ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕಲ್ಲುಗಳ ನಡುವೆ ಕಳೆದುಹೋಗಿದ್ದ ಇಯರ್‌ಬಡ್‌ ಹುಡುಕಿಕೊಟ್ಟ ಚಾಟ್‌ಜಿಪಿಟಿ: ಎಐ ತಂತ್ರಜ್ಞಾನಕ್ಕೆ ನೆಟ್ಟಿಗರು ಫಿದಾ

Viral News: ಸಣ್ಣ ಇಯರ್ ಬಡ್ ಕಳೆದು ಹೋದಾಗ ವ್ಯಕ್ತಿಯೊಬ್ಬರು ಇದನ್ನು ಪತ್ತೆ ಹಚ್ಚಲು ಚಾಟ್‌ಜಿಪಿಟಿ ಬಳಸಿದ್ದಾರೆ. ಹತ್ತು ನಿಮಿಷದವರೆಗೆ ಹುಡುಕಾಟ ನಡೆಸಿದರೂ ಸಿಗದ ಇಯರ್ ಬಡ್ ಎಐ ಸಹಾಯದಿಂದ ಕೆಲವೇ ನಿಮಿಷದಲ್ಲಿ ದೊರಕಿದೆ.

ಕಳೆದು ಹೋಗಿದ್ದ ಇಯರ್ ಬಡ್ ಹುಡುಕಿಕೊಟ್ಟ ಚಾಟ್‌ಜಿಪಿಟಿ

ಸಾಂದರ್ಭಿಕ ಚಿತ್ರ -

Profile
Pushpa Kumari Oct 26, 2026 4:28 PM

ನವದೆಹಲಿ, ಅ. 26: ಇತ್ತೀಚೆಗೆ ಚಾಟ್‌ಜಿಪಿಟಿ ಎಐ ಬಳಕೆ ಸಾಮಾನ್ಯ ಎಂಬಂತಾಗಿದೆ. ಜೀವನದ ಪ್ರಮುಖ ಭಾಗವಾಗಿ ಹೋಗಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಸಣ್ಣ ಇಯರ್ ಬಡ್ ಕಳೆದು ಹೋದಾಗ ವ್ಯಕ್ತಿಯೊಬ್ಬರು ಇದನ್ನು ಪತ್ತೆ ಹಚ್ಚಲು ಚಾಟ್‌ಜಿಟಿಪಿ ಮೊರೆ ಹೋಗಿದ್ದಾರೆ. ಹತ್ತು ನಿಮಿಷ ಹುಡುಕಾಟ ನಡೆಸಿದರೂ ಸಿಗದ ಇಯರ್ ಬಡ್ ಎಐ ಸಹಾಯದಿಂದ ಕೆಲವೇ ನಿಮಿಷದಲ್ಲಿ (Viral News) ದೊರೆತಿದೆ.

ಇಂದು ಯಾವುದೇ ಮಾಹಿತಿ ಬೇಕಿದ್ದರೂ, ವಸ್ತು ಕಳೆದು ಹೋದರೂ ಚಾಟ್‌ಜಿಪಿಟಿಯನ್ನು ಬಳಸುವ ಮಟ್ಟಕ್ಕೆ ತಲುಪಿಬಿಟ್ಟಿದ್ದೇವೆ. ಇದೀಗ ಸಣ್ಣ ಇಯರ್‌ಬಡ್‌ ಬೆಣಚು ಕಲ್ಲುಗಳ ನಡುವೆ ಬಿದ್ದು ಹೋದಾಗ ಅದನ್ನು ಕಂಡು ಹಿಡಿಯಲು ಪರದಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಚಾಟ್‌ಜಿಪಿಟಿ ಸಹಾಯ ಮಾಡಿದೆ. ಎಐ ನೆರವಿನಿಂದ ಕೇವಲ 5 ನಿಮಿಷಗಳಲ್ಲಿ ಎಲ್ಲಿದೆ ಎಂದು ಕಂಡುಹಿಡಿದಿದ್ದಾರೆ.

ವೈರಲ್‌ ರೆಡ್ಡಿಟ್‌ ಪೋಸ್ಟ್‌:

ಈ ಘಟನೆಯು ಮಗನೊಂದಿಗೆ ಉದ್ಯಾನವನದಲ್ಲಿದ್ದಾಗ ನಡೆದಿದೆ ಎಂದು ತಿಳಿಸಿದ್ದಾರೆ. ಅಲ್ಲಿಂದ ಹೊರಡುವಾಗ, ಮಗ ಸ್ಥಳದಿಂದ ಓಡಲು ಪ್ರಾರಂಭಿಸಿದಾಗ ಆತನನ್ನು ಹಿಡಿಯಲು ಹಿಂದೆ ಓಡಿದ್ದಾರೆ‌. ಈ ವೇಳೆ ಇಯರ್‌ಬಡ್‌ ಜೇಬಿನ ಕೆಳಗೆ ಬಿದ್ದು ಬೆಣಚು ಕಲ್ಲುಗಳ ನಡುವೆ ಸಿಕ್ಕಿಕೊಂಡಿತ್ತು.

ರೈಲು ಹಳಿಗೆ ಬಿದ್ದ ಮಕ್ಕಳನ್ನು ರಕ್ಷಿಸಲು ದೇಹವನ್ನೇ ರಕ್ಷಾ ಕವಚವಾಗಿಸಿದ ತಾಯಿ!

ತಮ್ಮ ಕೈಗೆ ಸಿಗದೇ ಇದ್ದಾಗ ಅವರಿಗೆ ಒಂದು ಉಪಾಯ ಹೊಳೆದಿದ್ದು ಚಾಟ್‌ಜಿಪಿಟಿ ಸಹಾಯವನ್ನು ಪಡೆಯಲು ನಿರ್ಧರಿಸಿದ್ದಾರೆ. ಜಲ್ಲಿಕಲ್ಲುಗಳಿಂದ ಕೂಡಿದ ನೆಲದ ಫೋಟೊಗಳನ್ನು ಅಪ್‌ ಲೋಡ್ ಮಾಡಿ, ಅದರಲ್ಲಿ ಕಳೆದುಹೋದ ಇಯರ್‌ಬಡ್ ಎಲ್ಲಿದೆ ಎಂದು ಗುರುತಿಸಲು ಕೇಳಿಕೊಂಡಿದ್ದಾರೆ. ಆಗ ಚಾಟ್‌ಜಿಪಿಟಿ ಆ ಪ್ರದೇಶವನ್ನು ಇನ್ನಷ್ಟು ಸೂಕ್ಷ್ಮವಾಗಿ ಪರಿಶೀಲಿಸಲು, ಇನ್ನಷ್ಟು ಹತ್ತಿರದಿಂದ ತೆಗೆದ ಚಿತ್ರಗಳನ್ನು ನೀಡುವಂತೆ ಕೇಳಿತು.

ಹೆಚ್ಚುವರಿ ಚಿತ್ರಗಳನ್ನು ನೀಡಿದ ಒಂದು ನಿಮಿಷದ ಒಳಗಾಗಿಯೇ, ಚಾಟ್‌ಜಿಪಿಟಿ ಆ ಇಯರ್‌ಬಡ್ ಎಲ್ಲಿದೆ ಎಂದು ಗುರುತಿಸಿತು ಮತ್ತು ಅದರ ನಿಖರವಾದ ಸ್ಥಳವನ್ನು ಗುರುತಿಸಿ ಚಿತ್ರವೊಂದನ್ನು ನೀಡಿತು. ಈ ವಿಚಾರವನ್ನು ಅವರು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದು, ವೈರಲ್‌ ಆಗಿದೆ.