Viral Video: ಮದುವೆಯಾದ ಬೆನ್ನಲ್ಲೇ ಭರ್ಜರಿಯಾಗಿ ಹೆಜ್ಜೆ ಹಾಕಿದ ಸಂಸದೆ ಮಹುವಾ ಮೊಯಿತ್ರಾ; ವಿಡಿಯೊ ವೈರಲ್
ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಹಿರಿಯ ವಕೀಲ ಮತ್ತು ಬಿಜೆಡಿ ಮಾಜಿ ಸಂಸದ ಪಿನಾಕಿ ಮಿಶ್ರಾ ಅವರನ್ನು ಇತ್ತೀಚೆಗೆ ಜರ್ಮನಿಯಲ್ಲಿ ವಿವಾಹವಾಗಿದ್ದು, ನವ ದಂಪತಿಗಳ ನೃತ್ಯದ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಈ ವಿಡಿಯೊವನ್ನು ಮಹುವಾ ಮೊಯಿತ್ರಾ ಹಂಚಿಕೊಂಡಿದ್ದಾರೆ.


ನವದೆಹಲಿ: ತೃಣಮೂಲ ಕಾಂಗ್ರೆಸ್ ಸಂಸದೆ (Trinamool Congress MP) ಮಹುವಾ ಮೊಯಿತ್ರಾ (Mahua Moitra) ಹಿರಿಯ ವಕೀಲ ಮತ್ತು ಬಿಜೆಡಿ ಮಾಜಿ ಸಂಸದ (former BJD MP) ಪಿನಾಕಿ ಮಿಶ್ರಾ (Pinaki Misra) ಅವರನ್ನು ಇತ್ತೀಚೆಗೆ ಜರ್ಮನಿಯಲ್ಲಿ (Germany) ವಿವಾಹವಾಗಿದ್ದು, ನವ ದಂಪತಿy ನೃತ್ಯದ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ (Viral Video) ಆಗಿದೆ. ಈ ವಿಡಿಯೊವನ್ನು ಮಹುವಾ ಮೊಯಿತ್ರಾ ಹಂಚಿಕೊಂಡಿದ್ದಾರೆ. ಈ ವಿಡಿಯೊದಲ್ಲಿ ಮೊಯಿತ್ರಾ ಮತ್ತು ಪಿನಾಕಿ ಅವರೊಂದಿಗೆ ಸಂತಸದಿಂದ ನೃತ್ಯ ಮಾಡುವುದನ್ನು ಕಾಣಬಹುದು.
ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಇತ್ತೀಚೆಗೆ ಜರ್ಮನಿಯಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಹಿರಿಯ ವಕೀಲ ಪಿನಾಕಿ ಮಿಶ್ರಾ ಅವರನ್ನು ವಿವಾಹವಾದರು. ಇವರ ಮದುವೆಯ ನೃತ್ಯದ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ಇದರಲ್ಲಿ ಅವರಿಬ್ಬರು ತಮ್ಮ ಪ್ರೀತಿಯನ್ನು ಪ್ರದರ್ಶಿಸಿದ್ದಾರೆ.
ವೈರಲ್ ವಿಡಿಯೊ ಇಲ್ಲಿದೆ:
TMC MP #MahuaMoitra shares video dancing with hubby Pinaki Misra at their wedding ceremony in Germany pic.twitter.com/tpGRzXhPye
— Indrajit Kundu | ইন্দ্রজিৎ (@iindrojit) June 8, 2025
ಈ ವಿಡಿಯೊದಲ್ಲಿ ಮಹುವಾ ಮೊಯಿತ್ರಾ ಮತ್ತು ಪಿನಾಕಿ ಮಿಶ್ರಾ ಒಟ್ಟಿಗೆ ನೃತ್ಯ ಮಾಡುವುದನ್ನು, ಪರಸ್ಪರರ ಸಂಬಂಧವನ್ನು ಆನಂದಿಸುವುದನ್ನು ಕಾಣಬಹುದು. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿಯ ಮನ ಗೆದ್ದಿದೆ.
ಮಹುವಾ ಮೊಯಿತ್ರಾ ತಮ್ಮ ಸಾಮಾಜಿಕ ಜಾಲಾತಾಣದ ಖಾತೆಯಲ್ಲಿ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಇದು ಅವರ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಅವರ ವಿಶೇಷ ದಿನದ ಒಂದು ಸನ್ನಿವೇಶದ ಚಿತ್ರಣವನ್ನು ನೀಡಿದೆ. ಈ ವಿಡಿಯೊವನ್ನು ಸಾಕಷ್ಟು ಮಂದಿ ಹಂಚಿಕೊಂಡಿದ್ದಾರೆ.
