Viral Video: ಪಾರ್ಲೆ ಜಿ ಬಿಸ್ಕೇಟ್ ಪ್ಯಾಕ್ ಮೇಲೆ ಮಿಯಾ ಖಲೀಫಾ ಚಿತ್ರ; ಗರುಡ ಪುರಾಣದಲ್ಲಿ ಶಿಕ್ಷೆ ಇದೆಯೆಂದ ನೆಟ್ಟಿಗ
ಲಕ್ಷ್ಮೀನಾರಾಯಣ್ ಸಾಹು ಎಂಬ ಕಲಾವಿದ ಪಾರ್ಲೆ ಜಿ ಗರ್ಲ್ ಬದಲಿಗೆ ಮಾಜಿ ಪೋರ್ನ್ ನಟಿ ಮಿಯಾ ಖಲೀಫಾ ಭಾವಚಿತ್ರವನ್ನು ಬಿಡಿಸಿದ್ದಾನೆ. ಈ ವಿಡಿಯೊವನ್ನು ಆತ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಇದು ಈಗಾಗಲೇ 85 ಮಿಲಿಯನ್ ವ್ಯೂವ್ಸ್ ಗಳಿಸಿದೆ.
![ಪಾರ್ಲೆ ಜಿ ಬಿಸ್ಕೇಟ್ ಪ್ಯಾಕ್ ಮೇಲೆ ಮಿಯಾ ಖಲೀಫಾ ಚಿತ್ರ](https://cdn-vishwavani-prod.hindverse.com/media/original_images/parle-g_viral_video.jpg)
![Profile](https://vishwavani.news/static/img/user.png)
ಹೊಸದಿಲ್ಲಿ: ಪಾರ್ಲೆ ಜಿ (Parle G) ಬಿಸ್ಕೆಟ್ ಯಾರಿಗೆ ಗೊತ್ತಿಲ್ಲ ಹೇಳಿ. ಬಹಳ ಹಿಂದಿನಿಂದಲೂ ಫೇಮಸ್ ಆದ ಬಿಸ್ಕೆಟ್ ಎಂದರೆ ಅದು ಪಾರ್ಲೆ ಜಿ. ಬಿಸ್ಕೆಟ್ ಕವರ್ ಮೇಲಿನ ಮುದ್ದಾದ ಹುಡುಗಿಯ ಫೋಟೊ ನೋಡಿ ಚಿಕ್ಕಮಕ್ಕಳು ಕೂಡ ಪಾರ್ಲೆ ಜೀ ಎಂದು ಕರೆಯುತ್ತಾರೆ. ಅಷ್ಟೊಂದು ಜನಪ್ರಿಯತೆ ಪಡೆದ ಪಾರ್ಲೆ ಜಿ ಗರ್ಲ್ ಪೋಟೊವನ್ನು ಇದೀಗ ಕಲಾವಿದನೊಬ್ಬ ಬದಲಾಯಿಸಿದ್ದಾನೆ. ಲಕ್ಷ್ಮೀನಾರಾಯಣ್ ಸಾಹು ಎಂಬ ಕಲಾವಿದ ಪಾರ್ಲೆ ಜಿ ಗರ್ಲ್ ಬದಲಿಗೆ ಕವರ್ ಮೇಲೆ ಮಾಜಿ ಪೋರ್ನ್ ಸ್ಟಾರ್ ಮಿಯಾ ಖಲೀಫಾ ಭಾವಚಿತ್ರವನ್ನು ಬಿಡಿಸುವ ಮೂಲಕ ಸೋಶಿಯಲ್ ಮಿಡಿಯಾದಲ್ಲಿ ಕೋಲಾಹಲವನ್ನು ಹುಟ್ಟುಹಾಕಿದ್ದಾನೆ. ಈ ವಿಡಿಯೊ ಇನ್‌ಸ್ಟಾಗ್ರಾಂನಲ್ಲಿ ವೈರಲ್ (Viral Video) ಆಗಿದ್ದು, 85 ಮಿಲಿಯನ್ ವ್ಯೂವ್ಸ್ ಗಳಿಸಿದೆ.
ವಿಡಿಯೊದಲ್ಲಿ ಏನಿದೆ?
ವಿಡಿಯೊ ಆರಂಭದಲ್ಲಿ ಸಾಹು ತನ್ನ ಕೈಯಲ್ಲಿ ಪಾರ್ಲೆ ಜಿ ಪ್ಯಾಕ್ ಅನ್ನು ಹಿಡಿದುಕೊಂಡು ಅದರಲ್ಲಿರುವ ಹುಡುಗಿಯ ಚಿತ್ರವನ್ನು ಬದಲಾಯಿಸಲು ಮುಂದಾಗಿದ್ದಾನೆ. ಸಾಹು ಪಾರ್ಲೆ ಜಿ ಹುಡುಗಿಯ ಫೋಟೊದ ಮೇಲೆ ಮಿಯಾ ಖಲೀಫಾ ಚಿತ್ರ ಬಿಡಿಸಿದ್ದಾನೆ ಹಾಗೇ ಬಿಸ್ಕೆಟ್ ಬ್ರ್ಯಾಂಡ್ ಅನ್ನು ಮಿಯಾ ಜಿ ಎಂದು ಮರುನಾಮಕರಣ ಮಾಡಿದ್ದಾನೆ.
