ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: 1.5 ಕೋಟಿ ರೂ. ಖರ್ಚು ಮಾಡಿ ಅದ್ದೂರಿ ವಿವಾಹವಾದ ಜೋಡಿ- ಆದರೆ ಫೋಟೋಗ್ರಾಫರ್‌ಗೆ ಹಣ ನೀಡದೇ ಎಸ್ಕೇಪ್‌!.

Viral News: 74 ವರ್ಷದ ವ್ಯಕ್ತಿಯೊಬ್ಬತನಗಿಂತ 50 ವರ್ಷ ಚಿಕ್ಕವಳಾಗಿರುವ ಮಹಿಳೆಯನ್ನು ಮದುವೆ ಯಾಗಿದ್ದಾರೆ. ಮದುವೆಯನ್ನು ತುಂಬಾ ಗ್ರ್ಯಾಂಡ್ ಆಗಿ ಲಕ್ಶೂರಿಯಾಗಿ ಮಾಡುವ ಸಲುವಾಗಿ ಈ ಮದು ವೆಗಾಗಿ ಬರೋಬ್ಬರಿ ಮೂರು ಬಿಲಿಯನ್ ರೂಪಾಯಿ ಅಂದರೆ ಭಾರತದ ಕರೆನ್ಸಿ ಮೌಲ್ಯದಲ್ಲಿ 1.5 ಕೋಟಿ ರೂ. ತನಕವು ಭಾರಿ ಮೊತ್ತವನ್ನು ಆತ ಖರ್ಚು ಮಾಡಿದ್ದಾನೆ. ಆದರೆ ಈ ನವ ದಂಪತಿಗಳು ತಮ್ಮ ಮದುವೆಯನ್ನು ಅದ್ಧೂರಿಯಾಗಿ ಮಾಡಿಕೊಂಡರು ಕೂಡ ಫೋಟೊ ಗ್ರಾಫರ್ ಗೆ ಮಾತ್ರ ಹಣ ನೀಡಲೇ ಇಲ್ಲ ಎನ್ನುವ ದೂರು ಇದೀಗ ಕೇಳಿಬಂದಿದೆ.

ನವದೆಹಲಿ: ಪ್ರೀತಿಗೆ ಕಣ್ಣಿಲ್ಲ ಎಂಬ ಮಾತಿದೆ. ಪ್ರೀತಿ ಮಾಡುವ ಬಹುತೇಕ ಜೋಡಿಗಳಿಗೆ ಜಾತಿ, ವಯಸ್ಸು, ಶ್ರೀಮಂತ- ಬಡವ, ಬಣ್ಣಗಳ ಬೇಧ ಎಲ್ಲ ಎನ್ನುತ್ತಾರೆ. ಅಂತೆಯೇ ಇಂಡೋನೇಷ್ಯಾ (Indonesia) ಮೂಲದ 74 ವರ್ಷದ ವ್ಯಕ್ತಿಯೊಬ್ಬ ತನಗಿಂತ 50 ವರ್ಷ ಚಿಕ್ಕವಳಾಗಿರುವ ಮಹಿಳೆ ಯನ್ನು ಮದುವೆಯಾಗಿದ್ದಾರೆ. ಮದುವೆಯನ್ನು ತುಂಬಾ ಗ್ರ್ಯಾಂಡ್ ಆಗಿ ಲಕ್ಶೂರಿಯಾಗಿ ಮಾಡುವ ಸಲುವಾಗಿ ಈ ಮದುವೆಗಾಗಿ ಬರೋಬ್ಬರಿ ಮೂರು ಬಿಲಿಯನ್ ರೂಪಾಯಿ ಅಂದರೆ ಭಾರತದ ಕರೆನ್ಸಿ ಮೌಲ್ಯದಲ್ಲಿ 1.5 ಕೋಟಿ ರೂ. ತನಕವು ಭಾರಿ ಮೊತ್ತವನ್ನು ಆತ ಖರ್ಚು ಮಾಡಿದ್ದಾನೆ. ಆದರೆ ಈ ನವ ದಂಪತಿಗಳು ತಮ್ಮ ಮದುವೆಯನ್ನು ಅದ್ಧೂರಿಯಾಗಿ ಮಾಡಿಕೊಂಡರು ಕೂಡ ಫೋಟೊ ಗ್ರಾಫರ್ ಗೆ ಮಾತ್ರ ಹಣ ನೀಡಲೇ ಇಲ್ಲ ಎನ್ನುವ ದೂರು ಇದೀಗ ಕೇಳಿಬಂದಿದೆ. ಹೀಗಾಗಿ ದಂಪತಿಗಳ ವಿರುದ್ಧ ಛಾಯಾಗ್ರಹಕ ಕಂಪೆನಿಯೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಹೀಗಾಗಿ ಪೊಲೀಸರು ಈ ಪ್ರಕರಣವನ್ನು ತನಿಖೆ ಮಾಡುತ್ತಿದ್ದು ಸದ್ಯ ಈ ಸುದ್ದಿ ಸೋಶಿಯಲ್ ಮಿಡಿಯಾದಲ್ಲಿ (Viral News) ವೈರಲ್ ಆಗಿದೆ.

