟು ಸೇರ್ಪಡೆಯಾಗಿ, ಕರುಂಬಿ ತನ್ನ ಮುಂದಿನ ಮರಿಗೆ ಗರ್ಭಿಣಿಯಾಗಿದ್ದಾಳೆ, ಅಂದರೆ ಪುಟ್ಟ ಮೇಕೆಗಳ ಕುಟುಂಬವು ಬೆಳೆಯಲಿದೆ.