ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: 48 ವರ್ಷಗಳ ಹಿಂದೆ ಗೆಳತಿಗೆ ಚಾಕುವಿನಿಂದ ಇರಿದಿದ್ದ ವ್ಯಕ್ತಿಗೆ ಜಾಮೀನು; ವಿಚಾರಣೆ ಎದುರಿಸಲಿರುವ 81ರ ವೃದ್ಧ

81 year old granted bail: 48 ವರ್ಷಗಳ ಹಿಂದೆ ತನ್ನ ಗೆಳತಿಯನ್ನು ಇರಿದ ಆರೋಪ ಹೊತ್ತಿರುವ ಮುಂಬೈಯ ವ್ಯಕ್ತಿಯೊಬ್ಬರ ವಯಸ್ಸನ್ನು ಪರಿಗಣಿಸಿ, ನ್ಯಾಯಾಲಯವು ಅವರಿಗೆ ಜಾಮೀನು ನೀಡುವುದು ಸೂಕ್ತವೆಂದು ಪರಿಗಣಿಸಿದೆ. 1977ರಿಂದ ತಪ್ಪಿಸಿಕೊಂಡಿದ್ದ ಚಂದ್ರಶೇಖರ್ ಮಧುಕರ್ ಕಲೆಕರ್ ಅವರಿಗೆ ಜಾಮೀನು ನೀಡಲಾಗಿದೆ.

48 ವರ್ಷಗಳ ಹಿಂದೆ ಗೆಳತಿಗೆ ಚಾಕುವಿನಿಂದ ಇರಿದಿದ್ದ ವ್ಯಕ್ತಿಗೆ ಜಾಮೀನು

-

Priyanka P Priyanka P Oct 18, 2025 6:46 PM

ಮುಂಬೈ: 48 ವರ್ಷಗಳ ಹಿಂದೆ ತನ್ನ ಗೆಳತಿಯನ್ನು ಇರಿದ ಆರೋಪ ಹೊತ್ತಿರುವ ವ್ಯಕ್ತಿಯೊಬ್ಬರು, ಸುಮಾರು ಐದು ದಶಕಗಳಿಂದ ತಲೆಮರೆಸಿಕೊಂಡಿದ್ದ ನಂತರ ಕೊನೆಗೂ ವಿಚಾರಣೆ ಎದುರಿಸಲಿದ್ದಾರೆ. ದಕ್ಷಿಣ ಮುಂಬೈಯ (Mumbai) ಕೊಲಾಬಾದಲ್ಲಿ ತನ್ನ ಗೆಳತಿಯನ್ನು ಕೊಲೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ 1977 ರಿಂದ ತಪ್ಪಿಸಿಕೊಂಡಿದ್ದ 81 ವರ್ಷದ ಚಂದ್ರಶೇಖರ್ ಮಧುಕರ್ ಕಲೆಕರ್ ಅವರಿಗೆ ಮುಂಬೈ ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿದೆ (Viral News).

ಪ್ರಾಸಿಕ್ಯೂಷನ್ ಪ್ರಕಾರ, ಕಾಲೇಕರ್ ತನ್ನ ಗೆಳತಿಯ ಮೇಲೆ ಅನುಮಾನಗೊಂಡು ಚಾಕುವಿನಿಂದ ಹಲ್ಲೆ ನಡೆಸಿದ್ದರು. ಆಗ ಅವರಿಗೆ 23 ವರ್ಷ ವಯಸ್ಸಾಗಿತ್ತು. ಕೊಲೆ ಯತ್ನಕ್ಕಾಗಿ ಆಗ ಅವರನ್ನು ಬಂಧಿಸಲಾಯಿತು. ಆದರೆ ನಂತರ ಜಾಮೀನು ನೀಡಲಾಯಿತು. ಬಿಡುಗಡೆಯಾದ ನಂತರ, ಅವರು ಮತ್ತೆ ನ್ಯಾಯಾಲಯದ ಮುಂದೆ ಹಾಜರಾಗಲಿಲ್ಲ.

ನ್ಯಾಯಾಲಯವು ಅವರನ್ನು ಪರಾರಿಯಾಗಿರುವ ಆರೋಪಿ ಎಂದು ಘೋಷಿಸಿ ಜಾಮೀನು ರಹಿತ ವಾರಂಟ್ (NBW) ಹೊರಡಿಸಿತು. ಹಲವಾರು ಪ್ರಯತ್ನಗಳ ಹೊರತಾಗಿಯೂ, ಮುಂಬೈ ಪೊಲೀಸರು ಅವರನ್ನು ಪತ್ತೆಹಚ್ಚಲು ವಿಫಲರಾದರು. ಏಕೆಂದರೆ ಅವರು ವಾಸಿಸುತ್ತಿದ್ದ ಕಟ್ಟಡವನ್ನು ಪುನರ್ನಿರ್ಮಿಸಲಾಗಿತ್ತು. ಇದರಿಂದಾಗಿ ಅವರನ್ನು ಪತ್ತೆ ಮಾಡುವುದು ಕಷ್ಟವಾಗಿತ್ತು.

