ವ್ಯಾಲೆಂಟೈನ್ಸ್ ಡೇ ದಿನಕ್ಕೆ ಬ್ರೇಕ್; ಆಚರಣೆ ಮಾಡಿದ್ದಲ್ಲಿ ತಲೆಬೋಳಿಸುವುದಾಗಿ ಎಚ್ಚರಿಕೆ ನೀಡಿದ ಕ್ರಾಂತಿ ಸೇನೆ!
Viral Video: ಮುಜಫರ್‌ನಗರದಲ್ಲಿ, ಕ್ರಾಂತಿ ಸೇನೆಯ ಸದಸ್ಯರು ಪ್ರೇಮಿಗಳ ದಿನದ ಮುಂಚಿತವಾಗಿಯೇ 'ಲಾಠಿ ಪೂಜೆ' ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮರದ ಕೋಲುಗಳಿಗೆ ಪ್ರಾರ್ಥನೆ ಸಲ್ಲಿಸಿ ತಿಲಕ ಇಡುವು ದನ್ನು ತೋರಿಸಲಾಗಿದೆ. ವ್ಯಾಲೆಂಟೈನ್ಸ್ ಡೇ ಯಂದು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡು ಆಚರಣೆ ಮಾಡುವ ವರನ್ನು ತಡೆಯಲು ಈ ಕೋಲುಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಸಂಘಟನೆ ತಿಳಿಸಿದೆ.
ವ್ಯಾಲೆಂಟೈನ್ಸ್ ಡೇ ಆಚರಣೆಗೆ ನಿಷೇಧ ಹೇರಿದ ಕ್ರಾಂತಿ ಸೇನೆ -
ಮುಜಾಫರ್‌ನಗರ,ಫೆ.14:ಇಂದು ಪ್ರೇಮಿಗಳ ದಿನಚಾರಣೆಯನ್ನು ಎಲ್ಲೆಡೆ ಆಚರಿಸಲಾಗುತ್ತಿದೆ. ರೆಡ್ ರೋಸ್ ನಿಂದ ಹಿಡಿದು ಚಾಕೊ ಲೇಟ್‌ಗಳವರೆಗೆ, ದೇಶಾದ್ಯಂತ ಪ್ರೇಮಿಗಳು ಈ ಸಂದರ್ಭ ವನ್ನು ತಮ್ಮದೇ ಆದ ರೀತಿಯಲ್ಲಿ ಆಚರಣೆಗೆ ಸಿದ್ಧತೆ ಮಾಡಿ ಕೊಂಡಿದ್ದಾರೆ. ಆದರೆ ಈ ದಿನಾಚರಣೆ ಯನ್ನು (Viral Video) ಕ್ರಾಂತಿ ಸೇನಾ ಸದಸ್ಯರು ವಿರೋಧಿಸಿದ್ದು ಪ್ರೇಮಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ 'ಕ್ರಾಂತಿ ಸೇನೆ' (Kranti Sena) ಎಂಬ ಸಂಘಟನೆಯೂ ಪ್ರೇಮಿಗಳ ದಿನದಂತಹ ಸಾರ್ವಜನಿಕ ಆಚರಣೆಗಳ ವಿರುದ್ಧ ಎಚ್ಚರಿಕೆ ನೀಡಿದ್ದಾರೆ.
ಮುಜಫರ್‌ನಗರದಲ್ಲಿ, ಕ್ರಾಂತಿ ಸೇನೆಯ ಸದಸ್ಯರು ಪ್ರೇಮಿಗಳ ದಿನದ ಮುಂಚಿತವಾಗಿಯೇ 'ಲಾಠಿ ಪೂಜೆ' ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮರದ ಕೋಲುಗಳಿಗೆ ಪ್ರಾರ್ಥನೆ ಸಲ್ಲಿಸಿ ತಿಲಕ ಇಡುವು ದನ್ನು ತೋರಿಸಲಾಗಿದೆ. ವ್ಯಾಲೆಂಟೈನ್ಸ್ ಡೇ ಯಂದು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡು ಆಚರಣೆ ಮಾಡುವವರನ್ನು ತಡೆಯಲು ಈ ಕೋಲುಗಳನ್ನು ಬಳಕೆ ಮಾಡಲಾಗುತ್ತದೆ ಎಂದು ಸಂಘಟನೆ ತಿಳಿಸಿದೆ.
