ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: 14 ಗಂಟೆಗೂ ಹೆಚ್ಚು ಕೆಲಸ ಮಾಡಿದ ಬ್ಲಿಂಕ್‌ಇಟ್ ಡೆಲಿವರಿ ಬಾಯ್; ಆತನ ಆದಾಯ ಎಷ್ಟು?

ಝೋಮೆಟೊ ಅಧೀನದ ಬ್ಲಿಂಕ್‌ಇಟ್ ಕಂಪನಿಯ ಆ್ಯಪ್ ಅನ್ನು ಕೋಟ್ಯಾಂತರ ಗ್ರಾಹಕರು ನಿತ್ಯ ಬಳಸುತ್ತಿದ್ದಾರೆ. ಗ್ರಾಹಕರಿಗೆ 10-20 ನಿಮಿಷಗಳ ಒಳಗೆ ತಮಗೆ ಬೇಕಾದ ವಸ್ತು ಮನೆ ಬಾಗಿಲಿಗೆ ತಲುಪುವ ಕಾರಣ ಈ ವ್ಯವಸ್ಥೆ ಹಲವರ ಮನ ಗೆದ್ದಿದೆ. ಇದರ ಡೆಲಿವರಿ ಬಾಯ್ಸ್‌ಗೆ ಉತ್ತಮ ವೇತನ ಸಿಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ ವ್ಯಕ್ತಿಯೊಬ್ಬ ದಿನವಿಡಿ ಡೆಲಿವರಿ ಮಾಡಿ ಬಹಳ ಕಡಿಮೆ ವೇತನ ಸಿಕ್ಕಿದೆ ಎಂದು ತಾನು ಗಳಿಸಿದ್ದ ಆದಾಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಬ್ಲಿಂಕ್‌ಇಟ್ ಡೆಲಿವರಿ ಬಾಯ್‌ಗೆ ಸಿಗುವ ದಿನದ ಆದಾಯ ಎಷ್ಟು?

ಬ್ಲಿಂಕ್‌ಇಟ್ ಡೆಲಿವರಿ ಬಾಯ್‌ಗೆ ಸಿಗುವ ದಿನದ ಆದಾಯ -

Profile
Pushpa Kumari Dec 16, 2025 8:53 PM

ನವದೆಹಲಿ, ಡಿ. 16: ಭಾರತದ ಆನ್‌ಲೈನ್‌ ಮಾರುಕಟ್ಟೆಯಲ್ಲಿ ಬ್ಲಿಂಕ್‌ಇಟ್‌ ಕಂಪನಿ ಪ್ರಮುಖ ಸ್ಥಾನ ಗಳಿಸಿದೆ. ಅಗತ್ಯ ಸಾಮಗ್ರಿಗಳಾದ ದಿನಸಿ ವಸ್ತುಗಳು, ಹಣ್ಣುಗಳು, ತರಕಾರಿಗಳು, ಎಲೆಕ್ಟ್ರಾನಿಕ್ಸ್ ಮತ್ತು ಇತರ ವಸ್ತುಗಳನ್ನು ನಿಮ್ಮ ಮನೆ ಬಾಗಿಲಿಗೆ ನಿಮಿಷಗಳಲ್ಲಿ ತಲುಪಿಸುವ ಈ ವಿಶೇಷ ಸೇವೆಯು ಈಗ ಬಹುತೇಕ ನಗರಗಳಲ್ಲಿ ಜನಪ್ರಿಯವಾಗಿದೆ.ಝೋಮೆಟೊ ಅಧೀನದ ಬ್ಲಿಂಕ್‌ಇಟ್ ಕಂಪನಿಯ ಆ್ಯಪ್ ಅನ್ನು ಕೋಟ್ಯಾಂತರ ಗ್ರಾಹಕರು ನಿತ್ಯ ಬಳಸುತ್ತಿದ್ದಾರೆ. 10-20 ನಿಮಿಷಗಳ ಒಳಗೆ ತಮಗೆ ಬೇಕಾದ ವಸ್ತು ಮನೆ ಬಾಗಿಲಿಗೆ ತಲುಪುವ ಕಾರಣ ಈ ವ್ಯವಸ್ಥೆ ಬಹಳ ಅನುಕೂಲವಾಗಿದೆ. ಇದರಲ್ಲಿ ಕೆಲಸ ಮಾಡುವ ಡೆಲಿವರಿ ಬಾಯ್ಸ್‌ಗೆ ಉತ್ತಮ ವೇತನ ಇದೆ ಎಂದು ಹೇಳಲಾಗುತ್ತಿತ್ತು. ಆದರೆ ವ್ಯಕ್ತಿಯೊಬ್ಬ ದಿನವಿಡಿ ಡೆಲಿವರಿ ಮಾಡಿ ಬಹಳ ಕಡಿಮೆ ವೇತನ ಸಿಕ್ಕಿದೆ ಎಂದು ತಾನು ಗಳಿಸಿದ್ದ ಆದಾಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಈ ಕುರಿತಾದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ (Viral video) ಆಗುತ್ತಿದೆ.