ಹಲವು ವರ್ಷಗಳ ನಂತರ, ರತ್ನಗಿರಿ ಜಿಲ್ಲೆಯ ದಪೋಲಿ ಪೊಲೀಸ್ ಠಾಣೆಯಲ್ಲಿ 2015ರಲ್ಲಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲೇಕರ್ ವಿರುದ್ಧ ಪ್ರಕರಣ ದಾಖಲಾಗಿರುವ ವಿಚಾರ ಪೊಲೀಸರಿಗೆ ತಿಳಿದುಬಂತು. ಈ ಸುಳಿವು ಆಧರಿಸಿ, ಕೊಲಾಬಾ ಪೊಲೀಸರ ತಂಡವು ಅವರನ್ನು ಪತ್ತೆಹಚ್ಚಿ ಬಂಧಿಸಿತು.

ಇದನ್ನೂ ಓದಿ: Viral Video: ದಿಟ್ಟಿಸಿ ನೋಡಿದನೆಂದು ಪ್ರೊಫೆಸರ್‌ಗೆ ಎಬಿವಿಪಿ ಸದಸ್ಯೆಯಿಂದ ಕಪಾಳಮೋಕ್ಷ! ವಿಡಿಯೊ ನೋಡಿ

ದಶಕಗಳು ಕಳೆದರೂ ಕಾಲೇಕರ್‌ನನ್ನು ಗುರುತಿಸುವುದು ಪೊಲೀಸರಿಗೆ ಒಂದು ದೊಡ್ಡ ಸವಾಲಾಗಿತ್ತು. ಹಳೆಯ ಛಾಯಾಚಿತ್ರಗಳನ್ನು ಬಳಸಿಕೊಂಡು ಅವರನ್ನು ಅಂತಿಮವಾಗಿ ಗುರುತಿಸಲಾಯಿತು. ವಿಚಾರಣೆಯ ಸಮಯದಲ್ಲಿ, ಅವರು ತನ್ನ ಅಪರಾಧವನ್ನು ಒಪ್ಪಿಕೊಂಡರು. ಕೊಲಾಬಾ ಪೊಲೀಸರು ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು ಮತ್ತು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ನ್ಯಾಯಾಲಯದಲ್ಲಿ, ಕಾಲೇಕರ್ ಅವರ ಪರ ವಕೀಲ ಸುನಿಲ್ ಪಾಂಡೆ, ತಮ್ಮ ಕಕ್ಷಿದಾರರಿಗೆ ಜಾಮೀನು ದೊರೆತ ನಂತರ ನಿವಾಸವನ್ನು ಬದಲಾಯಿಸಿದ್ದಾರೆ. ಆರೋಪಿಗೆ ಆರೋಪಪಟ್ಟಿ ಸಲ್ಲಿಸಿದ ನಂತರ ನೋಟಿಸ್ ನೀಡಲಾಗಿಲ್ಲ ಎಂದು ವಾದಿಸಿದರು. ಅವರಿಗೆ 81 ವರ್ಷ ವಯಸ್ಸಾಗಿದ್ದು, ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. 2010ರಲ್ಲಿ ಅವರು ವಾಸಿಸುತ್ತಿದ್ದ ಮನೆಯನ್ನು ಕೆಡವಲಾಯಿತು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈ ಕಾರಣದಿಂದಾಗಿ ಅವರು ವಿಚಾರಣೆಯ ಸಮಯದಲ್ಲಿ ಹಾಜರಿರಲು ಸಾಧ್ಯವಾಗಲಿಲ್ಲ ಎಂದು ವಕೀಲ ಪಾಂಡೆ ಹೇಳಿದರು.

ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಆನಂದ್ ಸುಖದೇವ ಜಾಮೀನು ಅರ್ಜಿಯನ್ನು ವಿರೋಧಿಸಿ, ಆರೋಪಿಯು ಗೈರುಹಾಜರಾಗಿರುವುದರಿಂದ ದಶಕಗಳಿಂದ ವಿಚಾರಣೆ ವಿಳಂಬವಾಗಿದೆ ಎಂದು ವಾದಿಸಿದರು. ಅಪರಾಧವು ಗಂಭೀರ ಸ್ವರೂಪದ್ದಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾದರೆ ಕಾಲೇಕರ್ ಮತ್ತೆ ಪರಾರಿಯಾಗಬಹುದು ಎಂದು ಅವರು ಹೇಳಿದರು.

ಕೇಲ್ಕರ್ ವಿಚಾರಣೆಗೆ ಹಾಜರಾಗುವುದಾಗಿ ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ ಎಂದು ಸೆಷನ್ಸ್ ನ್ಯಾಯಾಧೀಶ ಅವಿನಾಶ್ ಪಿ. ಕುಲಕರ್ಣಿ ಗಮನಿಸಿದರು. ಅವರ ವಯಸ್ಸನ್ನು ಪರಿಗಣಿಸಿ, ನ್ಯಾಯಾಲಯವು ಅವರಿಗೆ ಜಾಮೀನು ನೀಡುವುದು ಸೂಕ್ತವೆಂದು ಪರಿಗಣಿಸಿತು.