ಮದುವೆಯ ಫೋಟೊ ಮತ್ತು ವಿಡಿಯೊದಲ್ಲಿ ಮೊಯಿತ್ರಾ ಅವರು ಗುಲಾಬಿ ಬಣ್ಣದ ಬನಾರಸಿ ರೇಷ್ಮೆ ಸೀರೆಯನ್ನು ಧರಿಸಿದ್ದರು. ಇದರಲ್ಲಿ ಚಿನ್ನದ ಜರಿಯನ್ನು ಕಾಣಬಹುದು. ಸೀರೆಗೆ ತಕ್ಕುದಾಗಿ ಸಾಂಪ್ರದಾಯಿಕ ಚಿನ್ನದ ಆಭರಣಗಳನ್ನು ಧರಿಸಿದ್ದರು. ಇದರಲ್ಲಿ ಚೋಕರ್ ನೆಕ್ಲೇಸ್, ಜುಮ್ಕಾ ಮತ್ತು ಮಾಂಗ್ ಟಿಕ್ಕಾ ಸೇರಿವೆ. ಹದವಾದ ಮೇಕಪ್ ಮತ್ತು ಕೇಶವಿನ್ಯಾಸ ಅವರ ಸೌಂದರ್ಯಕ್ಕೆ ಇನ್ನಷ್ಟು ಮೆರುಗು ನೀಡಿದೆ. ಮಿಶ್ರಾ ಅವರು ಬಿಳಿ ಬಣ್ಣದ ಸಾಂಪ್ರದಾಯಿಕ ಕುರ್ತಾದೊಂದಿಗೆ ಪೀಚ್ ಬಣ್ಣದ ಜಾಕೆಟ್ ಧರಿಸಿದ್ದರು.
ಪಿನಾಕಿ ಮಿಶ್ರಾ ಹಿನ್ನೆಲೆ
1959ರ ಅಕ್ಟೋಬರ್ 23ರಂದು ಒಡಿಶಾದ ಪುರಿಯಲ್ಲಿ ಜನಿಸಿದ ಪಿನಾಕಿ ಮಿಶ್ರಾ, ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಇತಿಹಾಸದಲ್ಲಿ ಬಿಎ ಮತ್ತು ದೆಹಲಿ ವಿಶ್ವವಿದ್ಯಾಲಯದ ಕಾನೂನು ವಿಭಾಗದಿಂದ ಎಲ್ಎಲ್ಬಿ ಪದವಿ ಪಡೆದಿದ್ದಾರೆ.1996ರಲ್ಲಿ ರಾಜಕೀಯ ಪ್ರವೇಶಿಸಿದ ಇವರು ಪುರಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಗೆದ್ದು ಸದನ ಪ್ರವೇಶಿಸಿದರು. ಅನಂತರ ಅವರು ನವೀನ್ ಪಟ್ನಾಯಕ್ ನಾಯಕತ್ವದಲ್ಲಿ ಬಿಜು ಜನತಾದಳ ಸೇರಿ, ಮೂರು ಬಾರಿ ಸದನ ಪ್ರವೇಶಿಸಿದ್ದಾರೆ.
ಇದನ್ನೂ ಓದಿ: Sarigamapa: ಸರಿಗಮಪ ಸೀಸನ್ 21ರ ಕಿರೀಟ ತೊಟ್ಟ ಶಿವಾನಿ ಸ್ವಾಮಿ: ರನ್ನರ್-ಅಪ್ ಯಾರು?
ಮಹುವಾ ಮೊಯಿತ್ರಾ ಹಿನ್ನೆಲೆ
1974ರ ಅಕ್ಟೋಬರ್ 12ರಂದು ಅಸ್ಸಾಂನಲ್ಲಿ ಜನಿಸಿದ ಮಹುವಾ ಮೊಯಿತ್ರಾ ಬ್ಯಾಂಕಿಂಗ್ ವೃತ್ತಿ ಜೀವನದಿಂದ 2010ರಲ್ಲಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದರು. ಇವರು ಅಮೆರಿಕದ ಮ್ಯಾಸಚೂಸೆಟ್ಸ್ನ ಮೌಂಟ್ ಹೋಲಿಯೋಕ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿ ಬಿಎ ಪದವಿಯೊಂದಿಗೆ ಮ್ಯಾಗ್ನಾ ಕಮ್ ಲಾಡ್ ಗೌರವವನ್ನು ಪಡೆದಿದ್ದಾರೆ.
ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸೇರಿದ ಮೊಯಿತ್ರಾ 2019ರಲ್ಲಿ ಪಶ್ಚಿಮ ಬಂಗಾಳದ ಕರಿಂಪುರ ವಿಧಾನಸಭಾ ಕ್ಷೇತ್ರದಿಂದ ಗೆದ್ದು ರಾಜಕೀಯ ಸದನವನ್ನು ಪ್ರವೇಶಿಸಿದರು. ಬಳಿಕ ಪಶ್ಚಿಮ ಬಂಗಾಳದ ಕೃಷ್ಣನಗರ ಸ್ಥಾನದಿಂದ ಎರಡು ಬಾರಿ ಆಯ್ಕೆಯಾದ ಅವರು ಸಂಸದೆಯಾಗಿ ಅಧಿಕಾರ ವಹಿಸಿದ ಮೊದಲ ಅವಧಿಯಲ್ಲೇ ಲೋಕಸಭೆಯಲ್ಲಿ ಪ್ರಶ್ನೆ ಕೇಳಲು ನಗದು ಪಡೆದಿದ್ದಾರೆ ಎನ್ನುವ ಆರೋಪದ ಮೇಲೆ ಅವರನ್ನು ಅನರ್ಹಗೊಳಿಸಲಾಯಿತು.