ಬ್ಲಿಂಕ್‌ಇಟ್‌ ಡೆಲಿವರಿ ಮಾಡುವ ಸಿಬಂದಿಯೊಬ್ಬರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ತಾವು ಹಲವು ಆರ್ಡರ್‌ಗಳನ್ನು ಡೆಲಿವರಿ ಮಾಡಿದ್ದ ಬಳಿಕ ಪಡೆದ ಆದಾಯದ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನಿದ್ದೆ ಇಲ್ಲದೆ, ಊಟ ತಿಂಡಿ ಸರಿಯಾಗಿ ಇಲ್ಲದೆ ಗ್ರಾಹಕರಿಗಾಗಿ ಸುದೀರ್ಘ ಗಂಟೆಗಳ ಕೆಲಸ ಮಾಡಿಯೂ ತಾವು ಗಳಿಕೆ ಮಾಡಿದ್ದು ಸ್ವಲ್ಪ ಮಾತ್ರ ಎಂದು ಹೇಳುವ ಅವರ ವೀಡಿಯೊ ಆನ್‌ಲೈನ್‌ನಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.

ವಿಡಿಯೊ ನೋಡಿ:

ಬ್ಲಿಂಕ್‌ಇಟ್‌ನಲ್ಲಿ ಕೆಲಸ ಮಾಡುವ ಡೆಲಿವರಿ ಬಾಯ್ ಒಂದು ದಿನಕ್ಕೆ 14 ಗಂಟೆಗಳಿಗಿಂತ ಹೆಚ್ಚು ಕಾಲ ದುಡಿದು 28 ಆರ್ಡರ್‌ಗಳನ್ನು ಡೆಲಿವರಿ ಮಾಡಿದ್ದಾಗಿ ಹೇಳಿಕೊಂಡಿದ್ದನ್ನು ವಿಡಿಯೊದಲ್ಲಿ ಕಾಣಬಹುದು. ಅಷ್ಟಾಗಿಯೂ ಅವರಿಗೆ ಕಡಿಮೆ ಮೊತ್ತದ ಹಣವನ್ನು ಬ್ಲಿಂಕ್‌ಇಟ್ ಕಂಪನಿ ಅವರಿಗೆ ವಿತರಿಸಿದೆ. ಹೀಗಾಗಿ ಅವರು ಒಂದು ದಿನದಲ್ಲಿ ಗಳಿಸಿದ ಅಷ್ಟು ಮೊತ್ತದ ಸ್ಕ್ರೀನ್‌ಶಾಟ್ ಹಂಚಿ ಕೊಂಡಿದ್ದಾರೆ. 28 ಆರ್ಡರ್‌ಗಳನ್ನು ಮಾಡಿದ್ದಕ್ಕೆ 762 ರುಪಾಯಿ ಬ್ಲಿಂಕ್‌ಇಟ್ ನೀಡಿದ್ದಾಗಿ ಹೇಳಿದ್ದಾರೆ.

