Viral Video: ನಾ ನಿನ್ನ ಬಿಡಲಾರೆ... ಕುಂಭಮೇಳದಲ್ಲಿ ಗಮನ ಸೆಳೆದ ದಂಪತಿ- ವಿಡಿಯೊ ನೋಡಿ
ಮಹಾಕುಂಭ ಮೇಳದಲ್ಲಿ ದಟ್ಟವಾದ ಜನಸಮೂಹದ ನಡುವೆ ದಂಪತಿ ಒಟ್ಟಾಗಿರಲು ಪರಸ್ಪರ ಹಗ್ಗದಿಂದ ತಮ್ಮನ್ನು ಕಟ್ಟಿಕೊಂಡಿದ್ದಾರೆ. ಅದರ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ. ಇದಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿದೆ.
![ಕುಂಭಮೇಳದಲ್ಲಿ ಸಖತ್ ವೈರಲ್ ಆಯ್ತು ಗಂಡ-ಹೆಂಡತಿಯ ಈ ವಿಡಿಯೊ](https://cdn-vishwavani-prod.hindverse.com/media/original_images/husband_-wife_viral_video.jpg)
Viral Video
![Profile](https://vishwavani.news/static/img/user.png)
ಲಖನೌ: ಉತ್ತರ ಪ್ರದೇಶದ ಪ್ರಯಾಗ್‍ರಾಜ್‍ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ನೋಡಲು ಲಕ್ಷಾಂತರ ಭಕ್ತರು ಸೇರುತ್ತಾರೆ. ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಸೇರುವ ಪವಿತ್ರ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಪುನೀತರಾಗಲು ವಿಶ್ವದಾದ್ಯಂತ ಲಕ್ಷಾಂತರ ಜನರು ಆಗಮಿಸುತ್ತಿದ್ದಾರೆ. ಈ ಜನಸಂದಣಿಯಲ್ಲಿ ನಮ್ಮವರನ್ನು ಹುಡುಕುವುದು ಬಹಳ ಕಷ್ಟದ ಕೆಲಸ. ಅದಕ್ಕಾಗಿ ಮಹಾಕುಂಭಮೇಳಕ್ಕೆ ಬಂದ ದಂಪತಿ ಬೇರೆ ಬೇರೆಯಾಗುವುದನ್ನು ತಡೆಯಲು ಒಂದು ಸೂಪರಾದ ಟ್ರಿಕ್ಸ್ ಫಾಲೋ ಮಾಡಿದ್ದಾರೆ. ಅದರ ವಿಡಿಯೊ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.
ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾದ ಈ ಹೃದಯಸ್ಪರ್ಶಿ ರೀಲ್‍ನಲ್ಲಿ ಮಹಾಕುಂಭದಲ್ಲಿ ದಂಪತಿಯ ಒಗ್ಗಟ್ಟಿನ ಸಾರವನ್ನು ಸೆರೆಹಿಡಿಯಲಾಗಿದೆ. ದಟ್ಟವಾದ ಜನಸಮೂಹದಲ್ಲಿ ಬೇರ್ಪಡುವ ಭಯದಿಂದ ದಂಪತಿ ಒಂದು ವಿಶಿಷ್ಟ ಉಪಾಯವನ್ನು ಮಾಡಿದ್ದಾರೆ. ಅದೇನೆಂದರೆ ಅವರು ತಮ್ಮನ್ನು ಹಗ್ಗದಿಂದ ಕಟ್ಟಿಕೊಂಡಿದ್ದಾರೆ. ಹಗ್ಗದ ಒಂದು ತುದಿಯನ್ನು ಪತಿ ಸೊಂಟಕ್ಕೆ ಕಟ್ಟಿಕೊಂಡರೆ ಇನ್ನೊಂದು ತುದಿಯನ್ನು ಪತ್ನಿ ಸೊಂಟಕ್ಕೆ ಕಟ್ಟಿಕೊಂಡಿದ್ದಾಳೆ. ಅಲ್ಲದೇ ಈ ವಿಡಿಯೊದಲ್ಲಿ ದಂಪತಿ ಕೈ ಕೈ ಹಿಡಿದು ನಡೆದಿದ್ದುಸೆರೆಯಾಗಿದೆ. ಅವರು ಪವಿತ್ರ ಸ್ನಾನ ಮಾಡುವಾಗ ಕೂಡ ಈ ಹಗ್ಗವನ್ನು ಕಟ್ಟಿಕೊಂಡಿದ್ದರು ಎನ್ನಲಾಗಿದೆ. ಮಹಾಕುಂಭದಲ್ಲಿ ಭಾಗವಹಿಸಿದ ಈ ದಂಪತಿಯ ಈ ವಿಶಿಷ್ಟ ಕ್ರಮ ಅವರ ನಡುವಿನ ಪ್ರೀತಿ, ಕಾಳಜಿಯನ್ನು ವ್ಯಕ್ತಪಡಿಸುತ್ತದೆ. ಹಾಗಾಗಿ ಇದು ಎಲ್ಲರ ಗಮನವನ್ನು ಸೆಳೆದಿದೆ.
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದಾಗಿನಿಂದ, ಇದು ಎರಡು ದಶಲಕ್ಷಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ. ಅಲ್ಲದೇ ಇದು ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆಯ ಅಲೆಯನ್ನು ಹುಟ್ಟುಹಾಕಿದೆ. ಒಬ್ಬ ನೆಟ್ಟಿಗರು "ಇದು ಕೇವಲ ಪ್ರಾಯೋಗಿಕವಲ್ಲ, ಇದು ಸಾಂಕೇತಿಕವಾಗಿದೆ. ಅಂತಹ ಬೃಹತ್ ಕಾರ್ಯಕ್ರಮದ ಮೂಲಕ ಅವರ ಪ್ರೀತಿ ಮತ್ತು ಏಕತೆ ಬೆಳಗಿದೆ” ಎಂದಿದ್ದಾರೆ. ಇನ್ನೊಬ್ಬರು, "ಗೊಂದಲದ ನಡುವೆ, ಈ ದಂಪತಿ ಒಗ್ಗಟ್ಟಿನ ನಿಜವಾದ ಅರ್ಥವನ್ನು ನಮಗೆ ನೆನಪಿಸುತ್ತಾರೆ. ಅದ್ಭುತ!" ಎಂದು ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ:Mahakumbh Mela 2025: ಕುಂಭಮೇಳದಲ್ಲಿ ಬಾಲಕಿಗೆ ಮಾದಕ ವಸ್ತು ನೀಡಿದ್ದಾರೆಂದು ಸಾಧು ವಿರುದ್ಧ ಪೋಸ್ಟ್; ಇದು ನಿಜವೇ?
ಕೆಲವರು ಹಾಸ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ. ಒಬ್ಬರು , "ಮೇಳದಲ್ಲಿ ಇವರು ಬುದ್ಧಿವಂತ ದಂಪತಿಗಳು! ಹಗ್ಗವು ಸಾಕಷ್ಟು ಬಲವಾಗಿದೆ ಎಂದು ಭಾವಿಸುತ್ತೇನೆ!" ಎಂದಿದ್ದಾರೆ. ಇನ್ನೊಬ್ಬ ನೆಟ್ಟಿಗರು, "ಆಧ್ಯಾತ್ಮಿಕ ಮತ್ತು ಪ್ರಾಯೋಗಿಕ ಸಂಬಂಧದ ಗುರಿಗಳು!" ಎಂದು ತಮಾಷೆ ಮಾಡಿದ್ದಾರೆ.