ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪ್ರಧಾನಿ ಮೋದಿ ಎದುರು ಗಾಯತ್ರಿ ಮಂತ್ರ ಪಠಿಸಿದ ಪುಟ್ಟ ಬಾಲಕಿ; ಕ್ಯೂಟ್ ದೃಶ್ಯಕ್ಕೆ ನೆಟ್ಟಿಗರು ಫಿದಾ

Viral Video: ತಮಿಳುನಾಡಿನ ನಾಗರಕೋಯಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗಿರಿಜಾ ಎಂಬ ಪುಟ್ಟ ಬಾಲಕಿಯ ನಡುವೆ ನಡೆದ ಆತ್ಮೀಯ ಸಂವಾದದ ದೃಶ್ಯ ಎಲ್ಲರ ಗಮನ ಸೆಳೆದಿದೆ. ಬಾಲಕಿಯೂ ಪ್ರಧಾನಿಯನ್ನು ಸ್ವಾಗತಿಸುವ ಸಂದರ್ಭದಲ್ಲಿ ಸಾಂಪ್ರದಾಯಿಕ ಹಿಂದೂ ಪ್ರಾರ್ಥನೆಗಳನ್ನು ಆತ್ಮವಿಶ್ವಾಸದಿಂದ ಪಠಿಸಿದ್ದಾಳೆ.

ಗಾಯತ್ರಿ ಮಂತ್ರ ಪಠಿಸಿ ಪ್ರಧಾನಿ ಮೋದಿ ಸ್ವಾಗತಿಸಿದ ಬಾಲಕಿ: ವಿಡಿಯೊ ನೋಡಿ

ಗಾಯತ್ರಿ ಮಂತ್ರ ಪಠಿಸಿ ಪ್ರಧಾನಿ ಮೋದಿಯನ್ನು ಸ್ವಾಗತಿಸಿದ ಬಾಲಕಿ -

Profile
Pushpa Kumari Apr 17, 2026 12:41 PM

ನಾಗರಕೋಯಿಲ್,ಎ.17: ದೇಶದ ನಾಯಕತ್ವ ಸಾರುವಲ್ಲಿ ಪ್ರಧಾನಿ ಮೋದಿ ಪಾತ್ರ ಬಹಳಷ್ಟು ಇದೆ. ಈ ನಡುವೆ ಇವರ ಸರಳ ವ್ಯಕ್ತಿತ್ವಕ್ಕೂ ಇಡೀ ದೇಶವೇ ಮೆಚ್ಚುಗೆ ನೀಡಿದೆ. ಮಕ್ಕಳೊಂದಿಗೆ, ಜನ ಸಾಮಾನ್ಯರೊಂದಿಗೆ ಬೆರೆಯುವ ಹಲವು ದೃಶ್ಯಗಳು ಇತ್ತೀಚೆಗೆ ವೈರಲ್ (Viral News) ಆಗಿವೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಮತ್ತು ಗಿರಿಜಾ ಎಂಬ ಪುಟ್ಟ ಬಾಲಕಿಯ ಹೃದಯಸ್ಪರ್ಶಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ತಮಿಳುನಾಡಿನ ನಾಗರಕೋಯಿಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗಿರಿಜಾ ಎಂಬ ಪುಟ್ಟ ಬಾಲಕಿಯ ನಡುವೆ ನಡೆದ ಆತ್ಮೀಯ ಸಂವಾದದ ದೃಶ್ಯ ಎಲ್ಲರ ಗಮನ ಸೆಳೆದಿದೆ. ಬಾಲಕಿಯೂ ಪ್ರಧಾನಿಯನ್ನು ಸ್ವಾಗತಿಸುವ ಸಂದರ್ಭದಲ್ಲಿ ಸಾಂಪ್ರದಾಯಿಕ ಹಿಂದೂ ಪ್ರಾರ್ಥನೆಗಳನ್ನು ಆತ್ಮವಿಶ್ವಾಸದಿಂದ ಪಠಿಸಿದ್ದಾಳೆ.

ವಿಡಿಯೋ ನೋಡಿ:



ಪ್ರಧಾನಿ ಮೋದಿ ಅವರು ಇತ್ತೀಚೆಗೆ ನಾಗರಕೋಯಿಲ್‌ಗೆ ಭೇಟಿ ನೀಡಿದ್ದು ಅವರು ಸುಮಾರು ಮೂರು ದಶಕಗಳ ನಂತರ ಶ್ರೀ ಗೋಮತಮ್ ವೀರರಾಘವನ್ ಅವರನ್ನು ಭೇಟಿಯಾದರು. ಆಗ ಅವರ ಕುಟುಂಬದ ಪುಟ್ಟ ಬಾಲಕಿಯೂ ವಿಶೇಷವಾಗಿ ಸ್ವಾಗತ ಕೋರಿದ್ದಾಳೆ. ವಿದ್ಯಾದೇವತೆಯ ಪ್ರಾರ್ಥನೆಯೊಂದಿಗೆ ಆತ್ಮವಿಶ್ವಾಸದಿಂದ ಶ್ಲೋಕ ಪಠಿಸಿದ್ದು ನಂತರ ಗಾಯತ್ರಿ ಮಂತ್ರವನ್ನು ಪಠಿಸಿದ್ದಾಳೆ.

Viral News: ಅಶ್ಲೀಲ ವಿಡಿಯೊ ವೀಕ್ಷಿಸುವ ಪತಿಯನ್ನು ಸರಿಪಡಿಸಲು ಹೋದ ಪತ್ನಿಈ ಚಟಕ್ಕೆ ಬಲಿಯಾಗಿದ್ದು ಹೇಗೆ?

ಆ ಬಾಲಕಿಯೂ ನಿಮ್ಮನ್ನು ನೋಡಿ ತುಂಬಾ ಸಂತೋಷವಾಗಿದೆ ಜಿ" ಎಂದು ಹೇಳುವ ಮೂಲಕ ಪ್ರಧಾನಿ ಮೋದಿಯೊಂದಿಗೆ ಸಂವಹನ ನಡೆಸುತ್ತಾಳೆ. ಪ್ರಧಾನಿ ನರೇಂದ್ರ ಮೋದಿಯವರು ಹೆಮ್ಮೆಯ ನಗುವಿನೊಂದಿಗೆ ಆಕೆಯ ಶ್ಲೋಕವನ್ನು ಗಮನವಿಟ್ಟು ಕೇಳುತ್ತಿರುವುದು ಕಂಡು ಬರುತ್ತದೆ. ಬಾಲಕಿಯೂ ತನ್ನ ಪಠಣವನ್ನು ಪೂರ್ಣಗೊಳಿಸುತ್ತಿದ್ದಂತೆ ತುಂಬಾ ಚೆನ್ನಾಗಿದೆ.. ಎಂದು ಮೆಚ್ಚುಗೆಯೊಂದಿಗೆ ಪ್ರೋತ್ಸಾಹಿಸುತ್ತಾರೆ,

ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಇದನ್ನು "ಅರ್ಥಪೂರ್ಣ" ಎಂದು ಕರೆಯುತ್ತಿದ್ದಾರೆ, ನೆಟ್ಟಿಗರೊಬ್ಬರು ಇಂದಿದಿನ ಆಧುನಿಕ ಯುಗದಲ್ಲಿ ಮಕ್ಕಳಿಗೆ ಇಂತಹ ಅಭ್ಯಾಸ ಕ್ರಮ ಬೇಕು ಎಂದು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ ಹೆಚ್ಚಿನ ಲೈಕ್ ಕಾಮೆಂಟ್ ಪಡೆದುಕೊಂಡಿದೆ.