ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಸಿಮ್ ಕಾರ್ಡ್‌ನಿಂದ 27 ಲಕ್ಷ ರೂಪಾಯಿ ಮೌಲ್ಯದ ಚಿನ್ನ ತೆಗೆದ ವ್ಯಕ್ತಿ; ಈ ಸಾಹಸಕ್ಕೆ ನೆಟ್ಟಿಗರು ಫುಲ್ ಫಿದಾ!

Viral News: ಚೀನಾದ ವ್ಯಕ್ತಿಯೊಬ್ಬ ಬಳಸಿ ಬಿಸಾಡಿದ ಹಳೆಯ ಸಿಮ್ ಕಾರ್ಡ್‌ಗಳಿಂದ ಬರೋಬ್ಬರಿ 27 ಲಕ್ಷ ಮೌಲ್ಯದ ಚಿನ್ನವನ್ನು ಹೊರತೆಗೆದಿದ್ದಾರೆ. ಇತ್ತೀಚೆಗೆ ಅವರು 2 ಟನ್ ತೂಕದ ಎಲೆಕ್ಟ್ರಾನಿಕ್ ತ್ಯಾಜ್ಯ ಮತ್ತು ಸಿಮ್ ಕಾರ್ಡ್‌ಗಳನ್ನು ರಾಸಾಯನಿಕ ಕ್ರಿಯಗೆ ಒಳಪಡಿಸಿ ಅದರಿಂದ 191 ಗ್ರಾಂ ಚಿನ್ನ ಪಡೆದಿ ದ್ದಾರೆ ಎನ್ನಲಾಗಿದೆ. ಸದ್ಯ ಇದರ ವಿಡಿಯೊ ಭಾರೀ ವೈರಲ್ ಆಗುತ್ತಿದೆ.

ಸಿಮ್ ಕಾರ್ಡ್‌ ಬಳಸಿ ಚಿನ್ನ ತೆಗೆದ ವ್ಯಕ್ತಿ

ನವದೆಹಲಿ,ಫೆ.2: ಸಾಮಾನ್ಯವಾಗಿ‌ ಹಳೆಯ ಬಳಕೆ ಮಾಡದ ವಸ್ತುಗಳನ್ನು ನಾವು ಬಿಸಾಕುತ್ತೇವೆ, ಇಲ್ಲವೇ ಗುಜರಿ ವ್ಯಾಪಾರಿಗಳಿಗೆ ನೀಡುತ್ತೇವೆ. ಆದರೆ ಇಲ್ಲೊಬ್ಬರು ಹಳೆಯ ಸಿಮ್ ಕಾರ್ಡ್‌ಗಳನ್ನು (SIM Cards) ಬಳಸಿ ಚಿನ್ನವನ್ನೇ ಹೊರತೆಗೆದಿದ್ದಾರೆ. ಚೀನಾದ ವ್ಯಕ್ತಿಯೊಬ್ಬ ಬಳಸಿ ಬಿಸಾಡಿದ ಹಳೆಯ ಸಿಮ್ ಕಾರ್ಡ್‌ಗಳಿಂದ ಬರೋಬ್ಬರಿ 27 ಲಕ್ಷ ಮೌಲ್ಯದ ಚಿನ್ನವನ್ನು ಹೊರತೆಗೆದಿದ್ದಾರೆ. ಇತ್ತೀಚೆಗೆ ಅವರು 2 ಟನ್ ತೂಕದ ಎಲೆಕ್ಟ್ರಾನಿಕ್ ತ್ಯಾಜ್ಯ ಮತ್ತು ಸಿಮ್ ಕಾರ್ಡ್‌ಗಳನ್ನು ರಾಸಾಯನಿಕ ಕ್ರಿಯಗೆ ಒಳಪಡಿಸಿ ಅದರಿಂದ 191 ಗ್ರಾಂ ಚಿನ್ನ ಪಡೆದಿದ್ದಾರೆ ಎನ್ನಲಾಗಿದೆ.

