Viral Video: ದೇಸಿ ಹೆಂಡ ಸವಿದ ವಿದೇಶಿಗ ಕೊನೆಗೆ ಹೇಳಿದ್ದೇನು ಗೊತ್ತಾ? ವಿಡಿಯೊ ವೈರಲ್
ಭಾರತದ ಪ್ರವಾಸದಲ್ಲಿರುವ ಸ್ಕಾಟ್ಲೆಂಡ್ ಮೂಲದ ಪ್ರವಾಸಿಗ ಹಗ್ ಹೆಂಡದ ಅಂಗಡಿಗೆ ಭೇಟಿ ನೀಡಿ ಒಂದು ಗ್ಲಾಸ್ ಹೆಂಡವನ್ನು ಆರ್ಡರ್ ಮಾಡಿ ಟೆಸ್ಟ್ ಮಾಡಿದ್ದಾನೆ. ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರಾಮಾಣಿಕ ವಿಮರ್ಶೆಯೊಂದಿಗೆ ಹಂಚಿಕೊಂಡಿದ್ದಾನೆ. ಇದು ಈಗ ವೈರಲ್(Viral Video) ಆಗಿದೆ.


ನವದೆಹಲಿ: ವಿದೇಶಿಗರು ಭಾರತಕ್ಕೆ ಭೇಟಿ ನೀಡಿ ಇಲ್ಲಿನ ಖಾದ್ಯಗಳನ್ನು ಸವಿದ ಸಾಕಷ್ಟು ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಸದ್ದು ಮಾಡುತ್ತಿರುತ್ತದೆ.ಇದೀಗ ವಿದೇಶಿ ಪ್ರವಾಸಿಗನೊಬ್ಬ ಭಾರತದ ಹೆಂಡವನ್ನು ರುಚಿ ನೋಡಿದ್ದು, ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಪ್ರಾಮಾಣಿಕ ವಿಮರ್ಶೆಯೊಂದಿಗೆ ಹಂಚಿಕೊಂಡಿದ್ದಾನೆ. ಇದು ಈಗ ವೈರಲ್ ಆಗಿದೆ. ಸ್ಕಾಟ್ಲೆಂಡ್ ಮೂಲದ ಈ ಪ್ರವಾಸಿ ಹೆಂಡದ ಅಂಗಡಿಗೆ ಭೇಟಿ ನೀಡಿ ಒಂದು ಗ್ಲಾಸ್ ಹೆಂಡವನ್ನು ಆರ್ಡರ್ ಮಾಡಿ ರುಚಿ ನೋಡಿದ್ದಾನೆ. ಅದರ ರುಚಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ(Viral Video) ಹಂಚಿಕೊಂಡಿದ್ದಾನೆ.
ವೈರಲ್ ವಿಡಿಯೊದಲ್ಲಿ ರಸ್ತೆಬದಿಯ ಹೆಂಡದ ಅಂಗಡಿಯಲ್ಲಿ ಕುಳಿತ ವಿದೇಶಿಗ ಹಗ್ ಕೈಯಲ್ಲಿ ಗ್ಲಾಸ್ ಅನ್ನು ಹಿಡಿದುಕೊಂಡು, ಅದನ್ನು ಒಂದು ಸಿಪ್ ಕುಡಿದಿದ್ದಾನೆ. ಆದರೆ ಅದನ್ನು ಕುಡಿದ ನಂತರ ಅವನ ಮುಖದ ಭಾವನೆಯೇ ಬದಲಾಗಿದೆ. ಹೆಂಡ ಹುಳಿಯಾಗಿದ್ದು, ಸೈಡರ್ ಹಾಗೆ ಇದೆ ಎಂದಿದ್ದಾನೆ. ಹಾಗೇ ಅದು ಅವನಿಗೆ ಅದು ಇಷ್ಟವಾಗಲಿಲ್ಲವಂತೆ. ಹಾಗಂತ ಆತ ಹೆಂಡ ಕುಡಿಯುವುದು ಮಾತ್ರ ನಿಲ್ಲಿಸಲಿಲ್ಲ! ಕೆಲವು ಗುಟುಕು ಹೆಂಡವನ್ನು ಕುಡಿದು ನಂತರ ಅದನ್ನು ಪೂರ್ತಿ ಕುಡಿಯಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಹಾಗೇ ಅಲ್ಲಿಯೇ ಅವನು ಊಟ ಕೂಡ ಮಾಡಿದ್ದಾನೆ. ಅದರಲ್ಲಿ ಕೆಲವು ಖಾದ್ಯಗಳು ಮಾತ್ರ ಅವನಿಗೆ ಇಷ್ಟವಾಗಿರುವುದಾಗಿ ತಿಳಿಸಿದ್ದಾನೆ.
