Viral Video: ಏಕಾಏಕಿ ಆಸ್ಪತ್ರೆಗೆ ಎಂಟ್ರಿ ಕೊಟ್ಟ ದೈತ್ಯ ಸರ್ಪ.... ಎದ್ನೋ ಬಿದ್ನೋ ಓಡಿದ ಜನ- ವಿಡಿಯೊ ನೋಡಿ
ಮಹಾರಾಷ್ಟ್ರ ಥಾಣೆಯ ಸಿವಿಲ್ ಆಸ್ಪತ್ರೆಯಲ್ಲಿ ಭಯಾನಕ ಘಟನೆಯೊಂದು ನಡೆದಿದ್ದು, ನಾಲ್ಕು ಅಡಿ ಉದ್ದದ ವಿಷಕಾರಿಯಲ್ಲದ ಧಮನ್ ಹಾವೊಂದು ಪುರುಷ ವಾರ್ಡ್‌ಗೆ ನುಗ್ಗಿದ ಪರಿಣಾಮ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಹಾವು ಆಸ್ಪತ್ರೆ ಒಳಗಿನ ಸುತ್ತ ತಿರುಗುತ್ತಿದ್ದಂತೆ ರೋಗಿಗಳು, ಅವರ ಸಂಬಂಧಿಕರು ಹಾಗೂ ನರ್ಸ್‌ಗಳು ಭಯಭೀತರಾಗಿ ಆಸ್ಪತ್ರೆಯಿಂದ ಹೊರಗೆ ಓಡಿ ಹೋಗಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಆಸ್ಪತ್ರೆಯೊಳಗೆ ಆತಂಕ ಸೃಷ್ಟಿಸಿದ ದೈತ್ಯಾಕಾರದ ಹಾವು -
ಮಹಾರಾಷ್ಟ್ರ: ಮನೆಯೊಳಗೆ, ಯಾವುದೋ ಕೊಠಡೆ ಯೊಳಗೆ ಹಾವು ಬಂದು ಬೆಚ್ಚಗೆ ಮಲ ಗಿರುವ ಘಟನೆಯನ್ನು ನಾವು ಕೇಳಿದ್ದೇವೆ. ಆದ್ರೆ ಇದೀಗ ಆಸ್ವತ್ರೆಯೊಳಗೆ ಹಾವು ಬಂದು ಸೇರಿರುವ ಘಟನೆ ಕೇಳಿದ್ರೆ ನೀವು ಬೆಚ್ಚಿ ಬೀಳುತ್ತೀರಾ. ಮಹಾರಾಷ್ಟ್ರ ಥಾಣೆಯ ಸಿವಿಲ್ ಆಸ್ಪತ್ರೆಯಲ್ಲಿ ಭಯಾನಕ ಘಟನೆಯೊಂದು ನಡೆದಿದ್ದು, ನಾಲ್ಕು ಅಡಿ ಉದ್ದದ ವಿಷಕಾರಿಯಲ್ಲದ ಧಮನ್ ಹಾವೊಂದು ಪುರುಷ ವಾರ್ಡ್‌ಗೆ ನುಗ್ಗಿದ ಪರಿಣಾಮ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಹಾವು ಆಸ್ಪತ್ರೆ ಒಳಗಿನ ಸುತ್ತ ತಿರುಗುತ್ತಿದ್ದಂತೆ ರೋಗಿಗಳು, ಅವರ ಸಂಬಂಧಿಕರು ಹಾಗೂ ನರ್ಸ್‌ಗಳು ಭಯಭೀತರಾಗಿ ಆಸ್ಪತ್ರೆಯಿಂದ ಹೊರಗೆ ಓಡಿ ಹೋಗಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.
