ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕರುವಿಗೆ ಟೂತ್‌ಬ್ರಷ್‌ನಿಂದ ಹಲ್ಲುಜ್ಜಿದ ಪುಟ್ಟ ಬಾಲಕಿ: ಮುಗ್ಧತೆಗೆ ಮನಸೋತ ನೆಟ್ಟಿಗರು!

Viral Video: ಪುಟ್ಟ ಬಾಲಕಿಯೊಬ್ಬಳು ಮನೆಯ ಕರುವಿಗೆ ತೋರಿಸಿದ ಕಾಳಜಿಯೊಂದು ಎಲ್ಲರ ಮನಗೆದ್ದಿದೆ.. ಪುಟ್ಟ ಬಾಲಕಿಯೊಬ್ಬಳು ಕರುವಿನ ಹಲ್ಲು ಸ್ವಚ್ಛಗೊಳಿಸಲು ಟೂತ್‌ಬ್ರಷ್ ಬಳಕೆ ಮಾಡಿ ನೆಟ್ಟಿಗರ ಹೃದಯಗಳನ್ನು ಗೆದ್ದಿದ್ದಾಳೆ. ಕರುವಿನ ಬಾಯಿಯನ್ನು ತನ್ನ ಪುಟ್ಟ ಕೈಗಳಿಂದ ಹಿಡಿದು ಹಲ್ಲುಜ್ಜುತ್ತಿರುವ ವಿಡಿಯೋ ಸದ್ಯ ಭಾರೀ ವೈರಲ್ ಆಗಿದೆ.

ಕರುವಿಗೆ ಟೂತ್‌ಬ್ರಷ್ ನಿಂದ ಹಲ್ಲುಜ್ಜಿದ ಪುಟ್ಟ ಬಾಲಕಿ

ನವದೆಹಲಿ, ಡಿ.18: ಮಕ್ಕಳ ಮನಸ್ಸು ಪರಿಶುದ್ಧ ಎನ್ನುತ್ತಾರೆ. ಅದರಲ್ಲೂ ಮಕ್ಕಳ ಮನಸ್ಸು ಎಷ್ಟು ಮುಗ್ದತೆಯಿಂದ ಇರುತ್ತೆ ಅನ್ನೋದಕ್ಕೆ ಆಗಾಗ ಕೆಲವೊಂದು ವಿಡಿಯೊಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತವೆ. ಇದಕ್ಕೆ ಸಾಕ್ಷಿ ಎಂಬಂತೆ ಪುಟ್ಟ ಬಾಲಕಿ ಯೊಬ್ಬಳು ಮನೆಯ ಕರುವಿಗೆ ತೋರಿಸಿದ ಕಾಳಜಿಯೊಂದು ಎಲ್ಲರ ಮನಗೆದ್ದಿದೆ. ಪುಟ್ಟ ಬಾಲಕಿ ಯೊಬ್ಬಳು ಕರುವಿನ ಹಲ್ಲು ಸ್ವಚ್ಛಗೊಳಿಸಲು ಟೂತ್‌ಬ್ರಷ್ ಬಳಕೆ ಮಾಡಿ ನೆಟ್ಟಿಗರ ಹೃದಯ ಗೆದ್ದಿದ್ದಾಳೆ. ಕರುವಿನ ಬಾಯಿಯನ್ನು ತನ್ನ ಪುಟ್ಟ ಕೈಗಳಿಂದ ಹಿಡಿದು ಹಲ್ಲುಜ್ಜುತ್ತಿರುವ ವಿಡಿಯೋ ಸದ್ಯ ಭಾರೀ ವೈರಲ್ ಆಗಿದೆ.