ಈ ಮೇಕ್ ಓವರ್‌ನ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಹುಟ್ಟು ಹಾಕಿದೆ. ʼʼಪಾರ್ಲೆ ಜಿ ವಾಲಿ ಲಡ್ಕಿ ಬಡಿ ಹೋ ಗಯಿ" ಎಂದು ಒಬ್ಬರು ಬರೆದಿದ್ದಾರೆ. "ಗರುಡ ಪುರಾಣದಲ್ಲಿ ಇದಕ್ಕೆ ಪ್ರತ್ಯೇಕ ಶಿಕ್ಷೆ ಇದೆ" ಎಂದು ಇನ್ನೊಬ್ಬರು ಪ್ರತಿಕ್ರಿಯಿಸಿದ್ದಾರೆ. "ಪಾರ್ಲೆ ಜಿ ಹುಡುಗಿಗೆ ನ್ಯಾಯ ನೀಡಿ" ಎಂದು ನೆಟ್ಟಿಗರು ಬರೆದಿದ್ದಾರೆ.
ಈ ವಿಡಿಯೊವನ್ನು ಫೆ. 1ರಂದು ಇನ್‍ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಲಾಗಿದ್ದು, ಇಲ್ಲಿಯವರೆಗೆ, ಈ ಕ್ಲಿಪ್ 85.6 ಮಿಲಿಯನ್ ವ್ಯೂವ್ಸ್ ಮತ್ತು ಸುಮಾರು 2 ಮಿಲಿಯನ್ ಲೈಕ್ಸ್ ಗಳಿಸಿದೆ.
ಈ ಸುದ್ದಿಯನ್ನೂ ಓದಿ:Viral Video: ಹೆಂಡ್ತಿ ತವರಿಗೆ ಹೋಗಿದ್ದಾಳೆ ಎಂದು ಆಟೋದಲ್ಲಿ ಬಿಸ್ಕೆಟ್ ಹಂಚಿದ ಚಾಲಕ!
ಆಟೋ ಚಾಲಕನೊಬ್ಬ ತನ್ನ ಹೆಂಡತಿ ತವರು ಮನೆಗೆ ಹೋಗಿದ್ದಕ್ಕೆ ಸಿಕ್ಕಾಪಟ್ಟೆ ಖುಷಿಯಾಗಿ "ಹೆಂಡತಿ ತವರಿಗೆ ಹೋಗಿದ್ದಾಳೆ. ನನಗೆ ತುಂಬಾ ಸಂತೋಷವಾಗಿದೆ" ಎಂದು ಚೀಟಿ ಬರೆದು ಅದನ್ನು ಸೀಟಿಗೆ ಅಂಟಿಸಿದ್ದಾನೆ. ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಾಲದೆನ್ನುವಂತೆ ಹೆಂಡತಿ ತವರಿಗೆ ಹೋಗಿದ್ದಕ್ಕೆ ಖುಷಿಯಾಗಿ ಆತ ತನ್ನ ಆಟೋದಲ್ಲಿ ಪ್ರಯಾಣ ಮಾಡುವ ಪ್ರಯಾಣಿಕರಿಗೆ ಬಿಸ್ಕೇಟ್ ಹಂಚಿದ್ದಾನೆ.
ಆಟೋ ಚಾಲಕನ ಸೀಟಿನ ಹಿಂದೆ ಬರೆದ ಈ ಪೋಸ್ಟ್ ಅನ್ನು ಗಮನಿಸಿದ ಪ್ರಯಾಣಿಕರೊಬ್ಬರು ಈ ಘಟನೆಯನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ. ಇದು ಈಗ ವೈರಲ್ ಆಗಿ ಎಲ್ಲರ ಗಮನ ಸೆಳೆದಿದೆ. ಬಿಸ್ಕೇಟ್ ಪ್ಯಾಕ್ ವಿತರಣೆ ಮತ್ತು ಟಿಪ್ಪಣಿಯನ್ನು ಒಳಗೊಂಡಿರುವ ಪೋಸ್ಟ್‌ಗೆ ಅನೇಕರು ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ನೆಟ್ಟಿಗರು ಕಾಮೆಂಟ್ ವಿಭಾಗದಲ್ಲಿ 'ಸ್ಮೈಲ್' ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ.