ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಕೋರ್ಟ್‌ ವಿಚಾರಣೆಗೆ AI ವಕೀಲನನ್ನು ನಿಯೋಜಿಸಿದ ಭೂಪ! ಆಮೇಲೇನಾಯ್ತು ಗೊತ್ತಾ?

Viral News: ವ್ಯಕ್ತಿಯೊಬ್ಬ ತನ್ನ ಪರವಾಗಿ ವಾದ ಮಂಡಿಸಲು ಎಐ ವಕೀಲರನ್ನು ಸೃಷ್ಟಿಸಿ ನ್ಯಾಯಾಧೀಶರ ಕೆಂಗಣ್ಣಿಗೆ ಗುರಿಯಾಗಿರುವ ಘಟನೆ ನ್ಯೂಯಾರ್ಕ್‌ನಲ್ಲಿ ನಡೆದಿದೆ. 74 ವರ್ಷದ ವ್ಯಕ್ತಿಯೊಬ್ಬ ತನ್ನ ಪ್ರಕರಣವನ್ನು ವಾದಿಸಲು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮೂಲಕ ವಕೀಲರನ್ನು ನಿರ್ಮಿಸಿದ್ದಾನೆ. ಇದನ್ನು ನೋಡಿ ಗೊಂದಲಕ್ಕೊಳಗಾದ ನ್ಯಾಯಾಧೀಶರು ಕೋಪಗೊಂಡು ವಿಚಾರಣೆಯನ್ನು ನಿಲ್ಲಿಸಿದರು.

ಕೋರ್ಟ್‌ ವಿಚಾರಣೆಗೆ AI ವಕೀಲನನ್ನು ನಿಯೋಜಿಸಿದ ಭೂಪ!

ನ್ಯೂಯಾರ್ಕ್: ವ್ಯಕ್ತಿಯೊಬ್ಬ ತನ್ನ ಪರವಾಗಿ ವಾದ ಮಂಡಿಸಲು ಎಐ ವಕೀಲರನ್ನು ( AI lawyer) ರೂಪುಗೊಳಿಸಿ ನ್ಯಾಯಾಧೀಶರ ಕೆಂಗಣ್ಣಿಗೆ ಗುರಿಯಾಗಿರುವ ಘಟನೆ ನ್ಯೂಯಾರ್ಕ್ ನಲ್ಲಿ (New York) ನಡೆದಿದೆ. 74 ವರ್ಷದ ವ್ಯಕ್ತಿಯೊಬ್ಬ ತನ್ನ ಪ್ರಕರಣವನ್ನು ವಾದಿಸಲು ಆರ್ಟಿಫಿಷಿಯಲ್ ಇಂಟಲಿಜೆನ್ಸ್ (artificial intelligence ) ಮೂಲಕ ವಕೀಲರನ್ನು ಸೃಷ್ಟಸಿದ್ದಾನೆ. ಇದನ್ನು ನೋಡಿ ಗೊಂದಲಕ್ಕೊಳಗಾದ ನ್ಯಾಯಾಧೀಶರು ಕೋಪಗೊಂಡು ವಿಚಾರಣೆಯನ್ನು ನಿಲ್ಲಿಸಿದರು. ನ್ಯೂಯಾರ್ಕ್ ನ ಮೇಲ್ಮನವಿ ನ್ಯಾಯಾಲಯದ ನ್ಯಾಯಾಧೀಶರೊಬ್ಬರು ಸಮ್ಮುಖದಲ್ಲಿ 74 ವರ್ಷದ ಜೆರೋಮ್ ಡೆವಾಲ್ಡ್ ಎಂಬಾತ ಉದ್ಯೋಗದಲ್ಲಿ ಎದುರಾದ ವಿವಾದವನ್ನು ಬಗೆಹರಿಸಲು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಮೂಲಕ ವಕೀಲರನ್ನು ರೆಡಿ ಮಾಡಿದ್ದಾನೆ. ಇದು ವಿಚಾರಣೆಯಲ್ಲಿ ಭಾಗಿಯಾಗಿದ್ದ ನ್ಯಾಯಪೀಠಕ್ಕೆ ಆಶ್ಚರ್ಯವನ್ನು ಉಂಟು ಮಾಡಿದೆ. ಇದರಿಂದ ಕೋಪಗೊಂಡ ನ್ಯಾಯಾಧೀಶರು ವಿಚಾರಣೆಯನ್ನು ಅರ್ಧದಲ್ಲೇ ನಿಲ್ಲಿಸಿದರು.



