Viral News: ಹೋರಿ ಬೆದರಿಸುವ ಸ್ಪರ್ಧೆ; ಮಾಜಿ ಶಾಸಕನಿಗೆ ತಿವಿದ ಹೋರಿ, ವಿಡಿಯೋ ನೋಡಿ
ದೀಪಾವಳಿ ಹಬ್ಬದಂದು ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮಾಜಿ ಶಾಸಕರೊಬ್ಬರಿಗೆ ಹೋರಿಯೊಂದು ತಿವಿದಿರುವ ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಎರಡು ದಿನಗಳ ಹಿಂದೆ ಬಳ್ಳಿಗಾವಿಯಲ್ಲಿ ಸಾಂಪ್ರಾದಾಯಿಕ ಗ್ರಾಮೀಣ ಕ್ರೀಡೆ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು.
-
Vishakha Bhat
Oct 26, 2025 10:34 AM
ಶಿವಮೊಗ್ಗ: ದೀಪಾವಳಿ ಹಬ್ಬದಂದು ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮಾಜಿ ಶಾಸಕರೊಬ್ಬರಿಗೆ ಹೋರಿಯೊಂದು ತಿವಿದಿರುವ (Viral News) ಘಟನೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದಿದೆ. ಎರಡು ದಿನಗಳ ಹಿಂದೆ ಬಳ್ಳಿಗಾವಿಯಲ್ಲಿ ಸಾಂಪ್ರಾದಾಯಿಕ ಗ್ರಾಮೀಣ ಕ್ರೀಡೆ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಯನ್ನು ವೀಕ್ಷಿಸಲು ಶಿಕಾರಿಪುರದ ಮಾಜಿ ಶಾಸಕ ಮಹಾಲಿಂಗಪ್ಪ ತೆರಳಿದ್ದರು. ಮನೆಯೊಂದರ ಬಾಗಿಲ ಮುಂದೆ ಹೋರಿ ಬೆದರಿಸುವ ಸ್ಪರ್ಧೆ ನೋಡುತ್ತಾ ನಿಂತಿದ್ದಾಗ ಅಲ್ಲಿಗೆ ಬಂದ ಹೋರಿ, ಒಂದೆರಡು ಬಾರಿ ಮಹಾಲಿಂಗಪ್ಪ ಅವರನ್ನು ತಿವಿದು ಎತ್ತಿಹಾಕಿದೆ. ಮಾಜಿ ಶಾಸಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಈಗ ಚೇತರಿಸಿಕೊಳ್ಳುತ್ತಿದ್ದಾರೆಂದು ಆಪ್ತ ಮೂಲಗಳು ತಿಳಿಸಿವೆ.
ಸ್ಥಳೀಯರು ಈ ದೃಶ್ಯವನ್ನು ತಮ್ಮ ಫೋನ್‌ಗಳಲ್ಲಿ ರೆಕಾರ್ಡ್ ಮಾಡಿದ್ದಾರೆ. ಮನೆಯೊಂದರ ಬಾಗಿಲತ್ತ ಓಡುತ್ತಿದ್ದ ಮಹಾಲಿಂಗಪ್ಪ ಅವರಿಗೆ ಹೋರಿ ಬಿಳಿ ಬೂದು ಬಣ್ಣದ ಹೋರಿ ಎರಡು ಬಾರಿ ಕೊಂಬಿನಿಂದ ತಿವಿದಿದ್ದೆ. ತದನಂತರ ಅವರು ಅಂಗಾತ ಮಲಗಿದ್ದಾರೆ. ನಂತರ ಹೋರಿ ಅಲ್ಲಿಂದ ಬೇರೆಡೆಗೆ ಓಡಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಜಿ ಶಾಸಕರಿಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಪ್ರಾಣಪಾಯದಿಂದ ಪಾರಾಗಿದ್ದಾರೆ.
Video: Karnataka Ex-MLA Gored During Bull Race Festival https://t.co/4HGPlNhBap pic.twitter.com/NAFHOLB2Lb
— NDTV (@ndtv) October 25, 2025
ಕೆಲ ದಿನಗಳ ಹಿಂದೆ ಹಾವೇರಿ ಜಿಲ್ಲೆಯಲ್ಲಿ ನಡೆದ ಹೋರಿಯಲ್ಲಿ ನಾಲ್ವರು ಬಲಿಯಾಗಿದ್ದರು. ಹಾವೇರಿಯ ದಾನೇಶ್ವರಿನಗರದ ಚಂದ್ರಶೇಖರ ಕೋಡಿಹಳ್ಳಿ (75), ಹಾವೇರಿ ತಾಲ್ಲೂಕಿನ ದೇವಿಹೊಸೂರಿನ ಘನಿಸಾಬ ಮಹಮ್ಮದ್ ಹುಸೇನ್ ಬಂಕಾಪುರ (75), ಹಾನಗಲ್ ತಾಲ್ಲೂಕಿನ ತಿಳವಳ್ಳಿಯ ಭರತ್ ರಾಮಪ್ಪ ಹಿಂಗಮೇರಿ (24), ಯಳವಟ್ಟಿ ಗ್ರಾಮದ ಶ್ರೀಕಾಂತ ಗುರುಶಾಂತಪ್ಪ ಕೋಣನಕೇರಿ (40) ಮೃತರು.
'ಹೆಸ್ಕಾಂನ ನಿವೃತ್ತ ಲೈನ್‌ಮನ್ ಚಂದ್ರಶೇಖರ್ ಅವರಿಗೆ ಹಾವೇರಿಯ ಹಳೆಯ ಪಿ.ಬಿ. ರಸ್ತೆಯ ಬಳಿ ಹೋರಿ ಗುದ್ದಿತು. ದೇವಿಹೊಸೂರಿನ ಹೊಂಡದ ಓಣಿಯಲ್ಲಿರುವ ಮನೆಯ ಕಟ್ಟೆ ಮೇಲೆ ಕೂತಿದ್ದ ಘನಿಸಾಬ ಅವರ ಕುತ್ತಿಗೆ ಮತ್ತು ಎದೆಗೆ ಹೋರಿ ತಿವಿಯಿತು. ತಿಳವಳ್ಳಿ ಗ್ರಾಮದ ಮುಖ್ಯ ರಸ್ತೆಯ ಗೇಟ್ ಬಳಿ ನಿಂತಿದ್ದ ವೇಳೆ ಭರತ್ ಅವರಿಗೆ ಹೋರಿ ಗುದ್ದಿತ್ತು. ಯಳವಟ್ಟಿ ಗ್ರಾಮದಲ್ಲಿಯೂ ಹೋರಿ ಗುದ್ದಿದ್ದರಿಂದ ಶ್ರೀಕಾಂತ್ ಅವರ ಎದೆ ಹಾಗೂ ತಲೆಗೆ ಪೆಟ್ಟಾಗಿತ್ತು' ಎಂದು ಪೊಲೀಸರು ತಿಳಿಸಿದ್ದಾರೆ.