#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ಶಾರುಖ್ ಹಾಡಿಗೆ ಸಿಗ್ನೇಚರ್ ಸ್ಟೆಪ್ ಹಾಕಿ ಸಖತ್ ಡ್ಯಾನ್ಸ್ ಮಾಡಿದ ಕಿಲ್ ಪೌಲ್; ವಿಡಿಯೊ ಇಲ್ಲಿದೆ

ಬಾಲಿವುಡ್‌ ಸ್ಟಾರ್‌ ಶಾರುಖ್‌ ಖಾನ್‌ ಅಭಿನಯದ ʼವೀರ್ ಝರಾʼ ಸಿನೆಮಾದ ಜನಪ್ರಿಯ 'ಜಾ ನಂ ದೇಖಲೊಮಿಟ್ ಗಯಿʼ ಹಾಡಿಗೆ ತಾಂಜಾನಿಯಾದ ಸೋಷಿಯಲ್ ಮೀಡಿಯಾ ಸ್ಟಾರ್ ಕಿಲಿ ಪೌಲ್ ಹಾಗೂ ದುಬೈಯ ಬರ್ಮೆದಾಸ್ ಅವರು ಸಖತ್ ಆಗಿಯೇ ಸ್ಟೆಪ್ ಹಾಕಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ.

ಶಾರುಖ್ ಖಾನ್ ಹಾಡಿಗೆ ಸಖತ್ ಸ್ಟೆಪ್ ಹಾಕಿದ ಕಿಲಿ ಪೌಲ್

kili paul viral

Profile Pushpa Kumari Feb 10, 2025 5:18 PM

ಹೊಸದಿಲ್ಲಿ: ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್‌ ಅವರಿಗೆ ಪ್ರಪಂಚದಾದ್ಯಂತ ಬಹಳಷ್ಟು ಅಭಿಮಾನಿಗಳಿದ್ದಾರೆ. ಇವರ ಸಿನಿಮಾಗಳ ಹಾಡುಗಳು ಭಾರತ ಮಾತ್ರವಲ್ಲ ಹಲವು ದೇಶಗಳಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತವೆ. ಇದೀಗ ಶಾರುಖ್ ಅಭಿನಯದ ಸಿನಿಮಾ ಹಾಡೊಂದು ಅದೇ ರೀತಿ ಹೊರ ದೇಶದಲ್ಲಿಯೂ ಕ್ರೇಜ್ ಹುಟ್ಟಿಸಿದೆ. ಸೋಶಿಯಲ್ ಮೀಡಿಯಾ ಸೆನ್ಸೇಷನಲ್ ಸ್ಟಾರ್, ತಾಂಜಾನಿಯಾದ ಕಿಲಿ ಪೌಲ್ ಮತ್ತು ದುಬೈಯ ಬರ್ಮೆದಾಸ್ ಎನ್ನುವವರು ಶಾರುಖ್ ಅಭಿನಯದ ಹಾಡಿಗೆ ಸಿಗ್ನೇಚರ್ ಸ್ಟೆಪ್ ಹಾಕಿರುವ ವಿಡಿಯೊವೊಂದು ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ (Viral Video). ಶಾರುಖಾನ್ ಅಭಿನಯದ ʼವೀರ್ ಝರಾʼ ಸಿನೆಮಾದ ಜನಪ್ರಿಯ ಹಾಡು ʼಜಾ ನಂ ದೇಖಲೊ ಮಿಟ್ ಗಯಿʼ ಹಾಡಿಗೆ ಕಿಲಿ ಪೌಲ್ ಹಾಗೂ ಬರ್ಮೆದಾಸ್ ಅವರು ಸಖತ್ ಆಗಿಯೇ ಸ್ಟೆಪ್ ಹಾಕಿದ್ದಾರೆ.

ವೈರಲ್ ಆದ ವಿಡಿಯೊದಲ್ಲಿ ಕಿಲಿ ಪೌಲ್ ಮತ್ತು ಬರ್ಮೆದಾಸ್ ಅವರು ಶಾರುಖ್ ಅವರಂತೆ ಪ್ರೀತಿಯನ್ನು ವ್ಯಕ್ತಪಡಿಸುವ ರೀತಿಯಲ್ಲಿ ಸಿಗ್ನೇಚರ್ ಸ್ಟೆಪ್ ಹಾಕಿದ್ದಾರೆ. ಬರ್ಮೆದಾಸ್ ಅವರು ತಾಂಜೇನಿಯ ಜನಾಂಗದ ಸಾಂಪ್ರದಾಯಿಕ ಉಡುಗೆಯನ್ನು ಧರಿಸಿದ್ದು ಈ ವಿಡಿಯೊದ ಇನ್ನೊಂದು ವಿಶೇಷತೆ.‌ ಶಾರುಖ್‌ ಖಾನ್‌ ಅವರ ಅಭಿಮಾನಿಗಳು ಕಿಲಿ ಪೌಲ್ ಅವರ ಸಿಗ್ನೇಚರ್ ಸ್ಟೆಪ್‌ಗೆ ಫಿದಾ ಆಗಿದ್ದಾರೆ.

ಕಿಲಿ ಪೌಲ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೊ ಅಪ್‌ಲೋಡ್‌ ಮಾಡಿದ್ದು, ಬರ್ಮೆದಾಸ್ ಅವರು ತೋರಿಸಿದ ಪ್ರೀತಿ ಗೌರವಕ್ಕೆ ಧನ್ಯವಾದ. ಈ ಭೇಟಿ ತುಂಬಾ ಖುಷಿ ನೀಡಿದೆ ಎಂದು ಕ್ಯಾಪ್ಶನ್ ನೀಡಿದ್ದಾರೆ. ಇದುವರೆಗೆ ಈ ವಿಡಿಯೊ 7.5 ಲಕ್ಷಕ್ಕೂ ಅಧಿಕ ವೀವ್ಸ್ ಪಡೆದಿದ್ದು ಸೋಶಿಯಲ್ ಮೀಡಿಯಾದಲ್ಲಿ ಹಾಡಿನ ಜತೆಗೆ ಶಾರುಖ್‌ ಖಾನ್‌ ಐಕಾನಿಕ್ ಸ್ಟೆಪ್ ಟ್ರೆಂಡ್‌ನಲ್ಲಿದೆ.

ಇದನ್ನು ಓದಿ: Viral News: ಸಂಜೆ 6 ಗಂಟೆಯಾಗುತ್ತಿದ್ದಂತೆ ಈ ಹಳ್ಳಿಯಲ್ಲಿ ಫೋನ್‌ ಮತ್ತು ಟಿವಿ ಬಂದ್!

ಈ ವಿಡಿಯೊ ನೋಡಿದ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದು, ಕಿಲಿ ಪೌಲ್ ಸ್ಟೆಪ್‌ಗೆ ಮೆಚ್ಚುಗೆ ನೀಡಿದ್ದಾರೆ‌. ನಿಮ್ಮ ಅಭಿಮಾನಕ್ಕೆ ಸಲಾಂ ಎಂದು ಶಾರುಖ್ ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರ ನಿಮ್ಮ ಸಿಗ್ನೇಚರ್ ಸ್ಟೆಪ್ ಅದ್ಭುತವಾಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.