ವಿಷಕಾರಿಯಲ್ಲದ 'ಧಮನ್' ಹಾವೊಂದು ಇಬ್ಬರು ವ್ಯಕ್ತಿಗಳಿಗೆ ಕಚ್ಚಿತ್ತು. ಹಾಗಾಗಿ ಇಬ್ಬರು ನಿವಾಸಿಗಳನ್ನು ಚಿಕಿತ್ಸೆಗಾಗಿ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗೆ ಕರೆತಂದ ಸ್ವಲ್ಪ ಸಮಯದ ನಂತರ ಈ ಘಟನೆ ನಡೆದಿದೆ. ಈ ಕಚ್ಚಿದ ಹಾವನ್ನು ಸೆರೆಹಿಡಿದಿದ್ದ ಹಾವು ರಕ್ಷಕರು ಹಾವಿನ ಗುರುತು ಪಡಿಸುವುದಕ್ಕಾಗಿ ಆಸ್ಪತ್ರೆಗೆ ತಂದಿದ್ದರು. ಈ ವೇಳೆ ಅವರ ಹಿಡಿತದಿಂದ ಧಾಮನ್ ಹಾವು ಜಾರಿ ತಪ್ಪಿಸಿಕೊಂಡು ನೇರವಾಗಿ ಆಸ್ಪತ್ರೆಯ ಒಳಗೆ ಪ್ರವೇಶಿಸಿದೆ.
ವಿಡಿಯೊ ಇಲ್ಲಿದೆ:
Thane: Panic in Civil Hospital after a non-venomous snake spotted slithering across a ward Monday evening. A video of incident went viral Monday as the snake accidentally slipped off from the handler who brought it to show to the docs after he got bitten by it during rescue op pic.twitter.com/BksJy8Mpaf
— Manoj Badgeri (@manojbadgeriTOI) November 24, 2025
ಈ ಹಾವು ಮೊದಲು ಪುರುಷರ ವಾರ್ಡ್‌ಗೆ ನುಗ್ಗಿ, ನಂತರ ವೈದ್ಯರ ಕ್ಯಾಬಿನ್ ಗೂ ಎಂಟ್ರಿ ಕೊಟ್ಟಿದೆ. ಇದರಿಂದಾಗಿ ಕೆಲವೇ ನಿಮಿಷಗ ಳಲ್ಲಿ ಇಡೀ ಆಸ್ಪತ್ರೆಯಲ್ಲಿ ಭಾರೀ ಗೊಂದಲಕ್ಕೆ ಕಾರಣವಾಯಿತು. ವಿಡಿಯೊದಲ್ಲಿ ಹಾವು ರಕ್ಷಕನು ಹಿಡಿಯಲು ಪ್ರಯತ್ನಿಸಿದ ದೃಶ್ಯ ಕಾಣಬಹುದು.
Viral Video: ಅರುಣಾಚಲ ನಮ್ಮದು ಎಂದ ಭಾರತೀಯ ಮಹಿಳೆಗೆ ಚೀನಾದಲ್ಲಿ ಕಿರುಕುಳ
ಹಾವು ರಕ್ಷಕರು ತಕ್ಷಣವೇ ತಪ್ಪಿಸಿಕೊಂಡ ಹಾವನ್ನು ಹಿಡಿದಿದ್ದಾರೆ. ಇದು ವಿಷಕಾರಿಯಲ್ಲದ ಹಾವು ಆಗದೆ ಇರುವುದರಿಂದ ಯಾವುದೇ ವ್ಯಕ್ತಿಗೆ ಹಾನಿಯಾಗಲಿಲ್ಲ, ಆದರೆ ಭಯದಿಂದಾಗಿ ಆತಂಕ ಸೃಷ್ಟಿ ಯಾಗಿದೆ ಎಂದು ಆಸ್ಪತ್ರೆಯ ಸಿಬ್ಬಂದಿಗಳು ಖಚಿತಪಡಿಸಿದ್ದಾರೆ. ಸದ್ಯ ಈ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ನೆಟ್ಟಿಗರು ನಾನಾ ಬಗೆಯ ಪ್ರತಿಕ್ರಿಯೆ ನೀಡಿದ್ದಾರೆ. ಬಳಕೆದಾರೊಬ್ಬರು ಆಸ್ಪತ್ರೆ ಯೊಳಗೆ ಇದ್ದ ರೋಗಿಗಳಿಗೆ ಮತ್ತೆ ಆತಂಕ ಎದುರಾಗಿರಬಹುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬರು ಈ ದೃಶ್ಯ ವೈದ್ಯರನ್ನೇ ಬೆಚ್ಚಿ ಬೀಳಿಸರಬಹುದು ಎಂದು ಬರೆದುಕೊಂಡಿದ್ದಾರೆ.