ಹೆಂಡ ಕುಡಿದ ವಿದೇಶಿ ಪ್ರವಾಸಿಗನ ವಿಡಿಯೊ ಇಲ್ಲಿದೆ ನೋಡಿ...
ಏನಿದು ಹೆಂಡ?
ಹುದುಗಿಸಿದ ತಾಳೆ ರಸದ ಪಾನೀಯವಾದ ಈ ಹೆಂಡವನ್ನು ಭಾರತದ ಕೆಲವು ಭಾಗಗಳಲ್ಲಿ, ವಿಶೇಷವಾಗಿ ಕೇರಳ ಮತ್ತು ತಮಿಳುನಾಡಿನಲ್ಲಿ ವ್ಯಾಪಕವಾಗಿ ಸೇವಿಸಲಾಗುತ್ತದೆ. ಇದನ್ನು ಹೆಚ್ಚಾಗಿ ಹಳ್ಳಿ ಪ್ರದೇಶಗಳಲ್ಲಿನ ಜನರು ಸೇವಿಸುತ್ತಾರೆ. ನಗರಗಳಲ್ಲಿನ ಜನರು ಬಿಯರ್, ವಿಸ್ಕಿ ಮುಂತಾದ ಆಲ್ಕೋಹಾಲ್‍ಗಳನ್ನು ಸೇವಿಸುವಂತೆ ಹಳ್ಳಿಯ ಜನರು ಇದನ್ನು ಕಿಕ್‍ಗಾಗಿ ಕುಡಿಯುತ್ತಾರಂತೆ.
ಈ ಸುದ್ದಿಯನ್ನೂ ಓದಿ:Viral News: ನಡುರಸ್ತೆಯಲ್ಲಿ ವ್ಯಕ್ತಿಯನ್ನು ಚಾಕುವಿನಿಂದ ಇರಿದು ಕೊಂದ ಮಂಗಳಮುಖಿಯರು- ಶಾಕಿಂಗ್ ವಿಡಿಯೊ ಎಲ್ಲೆಡೆ ವೈರಲ್
ಹಗ್ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೊ ಪೋಸ್ಟ್ ಮಾಡಿದಾಗಿನಿಂದ ಇದುವರೆಗೆ ಸುಮಾರು ಮೂರು ಲಕ್ಷ ವ್ಯೂವ್ಸ್ ಪಡೆದಿದೆ. ಈ ವಿಡಿಯೊ ವೈರಲ್ ಆಗಿದ್ದು, ಅನೇಕರು ಇದಕ್ಕೆ ಕಾಮೆಂಟ್ ಕೂಡ ಮಾಡಿದ್ದಾರೆ. “ಕೇರಳದಲ್ಲಿ ಆಹಾರವನ್ನು ಸೇವಿಸುವ ಬಗ್ಗೆ ಸರಿಯಾದ ಮಾರ್ಗದರ್ಶನ ನೀಡಲು ನಿಮಗೆ ಯಾರಾದರೂ ಬೇಕು" ಎಂದು ಒಬ್ಬ ನೆಟ್ಟಿಗರು ಬರೆದಿದ್ದಾರೆ, “ಸ್ಥಳೀಯರೊಬ್ಬರು ಪಾನೀಯವನ್ನು ಉತ್ತಮವಾಗಿ ಆನಂದಿಸಲು ಸಹಾಯ ಮಾಡಬಹುದಿತ್ತು” ಎಂದು ಮತ್ತೊಬ್ಬರು ತಿಳಿಸಿದ್ದಾರೆ. "ಕಳ್ಳಭಟ್ಟಿಯನ್ನು ಹಾಗೇ ಕುಡಿಯಬೇಡಿ. ನೀವು ಅದನ್ನು ಕುಡಿಯುವಾಗ ಅದರೊಂದಿಗೆ ರುಚಿಕರವಾದ ಆಹಾರವನ್ನು ತಿನ್ನಬೇಕು” ಎಂದು ಇನ್ನೊಬ್ಬರು ಸಲಹೆ ನೀಡಿದ್ದಾರೆ. “ ಅದರ ಕಿಕ್ ಅದ್ಭುತವಾಗಿದೆ ಮತ್ತು ನೀವು ಸಿಹಿ ಹೆಂಡವನ್ನು ಸಹ ಪ್ರಯತ್ನಿಸಬಹುದು. ನಾನು ಒಮ್ಮೆ ಅದನ್ನು ಕುಡಿದಿದ್ದೆ ಮತ್ತು ಅದರ ರುಚಿ ನನಗೆ ಇಷ್ಟವಾಗಿಲಿಲ್ಲ. ಏಕೆಂದರೆ ಅದನ್ನು ಹೇಗೆ ಕುಡಿಯಬೇಕೆಂದು ನನಗೆ ತಿಳಿದಿರಲಿಲ್ಲ "ಎಂದು ಇನ್ನೊಬ್ಬರು ಹೇಳಿದ್ದಾರೆ.