ರಾಸಾಯನಿಕ ಕ್ರಿಯೆಗಳನ್ನು ಬಳಸಿಕೊಂಡು ಬಳಸಿದ ಸಿಮ್ ಕಾರ್ಡ್‌ಗಳು ಮತ್ತು ಎಲೆಕ್ಟ್ರಾನಿಕ್ ಸ್ಕ್ರ್ಯಾಪ್‌ಗಳನ್ನು ಸಂಸ್ಕರಿಸುತ್ತಿರುವುದನ್ನು ಈ ದೃಶ್ಯ ತೋರಿಸಿದೆ. ಚೀನಾದ ಕ್ವಿಯಾವೊ ಎಂದು ಕರೆಯಲ್ಪಡುವ ಈ ವ್ಯಕ್ತಿ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯದ ಹುಯಿಝೌದಲ್ಲಿ ನೆಲೆಸಿದ್ದಾರೆ. ಇವರು ವೃತ್ತಿಪರ ಲೋಹ ಸಂಸ್ಕರಣಾ ತಜ್ಞರು ಆಗಿದ್ದಾರೆ‌ ಇತ್ತೀಚೆಗೆ ಅವರು ಸುಮಾರು 2 ಟನ್ ತೂಕದ ಎಲೆಕ್ಟ್ರಾನಿಕ್ ತ್ಯಾಜ್ಯ ಮತ್ತು ಸಿಮ್ ಕಾರ್ಡ್‌ಗಳನ್ನು ರಾಸಾಯನಿಕ ಕ್ರಿಯೆಗೆ ಒಳಪಡಿಸಿ, ಅದರಿಂದ ಸುಮಾರು 191 ಗ್ರಾಂ ಚಿನ್ನವನ್ನು ಹೊರತೆಗೆದಿದ್ದಾರೆ.

ಅವರ ಪ್ರಕಾರ, ಸಿಮ್ ಕಾರ್ಡ್‌ಗಳು ಅಲ್ಪ ಪ್ರಮಾಣದ ಚಿನ್ನವನ್ನು ಹೊಂದಿರುತ್ತವೆ. ಸಿಮ್ ಕಾರ್ಡ್‌ಗಳು ಮತ್ತು ಮೊಬೈಲ್ ಚಿಪ್‌ಗಳಲ್ಲಿ ವಿದ್ಯುತ್ ಹರಿಯಲು ಮತ್ತು ತುಕ್ಕು ಹಿಡಿಯದಂತೆ ರಕ್ಷಣೆ ಮಾಡಲು ಅತ್ಯಂತ ಸಣ್ಣ ಪ್ರಮಾಣದ ಚಿನ್ನದ ಲೇಪನವನ್ನು ಸಿಮ್ ನಲ್ಲಿ ಬಳಸಲಾಗುತ್ತದೆ. ಸಿಮ್ ಕಾರ್ಡ್ ಸಾಮಾನ್ಯವಾಗಿ 0.001 ಗ್ರಾಂ ಗಿಂತ ಕಡಿಮೆ ಚಿನ್ನವನ್ನು ಹೊಂದಿರುತ್ತದೆ ಎಂದು ಅವರು ತಿಳಿಸಿದ್ದಾರೆ.

Viral Video: ಏಕಾಏಕಿ ಆಸ್ಪತ್ರೆಗೆ ಎಂಟ್ರಿ ಕೊಟ್ಟ ದೈತ್ಯ ಸರ್ಪ.... ಎದ್ನೋ ಬಿದ್ನೋ ಓಡಿದ ಜನ- ವಿಡಿಯೊ ನೋಡಿ

ಕೇವಲ ನಾಲ್ಕು-ಐದು ಸಿಮ್ ಕಾರ್ಡ್‌ಗಳಿಂದ ಚಿನ್ನ ಸಿಗುವುದಿಲ್ಲ. ಕ್ಯಾವೊ ಅವರು ಎರಡು ಟನ್‌ ನಷ್ಟು ಎಲೆಕ್ಟ್ರಾನಿಕ್ ಸ್ಕ್ರ್ಯಾಪ್ ಬಳಸಿದ್ದಾರೆ. ಈ ಪ್ರಕ್ರಿಯೆಯು ಅಪಾಯಕಾರಿ ಮತ್ತು ತರಬೇತಿ ಪಡೆಯದ ವ್ಯಕ್ತಿಗಳಿಗೆ ಸೂಕ್ತವಲ್ಲ ಎಂದು ಅವರು ಎಚ್ಚರಿಕೆ ಕೂಡ ನೀಡಿದ್ದಾರೆ. ಚಿನ್ನವನ್ನು ಬೇರ್ಪಡಿಸಲು ಇಲ್ಲಿ ಪ್ರಬಲ ಆಮ್ಲಗಳನ್ನು ಬಳಸಲಾಗುತ್ತದೆ. ಇವುಗಳಿಂದ ಹೊರಬರುವ ಅನಿಲ ಅತ್ಯಂತ ವಿಷಕಾರಿ ಎಂದು ತಿಳಿಸಿದ್ದಾರೆ.