ನ್ಯೂಯಾರ್ಕ್ ರಾಜ್ಯ ಸುಪ್ರೀಂ ಕೋರ್ಟ್ ಮೇಲ್ಮನವಿ ವಿಭಾಗದ ಮೊದಲ ನ್ಯಾಯಾಂಗ ಇಲಾಖೆಯಲ್ಲಿ ಮಾರ್ಚ್ ತಿಂಗಳಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ಬಗ್ಗೆ ಸಾಮಾಜಿಕ ಜಾಲತಾಣವಾದ ಎಕ್ಸ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ನ್ಯೂಯಾರ್ಕ್‌ನಲ್ಲಿ ನ್ಯಾಯಾಧೀಶರಿಗೆ ವ್ಯಕ್ತಿಯೊಬ್ಬ ಎಐ ವಕೀಲರನ್ನು ಬಳಸಿ ಮೋಸ ಮಾಡಲು ಯತ್ನಿಸಿದ್ದಾನೆ. ಇದರ ಸಂಪೂರ್ಣ ವಿಡಿಯೋ ನ್ಯಾಯಾಲಯದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಲಭ್ಯವಿದೆ ಎಂದು ಹೇಳಲಾಗಿದೆ.

ಪ್ರಕರಣದಲ್ಲಿ ಎಐ ವಕೀಲರನ್ನು ನೋಡಿ ನ್ಯಾಯಾಧೀಶರು ಅದು ನಿಮ್ಮ ವಕೀಲರೇ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಡೆವಾಲ್ಡ್‌ ಅದನ್ನು ನಾನು ಎಐ ಮೂಲಕ ರಚಿಸಿದ್ದು, ಅದು ನಿಜವಾದ ವ್ಯಕ್ತಿಯಲ್ಲ ಎಂದು ಹೇಳಿದ್ದಾನೆ. ಎಐ ವಕೀಲ ಡೆವಾಲ್ಡ್‌ ನನ್ನೇ ಹೋಲುತ್ತಿದ್ದು, ಇದರಿಂದ ನ್ಯಾಯಾಧೀಶರು ಗೊಂದಲಕ್ಕೆ ಒಳಗಾಗಿದ್ದಾರೆ.

ಇದನ್ನೂ ಓದಿ: Deepika Das: ಸದ್ದಿಲ್ಲದೆ ಓಟಿಟಿಗೆ ಬಂತು ದೀಪಿಕಾ ದಾಸ್ ನಟನೆಯ ಪಾರು ಪಾರ್ವತಿ ಸಿನಿಮಾ

ಇದರಿಂದ ಅಸಮಾಧಾನಗೊಂಡ ನ್ಯಾಯಮೂರ್ತಿ ಸ್ಯಾಲಿ ಮಂಜನೆಟ್-ಡೇನಿಯಲ್ಸ್ ಅವರು ಡೆವಾಲ್ಡ್ ವಿರುದ್ಧ ಕಿಡಿಕಾರಿದ್ದಾರೆ. ಇದು ಸರಿಯಲ್ಲ. ಅದನ್ನು ನಿಲ್ಲಿಸಿ ಎಂದು ಹೇಳಿದ್ದಾರೆ. ಬಳಿಕ ಜೆರೋಮ್ ಡೆವಾಲ್ಡ್ ಈ ಘಟನೆಯಿಂದ ತನಗೆ ಮುಜುಗರವಾಗಿದೆ ಎಂದು ಹೇಳಿ ನ್ಯಾಯಾಧೀಶರಿಗೆ ಕ್ಷಮೆಯಾಚಿಸುವ ಪತ್ರವನ್ನು ಕಳುಹಿಸಿದ್ದಾರೆ. ಇದರಲ್ಲಿ ಅವರು, ನನ್ನ ಉದ್ದೇಶ ಎಂದಿಗೂ ಮೋಸ ಮಾಡುವುದಾಗಿರಲಿಲ್ಲ. ಬದಲಾಗಿ ನನ್ನ ವಾದಗಳನ್ನು ಸಾಧ್ಯವಾದಷ್ಟು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುವುದಾಗಿತ್ತು ಎಂದು ಹೇಳಿದ್ದಾರೆ.