ಲಖನೌ, ಫೆ. 22: ಮದುವೆ ಸಮಾರಂಭ ಅಂದಾಗ ಅದ್ಧೂರಿಯಾಗಿ ಆಚರಿಸಿಕೊಳ್ಳುವುದು ಸಾಮಾನ್ಯ ಎಂಬಂತಾಗಿದೆ. ಆದರೆ ಇಲ್ಲೊಂದು ಕಡೆ ಮದುವೆ ಗ್ರ್ಯಾಂಡ್ ಆಗಿ ಆಚರಿಸಲು ಸಿದ್ಧತೆ ನಡೆಯುತ್ತಿರುವಾಗಲೇ ವಿದ್ಯುತ್ ಕಡಿತಗೊಂಡ ಘಟನೆಯೊಂದು ನಡೆದಿದೆ. ಲೈನ್ ಮ್ಯಾನ್ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಘಟನೆ ಉತ್ತರ ಪ್ರದೇಶದ (UP Wedding) ಬಿಜ್ನೋರ್ ಜಿಲ್ಲೆಯ ಡೈಮಂಡ್ ಸಿಟಿಯಲ್ಲಿ ನಡೆದಿದೆ. ವರ ಶುಭಂ ಚೌಹಾಣ್ ಎಂಬ ವ್ಯಕ್ತಿ ಮೆರವಣಿಗೆ ಹೊರಡಲು ಸಿದ್ಧವಾಗಿದ್ದಾಗಲೇ ಈ ಘಟನೆ ನಡೆದಿದೆ.
ಮದುವೆ ಮೆರವಣಿಗೆ ಹೊರಡುವ ಸಂದರ್ಭ ವಿದ್ಯುತ್ ಇಲಾಖೆಯ ಅಧಿಕಾರಿಗಳು ಯಾವುದೇ ಸೂಚನೆ ಇಲ್ಲದೆ ಬಂದು ಸಂಪರ್ಕ ಕಡಿತಗೊಳಿಸಿದ್ದಾರೆ. ವಿದ್ಯುತ್ ಇಲಾಖೆಯ ಸಿಬ್ಬಂದಿ ಆಗಮಿಸಿ ಯಾವುದೇ ಮುನ್ಸೂಚನೆ ನೀಡದೆ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ ಎಂಬ ಕೇಳಿ ಬಂದಿದೆ.
ವಿಡಿಯೊ ನೋಡಿ:
ಶುಭಂ ಹೇಳಿಕೆಯ ಪ್ರಕಾರ, ಮೂವರು ಅಧಿಕಾರಿಗಳು ಬಂದು ತಮ್ಮ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು ಎಂದು ಹೇಳಿದ್ದಾರೆ. ತನಗೆ ಯಾವುದೇ ಪೂರ್ವ ಸೂಚನೆ ನೀಡಿಲ್ಲ. ಈ ವಿಷಯವನ್ನು ಚರ್ಚಿಸಲು ಒಂದು ಅಥವಾ ಎರಡು ದಿನ ವಿಳಂಬ ಮಾಡುವಂತೆ ಮನವಿ ಮಾಡಿದರೂ ಅಧಿಕಾರಿಗಳು ಕೇಳಲಿಲ್ಲವಂತೆ. ಶುಭಂ ಯಾವುದೇ ಬಾಕಿ ಮೊತ್ತ ಬಾಕಿ ಉಳಿದಿಲ್ಲ ಮತ್ತು ಸಂಪರ್ಕ ಪಡೆದಾಗಿನಿಂದ ಎಲ್ಲ ಬಿಲ್‌ಗಳನ್ನು ನಿಯಮಿತವಾಗಿ ಪಾವತಿಸಲಾಗುತ್ತಿದೆ ಎಂದು ಹೇಳಿದ್ದಾನೆ.
ಮಗುವಿನ ತೂಕಕ್ಕಿಂತ ಶಾಲಾ ಬ್ಯಾಗ್ ತೂಕವೇ ಹೆಚ್ಚಾಯಿತೇ? ತಂದೆಯ ಪೋಸ್ಟ್ ವೈರಲ್!
ಸರಿಯಾದ ಬಿಲ್ ಪಾವತಿ ಮಾಡಿದರೂ ಈ ರೀತಿಯಾಗಿ ಕೃತ್ಯ ಎಸಗಿರುವುದು ತಪ್ಪು ಎಂದು ಅನೇಕರು ವಿದ್ಯುತ್ ಇಲಾಖೆ ಅಧಿಕಾರಿಗಳನ್ನು ಟೀಕಿಸಿದ್ದಾರೆ. ಬಳಕೆದಾರರೊಬ್ಬರು ವಿದ್ಯುತ್ ಅಧಿಕಾರಿಗಳನ್ನು ತಕ್ಷಣ ವಜಾಗೊಳಿಸಬೇಕು ಅಥವಾ ಅಮಾನತುಗೊಳಿಸಬೇಕು ಎಂದಿದ್ದಾರೆ. ಮತ್ತೊಬ್ಬರು ಇದು ವೈಯಕ್ತಿಕ ದ್ವೇಷದಂತೆ ಕಾಣುತ್ತದೆ ಎಂದಿದ್ದಾರೆ.