ಅಕ್ಟೋಬರ್ 1 ರಂದು ಜಾವಾ ಪ್ರಾಂತ್ಯದ ಪ್ಯಾಸಿಟನ್ ರೀಜೆನ್ಸಿಯಲ್ಲಿ ಅದ್ಧೂರಿ ವಿವಾಹ ಸಮಾ ರಂಭ ನಡೆದಿದ್ದು ಅದಕ್ಕಾಗಿ ವರನು ಬರೋಬ್ಬರಿ ಒಂದು ಬಿಲಿಯನ್ ರೂಪಾಯಿ ಖರ್ಚು ಮಾಡಿ ದ್ದಾನೆ. ವಿವಾಹ ಎಂದ ಮೇಲೆ ಮದುವೆ ನೆನಪಿಗಾಗಿ ಫೋಟೊ,ವಿಡಿಯೊ ಇರಲೇ ಬೇಕು. ಹೀಗಾಗಿ ಫೋಟೊಗ್ರಫಿ ಮತ್ತು ವೀಡಿಯೊಗ್ರಫಿ ಮಾಡಲು ಒಂದು ಕಂಪೆನಿಗೆ ಕಾಂಟ್ರ್ಯಾಕ್ಟ್ ನೀಡಲಾಗಿದೆ. ಅಷ್ಟು ಮಾತ್ರವಲ್ಲದೆ ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೂ ಹಣವನ್ನು ನೀಡಲಾಗಿದೆ. ಆದರೆ ಫೋಟೊಗ್ರಾಫ್ ಕಂಪೆನಿಯೂ ಹಣ ನೀಡದೆ ಈತ ಯಾಮಾರಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ:Viral News: 48 ವರ್ಷಗಳ ಹಿಂದೆ ಗೆಳತಿಗೆ ಚಾಕುವಿನಿಂದ ಇರಿದಿದ್ದ ವ್ಯಕ್ತಿಗೆ ಜಾಮೀನು; ವಿಚಾರಣೆ ಎದುರಿಸಲಿರುವ 81ರ ವೃದ್ಧ

ಮದುವೆ ಛಾಯಾಗ್ರಹಣ ಕಂಪೆನಿಯು ಈ ಮದುವೆಗೆ ಸಂಬಂಧಿಸಿದ ಪೂರ್ತಿ ಕವರೇಜ್ ಅನ್ನು ಮಾಡಿದೆ. ಆದರೆ ಯಾವುದೇ ಹಣವನ್ನು ಪಾವತಿಸದೆ ಬಳಿಕ ಆ ವರನು ತನ್ನ ಎಲ್ಲಾ ಸಂಪರ್ಕ ಗಳನ್ನು ಕಡಿತಗೊಳಿಸುವ ಮೂಲಕ ಮದುವೆ ಹಾಲ್ ನಿಂದ ಕಣ್ಮರೆಯಾಗಿದ್ದಾನೆ .ಹೀಗಾಗಿ ತಮ್ಮ ಹಣ ಪಾವತಿಸುವಂತೆ ದೂರಿನಲ್ಲಿ ಛಾಯಾಗ್ರಾಹಕ ಕಂಪೆನಿ ಮನವಿ ಮಾಡಿದೆ. ಬಳಿಕ ಪೊಲೀಸರು ದಂಪತಿಯನ್ನು ಪತ್ತೆ ಹಚ್ಚಿದ್ದಾರೆ. ಈ ವಿಚಾರ ತಿಳಿದ ವರ ನಾನು ನನ್ನ ಹೆಂಡತಿಯನ್ನು ಬಿಟ್ಟು ಎಲ್ಲಿಯೂ ಹೋಗಿಲ್ಲ ನಾವು ಜೊತೆಯಾಗಿ ಇದ್ದೇವೆ ನಾವು ಹನಿಮೂನಿಗೆ ಹೊರಟಿದ್ದೆವು ಎಂದು ಹೇಳಿಕೆ ನೀಡಿದ್ದಾನೆ. ಹಾಗಾದರೆ ತಲೆ ಮರೆಸಿಕೊಂಡಿದ್ಯಾಕೆ ಅವರ ಹಣ ನೀಡದೆ ಇರಲು ಕಾರಣ ಏನು ಎಂಬ ಬಗ್ಗೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ.

ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಈ ಬಗ್ಗೆ ಸೋಶಿಯಲ್ ಮಿಡಿಯಾದಲ್ಲಿ ನಾನಾ ತರನಾಗಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ವರನು ಆ ವಧುವಿಗಾಗಿ ಖರ್ಚು ಮಾಡಿ ಮಾಡಿ ಸಾಕಾಗಿರಬೇಕು ಹೀಗಾಗಿ ಕೊನೆಗೆ ಹಣ ಇಲ್ಲದೆ ಮರ್ಯಾದೆಗೆ ಅಂಜಿಕೊಂಡು ವಧುವಿನ ಸ್ಕೂಟರ್ ನಲ್ಲಿಯೇ ಸ್ಥಳದಿಂದ ಪರಾರಿಯಾಗಿರಬಹುದು ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಹಾಕಿ ಪ್ರತಿಕ್ರಿಯೆ ನೀಡಿದ್ದಾರೆ.