ನವದೆಹಲಿ: ನೀವು ಮೆಟ್ರೋದಲ್ಲಿ ಪ್ರಯಾಣಿಸುವಾಗ ಕಳೆದುಹೋದ ಪ್ರಯಾಣಿಕರ ಏನಾದರೊಂದು ವಸ್ತುಗಳು ಅಥವಾ ಜನರು ಮಲಗಿರುವುದನ್ನು ನೋಡಿರಬಹುದು. ಆದರೆ ನಿರೋಧ್ ಕಾಂಡೋಮ್‌ಗಳ (Condoms) ದೊಡ್ಡ ಪೆಟ್ಟಿಗೆಯನ್ನು ನೋಡಿದ್ದೀರಾ? ದೆಹಲಿ ಮೆಟ್ರೋದಲ್ಲಿ (Delhi Metro) ದಿನನಿತ್ಯದ ಪ್ರಯಾಣ ಮಾಡುವಾಗ ಒಬ್ಬ ಪ್ರಯಾಣಿಕರಿಗೆ ಈ ದೃಶ್ಯ ಕಣ್ಣಿಗೆ ಬಿದ್ದಿದೆ. ನಿಲ್ದಾಣದ ಗೇಟ್ ಹಿಂದೆ ನಿರೋಧ್ ಕಾಂಡೋಮ್‌ಗಳ ದೊಡ್ಡ ಪೆಟ್ಟಿಗೆ ಕಂಡುಬಂದಿದೆ. ರೆಡ್ಡಿಟ್‌ನಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ, ಪೆಟ್ಟಿಗೆಯ ಜೊತೆಗೆ ಕಾಂಡೋಮ್‌ಗಳ ಪ್ಯಾಕೆಟ್‌ಗಳು ಇರುವುದನ್ನು ತೋರಿಸಲಾಗಿದೆ. ಸದ್ಯ, ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral News) ಆಗಿದೆ.
ಪತ್ತೆಯಾದ ಕಾಂಡೋಮ್ ಪೆಟ್ಟಿಗೆಯಲ್ಲಿ ಕೇವಲ ಮೂರು ಪ್ಯಾಕೆಟ್‌ಗಳು ಮಾತ್ರ ತೆರೆದಿವೆ ಎಂದು ಹೇಳಲಾಗಿದೆ. ಈ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ಬೇಗನೆ ವೈರಲ್ ಆಗಿದ್ದು, ಸಾರ್ವಜನಿಕ ಆರೋಗ್ಯ ಅಭಿಯಾನದ ಭಾಗವಾಗಿ ದೆಹಲಿ ಮೆಟ್ರೋ ಕಾಂಡೋಮ್ ವಿತರಿಸುವ ಕ್ರಮಗಳನ್ನು ಹಲವರು ನೆನಪಿಸಿಕೊಂಡರು. ಇನ್ನು ಕೆಲವರು, ಪೆಟ್ಟಿಗೆಯನ್ನು ನೋಡಿದಾಗ ಪ್ರಯಾಣಿಕರು ಏನು ಯೋಚಿಸಿರಬಹುದು ಎಂದು ತಮಾಷೆ ಮಾಡಿದರು.