ವಿಡಿಯೋ ನೋಡಿ:
Kranti Sena Threatens to Beat Couples With Sticks During Valentine's Week pic.twitter.com/xNiYuEt8XX
— Ghar Ke Kalesh (@gharkekalesh) February 12, 2026
ಪೂಜೆಯನ್ನು ಸಂಸ್ಥೆಯ ಕಚೇರಿಯಲ್ಲಿ ನಡೆಸಲಾಗಿದ್ದು ಫೆಬ್ರವರಿ 14 ಕ್ಕೆ ಸಂಬಂಧಿಸಿದ ಕಾರ್ಯ ಕ್ರಮಗಳನ್ನು ವಿರೋಧಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪೂನಂ ಚೌಧರಿ ಹೇಳಿಕೆ ನೀಡಿದ್ದಾರೆ. ಅದೇ ರೀತಿ ಮಾರುಕಟ್ಟೆ ಪ್ರದೇಶದ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರಿಗೆ ಪ್ರೇಮಿಗಳಿಗೆ ಬೆಂಬಲ ನೀಡದಂತೆ ಲಿಖಿತ ನೋಟಿಸ್‌ಗಳನ್ನು ಸಹ ವಿತರಿಲಾಗಿದೆ. ಪ್ರೇಮಿಗಳ ದಿನಾಚರಣೆಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸದಂತೆ ಅವರು ಸೂಚನೆ ನೀಡಿದ್ದಾರೆ.
Viral News: ಪುರುಷತ್ವ ಪರೀಕ್ಷೆ ಮಾಡಿಸಲು ಪತಿ ನಕಾರ; ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ
ಇಂತಹ ಆಚರಣೆ ಸಮಾಜದಲ್ಲಿ ಅಶ್ಲೀಲತೆಯನ್ನು ಉಂಟು ಮಾಡುತ್ತದೆ ಎಂದು ಸಂಘಟನೆ ಹೇಳಿಕೊಂಡಿದೆ. ಒಂದು ವೇಳೆ ಈ ಎಚ್ಚರಿಕೆಗಳನ್ನು ನಿರ್ಲಕ್ಷಿಸಿದರೆ, ರೇಜರ್ ಗಳಿಂದ ತಲೆ ಬೋಳಿಸಿ ಕೊಳ್ಳುವಂತಹ ಶಿಕ್ಷಾರ್ಹ ಕ್ರಮಗಳ ಬಗ್ಗೆಯೂ ಅದು ಎಚ್ಚರಿಸಿದೆ. ಸದ್ಯ ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಬಳಕೆದಾರರಿಂದ ತೀಕ್ಷ್ಣ ಪ್ರತಿಕ್ರಿಯೆಗಳನ್ನು ಉಂಟುಮಾಡಿದೆ ದೇಶದಲ್ಲಿ ದಿನನಿತ್ಯ ಅತ್ಯಾಚಾರದಂತ ಘಟನೆಗಳು ನಡೆಯುತ್ತಿದ್ದರೂ ಇವರು ಪ್ರೇಮಿಗಳನ್ನು ಶತ್ರುಗಳಂತೆ ಬಿಂಬಿಸುತ್ತಿದ್ದಾರೆ ಎಂದು ಹಲವರು ಟೀಕೆ ಮಾಡಿದ್ದಾರೆ.
ಬಳಕೆದಾರರೊಬ್ಬರು ಒಂಟಿ ಯುವಕ- ಯುವತಿಯರು ಇದನ್ನು ನೋಡಿ ಸಂತೋಷಪಡುತ್ತಾರೆ ಎಂದು ತಮಾಷೆ ಮಾಡಿದ್ದಾರೆ. ಕೆಲವರು ಪ್ರೇಮಿಗಳ ದಿನಾಚರಣೆ ವಿರೋಧಿಸುವುದರ ಜೊತೆಗೆ, ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಸೈನಿಕರ ನೆನಪಿಗಾಗಿ ಫೆಬ್ರವರಿ 14 ಅನ್ನು ಬ್ಲಾಕ್ ಡೇ ಯಾಗಿ ಆಚರಿಸಬೇಕೆಂದು ಒತ್ತಾಯಿಸಿದ್ದಾರೆ.