Viral Video: 'ದಿಲ್ ಇಬಾದತ್' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಕಿಲಿ ಪೌಲ್; ವಿಡಿಯೊ ವೈರಲ್
ತಾಂಜೇನಿಯಾದ ಕಂಟೆಂಟ್ ಕ್ರಿಯೇಟರ್ ಕಿಲಿ ಪೌಲ್ 2009ರ ಜನಪ್ರಿಯ ಬಾಲಿವುಡ್ ಚಲನಚಿತ್ರವಾದ ತುಮ್ ಮಿಲೆಯ ಹಾಡಿಗೆ ಸಖತ್ ಆಗಿ ರೀಲ್ ಮಾಡಿದ್ದಾರೆ. 'ದಿಲ್ ಇಬಾದತ್' ಹಾಡಿನ ಸಾಹಿತ್ಯಕ್ಕೆ ಕಿಲಿ ಪೌಲ್ ಅಭಿನಯಿಸಿದ್ದನ್ನು ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video)ಆಗಿದೆ.


ನವದೆಹಲಿ: ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಆಗಿರುವ ತಾಂಜೇನಿಯಾದ ಕಂಟೆಂಟ್ ಕ್ರಿಯೇಟರ್ ಕಿಲಿ ಪೌಲ್ ಆಗಾಗ ಬಾಲಿವುಡ್ ಹಾಡುಗಳಿಗೆ ಲಿಪ್‌ಸಿಂಕ್ ಮಾಡಿ ವೈರಲ್ ಆಗುತ್ತಿರುತ್ತಾನೆ. ಇದೀಗ ಜನಪ್ರಿಯ ಬಾಲಿವುಡ್ ಬೀಟ್‌ಗೆ ಲಿಪ್ ಸಿಂಕ್ ಮಾಡಿ ಅದ್ಭುತವಾಗಿ ಅಭಿನಯಿಸಿ ಸಂಗೀತ ಪ್ರೇಮಿಗಳ ಮನಸ್ಸನ್ನು ಸೆಳೆದಿದ್ದಾನೆ. ಆತ ತನ್ನ ಇತ್ತೀಚಿನ ವಿಡಿಯೊದಲ್ಲಿ, 2009 ರ ತುಮ್ ಮಿಲೆ ಚಿತ್ರದ 'ದಿಲ್ ಇಬಾದತ್' ಹಾಡಿನ ಸಾಹಿತ್ಯಕ್ಕೆ ಅಭಿನಯಿಸಿದ್ದಾನೆ. ಕಿಲಿ ಪೌಲ್ ಅಭಿವ್ಯಕ್ತಿಯನ್ನು ನೋಡಿ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.
ವೈರಲ್ ಆದ ವಿಡಿಯೊದಲ್ಲಿ ಬಾಲಿವುಡ್ ಹಾಡಿನ ಸಾಹಿತ್ಯಕ್ಕೆ ಕಿಲಿ ಪೌಲ್ ಲಿಪ್ ಸಿಂಕ್ ಮಾಡುವುದರೊಂದಿಗೆ ವಿಡಿಯೊ ಶುರುವಾಗುತ್ತದೆ. ಕಿಲಿ ಪೌಲ್ ತನ್ನ ಕಣ್ಣುಗಳನ್ನು ಮುಚ್ಚಿ ಹಾಡಿನ ಪ್ರತಿಯೊಂದು ಪದವನ್ನು ಅನುಭವಿಸುತ್ತಾ ನಟಿಸಿದ್ದಾನೆ. ಈ ಹಾಡನ್ನು ಹಾಡುವಾಗ ಅವನ ಕಣ್ಣುಗಳು ಭಾವೋದ್ವೇಗದಿಂದ ತುಂಬಿ ತುಳುಕುವುದು ವಿಡಿಯೊದಲ್ಲಿ ಸೆರೆಯಾಗಿದೆ. ವಿಶೇಷವೆಂದರೆ, ಅವನ ಸಹೋದರಿ ನೀಮಾ ಪೌಲ್ ಕೂಡ ಈ ಹಾಡಿಗೆ ಅಭಿನಯಿಸಿದ್ದಾಳೆ. ಅವನು ಈ ಹಾಡಿನ ಮೂಲಕ ತನ್ನ ಹೃದಯದ ಭಾವನೆಯನ್ನು ವ್ಯಕ್ತಪಡಿಸುವಾಗ ಆಕೆ ಅವನ ಹಿಂದೆ ನಿಂತು ಸಹೋದರನಿಗೆ ಸಾಥ್ ನೀಡಿದ್ದಾಳೆ. ಈ ವಿಡಿಯೊವನ್ನು ಕಿಲಿ ಪೌಲ್ ತನ್ನ ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಪೋಸ್ಟ್ ಮಾಡಿದ್ದು, ಅವನ ಭಾವಪೂರ್ಣ ಅಭಿನಯವು ಅವನ ಫಾಲೋವರ್ಸ್ ಮತ್ತು ಇತರ ನೆಟ್ಟಿಗರ ಹೃದಯವನ್ನು ಗೆದ್ದಿದೆ.