ಮಕ್ಕಳು ತಮ್ಮ ಮುಗ್ಧತೆಯಿಂದಲೇ ಎಲ್ಲರನ್ನೂ ಅಚ್ಚರಿಗೊಳಿಸುತ್ತಾರೆ ಎನ್ನುವುದಕ್ಕೆ ಇದೇ ದೃಶ್ಯ ಸಾಕ್ಷಿಯಾಗಿದೆ. ಯಾರೂ ನಿರೀಕ್ಷೆ ಮಾಡದ ಕೆಲಸವನ್ನು ಒಬ್ಬ ಪುಟ್ಟ ಹುಡುಗಿ ಮಾಡಿ ಹೃದಯ ಗೆದ್ದಿದ್ದಾಳೆ.ಮನ್ನತ್ ಎನ್ನುವ ಪುಟ್ಟ ಹುಡುಗಿ ತನ್ನ ಹಳದಿ ಬಣ್ಣದ ಟೂತ್‌ಬ್ರಷ್ ಬಳಸಿ ಕರುವಿಗೆ ಹಲ್ಲುಜ್ಜಲು ಮುಂದಾಗಿದ್ದಾಳೆ. ತನಗಿಂತ ಆ ಕರು ಗಾತ್ರದಲ್ಲಿ ದೊಡ್ಡದಾಗಿದ್ದರು ಅದರ ಹಲ್ಲು ಗಳನ್ನು ಸ್ವಚ್ಛಗೊಳಿಸಲು ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿರುವುದು ಕಂಡು ಬಂದಿದೆ.‌ ಕ್ಲಿಪ್‌ನಲ್ಲಿ, ಬಾಲಕಿ ಎಮ್ಮೆಯ ಕರುವಿನ ಹಲ್ಲುಜ್ಜುವುದನ್ನು ಕಾಣಬಹುದು ಮತ್ತು ಆ ಕ್ಷಣವು ಎಂತವರ ಮುಖದಲ್ಲೂ ನಗು ಮೂಡಿಸುವಂತಿದೆ. ಆಕೆ ಕರುವಿನ ಒಂದೊಂದು ಹಲ್ಲನ್ನೂ ಎಚ್ಚರಿಕೆಯಿಂದ ಸ್ವಚ್ಛಗೊಳಿಸುತ್ತಿರುವ ದೃಶ್ಯ ಎಲ್ಲರ ಮನಸೆಳೆಯುವಂತಿದೆ.

ವಿಡಿಯೋ ನೋಡಿ:



ಈ ವಿಡಿಯೋ ನೋಡಿದ ನೆಟ್ಟಿಗರು ತಮಾಷೆಯ ಹಾಗೂ ಪ್ರೀತಿಯ ಕಾಮೆಂಟ್‌ಗಳನ್ನು ನೀಡಿದ್ದಾರೆ. ಬಳಕೆದಾರರೊಬ್ಬರು ನಿಮ್ಮ ಟೂತ್‌ಪೇಸ್ಟ್‌ನಲ್ಲಿ ಉಪ್ಪಿದೆಯೇ? ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ಈ ಬಾಲಕಿಯ ಮುಗ್ದತೆ ಎಲ್ಲರನ್ನೂ ಮೆಚ್ಚಿಸಿದೆ ಕರುವು ಕೂಡ ಬಹಳ ಶಾಂತವಾಗಿ ಬಾಲಕಿಗೆ ಸಹಕರಿಸುತ್ತಿರುವುದು ವಿಶೇಷ ಎಂದು ಬರೆದುಕೊಂಡಿದ್ದಾರೆ. ಮತ್ತೊಬ್ಬ ವ್ಯಕ್ತಿ, "ಒಬ್ಬ ದಂತವೈದ್ಯನಾಗಿ, ಇಂದು ನಾನು ನೋಡಿದ ಅತ್ಯುತ್ತಮ ವಿಡಿಯೊ ಇದು ಎಂದು ಪ್ರತಿಕ್ರಿಯೆ ನೀಡಿದ್ದಾರೆ.

14 ಗಂಟೆಗೂ ಹೆಚ್ಚು ಕೆಲಸ ಮಾಡಿದ ಬ್ಲಿಂಕ್‌ಇಟ್ ಡೆಲಿವರಿ ಬಾಯ್; ಆತನ ಆದಾಯ ಎಷ್ಟು?

ಗ್ರಾಮೀಣ ಭಾಗದ ಮಕ್ಕಳ ಮುಗ್ಧತೆಯನ್ನು ತೋರಿಸುವ ಈ ವಿಡಿಯೋ ಪ್ರಾಣಿಗಳ ನಡುವಿನ ಉತ್ತಮ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಬಾಲಕಿಯ ಈ ವಿಡಿಯೊ ಸದ್ಯಕ್ಕೆ ಸೋಷಿಯಲ್ ಮೀಡಿಯಾದ 'ಕ್ಯೂಟೆಸ್ಟ್' ವಿಡಿಯೋ ಆಗಿದೆ.