ಭಾರತದ ಬಸ್ ಯೂರೋಪ್‌ಗಿಂತ ಬೆಸ್ಟ್ ಎಂದ ಕೆನಡಾ ವ್ಲಾಗರ್‌

ವೈರಲ್ ಆದ ವಿಡಿಯೊದಲ್ಲಿ ಡೆಲಿವರಿ ಬಾಯ್ ಈ ಬಗ್ಗೆ ಮಾತನಾಡಿ, ʼʼಇದು ನನ್ನ 28ನೇ ಆರ್ಡರ್. ಇದನ್ನು ಅವರಿಗೆ ನೀಡಿದ ಬಳಿಕ ನಾನು ಎಷ್ಟು ಹಣ ಈ ದಿನ ಪಡೆದೆನು ಎಂಬ ಬಗ್ಗೆ ತಿಳಿಸುವೆʼʼ ಆರಂಭದಲ್ಲಿ ಹೇಳಿದ್ದಾರೆ. ಬಳಿಕ ʼʼನಾನು 14.39 ಗಂಟೆ ಕೆಲಸ ಮಾಡಿದರೂ ಬಹಳ ಕಮ್ಮಿ ವೇತನ ನೀಡಿದ್ದಾರೆ. ನಾನು ತಮಾಷೆ ಮಾಡುತ್ತಿಲ್ಲ. ಬ್ಲಿಂಕ್‌ಇಟ್‌ನಿಂದ ಅಧಿಕ ಆದಾಯ ಪಡೆಯುತ್ತಾರೆ ಎಂದೆ ಎಲ್ಲರೂ ಹೇಳುತ್ತಾರೆ. ಆದರೆ ಇಲ್ಲಿ ಕೂಡ ಬಹಳ ಕಮ್ಮಿ ಹಣ ನೀಡುತ್ತಾರೆ. ಈ ಬಗ್ಗೆ ಅನುಮಾನ ಇದ್ದರೆ ನಾನು ಇಲ್ಲಿ ಸ್ಕ್ರೀನ್ ಶಾಟ್ ನೀಡಿದ್ದೇನೆ ನೀವೆ ಚೆಕ್ ಮಾಡಿಕೊಳ್ಳಿʼʼ ಎಂದು ಅವರು ಹೇಳಿದ್ದಾರೆ.

ಈ ಬಗ್ಗೆ ಇನ್‌ಸ್ಟಾಗ್ರಾಮ್ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. ಬ್ಲಿಂಕ್‌ಇಟ್ ಡೆಲಿವರಿ ಬಾಯ್ಸ್‌ಗೆ ಗ್ರಾಹಕರು ಟಿಪ್ಸ್ ನೀಡಿದರೆ ಅವರ ದಿನ ನಿತ್ಯದ ಜೀವನಕ್ಕೆ ಸಹಾಯ ಮಾಡಿದಂತಾಗುತ್ತದೆ. ಈ ಬಗ್ಗೆ ಜನರಿಗೂ ಸಾಫ್ಟ್ ಕಾರ್ನರ್ ಇದ್ದರೆ ಉತ್ತಮ ಎಂದು ಒಬ್ಬರು ಹೇಳಿದ್ದಾರೆ. ಬ್ಲಿಂಕ್‌ಇಟ್ ಕಂಪನಿಗೆ ತಮ್ಮ ಸಿಬಂದಿ ಬಗ್ಗೆ ಕನಿಕರವೇ ಇಲ್ಲ. ಒಂದೊಂದು ಡೆಲಿವರಿಗೆ 15 ರೂಪಾಯಿ ‌ಮಾತ್ರವೇ ಇದೆ ಎಂಬುದು ಆ ಕಂಪನಿಯ ಪ್ರತಿಷ್ಠೆಯ ವಿಚಾರ. ಇನ್ನಾದರೂ ಸಿಬ್ಬಂದಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಿ ಎಂದು ಇನ್ನೊಬ್ಬರು ತಿಳಿಸಿದ್ದಾರೆ.