ಕಿಲಿ ಪೌಲ್ ಅದ್ಭುತ ನೃತ್ಯದ ವಿಡಿಯೊ ಇಲ್ಲಿದೆ ನೋಡಿ....
ಬಾಲಿವುಡ್ ಹಾಡುಗಳ ಮೇಲಿನ ಕಿಲಿ ಪೌಲ್ ಪ್ರೀತಿಯನ್ನು ಕಂಡು ನೆಟ್ಟಿಗರು ಹೊಗಳಿದ್ದಾರೆ. "ಅದ್ಭುತ ಅಭಿನಯ” ಎಂದು ನೆಟ್ಟಿಗರು 'ಹಾರ್ಟ್' ಎಮೋಜಿಗಳನ್ನು ಹಂಚಿಕೊಂಡಿದ್ದಾರೆ. ಈ ರೀಲ್ ಅನ್ನು ಮಾರ್ಚ್ 25 ರಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದಾಗಿನಿಂದ ಇದು ಮೂರು ಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಮತ್ತು 25,000 ಲೈಕ್‍ಗಳೊಂದಿಗೆ ವೈರಲ್ ಆಗಿದೆ.
ಈ ಸುದ್ದಿಯನ್ನೂ ಓದಿ:Viral Video: ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ ಅಪ್ಪ-ಮಗಳ ಸೂಪರ್ ಡ್ಯಾನ್ಸ್ ; ವಿಡಿಯೊ ವೈರಲ್
ತಾಂಜೇನಿಯಾದ ಕಂಟೆಂಟ್ ಕ್ರಿಯೇಟರ್ ಕಿಲಿ ಪೌಲ್ ಭಾರತೀಯ ಸಂಗೀತದ ಬಗ್ಗೆ ರೀಲ್ಸ್ ಮಾಡುತ್ತಿರುತ್ತಾರೆ.ಇತ್ತೀಚೆಗೆ ಕಿಲಿ ಪೌಲ್ ಮೇ1 ರಂದು ಬಿಡುಗಡೆಯಾಗಲಿರುವ ಸೂರ್ಯ ಅಭಿನಯದ 'ರೆಟ್ರೋ' ಸಿನಿಮಾದ 'ಕನ್ನಡಿ ಪೂವ್' ಹಾಡಿಗೆ ನೃತ್ಯ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ನೆಟ್ಟಿಗರ ಗಮನ ಸೆಳೆದಿತ್ತು.
ಪೀಲಿಂಗ್ಸ್ ಹಾಡಿಗೆ ಕುಣಿದು ಕುಪ್ಪಳಿಸಿದ ಕಿಲಿ ಪೌಲ್
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ʼಪುಷ್ಪ 2ʼ ಚಿತ್ರದ ಹಾಡಿಗೆ ತಾಂಜೇನಿಯಾದ ಕಿಲಿ ಪೌಲ್ ಕುಣಿದು ಕುಪ್ಪಳಿಸಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ ನಟನೆಯ ಚಿತ್ರದ 'ಪೀಲಿಂಗ್ಸ್' ಹಾಡಿಗೆ ಕಿಲಿ ಪೌಲ್ ತಮ್ಮ ಸಾಂಪ್ರದಾಯಿಕ ಉಡುಪನ್ನು ಧರಿಸಿ ಹೆಜ್ಜೆ ಹಾಕಿದ್ದಾರೆ.