Viral Video: ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆದ ಅಪ್ಪ-ಮಗಳ ಸೂಪರ್ ಡ್ಯಾನ್ಸ್ ; ವಿಡಿಯೊ ವೈರಲ್
ಸೋಶಿಯಲ್ ಮೀಡಿಯಾದಲ್ಲಿ ತಂದೆ ಮಗಳು 'ದೋಸೆ ಇಡ್ಲಿ ಸಾಂಬಾರ್ ಚಟ್ನಿ ಚಟ್ನಿ' ಎಂದು ನೃತ್ಯ ಮಾಡಿದ್ದ ಹೃದಯಸ್ಪರ್ಶಿ ವಿಡಿಯೊ ವೈರಲ್(Viral Video) ಆಗಿದೆ. ಅಪ್ಪ-ಮಗಳು ಸಾಂಪ್ರದಾಯಿಕ ದಕ್ಷಿಣ ಭಾರತದ ಉಡುಪನ್ನು ಧರಿಸಿ, ಆಹಾರ ಪ್ರಿಯರ ಟ್ರ್ಯಾಕ್‍ಗೆ ನೃತ್ಯ ಮಾಡಿದ್ದಾರೆ. ಈ ನೃತ್ಯ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆ ಗಳಿಸಿದೆ.


ನವದೆಹಲಿ: ಸೋಶಿಯಲ್ ಮಿಡಿಯಾದಲ್ಲಿ ಹಲವು ವಿಧದ ವಿಡಿಯೊಗಳು ವೈರಲ್ ಆಗುತ್ತಿರುತ್ತದೆ. ಈ ಹಿಂದೆ ಪ್ರೇಮಿಗಳು, ವಧು-ವರರು, ಸ್ನೇಹಿತರು ಜೊತೆ ಸೇರಿ ನೃತ್ಯ ಮಾಡಿದ ಹಲವಾರು ವಿಡಿಯೊಗಳು ವೈರಲ್(Viral Video) ಆಗಿದ್ದವು. ಇದೀಗ ತಂದೆ-ಮಗಳ ನೃತ್ಯವೊಂದು ಸೋಶಿಯಲ್ ಮಿಡಿಯಾದವರ ಗಮನಸೆಳೆದಿದೆ. 'ದೋಸೆ ಇಡ್ಲಿ ಸಾಂಬಾರ್ ಚಟ್ನಿ ಚಟ್ನಿ' ಎಂದು ತಂದೆ-ಮಗಳು ನೃತ್ಯ ಮಾಡಿದ ಹೃದಯಸ್ಪರ್ಶಿ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡಿದೆ. ಈ ವಿಡಿಯೊದಲ್ಲಿ ಅಪ್ಪ ಹಾಗೂ ಮಗಳು ಸಾಂಪ್ರದಾಯಿಕ ದಕ್ಷಿಣ ಭಾರತದ ಉಡುಪನ್ನು ಧರಿಸಿ, ಆಹಾರ ಪ್ರಿಯರ ಟ್ರ್ಯಾಕ್‍ಗೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಅವರ ನೃತ್ಯ ವೀಕ್ಷಕರನ್ನು ಆಕರ್ಷಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಮೆಚ್ಚುಗೆಯನ್ನು ಗಳಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾದ ಈ ವಿಡಿಯೊದಲ್ಲಿ, ತಂದೆ ಬಿಳಿ ಶರ್ಟ್ ಮತ್ತು ಪಂಚೆ ಧರಿಸಿ, ಭುಜದ ಮೇಲೆ ಹಸಿರು ಮತ್ತು ಹಳದಿ ಶಾಲು ಹಾಕಿಕೊಂಡಿದ್ದರೆ, ಮಗಳು ಬಿಳಿ ಮತ್ತು ಚಿನ್ನದ ಬಣ್ಣದ ಸೀರೆ ಧರಿಸಿದ್ದಳು. ಇವರಿಬ್ಬರ ನೃತ್ಯ ಕೂಡ ನೋಡುಗರ ಕಣ್ಮನ ಸೆಳೆದಿತ್ತು.
ಅಪ್ಪ-ಮಗಳ ಡ್ಯಾನ್ಸ್ ವಿಡಿಯೊ ಇಲ್ಲಿದೆ ನೋಡಿ...
ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾದ ಈ ಡ್ಯಾನ್ಸ್ ರೀಲ್ ಈಗಾಗಲೇ 14 ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ. ಜೊತೆಗೆ 7.2 ಲಕ್ಷ ಲೈಕ್‍ಗಳು ಮತ್ತು ಸಾವಿರಾರು ಕಾಮೆಂಟ್‍ಗಳನ್ನು ಪಡೆದಿದೆ. ತಂದೆ-ಮಗಳ ಜೋಡಿಗೆ ನೆಟ್ಟಿಗರು ಪ್ರಶಂಸೆ ಮತ್ತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ಉತ್ಸಾಹವನ್ನು ಗಮನಿಸಿದ ನಂತರ ಕೆಲವು ನೆಟ್ಟಿಗರು ಈ ಟ್ರೆಂಡಿಂಗ್ ಹಾಡಿನ ಹಿಂದಿನ ನಿಜವಾದ ಗಾಯಕ ತಂದೆ ಎಂದು ನಂಬಿದ್ದರು. ತಂದೆಯನ್ನು ಹಾಡಿನ ಮೂಲ ಸೃಷ್ಟಿಕರ್ತ ಎಂದು ಊಹಿಸಿ, "ಅಂಕಲ್ ಈ ಹಾಡನ್ನು ಹಾಡಿದಂತೆ ತೋರುತ್ತದೆ" ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, "ಅಂಕಲ್ ತುಂಬಾ ಚೆನ್ನಾಗಿ ಮಾಡಿದ್ದಾರೆ” ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:Viral Video: ದೇಸಿ ಹೆಂಡ ಸವಿದ ವಿದೇಶಿಗ ಕೊನೆಗೆ ಹೇಳಿದ್ದೇನು ಗೊತ್ತಾ? ವಿಡಿಯೊ ವೈರಲ್
ವೈರಲ್ ಆಗಿರುವ ಈ ವಿಡಿಯೊ ತಮಿಳು ಹಾಡು ದಕ್ಷಿಣ ಭಾರತದ ಪ್ರಿಯವಾದ ಭಕ್ಷ್ಯಗಳನ್ನು ತಿಳಿಸುವ ತಮಾಷೆಯ ಸಾಹಿತ್ಯದೊಂದಿಗೆ ನೆಟ್ಟಿಗರ ಮನ ಗೆದ್ದಿದೆ. ಇತ್ತೀಚಿನ ದಿನಗಳಲ್ಲಿ ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ. ಸೆಲೆಬ್ರಿಟಿಗಳೂ ಸೇರಿದಂತೆ ಅನೇಕರು ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ.