Viral News: ಮರಾಠಿ ಮಾತನಾಡಬೇಕು ಎಂದು ಹೇಳಿದ್ರೆ ತೊಂದರೆ ಏನು? ಎಂಎನ್‌ಎಸ್ ಸದಸ್ಯರನ್ನು ಸಮರ್ಥಿಸಿಕೊಂಡ ಗೃಹ ಸಚಿವ
ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಸದಸ್ಯರು ಮುಂಬೈ ಅಂಗಡಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಇದೀಗ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಯೋಗೇಶ್ ಕದಮ್ ಮಾತನಾಡಿದ್ದಾರೆ. ದಾಳಿಯನ್ನು ಖಂಡಿಸುವ ಬದಲು ಕದಮ್ ಅವರು 'ಮರಾಠಿಯನ್ನು ಅಗೌರವಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.


ಮುಂಬೈ: ರಾಜ್ ಠಾಕ್ರೆ ಅವರ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಸದಸ್ಯರು ಮುಂಬೈ ಅಂಗಡಿಯೊಬ್ಬರ ಮೇಲೆ ಹಲ್ಲೆ ನಡೆಸಿದ್ದರು. ಇದೀಗ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಯೋಗೇಶ್ ಕದಮ್ (Viral News) ಮಾತನಾಡಿದ್ದಾರೆ. ದಾಳಿಯನ್ನು ಖಂಡಿಸುವ ಬದಲು ಕದಮ್ ಅವರು 'ಮರಾಠಿಯನ್ನು ಅಗೌರವಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಎಂಎನ್‌ಎಸ್ ಸದಸ್ಯರನ್ನು ಶಿಕ್ಷಿಸುವ ಕುರಿತು ಅವs ರು ಯಾವುದೇ ಮಾತನಾಡದಿರುವುದು ಆಕ್ರೋಶ ವ್ಯಕ್ತವಾಗುತ್ತಿದೆ. ಮಹಾರಾಷ್ಟ್ರದಲ್ಲಿ ಮರಾಠಿ ಮಾತನಾಡಲೇಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ನಿಮಗೆ ಮರಾಠಿ ಗೊತ್ತಿಲ್ಲದಿದ್ದರೆ ಕಲಿಯಿರಿ. ಗೊತ್ತಿಲ್ಲ ಕಲಿಯುವುದಿಲ್ಲ ಎಂದು ಇದ್ದರೆ ಇಲ್ಲಿ ನಡೆಯುವುದಿಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ. ಅದನ್ನು ಮಾತನಾಡುವುದೇ ಇಲ್ಲ' ಎಂಬ ನಿಮ್ಮ ಮನೋಭಾವವಿದ್ದರೆ, ಅದು ಕೆಲಸ ಮಾಡುವುದಿಲ್ಲ. 'ನಾವು ಅದನ್ನು ಮಾತನಾಡಲು ಪ್ರಯತ್ನಿಸುತ್ತೇವೆ' ಎಂದು ನೀವು ಹೇಳಬಹುದು. ಯಾರಾದರೂ ಮರಾಠಿಯನ್ನು ಅಗೌರವಿಸಿದರೆ, ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಮುಂಬೈನ ಮೀರಾ ರಸ್ತೆ ಪ್ರದೇಶದಲ್ಲಿ 20 ವರ್ಷಗಳಿಂದ 'ಜೋಧ್‌ಪುರ ಸಿಹಿ ಅಂಗಡಿ' ನಡೆಸುತ್ತಿರುವ 48 ವರ್ಷದ ಬಾಬುಲಾಲ್ ಖಿಮ್ಜಿ ಚೌಧರಿ ಅವರ ಮೇಲಿನ ಹಲ್ಲೆಯ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಚೌಧರಿ ಅವರಿಗೆ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಭಾನುವಾರ ರಾತ್ರಿ 10.30 ರ ಸುಮಾರಿಗೆ ಹಲ್ಲೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ. ಹಲ್ಲೆಗೊಳಗಾದ ವ್ಯಕ್ತಿಯನ್ನು ರಾಜಸ್ಥಾನದ ವಲಸೆ ಕಾರ್ಮಿಕ ಬಘರಾಮ್ ಎಂದು ತಿಳಿದು ಬಂದಿದೆ. ಎಂಎನ್‌ಎಸ್ ಗೂಂಡಾಗಳು ಚೌದರಿ ಅವರನ್ನು ಸುತ್ತುವರಿದು, ಮರಾಠಿಯಲ್ಲಿ ಮಾತನಾಡದಿದ್ದರೆ ಬಲವಂತವಾಗಿ ಅವರ ವ್ಯವಹಾರವನ್ನು ಮುಚ್ಚುವುದು ಸೇರಿದಂತೆ ಕೆಟ್ಟ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕುತ್ತಿರುವುದು ಕಂಡುಬಂದಿದೆ.
ಈ ಸುದ್ದಿಯನ್ನೂ ಓದಿ: Viral Video: ಮರಾಠಿ ಭಾಷೆ ಬಗ್ಗೆ ಅಗೌರವ ತೋರಿದ ಸೆಕ್ಯೂರಿಟಿ ಗಾರ್ಡ್- ಮುಂದೇನಾಯ್ತು? ವಿಡಿಯೊ ನೋಡಿ
ದಾಳಿಕೋರರು ನೀರು ಬಯಸಿದ್ದರು ಆದರೆ ಹಿಂದಿಯಲ್ಲಿ ಮಾತನಾಡಿದಾಗ ಮರಾಠಿಯಲ್ಲಿ ಮಾತನಾಡುವಂತೆ ಒತ್ತಾಯಿಸಿದರು. "ನಾವು ಎಲ್ಲಾ ಭಾಷೆಗಳನ್ನು ಮಾತನಾಡುತ್ತೇವೆ ಎಂದು ನಾನು ಹೇಳಿದೆ, ಆದ್ದರಿಂದ ಅವರು ನನ್ನನ್ನು ಹೊಡೆಯುವುದಾಗಿ ಬೆದರಿಕೆ ಹಾಕಿದರು ಎಂದು ಚೌಧರಿ ಹೇಳಿದ್ದಾರೆ. ಎಂಎನ್ಎಸ್ ತನ್ನ ಕಾರ್ಯಕರ್ತರಿಗೆ ಕ್ಷಮೆಯಾಚಿಸಲು ಅಥವಾ ಛೀಮಾರಿ ಹಾಕಲು ನಿರಾಕರಿಸಿದೆ. ಮಹಾರಾಷ್ಟ್ರದಲ್ಲಿ ಎಲ್ಲಾ ಭಾಷೆಗಳನ್ನು ಮಾತನಾಡುತ್ತಾರೆ ಎಂದು ಹೇಳುವ ಮೂಲಕ ಅವರು ತಮ್ಮ ದಾಳಿಕೋರರನ್ನು ಕೆರಳಿಸಿದ್ದಾರೆ ಎಂದು ಅದು ಹೇಳಿದೆ.