ಇತ್ತೀಚೆಗೆ, ಇವುಗಳನ್ನು ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಒಬ್ಬ ವ್ಯಕ್ತಿಯೊಬ್ಬರು ಕಾಮೆಂಟ್ ಮಾಡಿದ್ದಾರೆ. ಇವುಗಳನ್ನು ನಿಜವಾಗಿಯೂ ಜನರು ಬಳಸುತ್ತಾರೆಯೇ ಎಂದು ಮತ್ತೊಬ್ಬರು ಪ್ರಶ್ನಿಸಿದ್ದಾರೆ. ಮೊದಲು ನೋಡಿದಾಹ, ಅವು ಪಾಪ್-ಪಾಪ್ ಕ್ರ್ಯಾಕರ್ಸ್ ಎಂದು ನಾನು ಭಾವಿಸಿದೆ. ಆದರೆ, ಕಾಮೆಂಟ್‌ಗಳನ್ನು ಓದಿದ ನಂತರ ಅದು ಕಾಂಡೋಮ್ ಎಂದು ತಿಳಿದುಬಂತು ಎಂದು ಮಗದೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: Viral News: ಹೋರಿ ಬೆದರಿಸುವ ಸ್ಪರ್ಧೆ; ಮಾಜಿ ಶಾಸಕನಿಗೆ ತಿವಿದ ಹೋರಿ, ವಿಡಿಯೋ ನೋಡಿ
ಸಾಧ್ಯವಾದರೆ ಅವನ್ನು ಸರ್ಕಾರಿ ಆಸ್ಪತ್ರೆಗೆ ಹಿಂತಿರುಗಿಸಿ ಎಂದು ಬಳೆಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಸರ್ಕಾರಿ ಯೋಜನೆಗಳ ಅಡಿಯಲ್ಲಿ ಉಚಿತ ವಿತರಣೆಗೆ ಮೀಸಲಿಟ್ಟ ಕಾಂಡೋಮ್‌ಗಳನ್ನು ಬೇರೆಡೆಗೆ ತೆಗೆದುಕೊಂಡು ಹೋದಂತೆ ಕಾಣುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ದೆಹಲಿ ಮೆಟ್ರೋ ನಿರೋಧ್ ಜೊತೆ ಪಾಲುದಾರಿಕೆ ಹೊಂದಿದೆ
ಅಂದಹಾಗೆ, 2014 ರಲ್ಲಿ ಗರ್ಭನಿರೋಧಕಗಳ ಅತಿದೊಡ್ಡ ತಯಾರಕರಲ್ಲಿ ಒಂದಾದ HLL ಲೈಫ್‌ಕೇರ್, ವಿವಿಧ ಮೆಟ್ರೋ ನಿಲ್ದಾಣಗಳಲ್ಲಿ ವೆಂಡಿಂಗ್ ಯಂತ್ರಗಳನ್ನು ಸ್ಥಾಪಿಸಲು ದೆಹಲಿ ಮೆಟ್ರೋ ರೈಲು ನಿಗಮ (DMRC) ದೊಂದಿಗೆ ಪಾಲುದಾರಿಕೆ ಮಾಡಿಕೊಂಡಿತು. ಈ ಯಂತ್ರಗಳನ್ನು ನಿರೋಧ್ ಕಾಂಡೋಮ್‌ಗಳನ್ನು, ಗರ್ಭನಿರೋಧಕಗಳು ಮತ್ತು ಸ್ಯಾನಿಟರಿ ನ್ಯಾಪ್‌ಕಿನ್‌ಗಳಂತಹ ಇತರ ಆರೋಗ್ಯ ಉತ್ಪನ್ನಗಳ ಜೊತೆಗೆ ಮಾರಾಟ ಮಾಡಲು ಸಜ್ಜುಗೊಳಿಸಲಾಗಿತ್ತು.
ಇನ್ನು ನಿರೋಧ್ ಕಾಂಡೋಮ್‌ಗಳನ್ನು 1960ರ ದಶಕದಲ್ಲಿ ಗರ್ಭನಿರೋಧಕ ಮತ್ತು ಲೈಂಗಿಕವಾಗಿ ಹರಡುವ ಸೋಂಕುಗಳ ವಿರುದ್ಧದ ರಕ್ಷಣೆಗಾಗಿ ಬಿಡುಗಡೆ ಮಾಡಲಾಯಿತು. ಇವು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಭ್ಯವಿದೆ. ಎಚ್ಐವಿ/ಏಡ್ಸ್ ತಡೆಗಟ್ಟುವಿಕೆಗಾಗಿ ಎನ್‍ಜಿಒಗಳು, ಇಂಟಿಗ್ರೇಟೆಡ್ ಕೌನ್ಸೆಲಿಂಗ್ ಮತ್ತು ಪರೀಕ್ಷಾ ಕೇಂದ್ರ ಹಾಗೂ ಆಂಟಿ-ರೆಟ್ರೋವೈರಲ್ ಥೆರಪಿ ಕೇಂದ್ರಗಳ ಮೂಲಕ ಉಚಿತ ಕಾಂಡೋಮ್‌ಗಳನ್ನು ವಿತರಿಸಲಾಗುತ್ತದೆ.